ನನಗೂ ಸಿಎಂ ಆಗುವ ಆಸೆ ಇದೆ, ಅದಕ್ಕೆ‌ ಇನ್ನು‌‌ ಕಾಲ‌ ಇದೆ: ಸಚಿವ ಉಮೇಶ್​ ಕತ್ತಿ

ಉತ್ತರ ಕರ್ನಾಟಕ ಒಡೆಯುವ ಉದ್ದೇಶ ನನಗಿಲ್ಲ, ನಾವೆಲ್ಲ ಅಖಂಡ ಕರ್ನಾಟಕದಲ್ಲಿ ಬದುಕಬೇಕು. ಅದನ್ನು ಆಳಬೇಕು ಎನ್ನುವ ಉದ್ದೇಶ ಇದೆ ಎನ್ನುವ ಮೂಲಕ ಸಿಎಂ‌ ಆಗುವ ಆಸೆಯನ್ನು‌ ವ್ಯಕ್ತ ಪಡಿಸಿದರು.

ಉಮೇಶ್​ ಕತ್ತಿ.

ಉಮೇಶ್​ ಕತ್ತಿ.

  • Share this:
ಧಾರವಾಡ: ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ. ಮುಂದೇ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಬಹುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ ಕತ್ತಿ ಭವಿಷ್ಯನುಡಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೇ, ಸುಮ್ಮನಿರಲ್ಲ. ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಹೋದರೇ ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೇಳಲಿದೆ ಎಂದು ಹೇಳಿದರು. 

ಉತ್ತರ ಕರ್ನಾಟಕ ಒಡೆಯುವ ಉದ್ದೇಶ ನನಗಿಲ್ಲ, ನಾವೆಲ್ಲ ಅಖಂಡ ಕರ್ನಾಟಕದಲ್ಲಿ ಬದುಕಬೇಕು. ಅದನ್ನು ಆಳಬೇಕು ಎನ್ನುವ ಉದ್ದೇಶ ಇದೆ ಎನ್ನುವ ಮೂಲಕ ಸಿಎಂ‌ ಆಗುವ ಆಸೆಯನ್ನು‌ ವ್ಯಕ್ತ ಪಡಿಸಿದರು.

ನಾನು ಕೂಡ ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರು ಇಲಾಖೆಗಳಲ್ಲಿ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ಭ್ರಷ್ಟಾಚಾರ ಮಾಡಿಲ್ಲ. ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ ಎಂದು ಇಂಗಿತ ವ್ಯಕ್ತಪಡಿಸಿದರು.

ಈ ಸಲ ಉತ್ತರ ಕರ್ನಾಟಕದವರಿಗೆ ಸಿಎಂ ಸ್ಥಾನ ಸಿಗಬಹುದು ಎಂಬ ಭರವಸೆ ಇದೆ. ನನಗೆ ಇನ್ನೂ 15 ವರ್ಷ ಅವಕಾಶ ಕೊಡಲು ಸಮಯ ಇದೆ, ಈಗ ನನಗೆ 60 ವರ್ಷ ಆಗಿದೆ, ಹದಿನೈದು ವರ್ಷದಲ್ಲಿ ಸಿಎಂ ಆಗಬಹುದು. ಎಂಟು ಸಲ ಎಂಎಲ್‌ಎ ಆಗಿದ್ದೇನೆ 11 ಸಲ ಎಂಎಲ್‌ಎ ಆಗುವೆ ಎಂದರು.

ಇದೇ‌ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ‌ ಪರ ಬ್ಯಾಟ್ ಮಾಡಿದ ಸಚಿವ ಕತ್ತಿ, ಮುಂದಿನ ಮುಖ್ಯಮಂತ್ರಿ ಬೆಲ್ಲದ, ನಿರಾಣಿ ಅಥವಾ ನಾನೇ ಆಗಬಹುದು. ಶಾಸಕ, ಸಚಿವ, ಮುಖ್ಯಮಂತ್ರಿ ಬಳಿಕ ಪ್ರಧಾನಿ ಆಗುವ ಆಸೆಯೂ ಇದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರಿಗೆ ಕೆಲಸ ಇಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದ್ದರೇ, ಸಿಬಿಐ, ಇಡಿ ಇದೆ. ಬೇಕಿದ್ದರೇ, ಕೋರ್ಟ್ ಗೂ ಹೋಗಲಿ ಎಂದು ಸವಾಲು ಹಾಕಿದರು.

ಉಮೇಶ ಕತ್ತಿ ಉತ್ತರ ಕರ್ನಾಟಕದ ಸಿಎಂ ಹೇಳಿಕೆ ವಿಚಾರ ಮುಂದಿನ ಸಿಎಂ ಅಂತಾ ಹೇಳಿದ್ದಾರೆ ಅವರು ನಾಳೆಯೇ ಆಗುತ್ತಾರೆ ಅಂತಾ ಹೇಳಿಲ್ಲವಲ್ಲ ಎಂದು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಮೇಶ ಕತ್ತಿ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ಅವಕಾಶ ಬರಬೇಕಿದೆ.  ಖಂಡಿತವಾಗಿಯೂ ಉತ್ತರ ಕರ್ನಾಟಕದವರು ಸಿಎಂ ಆಗಬೇಕು. ಆದರೆ ಇದೇ ಅವಧಿಯಲ್ಲಿ ಅಂತಾ ಅರ್ಥವಲ್ಲ ಎಂದರು.

ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಮುಖಗಳು, ಕಾಂಗ್ರೆಸ್‌‌ನವರು ಭ್ರಷ್ಟಾಚಾರದ ರಕ್ತಾ ಬೀಜಾಸುರರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯ ಮಾಡಿದರು.

ಇದನ್ನೂ ಓದಿ: Corona:’’ಕೊರೋನಾ 3ನೇ ಅಲೆ ನಮ್ಮ ನಡುವೆ ಇದೆ’’ ಎಂದು ಎಚ್ಚರಿಸಿದ ಪ್ರಸಿದ್ದ ಭೌತಶಾಸ್ತ್ರಜ್ಞ

ಏಳು ವರ್ಷದಿಂದ ದೇಶದಲ್ಲಿ ನಾವು ಸರ್ಕಾರ ನಡೆಸುತ್ತಿದ್ದೇವೆ. ಬಿಜೆಪಿಯ ಒಬ್ಬ ಮಂತ್ರಿ ಮೇಲೆಯೂ ಆರೋಪವಿಲ್ಲ ಎಂದರು, ಇನ್ನೂ ಮಾಲಿನ್ಯ ಮಂಡಳಿ ವರ್ಗಾವಣೆ ಭ್ರಷ್ಟಾಚಾರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ‌ ಜೋಶಿ, ಅವರು ಆರೋಪ ಮಾಡಿದ್ದಾರೆ, ತನಿಖೆ ಆಗಬೇಕು ಅಂತಾದರೆ ದಾಖಲೆಗಳನ್ನು ಕೊಡಲಿ, ಸರ್ಕಾರ ತನಿಖೆ ಮಾಡುತ್ತದೆ ಎಂದು ಸವಾಲು ಹಾಕಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: