ರಾಷ್ಟ್ರಮಟ್ಟದಲ್ಲಿ ಕನ್ನಡದ ಕಂಪು: ಪಟೇಲ್​ ವಸ್ತು ಸಂಗ್ರಹಾಲಯದ ವಿನ್ಯಾಸದಲ್ಲಿ ಹುಬ್ಬಳ್ಳಿ ಹೈದನ ಕೈಚಳಕ​..!

ಕನ್ನಡಿಗರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈಗ ಪಟ್ಟಿಗೆ ಹುಬ್ಬಳಿಯ ಹೈದನ ಹೆಸರೂ ಸೇರಿದೆ. ಇಂದು ಲೋಕಾಪರ್ಣೆಗೊಂಡ ಸರ್ದಾರ್​ ವಲ್ಲಭಬಾಯಿ ಪಟೇಲ್​ ಬೃಹತ್​ ಪ್ರತಿಮೆ ನಿರ್ಮಾಣದಲ್ಲಿ ಯೋಜನೆಯಲ್ಲಿ ರಾಹುಲ್​ ಧಾರವಾಡಕಾರ್​ ಕೂಡ ಭಾಗಿಯಾಗಿರುವುದು ಕನ್ನಡಗರಲ್ಲಿ ಹೆಮ್ಮೆಯ ಜೊತೆಗೆ ಸಂತಸ ಮೂಡಿಸಿದೆ. ಈ ಯೋಜನೆಯಲ್ಲಿ ಭಾಗಿಯಾಗಿರುವ ಕುರಿತು ಅವರು ಹಂಚಿಕೊಂಡ ಅಭಿಪ್ರಾಯ ಇಲ್ಲಿದೆ.

Seema.R | news18
Updated:October 31, 2018, 5:26 PM IST
ರಾಷ್ಟ್ರಮಟ್ಟದಲ್ಲಿ ಕನ್ನಡದ ಕಂಪು: ಪಟೇಲ್​ ವಸ್ತು ಸಂಗ್ರಹಾಲಯದ ವಿನ್ಯಾಸದಲ್ಲಿ ಹುಬ್ಬಳ್ಳಿ ಹೈದನ ಕೈಚಳಕ​..!
ಕನ್ನಡಿಗರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈಗ ಪಟ್ಟಿಗೆ ಹುಬ್ಬಳಿಯ ಹೈದನ ಹೆಸರೂ ಸೇರಿದೆ. ಇಂದು ಲೋಕಾಪರ್ಣೆಗೊಂಡ ಸರ್ದಾರ್​ ವಲ್ಲಭಬಾಯಿ ಪಟೇಲ್​ ಬೃಹತ್​ ಪ್ರತಿಮೆ ನಿರ್ಮಾಣದಲ್ಲಿ ಯೋಜನೆಯಲ್ಲಿ ರಾಹುಲ್​ ಧಾರವಾಡಕಾರ್​ ಕೂಡ ಭಾಗಿಯಾಗಿರುವುದು ಕನ್ನಡಗರಲ್ಲಿ ಹೆಮ್ಮೆಯ ಜೊತೆಗೆ ಸಂತಸ ಮೂಡಿಸಿದೆ. ಈ ಯೋಜನೆಯಲ್ಲಿ ಭಾಗಿಯಾಗಿರುವ ಕುರಿತು ಅವರು ಹಂಚಿಕೊಂಡ ಅಭಿಪ್ರಾಯ ಇಲ್ಲಿದೆ.
  • News18
  • Last Updated: October 31, 2018, 5:26 PM IST
  • Share this:
ಸೀಮಾ ಆರ್​, ನ್ಯೂಸ್​ 18 ಕನ್ನಡ

ವಿಶ್ವದ ಅತಿ ಎತ್ತರ ಸರ್ದಾರ್​ ವಲ್ಲಭಾಯಿ​ ಪಟೇಲ್​ ಏಕತಾ ಪ್ರತಿಮೆ ಇಂದು ವಿಶ್ವಕ್ಕೆ ಅನಾವರಣಗೊಂಡಿದೆ. ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಂಡ ಯೋಜನೆ  ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮೋದಿ ಅವರ ಕನಸಿನ ಯೋಜನೆಯಾದ ಈ ಕಾರ್ಯ ಪೂರ್ಣಗೊಳ್ಳಲು ಹಗಲಿರುಳು ಅನೇಕ ಮಂದಿ ಶ್ರಮಿಸಿದ್ದಾರೆ. ಅದರಲ್ಲಿ ನಮ್ಮ ಕನ್ನಡಿಗರ ಪಾತ್ರ ಇದೆ ಎಂಬುದು ಕೂಡ ನಮಗೆ ಹೆಮ್ಮೆಯ ವಿಷಯವಾಗಿದೆ.ನರ್ಮದೆಯ ತಟದಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆಯ ಕೆಳಗೆ ಪಟೇಲ್​ ವಸ್ತು ಸಂಗ್ರಹಾಲಯವನ್ನೂ ಸಹ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಪಟೇಲರ ಸಾಧನೆ ಬಿಂಬಿಸುವ 11 ಗ್ಯಾಲರಿ ಕೂಡ ಇದೆ. ಈ ಮ್ಯೂಸಿಯಂ ಅನ್ನು ವಿನ್ಯಾಸ ಮಾಡುವಲ್ಲಿ ಹುಬ್ಬಳ್ಳಿ ಹೈದ ರಾಹುಲ್​ ಧಾರವಾಡ್​ಕರ್​  ಅಳಿಲು ಸೇವೆಯೂ ಇದೆ.
ಈ ಮಹತ್ವದ ಕಾರ್ಯದಲ್ಲಿ ಭಾಗಿಯಾಗಿರುವ  ಬಗ್ಗೆ ನ್ಯೂಸ್​ 18 ಕನ್ನಡದ ಜೊತೆ ರಾಹುಲ್ ಧಾರವಡ​ಕರ್​ ಮಾತನಾಡಿ, ತಮ್ಮ ಕೆಲಸದ ಅನುಭವವನ್ನು ಹಂಚಿಕೊಂಡಿದ್ದಾರೆ.

'ಬೆಂಗಳೂರಿನ 'ಇಡಿಸಿ ಕ್ರಿಯೇಟಿವ್ ಡಿಸೈನ್ ಆ್ಯಂಡ್​ ಮಲ್ಟಿಮೀಡಿಯಾ' ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಾವು ಈಗಾಗಲೇ ಅನೇಕ ಮ್ಯೂಸಿಯಂಗಳ ನಿರ್ಮಾಣ ಮಾಡಿದ್ದೇವೆ. ಚಿಕ್ಕಮಗಳೂರಿನಲ್ಲಿ ಕಾಫಿ ಮ್ಯೂಸಿಯಂ, ಅಹಮದಬಾದ್​ನ ಎಲೆಕ್ಟ್ರಾನಿಕ್​ಸಿಟಿ, ಹರಿಯಾಣದ ಚೌಧರಿ ಲಾಲ್​, ಜಲಂಧರ್​ನಲ್ಲಿ ಜಂಗಿ ಆಜಾದಿ, ಅಹಮದಬಾದ್​ನ ಸರ್ದಾರ್​​ ನ್ಯಾಷನಲ್​ ಮೆಮೋರಿಯಂ ಸೇರಿದಂತೆ ಹಲವು ಯೋಜನೆಗಳಲ್ಲಿ ಕೆಲಸ ಮಾಡಿರುವ ನಮಗೆ ಈ ದೊಡ್ಡ ಯೋಜನೆಯಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಷಯ' ಎಂದು ಸಂತೋಷ ವ್ಯಕ್ತಪಡಿಸಿದರು.'ಈ ಯೋಜನೆಯ ಸಂಪೂರ್ಣ ಉಸ್ತುವಾರಿ 'L&T' ಕಂಪನಿ ಹೊತ್ತುಕೊಂಡಿತ್ತು. ಮ್ಯೂಸಿಯಂ ನಿರ್ಮಾಣದಲ್ಲಿ ನಮ್ಮ ಸಂಸ್ಥೆಯ ಕೆಲಸ ನೋಡಿ ಈ ಅವಕಾಶ ಒದಗಿಬಂದಿದೆ. ಇದು ನಿಜಕ್ಕೂ ನಮಗೆ ಸವಾಲಿನ ಕೆಲಸ ಕೂಡ ಆಗಿತ್ತು. ಕಳೆದ 30-40 ದಿನಗಳಿಂದ ಹಗಲಿರುಳು ಎನ್ನದೆ ನಾವು ದುಡಿದಿದ್ದೇವೆ' ಎಂದಾಗ ಅವರ ಮಾತಲ್ಲಿದ್ದ ತೃಪ್ತಿ ಭಾವ ನಿಜಕ್ಕೂ ಖುಷಿ ನೀಡಿತ್ತು.

 'ಪಟೇಲರ ಜೀವನ ಕುರಿತು ಒಳ ವಿನ್ಯಾಸ, ಗ್ರಾಫಿಕ್​ ಡಿಸೈನ್​, ಚಿತ್ರಕಲೆ, ಮಲ್ಟಿ ಮೀಡಿಯಾ ಕೆಲಸವನ್ನು ಇಲ್ಲಿ ನಿರ್ವಹಿಸಿದ್ದೇವೆ. ಅವರ ವಿಭಿನ್ನ ಚಿತ್ರಗಳು, ಅವರ ಜೀವನ ಚರಿತ್ರೆಗಳನ್ನು ಹೆಕ್ಕುವುದು ಕೂಡ ಸುಲಭದ ಕೆಲಸವಾಗಿರಲಿಲ್ಲ. 11 ಗ್ಯಾಲರಿಗಳಲ್ಲಿ ಮೊದಲಿಗೆ ಪ್ರತಿಮೆ ನಿರ್ಮಾಣ ಕಾರ್ಯ ಯೋಜನೆ ನಂತರ ಅವರ ದೇಶಕ್ಕೆ ನೀಡಿದ ಕೊಡುಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ, ದೇಶ ವಿಭಜೀಕರಣದಲ್ಲಿ ಅವರ ಹೋರಾಟ, ರಾಜ್ಯಗಳ ಏಕೀಕರಣದಲ್ಲಿ ಅವರ ಕೊಡುಗೆ ನಂತರದಲ್ಲಿ ಇಲ್ಲಿನ ಸ್ಥಳೀಯ ಬುಡಕಟ್ಟು ಹಾಗೂ ನರ್ಮದಾ ಸರೋವರ್​ ಅಣೆಕಟ್ಟಿನ  ಮಾಹಿತಿಯನ್ನು ನೀಡಲಾಗಿದೆ' ಎಂದು ಅವರು ವಿವರಿಸಿದರು.ಇನ್ನು ಮ್ಯೂಸಿಯಂನ ಮತ್ತೊಂದು ವಿಶೇಷ ಎಂದರೆ, ಇಲ್ಲಿ ಡ್ಯಾಂನ ಸಂಪೂರ್ಣ ವೀಕ್ಷಣೆ ಮಾಡಲು 193ಮೀ ಎತ್ತರದ ಎರಡು ವೀಕ್ಷಣಾ ಗ್ಯಾಲರಿ ನಿರ್ಮಿಸಲಾಗಿದೆ, ಇಲ್ಲಿಂದ  ಅಣೆಕಟ್ಟಿನ ಸಂಪೂರ್ಣ ವೀಕ್ಷಣೆ ಮಾಡಬಹುದು. ​

'ನನ್ನ ತಾತಾ ಮಾನಪ್ಪ ಕೂಡ ಸ್ವಾತಂತ್ರ್ಯ ಹೋರಾಟಗಾರರು. ಬ್ರಿಟಿಷರ ವಿರುದ್ಧ ಹೋರಾಡಿದ ಅವರು 30 ಬಾರಿ ಜೈಲಿಗೆ ಹೋಗಿಬಂದಿದ್ದಾರೆ. ಈಗ ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಸರ್ದಾರ್​ ವಲ್ಲಭಭಾಯಿ ಪಟೇಲರ ಪ್ರತಿಮೆ ನಿರ್ಮಾಣದಲ್ಲಿ ಭಾಗಿಯಾಗಿರುವುದು ನಮ್ಮ ಕುಟುಂಬದವರಿಗೂ ಸಂತೋಷ ನೀಡಿದೆ' ಎನ್ನುತ್ತಾರೆ ರಾಹುಲ್​.

First published:October 31, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading