ಹುಬ್ಬಳ್ಳಿ(ಅ.16): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಹಾಗೂ ನಾನು ಭೇಟಿಯಾಗಿದ್ದು ಅಪ್ಪಟ ಸುಳ್ಳು. ಒಂದು ವೇಳೆ ನಾವಿಬ್ಬರೂ ಭೇಟಿಯಾಗಿದ್ದೆವು(Meet) ಎಂಬುದನ್ನು ಯಾರಾದ್ರೂ ಸಾಬೀತು ಮಾಡಿದರೆ ನಾನು ರಾಜಕೀಯದಿಂದ(Politics) ನಿವೃತ್ತಿ(Retire) ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Opposition Leader Siddaramaiah) ಸವಾಲು ಹಾಕಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಎಸ್ವೈ ಭೇಟಿಯಾಗಿದ್ದನ್ನು ಪ್ರೂವ್ ಮಾಡಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಘೋಷಿಸಿದರು. ಮುಂದುವರೆದ ಅವರು, ಬಿಎಸ್ವೈ ಆರ್ಎಸ್ಎಸ್ನಿಂದ ಬಂದವರು. ನಾವು-ಅವರು ತದ್ವಿರುದ್ದ. ಅವರನ್ನ ಭೇಟಿಯಾಗಿದ್ದು ಸುಳ್ಳು. ಅಧಿಕಾರದಲ್ಲಿರೋರ ಮನೆ ಬಾಗಿಲಿಗೆ ನಾನು ಯಾವತ್ತು ಹೋಗಿಲ್ಲ. ಅದು ನನ್ನ ಪ್ರಿನ್ಸಿಪಲ್, ಹೀಗಾಗಿ ನಾನು ಬಿಎಸ್ ವೈ ಭೇಟಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಎಲ್ಲದಕ್ಕೂ ಸಿದ್ದರಾಮಯ್ಯನನ್ನೇ ಟಾರ್ಗೆಟ್ ಮಾಡಿದ್ರೆ ಹೇಗೆ?
ಸಲೀಂ-ಉಗ್ರಪ್ಪ ಸಂಭಾಷಣೆ ಹಿಂದೆ ಸಿದ್ದರಾಮಯ್ಯ ಕೈವಾಡ ಇದೆ ಎಂಬ ಜಗದೀಶ್ ಶೆಟ್ಟರ್ ಆರೋಪಕ್ಕೆ ವಿಪಕ್ಷ ನಾಯಕ ತಿರುಗೇಟು ಕೊಟ್ಟರು. ಹಾಗಿದ್ರೆ ಯತ್ನಾಳ್, ವಿಶ್ವಾನಾಥ್ ಅವರಿಗೂ ನಾನೇ ಹೇಳಿದ್ನಾ..? ಹಿಂದೆ ಅನಂತಕುಮಾರ-ಬಿಎಸ್ ವೈ ಮಾತನಾಡಿದ್ದರು ಅದಕ್ಕೂ ನಾನೇ ಕಾರಣನಾ..? ಇವರೆಲ್ಲಾ ಸಿಎಂ ಆಗಿದ್ದವರು ಹೀಗೆ ಮಾತನಾಡಿದ್ರೆ ಹೇಗೆ? ಎಲ್ಲದಕ್ಕೂ ಸಿದ್ದರಾಮಯ್ಯನನ್ನೇ ಟಾರ್ಗೆಟ್ ಮಾಡಿದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:HDK vs Siddaramaiah: ತೊಟ್ಟಿಲನ್ನೂ ತೂಗಿ, ಮಗುವಿನ ಕತ್ತನ್ನೂ ಕುಯ್ಯುವ ನಿಮ್ಮ ನೀಚ ಬುದ್ಧಿ ಮುಸ್ಲಿಂರಿಗೆ ಗೊತ್ತಾಗಿದೆ; ಸಿದ್ದರಾಮಯ್ಯ ವಿರುದ್ಧ ಎಚ್ಡಿಕೆ ವಾಗ್ದಾಳಿ
ಶೆಟ್ಟರ್ ಸುಳ್ಳು ಹೇಳ್ತಿದ್ದಾರೆ
ಜಾತಿ ಸಮೀಕ್ಷೆ ಬಗ್ಗೆ ಕೂಡಾ ಜಗದೀಶ್ ಶೆಟ್ಟರ್ ಸುಳ್ಳು ಹೇಳ್ತಿದ್ದಾರೆ. ನನ್ನ ಕಾಲದಲ್ಲಿ ಸಮೀಕ್ಷೆ ಪೂರ್ಣ ಆಗಿದ್ರೆ ನಾನೇ ಹೊರ ತರ್ತಿದ್ದೆ. ಚಾಣಕ್ಯ ವಿವಿ ಆರ್ ಆರ್ ಎಸ್ ನ ಪ್ರೇರಿತ. 116, 16 ಎಕರೆ ಭೂಮಿಯನ್ನ ಕೇವಲ 50 ಕೋಟಿಗೆ ನೀಡಿದ್ದಾರೆ. ಅದು ಸದ್ಯ ಸಾವಿರಾರು ಕೋಟಿ ಬೆಲೆಬಾಳೊ ಭೂಮಿ ಎಂದರು.
ಮೋದಿ ವಿರುದ್ಧ ಕಿಡಿ
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 101 ಸ್ಥಾನಕ್ಕೆ ಬಂದಿದೆ. ಇದು ಪ್ರಧಾನಿ ಮೋದಿಯವರ ಕೊಡುಗೆ. ದೇಶವನ್ನು ಉದ್ದಾರ ಮಾಡಿ, ಅಚ್ಚೇ ದಿನ್ ಮಾಡ್ತೀವಿ ಎಂದವರು, ಇವಾಗ ಜನ ಹಸಿವನಿಂದ ಬಳಲುವಂತೆ ಮಾಡಿದ್ರು ಎಂದು ಮೋದಿ ವಿರುದ್ಧ ಆಕ್ರೋಶ ಹೊರಹಾಕಿದರು.
ಬೊಮ್ಮಾಯಿ ಆರ್ ಎಸ್ಎಸ್ನ ಹೊಗಳದಿದ್ದರೆ ಖುರ್ಚಿ ಉಳಿಯಬೇಕಲ್ವಾ?
ಸಿಎಂ ಬೊಮ್ಮಾಯಿ ಆರ್ ಎಸ್ಎಸ್ನ ಹೊಗಳದಿದ್ದರೆ ಖುರ್ಚಿ ಉಳಿಯಬೇಕಲ್ವಾ. ಅವರು ಪಾಪ ಆರ್ ಎಸ್ ಎಸ್ ನಿಂದ ಬಂದವರಲ್ವಾ. ಅವರ ತಂದೆ ಕೂಡಾ ಆರ್ ಎಸ್ ಎಸ್ ನವರೇ. ನೈತಿಕ ಪೊಲೀಸ್ಗಿರಿಗೆ ಆಗ್ಲೇ ಉತ್ತರ ಕೊಟ್ಟಿದ್ದೇನೆ ಎಂದು ಹೇಳಿದರು.ನಾವು ಅಧಿಕಾರಕ್ಕೆ ಬಂದ ಮೇಲೆ ಯಾರನ್ನಾದರೂ ಸಿಎಂ ಮಾಡಲಿ, ನಂಗೇನು ಬೇಜಾರಿಲ್ಲ ಮುಸ್ಲಿಂರನ್ನಾದ್ರು ಮಾಡ್ಲಿ, ದಲಿತರನ್ನಾದ್ರು ಮಾಡಲಿ ಅದು ಹೈಕಮಾಂಡ್ ಹಾಗೂ ಶಾಸಕರಿಗೆ ಬಿಟ್ಟ ವಿಚಾರ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ