ಹುಬ್ಬಳ್ಳಿ: ಕೊರೋನಾ ವೈರಸ್ ಎಂಟ್ರಿ ಕೊಟ್ಟಾಗಿನಿಂದಲೂ ಒಂದಲ್ಲ ಒಂದು ಸುದ್ದಿಗಳು ಹರಿದಾಡಿ ಚರ್ಚೆಗೆ ಗ್ರಾಸವಾಗುತ್ತಲೇ ಇವೆ. ಇದೀಗ ಕೊರೋನಾ ಹರಡದಂತೆ ನೀಡುವ ವ್ಯಾಕ್ಸಿನ್ ಚರ್ಚೆಯ ಕೇಂದ್ರ ಬಿಂದುವಾಗಿದೆ. ವ್ಯಾಕ್ಸಿನ್ ಹಾಕಿಸಿಕೊಂಡವರ ಮೈಯಲ್ಲಿ ವಿದ್ಯುತ್ ಪ್ರವಹಿಸುತ್ತದೆಯೇ ಎನ್ನೋ ಪ್ರಶ್ನೆಯನ್ನು ಹುಟ್ಟು ಹಾಕಿದೆ. ವ್ಯಾಕ್ಸಿನ್ ಪಡೆದವರ ದೇಹದಲ್ಲಿ ಕರೆಂಟ್ ಉತ್ಪತ್ತಿ ಆಗುತ್ತಿದೆ. ಅಚ್ಚರಿಯಾದ್ರೂ ಹುಬ್ಬಳ್ಳಿಯಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ಕೋವಿಶೀಲ್ಡ್ ಪಡೆದ ಯುವಕ, ಯುವತಿಯ ದೇಹದಲ್ಲಿ ಕರೆಂಟ್ ಉತ್ಪತ್ತಿ ಆಗ್ತಿರೋ ಅಂಶ ಬೆಳಕಿಗೆ ಬಂದಿದೆ. ವ್ಯಾಕ್ಸಿನ್ ಪಡೆದವರ ದೇಹದಿಂದ 9 ವ್ಯಾಟ್ ಬಲ್ಬ್ ಬೆಳಗಿದ್ದು ಅಚ್ಚರಿಗೆ ಕಾರಣವಾಗಿದೆ.
ಹುಬ್ಬಳ್ಳಿಯ ಬಸವೇಶ್ವರ ನಗರದ ನಿವಾಸಿಗಳಾದ ಅಣ್ಣ ಮತ್ತು ತಂಗಿ ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಅವರ ದೇಹದಲ್ಲಿ ಕರೆಂಟ್ ಪ್ರವಹಿಸ್ತಿದೆ. ವ್ಯಾಕ್ಸಿನ್ ಹಾಕಿದ ತೋಳಿಗೆ ಬಲ್ಬ್ ತಾಗಿಸಿದರೆ ಬಲ್ಬ್ ಬೆಳಗುತ್ತಿದೆ. ಗೋಕುಲ ರಸ್ತೆಯ ಬಸವೇಶ್ವರ ನಗರದ ಸುಮಂತ ಮತ್ತು ಆತನ ತಂಗಿ ದೀಕ್ಷಾ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿದೆ. ವ್ಯಾಕ್ಸಿನ್ ಹಾಕಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪ್ರಯೋಗ ಮಾಡಿದಾಗ ಈ ಅಂಶ ಬೆಳಕಿಗೆ ಬಂದಿದೆ. ಕೋವಿಶೀಲ್ಡ್ ಹಾಕಿಸಿಕೊಂಡ ಮೈಯಲ್ಲಿ ವಿದ್ಯುತ್ ಪ್ರವಹಿಸುತ್ತಿದೆ ಸುದ್ದಿ ಜಿಲ್ಲೆಯ ಜನತೆಯನ್ನು ದಿಗ್ಭ್ರಮೆ ಮೂಡಿಸಿದೆ.
ವ್ಯಾಕ್ಸಿನ್ ಹಾಕಿದ ತೋಳಿಗೆ ಬಲ್ಬ್ ತಾಗಿಸಿದರೆ ಬಲ್ಬ್ ಉರಿಯುತ್ತಿರೋದಕ್ಕೆ ಪ್ರಯೋಗ ನಡೆಸಿದ ಯುವಕನೇ ಅಚ್ಚರಿ ವ್ಯಕ್ತಪಡಿಸಿದ್ದಾನೆ. ಸಾಮಾಜಿಕ ಜಾಲ ತಾಣದಲ್ಲಿ ಈ ಕುರಿತು ಸುದ್ದಿ ಕೇಳಿದ್ದೆ. ನಾವೂ ಯಾಕೆ ಪ್ರಯತ್ನಿಸಬಾರದೆಂದು ಬಲ್ಬ್ ಉರಿಸಲು ಟ್ರೈ ಮಾಡಿದೆ. ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡು ಬಂದ ಕೆಲ ಹೊತ್ತಿನಲ್ಲಿಯೇ, ವ್ಯಾಕ್ಸಿನ್ ಹಾಕಿಸಿಕೊಂಡ ಜಾಗದಲ್ಲಿ ವಿದ್ಯುತ್ ಬಲ್ಬ್ ಇಟ್ಟು ನೋಡಿದೆ. ನನ್ನ ದೇಹದಿಂದ ಬಲ್ಬ್ ಬೆಳಗಿದ ನಂತರ ನನ್ನ ಸಹೋದರಿ ವ್ಯಾಕ್ಸಿನ್ ಹಾಕಿಸಿಕೊಂಡ ಜಾಗದಲ್ಲಿಯೂ ಇಟ್ಟು ನೋಡಲಾಯಿತು.ಇಲ್ಲಿಯೂ ಬಲ್ಬ್ ಬೆಳಗುತ್ತಿರೋದು ಖಾತ್ರಿಯಾಯಿತು. ಬಲ್ಬ್ ಹೇಗೆ ಬೆಳಗಿತು ಅಂತ ಆಶ್ಚರ್ಯ ಆಗ್ತಿದೆ.
ಇದನ್ನೂ ಓದಿ: Bangalore Unlock: ಜೂ.14ರ ಬಳಿಕವೂ ಬೆಂಗಳೂರಲ್ಲಿ ಇವುಗಳಿಗೆ ಅನುಮತಿ ಕೊಡಬೇಡಿ ಎಂದು BBMP ಪಟ್ಟು!
ವ್ಯಾಕ್ಸಿನ್ ಹಾಕಿಸಿಕೊಂಡ ಜಾಗದಲ್ಲಿ ಬಲ್ಬ್ ಬೆಳಗುತ್ತಿರೋದು ಕಂಡು ಮಜಾ ಅನಿಸ್ತಿದೆ ಎಂದು ವ್ಯಾಕ್ಸಿನ್ ಹಾಕಿಸಿಕೊಂಡ ಯುವಕ ಸುಮಂತ್ ತನ್ನ ಅನುಭವ ಹೇಳಿಕೊಂಡಿದ್ದಾನೆ. ಈ ವಿಷಯ ತಿಳಿದ ಕೂಡಲೇ ಸ್ಥಳೀಯರು ಬಂದು ಬಲ್ಬ್ ಹತ್ತುವುದನ್ನು ನೋಡಿ ಹೋಗುತ್ತಿದಾರೆ. ವಿದ್ಯುತ್ ಬಲ್ಬ್ ಹೇಗೆ ಬೆಳಗುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇಂತಹ ಸಂಗತಿಯನ್ನು ಈ ಮುಂಚೆ ಕೇಳಿರಲಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಮುಂಚೆ ವ್ಯಾಕ್ಸಿನ್ ಅಡ್ಡ ಪರಿಣಾಮ ಬೀರುತ್ತೆ ಅನ್ನೋ ಕಾರಣಕ್ಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ವ್ಯಾಕ್ಸಿನ್ ಹಾಕಿಸಿಕೊಂಡವರ ಮೇಯಲ್ಲಿ ವಿದ್ಯುತ್ ಪ್ರವಹಿಸುತ್ತೆ ಅನ್ನೋ ಸಂಗತಿಯ ಮೂಲಕ ಮತ್ತೊಮ್ಮೆ ಕೋವೀಶೀಲ್ಡ್ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಸ್ಪಷ್ಟ ಮಾಹಿತಿ ನೀಡೋ ಅಗತ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ