ಈ ದರಿದ್ರ ಸರ್ಕಾರ ಬರಲು ಸಿದ್ದರಾಮಯ್ಯನೇ ಕಾರಣಿಭೂತ : HD Kumaraswamy ತೀವ್ರ ವಾಗ್ದಾಳಿ

ಕಾಂಗ್ರೆಸ್​ ಶಾಸಕ ಜಮೀರ್​​ ವಿರುದ್ಧ ಕೆಂಡಾಮಂಡಲವಾದ ಹೆಚ್‌ಡಿಕೆ, ಎಲ್ಲೋ ಬಸ್ ಒರೆಸಿಕೊಂಡು ಇದ್ದವನ್ನ ಕರೆದುಕೊಂಡು ಬಂದು ಶಾಸಕನನ್ನಾಗಿ ಮಾಡಿದ್ದೇನೆ. ಚಾಮರಾಜಪೇಟೆಯಲ್ಲಿ ನಾನು ಮುಸ್ಲಿಂ ಹುಡುಗನಿಗೆ ಟಿಕೆಟ್ ನೀಡಿ ಶಾಸಕನಾಗಿ ಮಾಡಿದ್ದೇನೆ. ಅವಾಗ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು..?

ಸಿದ್ದರಾಮಯ್ಯ - ಎಚ್​ಡಿಕೆ

ಸಿದ್ದರಾಮಯ್ಯ - ಎಚ್​ಡಿಕೆ

  • Share this:
ಹುಬ್ಬಳ್ಳಿ: ಹಾನಗಲ್, ಸಿಂಧಗಿ ಉಪ ಚುನಾವಣಾ (By election) ಕಣದಲ್ಲಿ ಜೆಡಿಎಸ್(jds)​​ ಅಭ್ಯರ್ಥಿ ಪರ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಎಚ್​ಡಿಕೆ, ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ(siddaramaiah) ವಿರುದ್ಧ ವಾಗ್ದಾಳಿ ನಡೆಸಿದರು. ಸಿಂಧಗಿಯಲ್ಲಿ ಚುನಾವಣೆ ಗೆದ್ದೇ ಗೆಲ್ತೇವೆ, ಕಳೆದ 5 ದಿನಗಳಿಂದ ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ಜನರ ಪ್ರತಿಕ್ರಿಯೆ ಉತ್ತಮವಾಗಿದೆ ಎಂದರು. ದೇವೇಗೌಡರ (hd devegowda) ಕಾಲದ ಹಾಗೂ ನನ್ನ ಕಾಲದ ನೀರಾವರಿ ಯೋಜನೆಗಳು, ರೈತರ ಸಾಲ ಮನ್ನಾ ಬಗ್ಗೆ ಹಳ್ಳಿಗಳಲ್ಲಿ ಜನ ಸ್ಪಂದಿಸಿ ಮಾತನಾಡುತಿದ್ದಾರೆ. ಜನತಾ‌‌ ಪರಿವಾರದ ಸಿ ಎಂ ಉದಾಸಿ ಬಿಜೆಪಿಗೆ ಹೋದ ನಂತರ ನಮಗೆ ಹಾನಗಲ್ ನಲ್ಲಿ ನಾಯಕತ್ವದ ಕೊರತೆ ಇತ್ತು. ಈ ಬಾರಿ ನಾವು ಹಾನಗಲ್ ನಲ್ಲಿ ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ಅಲ್ಲಿಯ ಸ್ಥಿತಿ ನೋಡಿ ನಾನು ಮಾತನಾಡ್ತೇನೆ ಎಂದರು.

ರಾಜಕೀಯ ಶಕ್ತಿ ಕುಂದಿಸಿಕೊಳ್ಳುವ‌ ಕೆಲಸ ಮಾಡಬೇಡಿ

ಇನ್ನು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯಗೆ ಕುಮಾರಸ್ವಾಮಿನೇ ಟಾರ್ಗೆಟ್. ಜೆಡಿಎಸ್​​​ನ ಸಮಸ್ಯೆ ಇಲ್ಲಾ ಅಂತಾ ಅವರ ಭಾವನೆ ಇರಬಹುದು. ನಾನು ಅವರಿಗೆ ಮನವಿ ಮಾಡ್ತೇನೆ. ಸಿದ್ದರಾಮಯ್ಯ ನಿಮ್ಮ ವರ್ಚಸ್ಸು ಹಾಗೂ ರಾಜಕೀಯ ಶಕ್ತಿ ಕುಂದಿಸಿಕೊಳ್ಳುವ‌ ಕೆಲಸ ಮಾಡಬೇಡಿ ಎಂದು ಮನವಿ ಮಾಡ್ತೇನೆ ಎಂದು ತಿರುಗೇಟು ನೀಡಿದರು. ನಾನು ಯಾರ ಮೇಲೂ ವೈಯಕ್ತಿಕ ನಿಂದನೆ ಮಾಡಿಲ್ಲ, ಆದರೆ ನಾನು ಎಲ್ಲ ನಾಯಕರಿಗೂ ಹೇಳ್ತೇನೆ. ಚುನಾವಣೆಯಲ್ಲಿ ಆಗಿರಬಹುದು ಅಥವಾ ಜನಪ್ರತಿನಿಧಿಯಾಗಿರಬಹುದು ಸರ್ಕಾರ ನಡೆಸಬೇಕಾದರೆ ಅದರ ಆಧಾರದ ಮೇಲೆ ಚರ್ಚೆ ಮಾಡಿ. ವೈಯಕ್ತಿಕವಾದ‌ ವಿಚಾರ ಚರ್ಚೆ ಮಾಡಲು ಹೋದರೆ ಪರಸ್ಪರ ಕೆಸರೆಚಾಟ ಮಾಡಿಕೊಂಡು ಹೋದರೆ ಅದಕ್ಕೆ ಅಂತಿಮ ಇರಲ್ಲ ಎಂದರು.

ಈ ದರಿದ್ರ ಸರ್ಕಾರ ತರಲು ಕಾರಣಿಭೂತ ಸಿದ್ದರಾಮಯ್ಯ

ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಏಕೆ ಸಾಲ ಮನ್ನಾ ಮಾಡಲಿಲ್ಲ. ಅವಾಗ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ್ರಿ..? ಸಾಲ ಮನ್ನಾ ಮಾಡಲು ನಾನು ತೀರ್ಮಾನ ತೆಗೆದುಕೊಂಡಾಗ ಏಕೆ ವಿರೋಧ ಮಾಡಿದ್ರಿ..? ಬಿಜೆಪಿ 2018 ರಲ್ಲಿ 105 ಕ್ಕೆ ತಲುಪಲು ಸಿದ್ದರಾಮಯ್ಯನವರೇ ಕಾರಣ. ಈಗ ದರಿದ್ರ ಸರ್ಕಾರ ಅಂತ ಹೇಳ್ತಿರಿ, ಈ ದರಿದ್ರ ಸರ್ಕಾರ ತರಲು ಕಾರಣಿಭೂತ ಯಾರು..? ಬಿಜೆಪಿ ಜೊತೆ ಒಳಸಂಚು ಮಾಡಿದ್ದು ನಾನಲ್ಲ,  ವಿರೋಧ ಪಕ್ಷಕ್ಕಾಗಿ ನೀವು ಒಳಸಂಚು ಮಾಡಿದ್ದು. ಸಮ್ಮಿಶ್ರ ಸರ್ಕಾರ ಇದ್ದಾಗ ನನಗೆ ಬಹಳ ನೋವು ಕೊಟ್ಟಿದ್ದಾರೆ, ಇದರಿಂದ ನಾನು ಬಹಿರಂಗವಾಗಿ ಕಣ್ಣಿರು ಹಾಕಿದ್ದೇನೆ.  ನನ್ನನ್ನು ಸೇರಿ ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದರು.

ಇದನ್ನೂ ಓದಿ: ನನ್ನ ವಿಷಯಕ್ಕೆ ಬಂದರೆ ನಿಮ್ಮ ಬಂಡವಾಳ ಬಯಲು: ಬಿಜೆಪಿ ನಾಯಕರಿಗೆ HDK ಖಡಕ್ ಎಚ್ಚರಿಕೆ

ಬಸ್​ ಒರೆಸುವ ಹುಡುಗನನ್ನ ಶಾಸಕ ಮಾಡಿದೆ

ಇನ್ನು ಕಾಂಗ್ರೆಸ್​ ಶಾಸಕ ಜಮೀರ ವಿರುದ್ಧ ಕೆಂಡಾಮಂಡಲವಾದ ಹೆಚ್‌ಡಿಕೆ, ಎಲ್ಲೋ ಬಸ್ ಒರೆಸಿಕೊಂಡು ಇದ್ದವನ್ನ ಕರೆದುಕೊಂಡು ಬಂದು ಶಾಸಕನನ್ನಾಗಿ ಮಾಡಿದ್ದೇನೆ. ಚಾಮರಾಜಪೇಟೆಯಲ್ಲಿ ನಾನು ಮುಸ್ಲಿಂ ಹುಡುಗನಿಗೆ ಟಿಕೆಟ್ ನೀಡಿ ಶಾಸಕನಾಗಿ ಮಾಡಿದ್ದೇನೆ. ಅವಾಗ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು..? ಈ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಗೆಲ್ಲಿಸಿಕೊಂಡು ಬಂದ್ರೆ ನಾನೇನೂ ಸಿಎಂ ಆಗುವುದಿಲ್ಲ. ಯಡಿಯೂರಪ್ಪ, ಬೊಮ್ಮಾಯಿ, ಸಿದ್ದರಾಮಯ್ಯನವರಿಗೆ ಬುದ್ದಿ ಕಲಿಸಲಿಕ್ಕೆ ನಮ್ಮ ಅಭ್ಯರ್ಥಿಗೆ ಮತ ಹಾಕಿ ಎಂದು ಜನರಲ್ಲಿ ಮನವಿ ಮಾಡಿದರು.

ಬಿಜೆಪಿ ಮೇಲೆ‌ ಸಾಫ್ಟ್ ಕಾರ್ನರ್ ಇಲ್ಲ

ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್​ಡಿಕೆ, ಸಿದ್ಧರಾಮಯ್ಯ ಅವರಿಗೆ ಅದನ್ನ ಬಿಟ್ಟು ಬೇರೆ ಏನು ಹೇಳಲಿಕ್ಕೆ ಸಾಧ್ಯ. ನಾವು ಯಾವುದೇ ಕಾರಣಕ್ಕೂ ಯಾರ ಬಗ್ಗೆ ಕೂಡ ಸಾಫ್ಟ್ ಕಾರ್ನರ್ ಇಲ್ಲ. ನಮಗೆ ಬಿಜೆಪಿ ಮೇಲೆ‌ ಸಾಫ್ಟ್ ಕಾರ್ನರ್ ಇದ್ದಿದ್ದರೆ ಕಾಂಗ್ರೆಸ್ ಜೊತೆ ಸರ್ಕಾರ ಯಾಕೆ ಮಾಡುತಿದ್ದೆ. ಬಿಜೆಪಿ ಜೊತೆನೇ 5 ವರ್ಷ ಸರ್ಕಾರ ಮಾಡುತಿದ್ದೆ. 2006ರಲ್ಲಿ ಸರ್ಕಾರ ಮಾಡಲು ಕಾರಣ ಇದೇ ಸಿದ್ದರಾಮಯ್ಯ, ಅವರ ನಡವಳಿಕೆಯಿಂದ ಮಾಡಿದ್ದು. ನಮ್ಮ ಪಕ್ಷದ ಬಗ್ಗೆ ಬೇರೆ ವಿಷಯ ಇಲ್ಲದೇ ಮಾತು ಎತ್ತಿದರೆ ಒಳ‌ ಒಪ್ಪಂದ ಅಂತಾ ಸಿದ್ದರಾಮಯ್ಯ ಮಾತನಾಡುತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನಿಮಗೆ ಮನುಷ್ಯತ್ವ ಇದೆಯಾ?

ಹಾನಗಲ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಮತ್ತು ಕಾಂಗ್ರೆಸ್ನವರು ಈ ಕ್ಷೇತ್ರಕ್ಕೆ ಏನೂ ಕೊಟ್ಟಿದ್ದಾರೆ..? ಯಾವುದೋ ಒಂದೆರಡು ರಸ್ತೆಗಳನ್ನ ಮಾಡಿದ್ದು ಬಿಟ್ಟರೇ ಏನೂ ಮಾಡಿಲ್ಲ. ಇಷ್ಟು ಮಾಡಿದ್ರೆ ಜನರ ಸಂಕಷ್ಟಗಳು ನಿವಾರಣೆ ಆಗುವುದಿಲ್ಲ.ಇಲ್ಲಿ ಬಂದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಅಭಿವೃದ್ಧಿ ಕೆಲಸದ ಬಗ್ಗೆ ಸವಾಲ ಹಾಕಿಕೊಂಡಿದ್ದಾರೆ. ನಿಮಗೆ ಮನುಷ್ಯತ್ವ ಮತ್ತು ತಾಯಿ ಹೃದಯ ಇದೆಯಾ..? ಎಂದು ಪ್ರಶ್ನಿಸಿದರು.

ಯಾರೂ ಸತ್ಯಹರಿಶ್ಚಂದ್ರಗಳು ಏನೂ ಅಲ್ಲ

ಈಗ ಹಾನಗಲ್‌ನಲ್ಲಿ ಚೀಲದಲ್ಲಿ ಹಣ ತಂದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಯಾರ ದುಡ್ಡು, ಸಾರ್ವಜನಿಕರ ದುಡ್ಡು. ಭ್ರಷ್ಟಾಚಾರ ಬಗ್ಗೆ ಚರ್ಚೆ ಮಾಡಿದ್ರೆ ನಿಮಗೆ ಏನೂ ಲಾಭ. ಇಲ್ಲಿ ಯಾರೂ ಸತ್ಯಹರಿಶ್ಚಂದ್ರಗಳು ಏನೂ ಅಲ್ಲ. ಉದಾಸಿಯವರು ನಮ್ಮ ಪಕ್ಷದವರು, ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷದ ಸಂಘಟನೆ ಕುಸಿಯುತ್ತಿದೆ. ಹಾವೇರಿ ಜಿಲ್ಲೆಯ ಪಕ್ಷಕ್ಕೆ ಬೆಂಬಲವಿಲ್ಲ, ಆದ್ರೆ ರೈತರ ಬೆಂಬಲ ನನಗೆ ಇದೆ. ಜನತೆ ನನಗೆ ಮತ ಹಾಕದೆ ಇದ್ದರು, ನಾನು ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ ಎಂದರು.
Published by:Kavya V
First published: