Crime- ಕಳೆದುಹೋಗಿದ್ದ ಎರಡೂವರೆ ಕೋಟಿ ರೂ ಚೆಕ್; ಡ್ರಾ ಮಾಡಲು ಹೋಗಿ ಸಿಕ್ಕಿಬಿದ್ರು

ಪಂಜಾಬ್ ಮೂಲದ ಬೆಹರಿಲಾಲ್ ಇಸ್ಪಾಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ್ದ ಎರಡೂವರೆ ಕೋಟಿ ರೂ ಮೊತ್ತದ ಚೆಕ್ ಅನ್ನು ಕರ್ನಾಟಕದಲ್ಲಿ ಡ್ರಾ ಮಾಡಲು ಪ್ಲಾನ್ ಮಾಡಿದ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದ ಕಥೆ ಇದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಧಾರವಾಡ: ಯಾರೋ ಕಳೆದುಕೊಂಡಿದ್ದ ದುಬಾರಿ ಮೌಲ್ಯದ ಚೆಕ್ ಕೈಗೆ ಸಿಗುತ್ತಿದ್ದಂತೆಯೇ ಹಣದ ಆಸೆಗೆ ಬರೊದು ಸಹಜ. ‌ಅದರಲ್ಲಿಯೂ ದೊಡ್ಡ ಕಂಪನಿಯ ಚೆಕ್ ಅಂದ್ರೆ ಹೆಚ್ಚಿನ ಹಣ ಬರುವ ನಿರೀಕ್ಷೆ ಸಹ ಇರುತ್ತೆ. ಅದು ಕೂಡ ಕೋಟಿ‌‌ ಕೋಟಿ ಹಣ ಡ್ರಾ ಮಾಡಿಸಿಕೊಳ್ಳಲು ಮುಂದಾಗಿದ್ದರು. ಇನ್ನೇನು ಹಣ ಅವರ ಕೈ ಸೇರಿತು ಅಂದುಕೊಳ್ಳುವಷ್ಟರಲ್ಲಿ ಬ್ಯಾಂಕ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಖತರ್ನಾಕ್ ‌ಕಿಲಾಡಿಗಳು ಕಂಬಿ ಹಿಂದೆ ಹೋಗಿದ್ದಾರೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡೋಕೆ ಹೋಗಿದ್ದ ಇವರೆಲ್ಲ ಈಗ ಧಾರವಾಡ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಸೇರಿದಿದ್ದಾರೆ. ಎರಡು ದಿನಗಳ ಹಿಂದೆ ಧಾರವಾಡದಲ್ಲಿನ ಎಚ್ ಡಿ ಎಫ್ ಸಿ  ಬ್ಯಾಂಕ್​ನ ಎನ್. ಟಿ. ಟಿ. ಎಫ್ ಶಾಖೆಗೆ ಬಂದಿದ್ದ ಮಹಾರಾಷ್ಟ್ರದ ಸಾಂಗ್ಲಿ ಮೂಲದ ವ್ಯಕ್ತಿಯೊಬ್ಬ ಎರಡೂವರೆ ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ಡ್ರಾ ಮಾಡಿಸಿಕೊಳ್ಳಲು ಹಾಕಿದ್ದ, ಚೆಕ್ ನಲ್ಲಿ ನಮೂದಾಗಿದ್ದ ಭಾರೀ ಮೊತ್ತವನ್ನು ನೋಡಿಯೇ ಆ ಬ್ಯಾಂಕ್​ನ ಸಿಬ್ಬಂದಿಗೆ ಡೌಟ್ ಬಂದಿದೆ. ಆ ಕೂಡಲೇ ಅವರು ಧಾರವಾಡ ಶಹರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬ್ಯಾಂಕ್‌ಗೆ ಬಂದ ಪೊಲೀಸರು ಚೆಕ್ ಹಿಡಿದುಕೊಂಡು ಬಂದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.‌

ಇವರು ಹಣ ಡ್ರಾ ಮಾಡಿಕೊಳ್ಳಲು ಮುಂದಾಗಿದ್ರೋ ಅದು ಪಂಜಾಬ್ ಮೂಲದ ಬೆಹರಿಲಾಲ್ ಇಸ್ಪಾಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ್ದ ಚೆಕ್ ಆಗಿತ್ತು. ಇತ್ತೀಚೆಗೆ ಈ ಚೆಕ್ ಕಳೆದುಹೋಗತ್ತು. ಅದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಖಾನಬಾಗದ ಯುವರಾಜ್ ಬಿರಾದಾರ ಎಂಬಾತನ ಸ್ನೇಹಿತನಿಗೆ ಲಭಿಸಿತ್ತು. ಆ ಚೆಕ್ ಅನ್ನು ಎಲ್ಲಿ ಡ್ರಾ ಮಾಡಿಸಿಕೊಳ್ಳಬಹುದು ಅಂತಾ ಮುಂದಾಗಿದ್ದಾಗ, ಯುವರಾಜನಿಗೆ ಕರ್ನಾಟಕದ ಐವರು ಸಹಾಯ ಮಾಡಿದ್ದಾರೆ. ಅವರ ಸಹಾಯದಿಂದಲೇ ಧಾರವಾಡಕ್ಕೆ ಬಂದಿದ್ದ ಯುವರಾಜ್ ಚೆಕ್ ಹಿಡಿದುಕೊಂಡು ಬ್ಯಾಂಕ್ ಕೌಂಟರ್​ಗೆ ಬಂದು ಎರಡೂವರೆ ಕೋಟಿ ರೂ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದಾಗಲೇ ಸಿಕ್ಕಿ ಬಿದ್ದಿದ್ದಾನೆ.

ಇದನ್ನೂ ಓದಿ: Murugesh Nirani- ಈ ಜಿಲ್ಲೆಯ ಜನರು ಸೋಂಬೇರಿಗಳು; ಹೊಳೆ ತುಂಬಿದ್ದರೂ ನೀರಾವರಿ ಮಾಡಲ್ಲ: ಮುರಗೇಶ್ ನಿರಾಣಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜ ಸೇರಿದಂತೆ ನವೀನ್ ಕುಮಾರ್, ಜಾಕ್ಮೆನ್ ಹಣಗಿ, ನಿಜಲಿಂಗಪ್ಪ ಪಾಟೀಲ್, ದತ್ತಾತ್ರೇಯ ಮಾಳಿ, ಅಜೇಯ ಕುಮಾರ್ ಕರ್ಜೆ, ಮಹಮ್ಮದ್ ಮುಜಿಲ್, ರಮೇಶ ಮುರಗೋಡ, ಗೋವಿಂದಪ್ಪ ಹೂಗಾರ ಎಂಬುವವರನ್ನು ಬಂಧಿಸಲಾಗಿದ್ದು, ವೆಂಕಟರೆಡ್ಡಿ ಹಾಗೂ ಆರೀಫ್ ಎಂಬುವವರು ಪರಾರಿಯಾಗಿದ್ದಾರೆ.

ಯಾರದೋ ಹೆಸರಿನಲ್ಲಿದ್ದ ಚೆಕ್ ಕೈಗೆ ಸಿಗುತಾ ಇದ್ದಂತೆಯೇ ಅದನ್ನು ಸಂಬಂಧಿಸಿದವರಿಗೆ ಮರಳಿಸಿದ್ರೆ, ಆ ಚೆಕ್ ಕಳೆದುಕೊಂಡವರು ಇವರಿಗೆ ಒಂದಷ್ಟು ಬಹುಮಾನವಾದರೂ ಕೊಡುತ್ತಿದ್ದರೇನೋ. ಆದ್ರೆ ಕೈಗೆ ಸಿಕ್ಕ ಚೆಕ್ ಬಗ್ಗೆ ಕ್ರಿಮಿನಲ್ ಮೈಂಡ್ ಉಪಯೋಗಿಸಿ ಎರಡೂವರೆ ಕೋಟಿ ಹಣ ಎತ್ತೋಕೆ ಹೋಗಿ ಈಗ ಕಂಬಿ ಎಣಿಸುವಂತಾಗಿದ್ದು ವಿಪರ್ಯಾಸವೇ ಸರಿ.

ಇದನ್ನೂ ಓದಿ: ಸಚಿವರ ಮುನಿಸಿನ ನಡುವೆ ಬಿಜೆಪಿ ಸರ್ಕಾರ ನಡೆಸುವುದು ಬಹಳ ಕಷ್ಟ; ಎಸ್​ ಆರ್​ ಪಾಟೀಲ್

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಮಂಜುನಾಥ ಯಡಳ್ಳಿ
Published by:Vijayasarthy SN
First published: