Forgery Case: ನ್ಯಾಯಾಧೀಶರ ಸಹಿಯನ್ನೇ ಫೋರ್ಜರಿ ಮಾಡಿದ ಭೂಪ, ನಕಲಿ ಆದೇಶ ಪ್ರತಿ ನೀಡಿದವನಿಗೆ ಈಗ ಜೈಲೂಟ!

ನ್ಯಾಯಾಧೀಶರ ಸಹಿಯನ್ನೇ ಫೋರ್ಜರಿ ಮಾಡಿ, ನಕಲಿ ನೇಮಕಾತಿ ಆದೇಶ ಪತ್ರ ನೀಡಿದ ಭೂಪ ಈಗ ಜೈಲು ಪಾಲಾಗುವಂತಾಗಿದೆ. ಒಂದು ವರ್ಷ ಜೈಲು ಶಿಕ್ಷೆ ಜೊತೆಗೆ ದಂಡವನ್ನೂ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಶಿಕ್ಷೆಗೆ ಗುರಿಯಾದ ಶಂಕರಗೌಡ ಪಾಟೀಲ್

ಶಿಕ್ಷೆಗೆ ಗುರಿಯಾದ ಶಂಕರಗೌಡ ಪಾಟೀಲ್

  • Share this:
ಹುಬ್ಬಳ್ಳಿ:  ಚಿಕ್ಕವರಿದ್ದಾಗ ಕೆಲವರು ಪರೀಕ್ಷೆಯಲ್ಲಿ (Exam) ಕಡಿಮೆ ಅಂಕ ಬಂದಾಗ ಮಾರ್ಕ್ಸ್ ಕಾರ್ಡ್‌ನಲ್ಲಿ (Marks Card) ತಮ್ಮ ಅಪ್ಪ (Father), ಅಮ್ಮನ (Mother) ಸಹಿಯನ್ನೇ (Signature) ಫೋರ್ಜರಿ (Forgery) ಮಾಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಖದೀಮ ನ್ಯಾಯಾಧೀಶರ (Judge) ಸಹಿಯನ್ನೇ (Sign) ಫೋರ್ಜರಿ ಮಾಡಿದ್ದಾನೆ. ನ್ಯಾಯಧೀಶರ ಹೆಸರಿನಲ್ಲಿ ನಕಲಿ ಸಹಿ ಮಾಡಿ, ನಕಲಿ ಆದೇಶ ಪ್ರತಿ (Order Copy) ನೀಡಿದ್ದ. ಇದೀಗ ಈ ಭೂಪ ಜೈಲು (Jail) ಪಾಲಾಗಿದ್ದಾನೆ. ಸಹಿ ಫೋರ್ಜರಿ ಮಾಡಿದ ಅಪರಾಧಿಗೆ ಒಂದು ವರ್ಷ ಜೈಲು ಶಿಕ್ಷೆ (Imprisonment) ವಿಧಿಸಲಾಗಿದೆ. ಧಾರವಾಡದ (Dharwad) ಹೈಕೋರ್ಟ್ ಪೀಠದಲ್ಲಿ (High Court Bench) ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಧಾರವಾಡದ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಹೆಸರಿನಲ್ಲಿ ನಕಲಿ ಸಹಿ ಮಾಡಿದ್ದ ಭೂಪ ನಕಲಿ ಆದೇಶ ಪತ್ರ ನೀಡಿ ವಂಚಿಸಿದ್ದ.

ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿದ ಖದೀಮ

ಹೀಗೆ ಸಹಿ ಫೋರ್ಜರಿ ಮಾಡಿ ನಕಲಿ ಆದೇಶ ಪ್ರತಿ ನೀಡಿ, ಶಿಕ್ಷೆಗೆ ಗುರಿಯಾದಾತ ನನ್ನು ಶಂಕರಗೌಡ ಪಾಟೀಲ ಎಂದು ಗುರುತಿಸಲಾಗಿದೆ.  ಹುಬ್ಬಳ್ಳಿಯ ಎರಡನೇ ಜೆ.ಎಂ.ಎಫ್‌.ಸಿ. ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನಿಡಿದೆ. ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಲಾಗಿದೆ.

ನಕಲಿ ಸಹಿ ಮಾಡಿ, 1.13 ಲಕ್ಷ ಪಡೆದಿದ್ದ ವಂಚಕ

ಧಾರವಾಡದ ಹೈಕೋರ್ಟ್ ಪೀಠದಲ್ಲಿ ಕೆಲಸ ಕೊಡಿಸುವುದಾಗ ಕಳ್ಳೆಪ್ಪ ಮದೆಪ್ಪನವರ ಹಾಗೂ ರಾಮಪ್ಪ ಹೊರಟ್ಟಿ ಎಂಬುವರಿಂದ 2012 ರಲ್ಲಿ 1.13 ಲಕ್ಷ ರೂಪಾಯಿ ಪಡೆದಿದ್ದ ಶಂಕರಗೌಡ, ಬಳಿಕ ನ್ಯಾಯಾಧೀಶರ ಹೆಸರಲ್ಲಿ ನಕಲಿ ಸಹಿ ಮಾಡಿ ನಕಲಿ ಆದೇಶ ಪ್ರತಿ ನೀಡಿದ್ದ.

ಇದನ್ನೂ ಓದಿ: PSI Exam Scam: ಎಕ್ಸಾಂ ಮುಗಿದ ಮೇಲೆ ದಿವ್ಯಾ ಹಾಗರಗಿ ಜೊತೆ ಗ್ರೂಪ್ ಫೋಟೋ! ಆಯ್ಕೆಯಾದ ಅಣ್ಣ-ತಮ್ಮನಿಗೂ ಈಗ ಸಂಕಷ್ಟ

ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ

ಈ ಕುರಿತು ಹುಬ್ಬಳ್ಳಿ ಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕರ್ನ ಸಿಂಗ್ ಆರ್.ಯು. ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಗೋವಿಂದಮ್ಮಾ ಬಾಲಯ್ಯ ವಾದ ಮಂಡನೆ ಮಾಡಿದ್ದರು. ಇದೀಗ ನ್ಯಾಯಾಧೀಶರ ಹೆಸರಲ್ಲಿಯೇ ವಂಚನೆ ಮಾಡಲು ಹೋದ ಭೂಪ ಕೊನೆಗೂ ಜೈಲು ಸೇರಿ ಕಂಬಿ ಎಣಿಸುವಂತಾಗಿದೆ.

ಚಲಿಸುತ್ತಿದ್ದ ರೈಲುಗೆ ಸಿಲುಕಿ ಕಾಲು ಕಳೆದುಕೊಂಡ ವ್ಯಕ್ತಿ

ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಕಟ್ ಆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಕಿಮ್ಸ್ ಹಿಂಭಾಗದ ಪ್ರವೇಶ ದ್ವಾರದ ಸಮೀಪ ರೈಲ್ವೆ ಹಳಿಯಲ್ಲಿ ದುರ್ಘಟನೆ ಸಂಭವಿಸಿದೆ. ಕಾಲು ಕಳೆದುಕೊಂಡ ವ್ಯಕ್ತಿಯನ್ನು ಹುಬ್ಬಳ್ಳಿ ಹೆಗ್ಗೆರೆಯ ರಮಾಕಾಂತ (54) ಎಂದು ಗುರುತಿಸಲಾಗಿದೆ.

ಸೂಚನೆ ನೀಡಿದರೂ ಕದಲದೇ ನಿಂತ ವ್ಯಕ್ತಿ

ಶಾಲಿಮಾರ್ - ವಾಸ್ಕೋಡಿಗಾಮಾ ರೈಲಿಗೆ ಸಿಲುಕಿ ದುರ್ಘಟನೆ ನಡೆದಿದೆ. ರೈಲು ಚಲಿಸುತ್ತಿದ್ದ ವೇಳೆ ಹಳಿ ಮೇಲೆಯೇ ನಿಂತಿದ್ದ ವ್ಯಕ್ತಿಯನ್ನು ಗಮನಿಸಿದ ಲೋಕೋ ಪೈಲಟ್ ಹಾರ್ನ್ ಮಾಡಿದ್ದಾನೆ. ಆದರೂ ವ್ಯಕ್ತಿ ಕದಲದೆ ನಿಂತಲ್ಲಿಯೇ ನಿಂತಿದ್ದಾನೆ. ತಕ್ಷಣ ಬ್ರೇಕ್ ಹಾಕಿದರೂ ಎಂಜಿನ್ ಮತ್ತು ಮೂರು-ನಾಲ್ಕು ಬೋಗಿಗಳು ಕಾಲಿನ ಮೇಲೆ ಚಲಿಸಿವೆ. ರೈಲು ಚಲಿಸಿದ್ದರಿಂದ ವ್ಯಕ್ತಿಯ ಎರಡೂ ಕಾಲುಗಳು ತುಂಡಾಗಿವೆ.

ಇದನ್ನೂ ಓದಿ: Araga Jnanendra: ಪಿಎಸ್ಐ ಪರೀಕ್ಷೆ ಹಗರಣದ ಅಪರಾಧಿಗಳು ಮುಟ್ಟಿನೋಡಿಕೊಳ್ಳುವಂತೆ ಮಾಡುತ್ತೇವೆ! ಗೃಹಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

ತಕ್ಷಣ ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ರೈಲು ಹಳಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರೋ ಶಂಕೆ ವ್ಯಕ್ತವಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Published by:Annappa Achari
First published: