Hubballi: ಗಲಾಟೆ ನಡೆಯುವಾಗ ಕಣ್ಮುಚ್ಚಿ ಕುಳಿತಿತ್ತು CCTV! ಪೊಲೀಸ್ ಇಲಾಖೆಯನ್ನೇ ಯಾಮಾರಿಸಿದ ಖಾಸಗಿ ಕಂಪನಿ!

ಪೊಲೀಸ್ ಇಲಾಖೆಯನ್ನೇ ಸಿಸಿ ಕ್ಯಾಮರಾ ನಿರ್ವಹಣಾ ಕಂಪನಿ ಯಾಮಾರಿಸಿದ್ದು, ಹುಬ್ಬಳ್ಳಿಯ ಗಲಭೆಯ ನಂತರ ಅದು ಜಗಜ್ಜಾಹೀರಾಗಿದೆ. ಹತ್ತಾರು ಸಿಸಿ ಕ್ಯಾಮರಾಗಳು ಹಾಳಾಗಿದ್ದು, ಸಾವಿರಾರು ಜನ ದೊಂಬಿಯಲ್ಲಿ ಭಾಗಿದ್ರೂ ಕೇವಲ 88 ಜನರನ್ನು ಬಂಧಿಸೋಕೆ ಮಾತ್ರ ಪೊಲೀಸರಿಗೆ ಸಾಧ್ಯವಾಗಿದೆ.

ಕಾರ್ಯ ನಿರ್ವಹಿಸದೇ ಹಾಳಾದ ಸಿಸಿಟಿವಿ ಕ್ಯಾಮೆರಾಗಳು

ಕಾರ್ಯ ನಿರ್ವಹಿಸದೇ ಹಾಳಾದ ಸಿಸಿಟಿವಿ ಕ್ಯಾಮೆರಾಗಳು

  • Share this:
ಹುಬ್ಬಳ್ಳಿ: ಅದು ನಿಜಕ್ಕೂ ಪೊಲೀಸ್ ಇಲಾಖೆಗೆ (Police Department) ತಲೆನೋವಾಗಿರುವ ಪ್ರಕರಣ. ಹುಬ್ಬಳ್ಳಿ (Hubballi) ಗಲಭೆಯನ್ನು (Riots) ಮತ್ತಷ್ಟು ಕೂಲ್ ಆಗಿ ನಿಭಾಯಿಸಬೇಕು ಎಂದುಕೊಂಡಿದ್ದ ಪೊಲೀಸರಿಗೆ ಶಾಕ್ (Shock) ಆಗಿದೆ. ಹುಬ್ಬಳ್ಳಿಯ ಬೆಂಕಿಯನ್ನು (Fire) ನಂದಿಸಲು ಚಿಂತನೆ ನಡೆಸಿದ ಪೊಲೀಸರಿಗೆ ಖಾಸಗಿ ಏಜೆನ್ಸಿ ಕಂಪನಿಯೊಂದರ (Privet Agency Company) ಹೊಣಗೇಡಿತನದಿಂದ ಕೈ ಸುಟ್ಟಂತಾಗಿದೆ. ಹಾಗಿದ್ದರೇ ಏನಿದು ಪ್ರಕರಣ..? ಖಾಸಗಿ ಏಜೆನ್ಸಿ ಮಾಡಿದ ಪ್ರಮಾದವಾದರೂ ಏನು ಅಂತೀರಾ ಇಲ್ಲಿದೆ ಓದಿ, ಪೊಲೀಸರಿಗೇ ಮೋಸ ಮಾಡಿದ ಎಕ್ಸ್‌ಕ್ಲೂಸಿವ್ ಸ್ಟೋರಿ (Exclusive Story).

ಪೊಲೀಸ್ ಇಲಾಖೆಗೆ ಸವಾಲಾದ ಪ್ರಕರಣ

ಸುಮಾರು ಇಪ್ಪತ್ತಕ್ಕು ಹೆಚ್ಚು ವರ್ಷಗಳ ಕಾಲ ಶಾಂತಿ ಸೌಹಾರ್ದತೆಯಿಂದ ಕೂಡಿದ್ದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಯಾಗಿದ್ದು, ವಿಡಿಯೋ ಪೋಸ್ಟ್ ಆದ ಬೆನ್ನಲ್ಲೇ ದೊಡ್ಡಮಟ್ಟದ ಹಿಂಸಾಚಾರ ನಡೆದಿದೆ. ಈ ಹಿಂಸಾಚಾರ ಪ್ರಕರಣಕ್ಕೆ ಬ್ರೇಕ್ ಹಾಕಿ ತಪ್ಪಿತಸ್ಥರ ಹೆಡೆಮುರಿ ಕಟ್ಟಲು ನಿರ್ಧಾರ ಮಾಡಿದ್ದ ಪೊಲೀಸರಿಗೆ ಈಗ ತಲೆನೋವಾಗಿದೆ.

ಹೌದು.. ಮೊನ್ನೆ ರಾತ್ರಿ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಕಲ್ಲು ತೂರಾಟ ಹಿಂಸಾಚಾರ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಸಿಸಿಟಿವಿ ಇದೆ, ವಿಡಿಯೋ ಫೂಟೇಜ್ ಇಲ್ಲ!

ಸಿಸಿಟಿವಿ ಫೂಟೇಜ್ ಸಹಾಯದಿಂದ ಪುಂಡರ ಬಂಧನಕ್ಕೆ ಪ್ಲಾನ್ ಮಾಡಿಕೊಂಡಿದ್ದ ಪೊಲೀಸರಿಗೆ ಈಗ ಶಾಕ್ ಆಗಿದ್ದು, 2000 ಜನರ ಪೈಕಿ ಈವರೆಗೆ  ಕೇವಲ 88 ಜನರ ಬಂಧನ ಮಾಡಲಾಗಿದೆ. ಸಿಸಿಟಿವಿ ಇದ್ದರೂ ಫೂಟೇಜ್ ಇಲ್ಲದಿರುವುದೇ  ಪೊಲೀಸರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Hubballi: 88 ಕಿಡಿಗೇಡಿಗಳಿಗೆ 14 ದಿನ ನ್ಯಾಯಾಂಗ ಬಂಧನ; ಗಲಭೆ ಪೀಡಿತ ಪ್ರದೇಶದಲ್ಲಿ ಪೊಲೀಸರ ಮೊಕ್ಕಾಂ

 48 ಕ್ಯಾಮರಾದಲ್ಲಿ ವರ್ಕ್ ಆಗ್ತಿರೋದು 21 ಮಾತ್ರ!

ಹಳೇ ಹುಬ್ಬಳ್ಳಿಯ ಸುತ್ತಮುತ್ತ ಅಳವಡಿಸಿದ್ದ 48 ಕ್ಯಾಮರಾಗಳ ಪೈಕಿ 21 ಮಾತ್ರ ನಿರ್ವಹಿಸ್ತಿವೆ. 48 ಕ್ಯಾಮರಾ ಪೈಕಿ 7 ಕ್ಯಾಮರ ನಾಪತ್ತೆಯಾಗಿದ್ದು, 20 ಕ್ಯಾಮರಾ ನಿಷ್ಕ್ರಿಯಗೊಂಡಿವೆ. ಇದರಿಂದ ಆರೋಪಿಗಳ ಬಂಧನದ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ..

ಖಾಸಗಿ ಕಂಪನಿಯ ಹೊಣೆಗೇಡಿತನ

ಇನ್ನು ಸಿಸಿಟಿವಿ ಕ್ಯಾಮರಾ ನಿರ್ವಹಣೆ ಹೊಣೆ ಹೊತ್ತ ವರ್ಟಿಕ್ಸ್ ಏಜೆನ್ಸಿಯ ಹೊಣೆಗೇಡಿತನದಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಪೇಚಿಗೆ ಸಿಲುಕಿದಂತಾಗಿದೆ. ಸಾಕ್ಷ್ಯಾಧಾರ ಇಲ್ಲದೇ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ‌ ನಿರ್ಮಾಣವಾಗಿದೆ. ಏಜೆನ್ಸಿಯ ಹೊಣಗೇಡಿತನದಿಂದ ಈಗ ಇಂತಹದೊಂದು ಪ್ರಕರಣವನ್ನು ಬೇಧಿಸಲು ಪೊಲೀಸ್ ಇಲಾಖೆ ಪರದಾಡುವಂತಾಗಿದೆ.

ಗಲಾಟೆ ವೇಳೆ ವರ್ಕ್ ಆಗದ ಸಿಸಿಟಿವಿ ಕ್ಯಾಮರಾಗಳು

ರಾತ್ರಿ ವೇಳೆ ನಡೆದ ದೊಡ್ಡಮಟ್ಟದ ಗಲಾಟೆಯ ಸಾಕ್ಷಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಆರೋಪಿಗಳ ಹೆಡೆಮುರಿ ಕಟ್ಟಲು ಸಹಾಯವಾಗಬೇಕಿದ್ದ ಸಿಸಿಟಿವಿಗಳು ಕಣ್ಣು ಮುಚ್ಚಿ ಕುಳಿತಿರುವುದರಿಂದ ಈಗ ಪೊಲೀಸರಿಗೆ ತಲೆನೋವಾಗಿದೆ. ಒಂದಿಲ್ಲೊಂದು ರೀತಿಯಲ್ಲಿ ಪೊಲೀಸ್ ಇಲಾಖೆಗೆ ವಿಘ್ನಗಳು ಎದುರಾಗುತ್ತಿದೆ. ಬೇರೆ ಬೇರೆ ಸಿಸಿ ಕ್ಯಾಮರಾ ಫೂಟೇಜ್ ಮೊರೆ ಹೋಗೋದು ಅನಿವಾರ್ಯವಾಗಿದೆ.

ಇದನ್ನೂ ಓದಿ: Bengaluru: ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಮಹಿಳೆ ಬಲಿ; ತಂದೆ, ತಾಯಿ ಇಬ್ಬರೂ ಇಲ್ಲದೇ ಅನಾಥವಾಯ್ತು ಮಗು

ಪೊಲೀಸ್ ಇಲಾಖೆ ಸೂಚಿಸಿದ ಸ್ಥಳಗಲ್ಲಿ ಹಾಕಿರೋ ಸಿಸಿ ಕ್ಯಾಮರಾಗಳು ಸರಿಯಾಗಿ ಕಾರ್ಯನಿರ್ವಹಿಸಿದ್ದಲ್ಲಿ ಗಲಭೆಕೋರರ ಪೈಕಿ ಬಹುತೇಕರನ್ನು ಬಂಧಿಸಬಹುದಾಗಿತ್ತು ಎಂಬ ಮಾತು ಕೇಳಿ ಬಂದಿದೆ.  ಏಜೆನ್ಸಿಯ ಅವ್ಯವಸ್ಥಿತ ನಿರ್ವಹಣೆಯಿಂದ ಈಗ ಪೊಲೀಸರು ಪೇಚಿಗೆ ಸಿಕ್ಕಿಹಾಕಿ ಹಾಕಿಕೊಳ್ಳುವಂತಾಗಿದ್ದು, ಇನ್ನಾದರೂ ಸಿಸಿಟಿವಿ ಹಾಗೂ ವಾಚ್ ಟವರ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕಿದೆ. ಪೊಲೀಸ್ ಇಲಾಖೆಯ ಉದ್ದೇಶ ಸಾಕಾರಗೊಳ್ಳಬೇಕಿದೆ.
Published by:Annappa Achari
First published: