Hubli-Dharwad ಪೊಲೀಸರಿಗೆ ಕೊರೋನಾಘಾತ: 200ಕ್ಕೂ ಹೆಚ್ಚು ಸಿಬ್ಬಂದಿಗೆ ಪಾಸಿಟಿವ್

 ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯ ಬಹುತೇಕ ಎಲ್ಲ ಠಾಣೆಗಳ ಸಿಬ್ಬಂದಿಗೂ ಕೊರೋನಾ ಪಾಸಿಟಿವ್ ಬಂದಿದೆ. ಕೊರೋನಾಘಾತದಿಂದ ಪೊಲೀಸ್ ಇಲಾಖೆ ತತ್ತರಿಸುವಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಬ್ಬಳ್ಳಿ: ಅವಳಿ ನಗರದ ಪೊಲೀಸರಿಗೆ (Police) ಕೊರೋನಾ(Corona) ಕಂಟಕವಾಗಿ ಮಾರ್ಪಟ್ಟಿದೆ. ಹುಬ್ಬಳ್ಳಿ - ಧಾರವಾಡ ( Hubli-Dharwad ) ಕಮೀಷನರೇಟ್ ವ್ಯಾಪ್ತಿಯಲ್ಲಿ 243 ಪೊಲೀಸರಿಗೆ ಕೋವಿಡ್ ದೃಢಪಟ್ಟಿದೆ. ಅವಳಿ ನಗರದ ಬಹುತೇಕ ಠಾಣೆಗಳ (Police Stations) ಪೊಲೀಸ್ ಸಿಬ್ಬಂದಿಗೆ ಕೋವಿಡ್ ವಕ್ಕರಿಸಿದೆ. ಹುಬ್ಬಳ್ಳಿ - ಧಾರವಾಡ ಗ್ರಾಮೀಣ ಠಾಣೆಯಲ್ಲಿ 35, ಹುಬ್ಬಳ್ಳಿ - ಧಾರವಾಡ ವಿವಿಧ ಟ್ರಾಫಿಕ್ ಠಾಣೆಗಳಲ್ಲಿ 64 ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿ ಸಬ್ ಅರ್ಬನ್, ಹಳೆ ಹುಬ್ಬಳ್ಳಿ, ಬೆಂಡಿಗೇರಿ ಹಾಗೂ ಧಾರವಾಡ ಸಬ್ ಅರ್ಬನ್ ಠಾಣೆಗಳಲ್ಲಿ ತಲಾ 18  ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ 12, ಕಸಬಾಪೇಟೆ 11, ಘಂಟಿಕೇರಿ ಠಾಣೆ ವ್ಯಾಪ್ತಿಯಲ್ಲಿ 10 ಜನ ಸಿಬ್ಬಂದಿ ಕೋವಿಡ್​ ರಿಪೋರ್ಟ್​ ಪಾಸಿಟಿವ್​ ಇದೆ. ಮಹಿಳಾ ಠಾಣೆಯಲ್ಲಿ 08, ಗೊಕುಲ್ ರೋಡ್, ಕಮರೀಪೇಟೆ, ಕೇಶ್ವಾಪುರ, ನವನಗರ, ಎಪಿಎಂಸಿ ಠಾಣೆಗಳ ವ್ಯಾಪ್ತಿಯಲ್ಲಿ ತಲಾ 07 ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಪಿ ಎಸ್ ಐ, ಎ ಎಸ್ ಐ, ಹೆಡ್ ಕಾನಸ್ಟೆಬಲ್, ಪೊಲೀಸ್ ಪೇದೆ ಸೇರಿ ಹಲವಾರು ಸಿಬ್ಬಂದಿಗೆ ಸೋಂಕು ವ್ಯಾಪಿಸಿದೆ.

ಬಹುತೇಕ ಸಿಬ್ಬಂದಿಗೆ ಬೂಸ್ಟರ್ ಡೋಸ್

ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯ ಬಹುತೇಕ ಎಲ್ಲ ಠಾಣೆಗಳ ಸಿಬ್ಬಂದಿಗೂ ಕೊರೋನಾ ಪಾಸಿಟಿವ್ ಬಂದಿದೆ. ಕೊರೋನಾಘಾತದಿಂದ ಪೊಲೀಸ್ ಇಲಾಖೆ ತತ್ತರಿಸುವಂತಾಗಿದೆ. ವಾರಾಂತ್ಯದ ಕರ್ಫ್ಯೂ, ವಿವಿಧ ಬಂದೋಬಸ್ತ್ ಇತ್ಯಾದಿಗಳ ನಿರಂತರ ಕರ್ತವ್ಯಗಳಿಂದಾಗಿ ಸೋಂಕು ಹರಡಿದೆ. ಬಹುತೇಕ ಎಲ್ಲ ಸಿಬ್ಬಂದಿಗೂ ಅ ಸಿಮ್ಟಮಿಕ್ ಇದ್ದಾರೆ. ಎಲ್ಲರಿಗೂ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಹುತೇಕ ಸಿಬ್ಬಂದಿಗೆ ಬೂಸ್ಟರ್ ಡೋಸ್ ಕೊಡಿಸಲಾಗಿದೆ. ಹೀಗಾಗಿ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಆದರೂ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ. ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ನಿಂದಾಗಿ ಬಂದೋಬಸ್ತ್ ಗೆ ಒಂದಷ್ಟು ತೊಡಕಾಗಿದೆ.

ಇದನ್ನೂ ಓದಿ: Corona ವಿಚಾರದಲ್ಲಿ ಸೇಫ್ ಜೋನ್ ನಲ್ಲಿದ್ಯಾ ಕರ್ನಾಟಕ? ಟಫ್ ರೂಲ್ಸ್‌ನಿಂದ ಮುಕ್ತಿ ಸಿಗುತ್ತಾ?

ಇತರೆ ಸಿಬ್ಬಂದಿಯ ನೆರವಿನಿಂದ ಅಗತ್ಯ ಬಂದೋಬಸ್ತ್ ಕೈಗೊಂಡಿದ್ದೇವೆ. ಶೀಘ್ರವೇ ಪೊಲೀಸ್ ಸಿಬ್ಬಂದಿ ಚೇತರಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ನ್ಯೂಸ್ 18 ಕನ್ನಡಕ್ಕೆ ಪೊಲೀಸ್ ಕಮೀಷನರ್ ಲಾಭೂ ರಾಮ್ ತಿಳಿಸಿದ್ದಾರೆ. ಇನ್ನೂ ಒಂದಷ್ಟು ಸಿಬ್ಬಂದಿಯ ಕೋವಿಡ್ ರಿಪೋರ್ಟ್ ಬರಬೇಕಾಗಿದ್ದು, ಮತ್ತಷ್ಟು ಜನ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬರೋ ಆತಂಕ ಎದುರಾಗಿದೆ.

ಕಮೀಷನರ್ ಭೇಟಿ 
ವೀಕ್ ಎಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದ ವಿವಿಧೆಡೆ ಪೊಲೀಸ್ ಕಮಿಷನರ್ ಭೇಟಿ ನೀಡಿದರು. ಪೊಲೀಸ್ ಕಮೀಷನರ್ ಲಾಭೂ ರಾಮ್ ಭೇಟಿ ನೀಡಿ ಪರಿಶೀಲಿಸಿದರು. ಹುಬ್ಬಳ್ಳಿಯ ಚನ್ನಮ್ಮ ವೃತ್ತ, ರೈಲ್ವೆ ನಿಲ್ದಾಣ ಮತ್ತಿತರ ಕಡೆ ಕಮೀಷನರ್ ಭೇಟಿ ಮಾಡಿದರು.ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು. ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯನ್ನು ಲಾಭೂ ರಾಮ್ ಖುದ್ದು ಪರಿಶೀಲಿಸಿದರು. ಲಾಭೂ ರಾಮ್ ಭೇಟಿ ಹಿನ್ನೆಲೆಯಲ್ಲಿ  ಪೊಲೀಸ್ ಸಿಬ್ಬಂದಿ ವಾಹನ ತಪಾಸಣೆ ಹೆಚ್ಚು ಮಾಡಿದ್ದಾರೆ.

ಮಾಂಸದ ಮಾರುಕಟ್ಟೆಯಲ್ಲಿ ಜನಜಂಗುಳಿ 
ಒಂದು ಕಡೆ ಸಂಕ್ರಾಂತಿ ಕರಿ, ಮತ್ತೊಂದು ಕಡೆ ರವಿವಾರ. ಹೀಗಾಗಿ ವಾರಂತ್ಯದ ಕರ್ಫ್ಯೂ ಇದ್ದರೂ ಜನ ಮಾಂಸ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಹುಬ್ಬಳ್ಳಿಯ ಗಣೇಶ ಪೇಟೆಯಲ್ಲಿರೋ ಫಿಶ್ ಮಾರುಕಟ್ಟೆಯಲ್ಲಿ ಜನಜಂಗುಳಿ ವಾತಾವರಣ ನಿರ್ಮಾಣವಾಗಿದೆ. ಮಟನ್ ಹಾಗೂ ಚಿಕನ್ ಅಂಗಡಿಗಳ ಎದುರು ಜನಸಂಖ್ಯೆ ಹೆಚ್ಚಳವಾಗಿದೆ. ಬಹುತೇಕರು ಮಾಸ್ಕ್ ಹಾಕಿದ್ದರೂ ಸಾಮಾಜಿಕ ಅಂತರ ಕಾಪಾಡದೆ ಖರೀದಿಯಲ್ಲಿ ತೊಡಗಿಕೊಂಡಿರೋದು ಕಂಡು ಬಂದಿತು.

ಇದನ್ನೂ ಓದಿ: Vaccination ಬಳಿಕ ಮೂವರು ಮಕ್ಕಳ ನಿಗೂಢ ಸಾವು: ಬೆಳಗಾವಿ ಪ್ರಕರಣದಿಂದ ಹೆಚ್ಚಿದ ಆತಂಕ!

ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದ್ದರೂ ಜನ ಮಾತ್ರ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸಾಮಾಜಿಕ ಅಂತರ ಮರೆತು ಜನ ಖರೀದಿಯಲ್ಲಿ ಬಿಜಿಯಾಗಿದ್ದರು. ಇದನ್ನು ಜಾರಿಗೆ ತರಬೇಕಾದ ಪಾಲಿಕೆ ಅಧಿಕಾರಿಗಳಿಂದಲೂ ನಿರ್ಲಕ್ಷ್ಯ ವಹಿಸಿದ್ದರು. ಜನ ಕೋವಿಡ್ ಗೆ ಡೋಂಟ್ ಕೇರ್ ಎನ್ನುತ್ತಿರೋ. ಧಾರವಾಡ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 600 ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಧಾರವಾಡ ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಮಾಣ ಏರಿಕೆಯಾಗುತ್ತಿದ್ದರೂ, ಜನ ಮಾತ್ರ ಮೈಮರೆತು ಖರೀದಿಯಲ್ಲಿ ತೊಡಗಿಕೊಂಡಿದ್ದರು.
Published by:Kavya V
First published: