ಪತ್ನಿಯನ್ನ ಕಳಿಸಲ್ಲ ಅಂದಿದ್ದಕ್ಕೆ ಮುನಿಸು: ಅತ್ತೆಗೆ ಬ್ಲೇಡ್ ಹಾಕಿದ ಅಳಿಯ

ಘಟನೆಯಲ್ಲಿ ಸೋಮವ್ವ ಮಲ್ಲಾಡ ಎಂಬ ಮಹಿಳೆಗೆ ಗಾಯಗಳಾಗಿವೆ.  ಬ್ಲೇಡ್ ನಿಂದ ಅತ್ತೆಯ ದೇಹದ ಮೇಲೆ ದಾಳಿ ಮಾಡಿರೋ ರಮೇಶ್, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ.ಅಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಠಾಣೆ

ಪೊಲೀಸ್ ಠಾಣೆ

  • Share this:
ಹುಬ್ಬಳ್ಳಿ (Hubballi News) ಗಂಡ - ಹೆಂಡತಿ (Husband And Wife) ಜಗಳ ಆಡೋದನ್ನು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ತನ್ನ ಹೆಂಡತಿಯನ್ನು ತನ್ನೊಂದಿಗೆ ಕಳುಹಿಸಲಿಲ್ಲ ಎಂದು ಅತ್ತೆಗೆ (Mother In Law) ಬ್ಲೇಡ್ ಹಾಕಿದ್ದಾನೆ. ಅತ್ತೆಯ  ದೇಹದ ಹಲವು ಭಾಗಗಳಲ್ಲಿ ಬ್ಲೇಡ್ ನಿಂದ ದಾಳಿ ಮಾಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಪಡದಯ್ಯನ ಹಕ್ಕಲು ನಿವಾಸಿ ರಮೇಶ್ ದೊಡ್ಡಮನಿ, ಹುಬ್ಬಳ್ಳಿಯ ನವನಗರದ ಯುವತಿಯನ್ನು ಮದುವೆಯಾಗಿದ್ದ. ಆದರೆ ಗಂಡನೊಂದಿಗೆ ಜಗಳವಾಡಿದ್ದ ಮಹಿಳೆ ತವರು ಮನೆ ಸೇರಿದ್ದಳು. ನಾಲ್ಕೈದು ವರ್ಷಗಳಿಂದ ತವರು ಮನೆ ಸೇರಿರುವ ಹೆಂಡತಿಯನ್ನು ವಾಪಸ್ ಕಳುಹಿಸಿಕೊಡುವಂತೆ ಆಗಾಗಲ ಕೇಳುತ್ತಲೇ ಬಂದ ರಮೇಶ್ ದೊಡ್ಡಮನಿ, ಮತ್ತೊಮ್ಮೆ ಹೆಂಡತಿಯನ್ನು ಕರೆದೊಯ್ಯಲು ಬಂದಿದ್ದಾನೆ.

ತನ್ನ ಮನೆಗೆ ಬರುವಂತೆ ಹೆಂಡತಿಗೆ ಹೇಳಿದಾಗ ಆಕೆ ನಿರಾಕರಿಸಿದ್ದಾಳೆ. ಇಬ್ಬರ ನಡುವೆ ಸಣ್ಣ ಪ್ರಮಾಣದಲ್ಲಿ ಜಗಳವಾಗಿದೆ. ಪತ್ನಿಯ ಮೇಲೆ ಹಲ್ಲೆ ಮಾಡಿದ್ದ ರಮೇಶ್, ತನ್ನ ಮನೆಗೆ ಬರುವಂತೆ ಒತ್ತಾಯಿಸಿದ್ದ. ಈ ವೇಳೆ ಜಗಳ ಬಿಡಿಸಲು ಹೋದ ಅತ್ತೆಗೆ ಅಳಿಯ ರಮೇಶ್ ಬ್ಲೇಡ್ ನಿಂದ ಹಲ್ಲೆ ಮಾಡಿದ್ದಾನೆ.

ಅತ್ತೆ ಆಸ್ಪತ್ರೆಗೆ ದಾಖಲು

ಘಟನೆಯಲ್ಲಿ ಸೋಮವ್ವ ಮಲ್ಲಾಡ ಎಂಬ ಮಹಿಳೆಗೆ ಗಾಯಗಳಾಗಿವೆ.  ಬ್ಲೇಡ್ ನಿಂದ ಅತ್ತೆಯ ದೇಹದ ಮೇಲೆ ದಾಳಿ ಮಾಡಿರೋ ರಮೇಶ್, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ.ಅಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:  ಪ್ರೀತಿಸಿ ಮದುವೆ, ಗಂಡನ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾದ ಮಹಿಳಾ ಟೆಕ್ಕಿ

ಅಳಿಯನಿಂದ ಹಲ್ಲೆಗೊಳಗಾದ ಅತ್ತೆ ಆಸ್ಪತ್ರೆ ಪಾಲಾಗಿದ್ದಾಳೆ. ಬ್ಲೇಡ್ ನಿಂದ ಹಲ್ಲೆ ಮಾಡಿದ ಅಳಿಯ ಎಸ್ಕೇಪ್ ಆಗಿದ್ದಾನೆ. ಹೆಂಡತಿ ಮತ್ತೆ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದಾಳೆ. ಈ ಕುರಿತು ನವನಗರ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗಾಂಜಾ ಮಾರಾಟದ ಆರೋಪಿಗೆ ಶಿಕ್ಷೆ

ಅಕ್ರವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಹುಬ್ಬಳ್ಳಿ ನ್ಯಾಯಾಲಯ ತೀರ್ಪು ನೀಡಿದೆ. ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್ ಖೋಡೆ ಹಾಸ್ಟೆಲ್ ಬಳಿ 2019 ರಲ್ಲಿ ಗಾಂಜಾ ಮಾರಾಟ ಆರೋಪದ ಮೇಲೆ ಸಂಗಮೇಶ್ ಅಂದಾನಪ್ಪ ಅಂಗಡಿ ಎಂಬಾತನನ್ನು ಬಂಧಿಸಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಇದನ್ನೂ ಓದಿ:  ವಿದ್ಯಾರ್ಥಿನಿಯರ ಅಶ್ಲೀಲ ಚಿತ್ರಗಳನ್ನಿಟ್ಟುಕೊಂಡು ಬ್ಲ್ಯಾಕ್​ಮೇಲ್; ಐಎಎಸ್ ಮಾಡಿಸುತ್ತೇವೆಂದು ನಂಬಿಸಿ ಚಿನ್ನಾಭರಣ ಕೊಳ್ಳೆ

ವಿದ್ಯಾನಗರದಲ್ಲಿ 2019ರ ಜುಲೈ 31 ರಂದು ಹಾಸ್ಟೆಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ಆನಂದ ಒನಕುದ್ರೆ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ವೇಳೆ ಆರೋಪಿ ಸಂಗಮೇಶ್ ನಿಂದ  1100 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಉಮೇಶ ಮಂಜುನಾಥ ಭಟ್ ಅಡಿಗ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ವಿ. ಪಾಟೀಲ ವಾದ ಮಂಡಿಸಿದ್ದರು.

ಶೀಲ ಶಂಕಿಸಿ ಪತ್ನಿಯ ಕೊಲೆ

ಪತ್ನಿಯ ನಡತೆಯನ್ನು ಶಂಕಿಸಿದ ಪತಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ ಜೈಲು ಸೇರಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಬಂಡಿವಾಡ ಗ್ರಾಮದಲ್ಲಿ 2020ರಂದು ನಡೆದಿತ್ತು.  42 ವರ್ಷದ ಶಾರವ್ವ ಕುರ್ಡಿಕೇರಿ ಕೊಲೆಯಾಗಿರುವ ಮೃತ ಮಹಿಳೆ . ಇನ್ನೂ ಕೊಲೆ ಮಾಡಿರುವ ವ್ಯಕ್ತಿಯನ್ನು ಹನುಮಂತ ಎಂದು ಗುರುತಿಸಲಾಗಿತ್ತು.

ಹನ್ನೆರಡು ವರ್ಷಗಳ ಹಿಂದೆ ಸುಳ್ಳ ಗ್ರಾಮದ ಶಾರವ್ವಳನ್ನು ಬಂಡಿವಾಡ ಗ್ರಾಮದ ಹನುಮಂತ ಮದುವೆಯಾಗಿದ್ದ. ಮದುವೆಯಾದ ಕೆಲ ವರ್ಷಗಳು ಸಂಸಾರ ಚೆನ್ನಾಗಿಯೇ ನಡೆದಿತ್ತು. ಆದರೆ, ಹನುಮಂತ ತನ್ನ ಪತ್ನಿ ಶಾರವ್ವ ಮೇಲೆ ಅನುಮಾನ ‌ಮಾಡತೊಡಗಿದ. ಶೀಲ ಸಂಕಿಸಿ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ. ಹೀಗಾಗಿ ಇಬ್ಬರ ನಡುವೆಯೂ ದಿನಂಪ್ರತಿ ಜಗಳ ನಡೆಯುತ್ತಲೇ ಇತ್ತು.

ಅನುಮಾನದ ಪಿಶಾಚಿ ತಲೆಗೇರಿ ಕುಡಿದು ಬಂದು ಹೆಂಡತಿಯನ್ನು ಹೊಡೆಯುತ್ತಿದ್ದ ಎನ್ನಲಾಗಿದೆ. ಕುಟುಂಬದ ಹಿರಿಯರು ಸಾಕಷ್ಟು ಬಾರಿ ರಾಜಿ‌ ಸಂಧಾನ ಮಾಡಿಸಿದ್ದರೂ ಸಂಧಾನ ವಿಫಲವಾಗಿ ಇವರಿಬ್ಬರ ಜಗಳ ಕೋರ್ಟ್ ಮೆಟ್ಟಿಲೇರಿತ್ತು. ಪತಿಯಿಂದ ದೂರವಿದ್ದ ಶಾರವ್ವ ಬಂಡಿವಾಡ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ನಂತರ ಡೈವರ್ಸ್‌ ಮತ್ತು ಜೀವನಾಂಶಕ್ಕಾಗಿ ಶಾರವ್ವಾ ಕೋರ್ಟ್ ಮೊರೆ ಹೋಗಿದ್ದಳು. ಇದರಿಂದ ಕೋಪಗೊಂಡ ಪತ್ನಿ ಯನ್ನು ಕೊಲೆ ಮಾಡಿದ್ದನು.

ವರದಿ - ಶಿವರಾಮ ಅಸುಂಡಿ.
Published by:Mahmadrafik K
First published: