HOME » NEWS » State » HUBLI IRSHAD BALLA SETH OF HUBLI GIVES FREE AMBULANCE SERVICE FOR COVID PATIENTS SAKLB SNVS

ಕೊರೋನಾ ಸೋಂಕಿತರಿಗೆ ಉಚಿತ ಆಂಬುಲೆನ್ಸ್ - ಮೃತ ದೇಹಗಳನ್ನೂ ಸಾಗಿಸುವ ಇರ್ಷಾದ್

ಹುಬ್ಬಳ್ಳಿಯ ಗಣೇಶ ಪೇಟೆಯ ನಿವಾಸಿ ಇರ್ಷಾದ್ ಬಲ್ಲಾ ಸೇಟ್​ಗೆ ಯಾರಾದರೂ ಕರೆ ಮಾಡಿ ಸಹಾಯ ಕೇಳಿದರೆ ಕೆಲವೇ ಕ್ಷಣದಲ್ಲಿ ಆ್ಯಂಬುಲೆನ್ಸ್ ಮೂಲಕ ಸಾರ್ವಜನಿಕ ಸೇವೆಗೆ ಮುಂದಾಗುತ್ತಿದ್ದಾನೆ. ದಿನದ 24 ಗಂಟೆಯೂ ಆತ ಸೇವೆ ಸಲ್ಲಿಸುತ್ತಿದ್ದಾನೆ.

news18-kannada
Updated:May 9, 2021, 8:23 AM IST
ಕೊರೋನಾ ಸೋಂಕಿತರಿಗೆ ಉಚಿತ ಆಂಬುಲೆನ್ಸ್ - ಮೃತ ದೇಹಗಳನ್ನೂ ಸಾಗಿಸುವ ಇರ್ಷಾದ್
ಹುಬ್ಬಳ್ಳಿಯ ಇರ್ಷಾದ್ ಬಲ್ಲಾ ಸೇಠ್ ಅವರ ಆಂಬುಲೆನ್ಸ್
  • Share this:
ಹುಬ್ಬಳ್ಳಿ: ಕೊರೊನಾ ಹಾವಳಿ ಜಗತ್ತನ್ನೇ ತಲ್ಲಣಗೊಳಿಸಿದೆ. ಅದರಲ್ಲಿಯೂ ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಎರಡನೆಯ ಅಲೆ ವ್ಯಾಪಿಸಲಾರಂಭಿಸಿದೆ. ಧಾರಾವಾಡ ಜಿಲ್ಲೆಯಲ್ಲಿ ಒಂದು ಹಂತದಲ್ಲಿ ನಿಯಂತ್ರಣದಲ್ಲಿದ್ದ ಕೊರೋನಾ, ನಂತರದ ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಆಸ್ಪತ್ರೆಗಳೆಲ್ಲವೂ ಕಾರ್ಯ ನಿರ್ವಹಿಸುವಲ್ಲಿ ಬ್ಯೂಸಿಯಾಗಿವೆ. ಅಲ್ಲದೇ ಅಂಬ್ಯುಲೆನ್ಸ್ ಗಳು ಕೂಡ ಒತ್ತಡದಲ್ಲಿಯೇ ಕೆಲಸ ನಿರ್ವಹಿಸುತ್ತಿವೆ. ಇದೆಲ್ಲದರ ಮಧ್ಯದಲ್ಲಿ ಇಲ್ಲೊಬ್ಬ ವ್ಯಕ್ತಿ ಎಲೆ ಮರೆಯ ಕಾಯಿಯಂತೆ ಕೊರೋನಾ ಸೋಂಕಿತರ ಸೇವೆ ಸಲ್ಲಿಸುತ್ತಿದ್ದಾ‌ನೆ.  ಹುಬ್ಬಳ್ಳಿಯ ಇರ್ಷಾದ್ ಬಲ್ಲಾ ಸೇಟ್ ಎಂಬುವ ವ್ಯಕ್ತಿ ಸ್ವಯಂ ಆ್ಯಂಬುಲೆನ್ಸ್ ವಾಹನವನ್ನು ಉಚಿತವಾಗಿ ಸಾರ್ವಜನಿಕ ಸೇವೆಗೆ ನೀಡಿದ್ದಾನೆ. ಸ್ವತಃ ತಾನೇ ಚಾಲನೆ ಮಾಡುವ ಮೂಲಕ ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುತ್ತಾನೆ. ಜೊತೆಗೆ ಕೊರೊನಾದಿಂದ ಮೃತಪಟ್ಟಿರುವ ಮೃತ ದೇಹಗಳನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವುದು ಮಾತ್ರವಲ್ಲದೆ ನಾನ್ ಕೋವಿಡ್ ರೋಗಿಗಳ ಚಿಕಿತ್ಸೆಗೂ ಕೂಡ ಉಚಿತವಾಗಿ ಆ್ಯಂಬುಲೆನ್ಸ್ ಸೇವೆಯನ್ನು ಸಲ್ಲಿಸುತ್ತಿದ್ದಾನೆ. 

ಹುಬ್ಬಳ್ಳಿಯ ಗಣೇಶ ಪೇಟೆಯ ನಿವಾಸಿಯಾಗಿರುವ ಇರ್ಷಾದ್ ಬಲ್ಲಾ ಸೇಟ್ ಗೆ ಯಾರಾದರೂ ಕರೆ ಮಾಡಿ ಸಹಾಯ ಕೇಳಿದರೆ ಸಾಕು ಕೆಲವೇ ಕ್ಷಣದಲ್ಲಿ ಆ್ಯಂಬುಲೆನ್ಸ್ ಮೂಲಕ ಸಾರ್ವಜನಿಕರ ಸೇವೆಗೆ ಮುಂದಾಗುತ್ತಿದ್ದಾನೆ. ಹುಬ್ಬಳ್ಳಿಯ ಯಾವುದೇ ಆಸ್ಪತ್ರೆಯಿಂದ ಕರೆ ಮಾಡಿದರೂ ಕೂಡ ಇರ್ಷಾದ್ ಸಾರ್ವಜನಿಕ ಸೇವೆಗೆ ಬರುತ್ತಾನೆ. ಅಲ್ಲದೇ ದಿನದ 24 ಗಂಟೆಯು ಸೇವೆ ಸಲ್ಲಿಸುತ್ತಿದ್ದಾನೆ.

ಇನ್ನು, ಜಾತಿ ಧರ್ಮ ಎಂದು ಲೆಕ್ಕಿಸದೆ ಎಲ್ಲ ಜಾತಿ, ಧರ್ಮೀಯರ ಸೇವೆಯಲ್ಲಿ ನಿರತನಾಗಿ, ತನ್ನ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದ್ದಾನೆ. ಬಲ್ಲಾ ಸೇಟ್ ಕೆಲಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇರ್ಷಾದ್ ಅವರ ಕಾರ್ಯ ಇನ್ನೂ ಹೆಚ್ಚು ಹೆಚ್ಚು ವ್ಯಾಪಿಸಲಿ. ಹೆಚ್ಚಿನ ಸೇವೆ ಮಾಡಲು ದೇವರು ಶಕ್ತಿ ನೀಡಲಿ ಎಂದು ಜನ ಆಶಿಸುತ್ತಿದ್ದಾರೆ.

ಇದನ್ನೂ ಓದಿ: ಮದುವೆ ಮಂಟಪದಲ್ಲಿ ಮಗ್ಗಿ ಹೇಳುವಂತೆ ವರನಿಗೆ ಪರೀಕ್ಷೆಯೊಡ್ಡಿದ ವಧು.. ಮುರಿದು ಬಿತ್ತು ಮದುವೆ!

ಕೊರೋನಾ ಗೆದ್ದು ಬಂದ ಪೇದೆಗೆ ಸನ್ಮಾನ...

ಕೊರೋನಾ ಎರಡನೆಯ ಅಲೆಗೆ ಕೊರೋನಾ ವಾರಿಯರ್ಸ್ ತತ್ತರಿಸುವಂತಾಗಿದೆ. ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯನ್ನು ಕಂಗಾಲಾಗುವಂತೆ ಮಾಡಿದೆ. ಪೊಲೀಸರೂ ಕೊರೋನಾ ವಾರಿಯರ್ ಗಳು. ಹುಬ್ಬಳ್ಳಿ – ಧಾರವಾಡ ಗಳಲ್ಲಿ ಹಲವು ಪೊಲೀಸರು ಸೋಂಕಿಗೆ ಗುರಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಕೊರೋನಾ ವಿರುದ್ಧ ಗೆದ್ದು ಬಂದ ಪೇದೆಯನ್ನು ಆತ್ಮೀಯವಾಗಿ ಸನ್ಮಾನಿಸಿದ ಘಟನೆ ಹುಬ್ಭಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಪೂರ್ವ ಸಂಚಾರಿ ಠಾಣೆಯ ಪೇದೆ ಹುಚ್ಚಪ್ಪ ಕೊರವರಗೆ ಸನ್ಮಾನ ಮಾಡಲಾಗಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣೆ ಇನ್ಸೆಪೆಕ್ಟರ್ ಕಾಡದೇವರಮಠ ಮತ್ತು ಇತರೆ ಸಿಬ್ಬಂದಿಯಿಂದ ಸನ್ಮಾನ ಮಾಡಿ, ಪ್ರೀತಿಯಿಂದ ಠಾಣೆಗೆ ಬರಮಾಡಿಕೊಂಡಿದ್ದಾರೆ.

ವರದಿ: ಶಿವರಾಮ ಅಸುಂಡಿ
Published by: Vijayasarthy SN
First published: May 9, 2021, 8:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories