Karnataka Rain Update: ಹುಬ್ಬಳಿಯಲ್ಲಿ ಮರ ಬಿದ್ದು ವ್ಯಕ್ತಿ ಸಾವು; ಚಿತ್ರದುರ್ಗದಲ್ಲಿ ಸಿಡಿಲಿಗೆ ಇಬ್ಬರು ಬಲಿ

ಹುಬ್ಬಳ್ಳಿಯಲ್ಲಿ ಸುರಿದ ಭಾರೀ ಮಳೆಗೆ ಆಟೋ ಮೇಲೆ ಮರ ಬಿದ್ದು, ಓರ್ವ ವ್ಯಕ್ತಿ ಮೃತ ಪಟ್ಟರೆ, ಚಿತ್ರದುರ್ಗದಲ್ಲಿ ಸಿಡಿಲಿಗೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. 

ಭಾರೀ ಮಳೆಗೆ ಉರುಳಿ ಬಿದ್ದ ಮರ

ಭಾರೀ ಮಳೆಗೆ ಉರುಳಿ ಬಿದ್ದ ಮರ

  • Share this:
ಹುಬ್ಬಳ್ಳಿ (ಮೇ. 4): ರಾಜ್ಯದಲ್ಲಿ ಮಳೆ (Rain) ಅಬ್ಬರಕ್ಕೆ ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹುಬ್ಬಳ್ಳಿಯಲ್ಲಿ ಸುರಿದ ಭಾರೀ ಮಳೆಗೆ ಆಟೋ ಮೇಲೆ ಮರ ಬಿದ್ದು, ಓರ್ವ ವ್ಯಕ್ತಿ ಮೃತ ಪಟ್ಟರೆ, ಚಿತ್ರದುರ್ಗದಲ್ಲಿ (Chitradurga) ಸಿಡಿಲಿಗೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. 

ಇಂದು ಸಂಜೆ ರಾಜ್ಯದ ಹುಬ್ಬಳ್ಳಿ, ಹಾಸನ, ಬೆಂಗಳೂರು, ಕೊಡಗು ಸೇರಿದಂತೆ ಹಲವು ಪ್ರದೇಶದಲ್ಲಿ ಭಾರೀ ಗುಡುಗು- ಮಿಂಚಿನ ಮಳೆ ಆಗಿದೆ. ಭಾರೀ ಬಿರುಗಾಳ ಮಳೆಗೆ ಅನೇಕ ಕಡೆ ಮರಗಳು ಧರೆಗೆ ಉರುಳಿದೆ. ಅಲ್ಲದೇ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಬಿರು ಬೇಸಿಗೆಯಲ್ಲಿ ಸುರಿದ ಮಳೆಗೆ ಜನರು ಕಂಗಲಾದ ಘಟನೆ ನಡೆದಿದೆ.

ಮಳೆಗೆ ವ್ಯಕ್ತಿ ಬಲಿ

ಹುಬ್ಬಳ್ಳಿಯಲ್ಲಿ ಸುರಿದ ಬಿರುಗಾಳಿ ಸಹಿತ‌ ಮಳೆ ವ್ಯಕ್ತಿಯೋರ್ವನ ನ್ನು ಬಲಿ ಪಡೆದಿದೆ. ಹುಬ್ಬಳ್ಳಿಯಲ್ಲಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಚಲಿಸುತ್ತಿದ್ದ ಆಟೋ‌ ಮೇಲೆ ಮರ ಉರುಳಿ ಬಿದ್ದಿದ್ದು, ಆಟೋದಲ್ಲಿದ್ದ ಓರ್ವ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ದೇಸಾಯಿ ಕ್ರಾಸ್ ಬಳಿ ನಡೆದಿದೆ. ಮೃತ ದುರ್ದೈವಿಯನ್ನು ಸೋನಿಯಾಗಾಂಧಿ ನಗರದ ನಿವಾಸಿ, ರೂಬಿ ಮೋರಿಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ  ಮತ್ತೋರ್ವ ಪ್ರಯಾಣಿಕನಿಗೆ ಗಾಯಗಳಾಗಿವೆ. ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಚಲಿಸುತ್ತಿದ್ದ ಕಾರಿನ ಮೇಲೆ‌ ಮರ ಬಿದ್ದಿದ್ದು,  ಸ್ವಲ್ಪದರಲ್ಲಿಯೇ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಮತ್ತೊಂದೆಡೆ ಗುಡ್ ಶೆಡ್ ರಸ್ತೆಯಲ್ಲಿ ಮೂರು ಬೈಕ್ ಹಾಗೂ ಒಂದು ಕಾರಿನ ಮೇಲೆ ಮರ ಉರುಳಿದೆ.

ಚಿತ್ರದುರ್ಗದಲ್ಲಿ ತಂದೆ ಮಗ ಸಿಡಿಲಿಗೆ ಬಲಿ

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಲವೆಡೆ ಗುಡುಗು, ಸುಡಿಲು ಸಹಿತ ಮಳೆ ಆಗಿದೆ. ಈ ವೇಳೆ ಸಿಡಿಲು ಬಡಿದು ಜಮೀನಲ್ಲಿದ್ದ ತಾಯಿ ಮಗ ಸಾವನ್ನಪ್ಪಿರುವ ಘಟನೆ ಮೊಳಕಾಲ್ಮೂರು ತಾಲ್ಲೂಕಿನ ಮೇಗಳಹಟ್ಟಿಯಲ್ಲಿ  ನಡೆದಿದೆ. ಮಾರಕ್ಕ (38) ಪುತ್ರ ವೆಂಕಟೇಶ (16) ಸಿಡಿಲಿಗೆ ಬಲಿಯಾದವರು. ದಿಢೀರ್​ ಮಳೆ ಸುರಿದ ಪರಿಣಾಮ ಮಳೆಯಿಂದ ರಕ್ಷಣೆಗೆ ಹುಣಸೆ ಮರದ ಕೆಳಗೆ ನಿಂತಾಗಈ ದುರ್ಘಟನೆ ನಡೆದಿದೆ.

ಪ್ರಾಣಾಪಾಯದಿಂದ ಪಾರಾದ ತಂದೆ-ಮಗ

ತೆಂಗಿನ ಮರವೊಂದು ಆಟೋ ಮೇಲೆ ಉರುಳಿ ಬಿದ್ದ ಘಟನೆ ಹುಬ್ಬಳ್ಳಿಯ ದೇಶಪಾಂಡೆದಲ್ಲಿ ನಡೆದಿದೆ. ತೆಂಗಿನ ಮರ ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಆಟೋದಲ್ಲಿದ್ದ ಅಪ್ಪ, ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನು ಓದಿ: ರಾಜಧಾನಿಯಲ್ಲಿ ಗುಡುಗು-ಮಿಂಚಿನ ಮಳೆ ಅಬ್ಬರ; ಅನೇಕ ಜಿಲ್ಲೆಗಳಲ್ಲೂ ವರ್ಷಧಾರೆ

ಆ್ಯಂಬುಲೆನ್ಸ್ ಪರದಾಟ 
ಮತ್ತೊಂದೆಡೆ ಇದೇ ಪ್ರದೇಶದ ಗುಜರಾಥಿ ಭವನದ ಬಳಿ ಕಾರಿನ ಮೇಲೆಯೇ ಮರ ಉರುಳಿಬಿದ್ದಿದೆ. ದೇಶಪಾಂಡೆ ನಗರ ಸುತ್ತಮುತ್ತ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ನಿರ್ಮಾಣವಾಗಿದೆ. ಅಲ್ಲಲ್ಲಿ ಮರಗಳು ಉರುಳಿಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಆಗಿ, ಆ್ಯಂಬುಲೆನ್ಸ್ ಸಹ ಮುಂದೆ ಸಾಗದೆ ಪರದಾಟ ನಡೆಸಿತು. ಗಂಟೆಗಟ್ಟಲೆ ರಸ್ತೆಯಲ್ಲಿಯೇ ಕಾಯುವಂತಾಯಿತು.

ಇದನ್ನು ಓದಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಗಳಿಗೆ ಕೊಲೆ ಬೆದರಿಕೆ

ಹಲವೆಡೆ ವಿದ್ಯುತ್ ವ್ಯತ್ಯಯ 
ಇದೇ ವೇಳೆ ವಿದ್ಯುತ್ ಕಂಬಗಳ ಮೇಲೂ ಮರಗಳು ಉರುಳಿ ಬಿದ್ದಿವೆ. ಕೆಲವು ಕಡೆ ಕಂಬಗಳು ನೆಲಕ್ಕೆ ಬಿದ್ದಿದ್ದು, ವಿದ್ಯುತ್ ತಂತಿಗಳು ತುಂಡಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಹೆಸ್ಕಾಂ ಸಿಬ್ಬಂದಿ ಮರಗಳನ್ನು ತೆರುವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ವಿದ್ಯುತ್ ಕಂಬಗಳು ನೆಲಕ್ಕುರುಳಿರೋದ್ರಿಂದ ದೇಶಪಾಂಡೆ ನಗರ, ಭವಾನಿ ನಗರ ಸೇರಿ ಹಲವೆಡೆ ವಿದ್ಯುತ್ ವ್ಯತ್ಯಯವಾಗಿದೆ. ಇದೇ ವೇಳೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಗುರಿಯಾಗುವಂತಾಯಿತು. ದಿಢೀರಾಗಿ ಸುರಿದ ಭಾರಿ ಮಳೆಗೆ ಹುಬ್ಬಳ್ಳಿಯ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
Published by:Seema R
First published: