ಕೊರೋನಾ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಲಾಕ್ ಡೌನ್ ಮುಂದುವರಿಕೆ ಅನಿವಾರ್ಯ; ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ಸದ್ಯಕ್ಕೆ ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್ ತೊಂದರೆಯಿಲ್ಲ. ಒಂದು ವಾರಕ್ಕೆ ಆಗುವಷ್ಟು ಆಕ್ಸಿಜನ್ ಲಭ್ಯವಿದೆ. ಕೊರೋನಾ ಮೊದಲ ಅಲೆಗೆ ಹೋಲಿಸಿದಲ್ಲಿ ಸಾವಿನ ಪ್ರಮಾಣ ಕಡಿಮೆಯೆ ಇದೆ.

ಸದ್ಯಕ್ಕೆ ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್ ತೊಂದರೆಯಿಲ್ಲ. ಒಂದು ವಾರಕ್ಕೆ ಆಗುವಷ್ಟು ಆಕ್ಸಿಜನ್ ಲಭ್ಯವಿದೆ. ಕೊರೋನಾ ಮೊದಲ ಅಲೆಗೆ ಹೋಲಿಸಿದಲ್ಲಿ ಸಾವಿನ ಪ್ರಮಾಣ ಕಡಿಮೆಯೆ ಇದೆ.

ಸದ್ಯಕ್ಕೆ ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್ ತೊಂದರೆಯಿಲ್ಲ. ಒಂದು ವಾರಕ್ಕೆ ಆಗುವಷ್ಟು ಆಕ್ಸಿಜನ್ ಲಭ್ಯವಿದೆ. ಕೊರೋನಾ ಮೊದಲ ಅಲೆಗೆ ಹೋಲಿಸಿದಲ್ಲಿ ಸಾವಿನ ಪ್ರಮಾಣ ಕಡಿಮೆಯೆ ಇದೆ.

  • Share this:
ಹುಬ್ಬಳ್ಳಿ (ಮೇ. 17): ಕೊರೋನಾ ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಲಾಕ್ ಡೌನ್ ಮುಂದುವರಿಸುವುದು ಅನಿವಾರ್ಯವಾಗಲಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕಡೌನ್ ಮುಂದುವರಿಕೆ ವಿಚಾರವಾಗಿ, ತಜ್ಞರ ವರದಿಯನ್ನ ಸರ್ಕಾರ ಪರಿಶೀಲನೆ ಮಾಡುತ್ತದೆ ಇದೆ ಎಂದರು. ಇಂದು ದಿನಾಂಕ 17 ಇದ್ದು, ಮೇ 24 ರ ವರೆಗೆ ಲಾಕ್ ಡೌನ್ ಇದೆ. ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಶುರುವಾಗಿದ್ದೆ ಮೇ 14 ರಿಂದ. ಹೀಗಾಗಿ ಚೈನ್ ಲಿಂಕ್ ಕಟ್ ಆಗಲು ಸಮಯ ಬೇಕಾಗುತ್ತದೆ. ರಾಜ್ಯ ಸರ್ಕಾರ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಮೇ 21 ಇಲ್ಲವೇ 22 ರಂದು ರಾಜ್ಯ ಸರ್ಕಾರ ನಿರ್ಧಾರ ತಗೆದುಕೊಳ್ಳಬಹುದು. ಸೋಂಕಿತರ ಸಂಖ್ಯೆ ಕಡಿಮೆ ಆಗದೇ ಇದ್ದರೆ ಇನ್ನೂ ಕೆಲವು ದಿನಗಳ ಕಾಲ ಲಾಕ್ ಡೌನ್ ಮುಂದುವರೆಸುವುದು ಅನಿವಾರ್ಯವಾಗಲಿದೆ  ಎನ್ನುವ ಮೂಲಕ ಲಾಕ್ ಡೌನ್ ವಿಸ್ತರಣೆ ಕುರಿತು ಪ್ರಹ್ಲಾದ್ ಜೋಶಿ ಸುಳಿವು ನೀಡಿದ್ದಾರೆ.

ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ಕೊರೋನಾ ಚಿಕಿತ್ಸೆಯ ಅಡ್ಡ ಪರಿಣಾಮ ಆಗಿದೆ. ಅಡ್ಡ ಪರಿಣಾಮ ವಿಚಾರವಾಗಿ ಕೆಲವು ಔಷಧಿಗಳು ಬೇಕು ಎಂದು ವೈದ್ಯರು ಬೇಡಿಕೆ ಇಟ್ಟಿದ್ದಾರೆ. ಬ್ಲಾಕ್ ಫಂಗಸ್ ಗೆ ಅಗತ್ಯವಿರುವ ಔಷಧಗಳ ಕುರಿತು ಮಾಹಿತಿ ನೀಡಿದ್ದಾರೆ. ಈ ಕುರಿತು ನಾನು ಭಾರತ ಸರ್ಕಾರ ಜೊತೆ ಮಾತನಾಡಿ ಔಷಧಿ ವ್ಯವಸ್ಥೆ ಮಾಡಲು ಪ್ರಯತ್ನ ಮಾಡುತ್ತಿರುವೆ. ಕೇಂದ್ರ ಮತ್ತು ರಾಜ್ಯಗಳ ಆರೋಗ್ಯ ಇಲಾಖೆಗಳ ಕಾರ್ಯದರ್ಶಿಗಳ ಬಳಿಯೂ ಚರ್ಚಿಸಿದ್ದೇನೆ. ಶೀಘ್ರವೇ ಔಷಧ ಖರೀದಿಗೆ ಟೆಂಡರ್ ಕರೆಯಲಾಗುವುದು ಎಂದರು.

ಸದ್ಯಕ್ಕೆ ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್ ತೊಂದರೆಯಿಲ್ಲ. ಒಂದು ವಾರಕ್ಕೆ ಆಗುವಷ್ಟು ಆಕ್ಸಿಜನ್ ಲಭ್ಯವಿದೆ. ಕೊರೋನಾ ಮೊದಲ ಅಲೆಗೆ ಹೋಲಿಸಿದಲ್ಲಿ ಸಾವಿನ ಪ್ರಮಾಣ ಕಡಿಮೆಯೆ ಇದೆ. ಆದರೆ ಪಾಸಿಟಿವ್ ಸಂಖ್ಯೆ ಅತ್ಯಧಿಕವಿರೋದ್ರಿಂದ ಸಾವಿನ ಸಂಖ್ಯೆ ಹೆಚ್ಚಾದಂತೆ ಭಾಸವಾಗುತ್ತಿದೆ ಎಂದರು.

ಆಕ್ಸಿಜನ್ ಆನ್ ವೀಲ್ಸ್ ಬಸ್ ಗೆ ಜೋಶಿ ಚಾಲನೆ:

ಇದೇ ವೇಳೆ ಆಕ್ಸಿಜನ್ ಆನ್ ವೀಲ್ಸ್ ಗೆ ಇದೇ ವೇಳೆ ಚಾಲನೆ ನೀಡಿದರು  ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆಗ್ರನೈಜೇಶನ್ ಆಕ್ಸಿಜನ್ ಬಸ್ ಕೊಡುಗೆಯಾಗಿ ನೀಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಬಸ್ ಗೆ ಪ್ರಲ್ಲಾದ್ ಜೋಶಿ ಚಾಲನೆ ನೀಡಿದರು. 6 ಸೀಟ್ ಗಳ ಆಕ್ಸಿಜನ್ ಬಸ್ ನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಮೂಲಕ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಆಕ್ಸೀಜನ್ ಬೆಡ್, ವೆಂಟಿಲೇಟರ್ ಸಿಗದೇ ಇದ್ದಾಗ ಆಕ್ಸೀಜನ್ ಬಸ್ ನಲ್ಲಿ ತಾತ್ಪೂರ್ತಿಕ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದ್ದು, ನಂತರ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುವುದು.

ಕಿಮ್ಸ್ ಒಂದರಲ್ಲಿಯೇ 9 ಬ್ಲಾಕ್ ಫಂಗಸ್ ಸೋಂಕಿತರು...ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿಯೇ ಆತಂಕ ಸೃಷ್ಟಿಸಿರೋ ಬ್ಲಾಕ್ ಫಂಗಸ್ ನಿಂದ ಬಳಲುತ್ತಿರುವ ಒಂಬತ್ತು ಜನರಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡನೆಯ ಅಲೆಯಲ್ಲಿ ಬ್ಲಾಕ್ ಫಂಗಸ್ ಕಾಣಸಿಕೊಂಡಿದೆ. ಡಯಾಬಿಟಿಕ್ ಇದ್ದಾಗ, ಸ್ಟೆರಾಯ್ಡ್ ಬಳಕೆ ಮಾಡಿದಾಗ ಬ್ಲಾಕ್ ಫಂಗಸ್ ಬರೋ ಸಾಧ್ಯತೆಯಿದೆ. ಬ್ಲಾಕ್ ಫಂಗಸ್ ತಲೆ ನೋವು, ರಕ್ತಸ್ರಾವ, ಬಾವು ಇತ್ಯಾದಿಗಳ ಲಕ್ಷಣಗಳನ್ನು ಹೊಂದಿದೆ. ಒಂಬತ್ತೂ ಜನರಿಗೆ ಅಗತ್ಯ ಚಿಕಿತ್ಸೆಯನ್ನೂ ಕೊಡುತ್ತಿದ್ದೇವೆ. ಆದರೆ ಕೆಲ ಔಷಧಿಗಳ ಕೊರತೆ ಇದೆ. ಒಬ್ಬೊಬ್ಬ ರೋಗಿಗೆ 1.50 ಲಕ್ಷದಿಂದ 2 ಲಕ್ಷದವರೆಗೂ ಔಷಧಕ್ಕೆ ವೆಚ್ಚ ತಗುಲಲಿದೆ. ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೂ ಅಗತ್ಯ ಔಷಧ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಔಷಧ ಪೂರೈಕೆಯಾಗದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಬಹುದು ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ತಿಳಿಸಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by:Seema R
First published: