ಅಲ್ಲಿ ಭಾಜಾ ಭಜಂತ್ರಿಗಳಿಲ್ಲ, ತಾಳಿ ಕಟ್ಟೋಕು ಮುಂಚೆ ಕೈಗೆ ಟ್ಯಾಗ್, ಬಾಯಿಗೆ ಮಾಸ್ಕ್ ಹಾಕಿಕೊಂಡ ವಧು-ವರ!

ರಾಜ್ಯದಲ್ಲಿ ಜನತಾ ಕರ್ಫ್ಯೂ ಮುಂದುವರಿದಿದೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಹನಗಳು ಬೇಕಾಬಿಟ್ಟಿ ಅಡ್ಡಾಟ ಮುಂದುವರಿದಿದೆ. ಅನಗತ್ಯವಾಗಿ ಅಡ್ಡಾಡುತ್ತಿರುವ ವಾಹನಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ನಗರದ ವಿವಿಧೆಡೆ ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ನಡೆಸಲಾಗಿದೆ. ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ. ಕೆಲವೊಬ್ಬರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.

ಕೋವಿಡ್ ನಿಯಮದ ಪ್ರಕಾರ ಸರಳವಾಗು ಮದುವೆಯಾದ ನವ ವಧು-ವರ.

ಕೋವಿಡ್ ನಿಯಮದ ಪ್ರಕಾರ ಸರಳವಾಗು ಮದುವೆಯಾದ ನವ ವಧು-ವರ.

  • Share this:
ಹುಬ್ಬಳ್ಳಿ: ಕಾಲ ಬದಲಾದಂತೆ ಪದ್ಧತಿಗಳೂ ಬದಲಾಗಲಾರಂಭಿಸಿವೆ. ಕೊರೋನಾ ಕಾರಣದಿಂದಾಗಿ ಜನರ ನೂಕು ನುಗ್ಗಲು ನಿಯಂತ್ರಿಸಲು, ರಾಜ್ಯ ಸರ್ಕಾರ ಅದ್ಧೂರಿ ಮದುವೆಗಳಿಗೆ ಬ್ರೇಕ್ ಹಾಕಿದೆ. ಒಂದು ಮದುವೆಗೆ ಕೇವಲ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಅದೂ ಸಹ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮದುವೆಗಳಿಗೂ ಜನತಾ ಕರ್ಫ್ಯೂ ಬಿಸಿ ತಟ್ಟಿದೆ. ಕಲ್ಯಾಣ ಮಂಟಪಗಳಲ್ಲಿ ನಡೆಯಬೇಕಿದ್ದ ಮದುವೆಗಳು ಮನೆಗಳಿಗೆ ಸ್ಥಳಾಂತರಗೊಳ್ಳಲಾರಂಭಿಸಿವೆ. ಕೇವಲ 50 ಜನರಿಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ. ಕಲ್ಯಾಣ ಮಂಟಪದಲ್ಲಿ ಮಾಡಿದರೆ ಜನಜಂಗುಳಿ ನಿರ್ಮಾಣವಾಗುವ ಭೀತಿ ಎದುರಾಗಿದ್ದು, ಮಂಟಪಗಳನ್ನು ಕೊಡಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮನೆಗಳಲ್ಲಿಯೇ ಸರಳವಾಗಿ ಮದುವೆ ಮಾಡಲು ಜನ ಮುಂದಾಗಿದ್ದಾರೆ.

ಹುಬ್ಬಳ್ಳಿಯ ಮರಾಠ ಗಲ್ಲಿಯಲ್ಲಿ ಇಂದು ಸರಳವಾಗಿ ಮದುವೆ ನೆರವೇರಿತು. ವಿವೇಕ್ ಮತ್ತು ಸೃಷ್ಟಿ ಅನ್ನುವವರ ಮದುವೆ ಕಲ್ಯಾಣ ಮಂಟಪದಲ್ಲಿ ನಿಗದಿಗೊಳಿಸಲಾಗಿತ್ತು. ಆದರೆ ಸರ್ಕಾರದ ಹೊಸ ನಿಯಮದಿಂದಾಗಿ ಮದುವೆ ಕಲ್ಯಾಣ ಮಂಟಪದಿಂದ ಮನೆಗೆ ಶಿಫ್ಟ್ ಆಗಿದೆ. ಮನೆ ಮಂದಿಯ ನಡುವೆ ವಿವೇಕ್ - ಸೃಷ್ಟಿ ವಿವಾಹ ಸರಳವಾಗಿ ನೆರವೇರಿದೆ.
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಒಂದು ಮದುವೆಗೆ 50 ಜನರಿಗೆ ಟ್ಯಾಗ್ ಕೊಟ್ಟಿದೆ. ಕೈಗೆ ಟ್ಯಾಗ್ ಕಟ್ಟಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ವಧು-ವರ ಹಸೆಮಣೆ ಏರಿದ್ದಾರೆ. ಮದುವೆಗೆ ಮಂತ್ರ ಹೇಳಲು ಬಂದ ಪುರೋಹಿತರಿಗೆ, ವೀಡಿಯೋ ತೆಗೆಯಲು ಬಂದವರಿಗೂ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ.

ಇದನ್ನು ಓದಿ: ಲಾಕ್​ಡೌನ್ ಸಮಯದಲ್ಲಿ 21 ಕುಟುಂಬಗಳ ಒಕ್ಕಲೆಬ್ಬಿಸಲು ನೋಟಿಸ್ ನೀಡಿದ ಅಧಿಕಾರಿಗಳು

ಭೂರಿ ಭೋಜನದ ಬದಲಿಗೆ ಕೇವಲ ಉಪಾಹಾರದೊಂದಿಗೆ ಮದುವೆ ಸಮಾರಂಭ ಮುಕ್ತಾಯವಾಗಿದೆ. ಸರ್ಕಾರದ ದಿಢೀರ್ ನಿರ್ಧಾರದಿಂದ ನಮಗೆ ನಷ್ಟವಾಗಿದೆ. ಮದುವೆ ಮಂಟಪ, ಬ್ಯಾಂಡ್ ನವರು ಮತ್ತಿತರರಿಗೆ ಕೊಟ್ಟ ಹಣ ವಾಪಸ್ ಬರಲೇ ಇಲ್ಲ. ಆದರೂ ಸರ್ಕಾರದ ನಿಯಮ ಪಾಲಿಸೋದು ಅನಿವಾರ್ಯವಾಗಿರುವುದರಿಂದ ಸರಳವಾಗಿ ಮದುವೆ ಮುಗಿಸಿದ್ದೇವೆ. ಮನೆ ಮಂದಿಯ ಮಧ್ಯದಲ್ಲಿ ಮದುವೆ ನೆರವೇರಿಸಿದ್ದೇವೆ ಎಂದು ನ್ಯೂಸ್ 18 ಕನ್ನಡದ ಮುಂದೆ ಮಧುಮಗನ ಮಾವ ಶಶಿಕಾಂತ ಗಾಯಕವಾಡ ತಮ್ಮಅಳಲು ತೋಡಿಕೊಂಡಿದ್ದಾರೆ.

ಅನಗತ್ಯ ವಾಹನಗಳಿಗೆ ಪೊಲೀಸರ ಕಡಿವಾಣ

ರಾಜ್ಯದಲ್ಲಿ ಜನತಾ ಕರ್ಫ್ಯೂ ಮುಂದುವರಿದಿದೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಹನಗಳು ಬೇಕಾಬಿಟ್ಟಿ ಅಡ್ಡಾಟ ಮುಂದುವರಿದಿದೆ. ಅನಗತ್ಯವಾಗಿ ಅಡ್ಡಾಡುತ್ತಿರುವ ವಾಹನಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ನಗರದ ವಿವಿಧೆಡೆ ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ನಡೆಸಲಾಗಿದೆ. ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ. ಕೆಲವೊಬ್ಬರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತ ಸೇರಿ ಹಲವಾರು ಪ್ರಮುಖ ವೃತ್ತಗಳಲ್ಲಿ ವಾಹನಗಳ ತಪಾಸಣೆ ಮುಂದುವರಿಸಲಾಗಿದೆ.

ವರದಿ - ಶಿವರಾಮ ಅಸುಂಡಿ
Published by:HR Ramesh
First published: