• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಈ ಊರಂದ್ರೆ ಕೋವಿಡ್​ಗೆ ಭಯ; ಕೊರೋನಾ ಹೆಮ್ಮಾರಿಗೇ ದಿಗ್ಬಂಧನ ಹಾಕಿದ ಅಲ್ಲಾಪುರ!

ಈ ಊರಂದ್ರೆ ಕೋವಿಡ್​ಗೆ ಭಯ; ಕೊರೋನಾ ಹೆಮ್ಮಾರಿಗೇ ದಿಗ್ಬಂಧನ ಹಾಕಿದ ಅಲ್ಲಾಪುರ!

ಅಲ್ಲಾಪುರ ಗ್ರಾಮದ ಬೀದಿಗಳನ್ನು ಸ್ಯಾನಿಟೈಸ್ ಮಾಡುತ್ತಿರುವುದು.

ಅಲ್ಲಾಪುರ ಗ್ರಾಮದ ಬೀದಿಗಳನ್ನು ಸ್ಯಾನಿಟೈಸ್ ಮಾಡುತ್ತಿರುವುದು.

ಮೂರನೆಯ ಅಲೆ ಎದುರಿಸಲೂ ಈಗಿನಿಂದ್ಲೇ ಟಾಸ್ಕ್ ಫೋರ್ಸ್ ಸಿದ್ಧತೆ ಆರಂಭಿಸಿದೆ. ಸದ್ಯ ಟಾಸ್ಕ್ ಫೋರ್ಸ್ ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ಜಿಲ್ಲಾ ಮಟ್ಟದ ವೈದ್ಯರೊಂದಿಗೆ ಚರ್ಚಿಸಿ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದೆ.

 • Share this:

ಹುಬ್ಬಳ್ಳಿ: ಕೊರೋನಾ ಅಂದ್ರೆ ಇಡೀ ಜಗತ್ತೆ ಬೆಚ್ಚಿ ಬೀಳುತ್ತೆ. ಆದರೆ ಕೊರೋನಾಗೆ ಈ ಊರಂದ್ರೇನೆ ಭಯ. ಈ ಊರಲ್ಲಿ ಕಾಲಿಡೋಕೂ ಕೊರೋನಾ ಅಂಜುತ್ತಿದೆ. ಕೊರೋನಾ ಎರಡನೆಯ ಅಲೆ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಾಗಿ ಅಬ್ಬರಿಸಿದೆ. ಆದರೆ ಈವರೆಗೂ ಈ ಗ್ರಾಮಕ್ಕೆ ಮಾತ್ರ ಕೊರೋನಾ ಸೋಂಕು ಎಂಟ್ರಿ ಕೊಟ್ಟಿಲ್ಲ. ಜೊತೆಗೆ ಮೂರನೇ ಅಲೆ ಬಾರದಂತೆಯೂ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.


ಹೀಗೆ ಕೊರೋನಾವನ್ನೇ ಅಂಜಿಸಿದ ಗ್ರಾಮ ಯಾವುದು ಅಂತೀರಾ...? ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಅಲ್ಲಾಪುರವೇ ಕೊರೋನಾ ಮೆಟ್ಟಿ ನಿಂತ ಗ್ರಾಮವಾಗಿದೆ. ಇದುವರೆಗೆ ಒಂದೂ ಕೊರೋನಾ ಪ್ರಕರಣ ಈ ಗ್ರಾಮದಲ್ಲಿ ಕಂಡು ಬಂದಿಲ್ಲ. 150 ಮನೆ ಹೊಂದಿರೋ ಗ್ರಾಮದಲ್ಲಿ ಒಂದು ಸಾವಿರ ಜನಸಂಖ್ಯೆ ಇದ್ದು, ಯಾರೊಬ್ಬರಿಗೂ ಕೊರೋನಾ ಬಂದಿಲ್ಲ ಅನ್ನೋದು ವಿಶೇಷ. ಇದೆಲ್ಲಕ್ಕೂ ಕಾರಣವಾದದ್ದು ಗ್ರಾಮದಲ್ಲಿ ರಚನೆಗೊಂಡ ಟಾಸ್ಕ್ ಫೋರ್ಸ್ ಸಮಿತಿ.


ಕೊರೋನಾ ಹೆಡೆಮುರಿ ಕಟ್ಟಿಹಾಕಿದ ಮಲ್ಲಿಕಾರ್ಜುನ ರಡ್ಡೇರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಟಾಸ್ಕ್ ಫೋರ್ಸ್ ಹಗಲಿರುಳು ಶ್ರಮಪಟ್ಟು ಈ ಸಾಧನೆಗೆ ಕಾರಣವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರ ನಡುವೆ ಆನ್ ಲೈನ್ ಸಭೆ ನಡೆಸುವ ವಿಭಿನ್ನ ಪ್ರಯತ್ನವನ್ನೂ ಗ್ರಾಮದ ಟಾಸ್ಕ್ ಫೋರ್ಸ್ ಮಾಡಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಆನ್ ಲೈನ್ ಮೂಲಕವೇ ಸಂವಹನ ನಡೆಸುತ್ತಿದೆ.
ಮನೆ ಮನೆಗೂ ಮಾಸ್ಕ್, ಸ್ಯಾನಿಟೈಸರ್ ವಿತರಣೆ, ಇಡೀ ಗ್ರಾಮದಲ್ಲಿ ನಿರಂತರ ಸ್ಯಾನಿಟೈಜೇಶನ್ ಇತ್ಯಾದಿ ಸ್ವಚ್ಚತಾ ಕಾರ್ಯಗಳನ್ನು ನಡೆಸಿದೆ. ಇಡೀ ಗ್ರಾಮವನ್ನು ಟಾಸ್ಕ್ ಫೋರ್ಸ್ ಸ್ವಯಂ ಲಾಕ್ ಡೌನ್ ಮಾಡಿದೆ. ಅಲ್ಲಾಪುರ ಗ್ರಾಮದ ಅಕ್ಕ – ಪಕ್ಕದ ಹಳ್ಳಿಗಳಲ್ಲಿ ಹತ್ತಾರು ಜನರಿಗೆ ಕೋವಿಡ್ ಬಂದು, ಹಲವರು ಕೋವಿಡ್ ಗೆ ಬಲಿಯಾಗಿದ್ದರು. ಇದರಿಂದ ಆತಂಕಗೊಂಡ ಜನ ಗ್ರಾಮಕ್ಕೆ ಯಾರನ್ನೂ ಬಿಟ್ಟುಕೊಳ್ಳದೆ, ಹೊರಗಿನವರಿಗೆ ನಿರ್ಬಂಧ ಹೇರಿದರು. ಇದೇ ಗ್ರಾಮದವರು ಬೇರೆ ಕಡೆಯಿಂದ ಬಂದ್ರೂ ಕೋವಿಡ್ ಟೆಸ್ಟ್ ಕಡ್ಡಾಯ.
ಅನಾರೋಗ್ಯ ಪೀಡಿತಗೊಂಡವರಿಗೆ ಗ್ರಾಮದಲ್ಲಿಯೇ ಕೋವಿಡ್ ಟೆಸ್ಟ್ ಮಾಡಿಸೋ ಕಾರ್ಯ ಮಾಡಲಾಗಿದೆ. ಯಾವುದೇ ಕಾಯಿಲೆ ಇದ್ರೂ ಗ್ರಾಮದಲ್ಲಿಯೇ ಚಿಕಿತ್ಸೆ ಕೊಡಿಸೋ ವ್ಯವಸ್ಥೆ ಮಾಡಲಾಗಿದೆ. ಹೊಲಗಳಲ್ಲಿ ಕೆಲಸ ಮಾಡುವಾಗ್ಲೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಅಂಗನವಾಡಿ ಮೂಲಕ ಕೊಡೋ ಪೌಷ್ಟಿಕ ಆಹಾರ, ಮೊಟ್ಟೆ ಇತ್ಯಾದಿ ಖುದ್ದು ಮನೆಗೆ ಹೋಗಿ ವಿತರಣೆ ಮಾಡಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರನ್ನೊಳಗೊಂಡ ಟಾಸ್ಕ್ ಫೋರ್ಸ್, ರಾಜ್ಯ ಸರ್ಕಾರ ಲಾಕ್ ಡೌನ್ ಹೇರುವ ಮುಂಚಿತವಾಗಿಯೇ ಈ ಗ್ರಾಮದಲ್ಲಿ ಲಾಕ್ ಡೌನ್ ಜಾರಿಗೊಳಿಸಿದೆ.


ಇದನ್ನು ಓದಿ: Nirav Modi: ಯುಕೆ ಬ್ಯಾಂಕ್ ಖಾತೆಯಲ್ಲಿದ್ದ 17 ಕೋಟಿ ರೂ. ಭಾರತ ಸರ್ಕಾರಕ್ಕೆ ರವಾನಿಸಿದ ನೀರವ್ ಮೋದಿ ಸಹೋದರಿ!

top videos


  ಅಂಗಡಿ, ಹೋಟೆಲ್ ಇತ್ಯಾದಿಗಳು ಬಂದ್ ಮಾಡಿಸಿದೆ. ಎರಡು ತಿಂಗಳಿಗೂ ಹೆಚ್ಚು ಕಾಲ ಅಂಗಡಿ, ಹೋಟೆಲ್ ಬಂದ್ ಆಗಿದ್ದವು. ಗ್ರಾಮದ ಯುವಕರು, ಶ್ರೀಮಂತರ ನೆರವಿನೊಂದಿಗೆ ಕಡು ಬಡವರಿಗೆ ಆಹಾರ ಇತ್ಯಾದಿಗಳ ನೆರವು ಕಲ್ಪಿಸಲಾಗಿದೆ. ಟಾಸ್ಕ್ ಫೋರ್ಸ್ ಸತತ ಪ್ರಯತ್ನದ ಫಲವಾಗಿ ಕೊರೋನಾ ಗ್ರಾಮದ ಬಳಿ ಸುಳಿದಿಲ್ಲ. ಕೊರೋನಾ ಮುಕ್ತ ಗ್ರಾಮ ಎನ್ನೋ ಹುಮ್ಮಸ್ಸಿನಲ್ಲಿರೋ ಅಲ್ಲಾಪುರ ಜನರಿದ್ದಾರೆ.


  ಮೂರನೆಯ ಅಲೆ ಎದುರಿಸಲೂ ಈಗಿನಿಂದ್ಲೇ ಟಾಸ್ಕ್ ಫೋರ್ಸ್ ಸಿದ್ಧತೆ ಆರಂಭಿಸಿದೆ. ಸದ್ಯ ಟಾಸ್ಕ್ ಫೋರ್ಸ್ ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ಜಿಲ್ಲಾ ಮಟ್ಟದ ವೈದ್ಯರೊಂದಿಗೆ ಚರ್ಚಿಸಿ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದೆ. ಕೊರೋನಾ ಜಗತ್ತನ್ನೇ ನಡುಗಿಸಿದೆ. ನಮ್ಮ ಗ್ರಾಮದ ಸುತ್ತ-ಮುತ್ತಲ ಹಳ್ಳಿಗಳಲ್ಲಿಯೂ ಕೊರೋನಾ ಆರ್ಭಟಿಸಿದೆ. ಈ ಹಿನ್ನೆಲೆಯಲ್ಲಿಯೇ ನಮ್ಮ ಗ್ರಾಮಕ್ಕೆ ಪ್ರತ್ಯೇಕ ನಿಯಮಗಳನ್ನು ಜಾರಿಗೊಳಿಸಿದ್ವಿ. ಪೊಲೀಸ್ ಇಲಾಖೆ, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಬೆಂಬಲ ಪಡೆದ್ವಿ.
  ಸದ್ಯಕ್ಕೆ ಕೊರೋನಾ ನಮ್ಮ ಗ್ರಾಮದಿಂದ ದೂರವಿದೆ. ಮುಂದಿನ ದಿನಗಳಲ್ಲಿಯೂ ಹೆಮ್ಮಾರಿಯನ್ನು ದೂರವಿಡೋ ಸಿದ್ಧತೆ ಮಾಡಿಕೊಂಡಿದ್ದೇವೆ. ಇದಕ್ಕೆ ಗ್ರಾಮಸ್ಥರ ಸಂಪೂರ್ಣ ಸಹಕಾರ ಸಿಕ್ಕಿದೆ. ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಅಭಿಪ್ರಾಯಪಟ್ಟಿದ್ದಾರೆ. ಅಲ್ಲಾಪುರ ಜನತೆ ದೇಶಕ್ಕೆ ಮಾದರಿಯಾಗೋ ರೀತಿಯ ಕಾರ್ಯ ಮಾಡಿದ್ದಾರೆ. ವಿವಿಧ ಗ್ರಾಮಗಳ ಜನತೆಯ ದೃಷ್ಟಿ ಅಲ್ಲಾಪುರ ಗ್ರಾಮದತ್ತ ನೆಟ್ಟಿದೆ.

  • ವರದಿ: ಶಿವರಾಮ ಅಸುಂಡಿ

  First published: