Non Veg Naivedya: ಹುಬ್ಬಳ್ಳಿ ಗಣಪತಿಗೆ ನಾನ್​ವೆಜ್ ನೈವೇದ್ಯ! ಮಟನ್, ಚಿಕನ್, ಫಿಶ್, ಬಿರಿಯಾನಿ ಅರ್ಪಣೆ

ಸಾಮಾನ್ಯವಾಗಿ ಗಣೇಶನಿಗೆ ವೈದಿಕ ವಿಧಿ ವಿಧಾನ ಪ್ರಕಾರ ಸಸ್ಯಹಾರ ಬಗೆಯ ನೈವೇದ್ಯ ಸಮರ್ಪಿಸಲಾಗುತ್ತದೆ. ಆದರೆ ಹುಬ್ಬಳ್ಳಿಯಲ್ಲೊಂದು ಸಮುದಾಯ ಮಾಂಸಹಾರದ ನೈವೇದ್ಯ ಸಮರ್ಪಿಸುವ ಕ್ರಮವನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿದೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಹುಬ್ಬಳ್ಳಿ: ಗಣೇಶನಿಗೆ ಚಕ್ಕುಲಿ, ಕಡುಬು, ಮೋದಕ ಹೀಗೆ ಬಗೆ ಬಗೆಯ ಕಜ್ಜಾಯಗಳನ್ನು ನೈವೇದ್ಯ ಮಾಡುವುದು ಸಹಜ. ವೆಜ್ ದೇವರು ಎನಿಸಿಕೊಂಡ ಗಣೇಶನಿಗೆ ನಾನ್​ವೆಜ್ ನೈವೇದ್ಯ ಮಾಡ್ತಿರೋ ವಿಶೇಷ ಭಕ್ತರೊಬ್ಬರಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi Ganesh Chaturthi) ಗಣೇಶನಿಗೆ ಈ ವಿಶೇಷ ಆಚರಣೆ ಮಾಡಲಾಗ್ತಿದೆ. ಗಣೇಶ ಚತುರ್ಥಿ (Ganesh Chaturthi) ಮಾರನೇ ದಿನ ಗಣೇಶನಿಗೆ ನಾನ್ ವೆಜ್ ಭಕ್ಷ್ಯ ಭೋಜ್ಯಗಳನ್ನು ನೈವೇದ್ಯದ ರೂಪದಲ್ಲಿ (Non Veg Naivedya To Ganesh) ಅರ್ಪಿಸಲಾಗುತ್ತದೆ. ಇಲ್ಲಿ ಗಣಪತಿಗೆ ಲಾಡು ಬದಲು ಖೀಮಾ ಉಂಡಿ, ಕರಿಗಡುಬು ಬದಲು ಮಟನ್, ಚಿಕನ್, ಫಿಶ್ ಜೊತೆಗೆ ಬಿರಿಯಾನಿ, ಎಡ್ಮಿ ಇತ್ಯಾದಿ ನೈವೇದ್ಯ ಅರ್ಪಿಸಲಾಗುತ್ತದೆ. ಕೆಲವೊಬ್ಬರಂತೂ ಮೀನನ್ನು ಗಣೇಶನ ಸೊಂಡಿನಲ್ಲಿಯೂ ಇಡುತ್ತಾರೆ.

    ಸಾವಜಿ ಸಮುದಾಯದ ಸಂಪ್ರದಾಯ
    ಹೀಗೆ ನಾನ್ ವೆಜ್ ನೈವೇದ್ಯ ಮಾಡ್ತಿರೋರು ಸಾವಜಿ ಸಮುದಾಯದವರು. ಗಣೇಶ ಚತುರ್ಥಿಯ ಮರು ದಿನ ಇಲಿವಾರ ಅಂತಾನೇ ಸಾವಜಿ ಸಮುದಾಯದವರು ಆಚರಿಸುತ್ತಾರೆ. ಮೂಷಕನಿಗೂ ವೆಜ್ ಜೊತೆ ನಾನ್ ವೆಜ್ ನೈವೇದ್ಯ ಅರ್ಪಿಸಲಾಗುತ್ತದೆ. ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.

    ಇದನ್ನೂ ಓದಿ: Ganesh Chaturthi: ವಾವ್! ಗಣೇಶನ ಜೊತೆ ನಮ್ಮ ಅಪ್ಪು ಪ್ರತ್ಯಕ್ಷ!

    ಯಾವ ಕಾರಣಕ್ಕೆ ನಾನ್ ವೆಜ್?
    ಸಾವಜಿ ಸಮುದಾಯದ ಸೇರಿದಂತೆ ಬಹುತೇಕರು ಶ್ರಾವಣ ಮಾಸ ಪೂರ್ತಿ ನಾನ್ ವೆಜ್ ತಿನ್ನಲ್ಲ. ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆಯೇ ನಾನ್ ವೆಜ್ ತಿನ್ನೋದನ್ನು ಆರಂಭಿಸುತ್ತೇವೆ ಅಂತಾರೆ ಸಾವಜಿ ಸಮಾಜದವರು. ಗೌರಿಸುತ ಗಣಪತಿ ನಮಗೂ ಮಗನಿದ್ದಂತೆ. ಆತನೂ ನಾನ್ ವೆಜ್ ತಿನ್ನಲಿ ಅಂತ ನಾವು ಮಾಂಸ ನೈವೇದ್ಯವಾಗಿ ಇಡ್ತೇವೆ.

    ಇದನ್ನೂ ಓದಿ: Uttara Kannada Chakli Kambala: ಜನರ ಒಗ್ಗಟ್ಟು ಬೆಸೆಯುತ್ತೆ ಚಕ್ಕುಲಿ! ಇದು ಉತ್ತರ ಕನ್ನಡದ ಚಕ್ಕುಲಿ ಕಂಬಳದ ಸ್ಪೆಷಲ್

    ಆತನಿಗೆ ನಾನ್ ವೆಜ್ ನೈವೇದ್ಯ ಮಾಡಿದ ನಂತರ ನಾವು ತಿಂತೇವೆ. ನಾವೊಂದೇ ತಿಂದರೆ ಸರಿ ಅನಿಸೋದಿಲ್ಲ ಅಂತ ಹೀಗೆ ಮಾಡ್ತೇವೆ ಅಂತಾರೆ ಸಾವಜಿ ಸಮುದಾಯದವರು. ಹೀಗಾಗಿ ಗಣೇಶ ಹಾಗೂ ಮೂಷಕನಿಗೂ ತರಹೇವಾರಿ ನಾನ್ ವೆಜ್ ಭಕ್ಷ್ಯ ಬಡಿಸಲಾಗುತ್ತದೆ.

    (ವರದಿ: ಶಿವರಾಮ ಅಸುಂಡಿ, ಹುಬ್ಬಳ್ಳಿ)
    Published by:guruganesh bhat
    First published: