HOME » NEWS » State » HUBLI PEOPLE CROWDING WHILE TAKING CORONA VACCINE AND BOUGHT THINGS IN MARKET SAKLB LG

ಹುಬ್ಬಳ್ಳಿಯಲ್ಲಿ ಕೊರೋನಾಗೆ ಡೋಂಟ್​ ಕೇರ್​; ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿಬಿದ್ದ ಜನರು

ರಾಜ್ಯದಲ್ಲಿ ಕೊರೋನಾ ಎರಡೆಯ ಅಲೆ ವ್ಯಾಪಕಗೊಂಡಿದೆ. ಹೀಗಾಗಿ ಕೊರೋನಾ ವ್ಯಾಕ್ಸಿನ್ ಗೆ ಜನ ಮುಗಿ ಬಿದ್ದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಜನ ಜಾತ್ರೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾಮಾಜಿಕ ಅಂತರವಿಲ್ಲದೆ ಜನ ವ್ಯಾಕ್ಸಿನ್ ಹಾಕಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ.

news18-kannada
Updated:May 12, 2021, 2:09 PM IST
ಹುಬ್ಬಳ್ಳಿಯಲ್ಲಿ ಕೊರೋನಾಗೆ ಡೋಂಟ್​ ಕೇರ್​; ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿಬಿದ್ದ ಜನರು
ಸಾಂದರ್ಭಿಕ ಚಿತ್ರ.
  • Share this:
ಹುಬ್ಬಳ್ಳಿ(ಮೇ 12): ಕೊರೋನಾ ದಿನೇ ದಿನೇ ವ್ಯಾಪಕಗೊಳ್ಳುತ್ತಿದ್ದು ರಾಜ್ಯದಲ್ಲಿ ಅಬ್ಬರಿಸಲು ಆರಂಭಿಸಿದೆ. ಆದರೆ ಹುಬ್ಬಳ್ಳಿಯಲ್ಲಿ ಮಾತ್ರ ಜನ ಎಚ್ಚೆತ್ತುಕೊಂಡಿಲ್ಲ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಲಾಕ್ ಡೌನ್ ಗೆ ಹುಬ್ಬಳ್ಳಿ ಜನ ಡೋಂಟ್ ಕೇರ್ ಅಂತಿದ್ದಾರೆ. ಅನಗತ್ಯ ವಾಹನಗಳ ಓಡಾಟ. ಮಾರುಕಟ್ಟೆಯಲ್ಲಿ ಜನಜಂಗುಳಿ, ಕೊರೋನಾ ವ್ಯಾಕ್ಸಿನ್​​ಗೂ ಮುಗಿಬಿದ್ದ ಜನ... ಇದು ಹುಬ್ಬಳ್ಳಿಯ ಸದ್ಯದ ಪರಿಸ್ಥಿತಿ.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಲಾಕ್ ಡೌನ್ ಎರಡನೇ ದಿನಕ್ಕೆ ಕಾಲಿಟ್ಟಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದೂ ಸಹ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆದರೆ ಜನ ಮಾತ್ರ ಸರ್ಕಾರದ ಮಾರ್ಗಸೂಚಿ ಮೀರಿ ವಾಹನಗಳನ್ನು ರಸ್ತೆಗಿಳಿಸಿದ್ದುದು ಕಂಡು ಬಂದಿತು.

ಈ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಬೈಕ್ ಮತ್ತಿತರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ವೃತ್ತದಲ್ಲಿ ಸೀಜ್ ಮಾಡಿದ ಬೈಕ್ ಗಳನ್ನು ಪೊಲೀಸರು ವಾಹನದಲ್ಲಿ ತುಂಬಿಕೊಂಡು ಹೋಗ್ತಿದಾರೆ. ನಗರದ ಬಹುತೇಕ ಕಡೆ ಬ್ಯಾರಿಕೇಡ್ ಸ್ಥಾಪಿಸಿ ವಾಹನ ತಪಾಸಣೆ ಮುಂದುವರಿಸಲಾಗಿದೆ.

ತರಕಾರಿ, ದಿನಸಿ ವಸ್ತುಗಳ ಖರೀದಿಗೆ ನಡೆದುಕೊಂಡು ಹೋಗಬೇಕೆಂಬ ನಿಯವಿದ್ದರೂ ಹುಬ್ಬಳ್ಳಿ ಜನ ಮಾತ್ರ ಡೋಂಟ್ ಕೇರ್ ಅಂತಿದಾರೆ. ಹೀಗಾಗಿ ಅನಗತ್ಯ ವಾಹನ ನಿಯಂತ್ರಣಕ್ಕೆ ಪೊಲೀಸರು ಪ್ರಯಾಸ ಪಡುವಂತಾಗಿದೆ.

Bengaluru Bed Scam: ಬೆಂಗಳೂರು ಬೆಡ್​ ಬ್ಲಾಕಿಂಗ್​ ದಂಧೆ; ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು

ಮಾರುಕಟ್ಟೆಯಲ್ಲಿ ಜನಜಂಗುಳಿ

ರಾಜ್ಯದಲ್ಲಿ ಕೊರೋನಾ ವ್ಯಾಪಕವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿ ಜನರು ಮಾತ್ರ ಲಾಕ್ ಡೌನ್ ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಜನಜಂಗುಳಿ ವಾತಾವರಣ ನಿರ್ಮಾಣವಾಗಿತ್ತು.ಹುಬ್ಬಳ್ಳಿಯ ದುರ್ಗದ ಬೈಲ್​​ನಲ್ಲಿರೋ ಗಾಂಧಿ ಮಾರ್ಕೆಟ್ ನಲ್ಲಿ ಜನಜಂಗುಳಿ ಕಾಣಿಸಿತು. ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೂವು, ಹಣ್ಣು ಇತ್ಯಾದಿ ಖರೀದಿಯಲ್ಲಿ ಜನ ಮುಗಿಬಿದ್ದಿದ್ದರು. ಸಾಮಾಜಿಕ ಅಂತರವಿಲ್ಲದೆ ಜನ ಖರೀದಿಯಲ್ಲಿ ತೊಡಗಿಕೊಂಡಿದ್ದರು. ಜನರ ವರ್ತನೆಯಿಂದ ಕೊರೋನಾ ಮತ್ತಷ್ಟು ವ್ಯಾಪಿಸುವ ಭೀತಿ ಸೃಷ್ಟಿಯಾಗಿದೆ. ಪೊಲೀಸರು ವಾಹನ ಸೀಜ್ ಮಾಡಿದರೂ ಜನ ಮಾತ್ರ ಮಾರುಕಟ್ಟೆಗೆ ಬರುವುದನ್ನ ಬಿಡ್ತಿಲ್ಲ.

ವ್ಯಾಕ್ಸಿನ್​​​ಗೂ ಮುಗಿಬಿದ್ದ ಜನ

ರಾಜ್ಯದಲ್ಲಿ ಕೊರೋನಾ ಎರಡೆಯ ಅಲೆ ವ್ಯಾಪಕಗೊಂಡಿದೆ. ಹೀಗಾಗಿ ಕೊರೋನಾ ವ್ಯಾಕ್ಸಿನ್ ಗೆ ಜನ ಮುಗಿ ಬಿದ್ದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಜನ ಜಾತ್ರೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾಮಾಜಿಕ ಅಂತರವಿಲ್ಲದೆ ಜನ ವ್ಯಾಕ್ಸಿನ್ ಹಾಕಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ.
Youtube Video

ಜನ ಬೆಳಿಗ್ಗೆಯೇ ಬಂದರೂ ವ್ಯಾಕ್ಸಿನ್ ಹಾಕುವ ಪ್ರಕ್ರಿಯೆ ತಡವಾಗಿದ್ದರಿಂದ ಜನಜಂಗುಳಿ ಹೆಚ್ಚಾಗಿದೆ. ವ್ಯಾಕ್ಸಿನ್ ಹಾಕಲು ಮೀಸಲುಗೊಳಿಸಿದ ಹಾಲ್ ನಲ್ಲಿ ಸಾರ್ವಜನಿಕರು ತುಂಬಿ ತುಳುಕುತ್ತಿದ್ದರು. ಕೊರೋನಾ ವೈರಸ್ ಹರಡವುದೆಂಬ ಭೀತಿಯಿದ್ದರೂ ಜನ ಮಾತ್ರ ಮೈ ಮರೆತು ನಿಂತಿದ್ದರು. ಜನರ ವರ್ತನೆಯಿಂದಾಗಿ ಕೋವಿಡ್ ಮತ್ತಷ್ಟು ವ್ಯಾಪಕಗೊಳ್ಳುವ ಆತಂಕ ಸೃಷ್ಟಿಯಾಗಿದೆ.
Published by: Latha CG
First published: May 12, 2021, 2:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories