ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಟಯರ್ ಬ್ಲಾಸ್ಟ್: ಪೈಲಟ್ ಚಾಣಾಕ್ಷತನದಿಂದ ತಪ್ಪಿದ ಅನಾಹುತ!

ಮಳೆಯ ಕಾರಣದಿಂದ ವಿಮಾನ ಲ್ಯಾಂಡ್ ಮಾಡಲು ಆಗಿಲ್ಲ. ಆಕಾಶದಲ್ಲಿ ಕೆಲ ಹೊತ್ತು ಸುತ್ತಾಡಿದ ನಂತರ ಲ್ಯಾಂಡ್ ಮಾಡಿದಾಗ ಈ ಅವಘಡ ಸಂಭವಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಹುಬ್ಬಳ್ಳಿ: ವಿಮಾನದ ಟೈರ್ ಬ್ಲಾಸ್ಟ್ ಆಗಿ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ ಘಟನೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದ್ದು ಭಾರಿ ಅನಾಹುತ ತಪ್ಪಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದ ಟೈರ್ ಬಸ್ಟ್ ಆಗಿದೆ. ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ. ಫೈಲಟ್ ಮುಂಜಾಗ್ರತೆಯಿಂದ ಹಲವು ಜೀವಗಳು ಉಳಿದಿವೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೇರಳದ ಕಣ್ಣೂರಿನಿಂದ ಹುಬ್ಬಳ್ಳಿಗೆ ವಿಮಾನ ಬಂದಿಳಿಯುವ ವೇಳೆ ಅವಘಡ ಸಂಭವಿಸಿದೆ. ಇಂಡಿಗೋ 6 e 7979 ವಿಮಾನದ ಟೈರ್ ಬ್ಲಾಸ್ಟ್ ಆಗಿದೆ. ಘಟನೆ ಸಂಭವಿಸುತ್ತಿದ್ದಂತೆಯೇ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು. ಟೈರ್ ಬ್ಲಾಸ್ಟ್ ಆದ್ರೂ ಸೇಫ್ ಆಗಿ ಲ್ಯಾಂಡಿಂಗ್ ಆಗಿರೋದಕ್ಕೆ ಸಮಾಧಾನಪಟ್ಟರು.

ಈ ಕುರಿತು ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿರೋ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಠಾಕ್ರೆ ನಿನ್ನೆ ರಾತ್ರಿ 8.34 ಘಟನೆ ಸಂಭವಿಸಿದೆ. ರಾತ್ರಿ 8 ಗಂಟೆ ಸಮಯದಲ್ಲಿ ಪೈಲೆಟ್ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಪ್ರಯತ್ನಿದಿದ್ದಾರೆ. ಆದ್ರೆ ಮಳೆಯ ಕಾರಣದಿಂದ ಲ್ಯಾಂಡ್ ಮಾಡಲು ಆಗಿಲ್ಲ. ಆಕಾಶದಲ್ಲಿ ಕೆಲ ಹೊತ್ತು ಸುತ್ತಾಡಿದ ನಂತರ ಲ್ಯಾಂಡ್ ಮಾಡಿದಾಗ ಈ ಅವಘಡ ಸಂಭವಿಸಿದೆ.

ವಿಮಾನದಲ್ಲಿ ಹೆಚ್ಚು ಪ್ರಯಾಣಿಕರು ಇರಲಿಲ್ಲ. ಕೇವಲ 7 ಜನ ಪ್ಯಾಸೆಂಜರ್ ಮಾತ್ರ ಇದ್ದರು. ಯಾವ ಪ್ರಯಾಣಿಕರಿಗೂ ತೊಂದರೆ ಆಗಿಲ್ಲ. ಲ್ಯಾಂಡಿಂಗ್ ಆದ ನಂತರ ಟೈರ್ ಬರಸ್ಟ್ ಆಗಿದೆ. ರನ್ ವೇ ನಲ್ಲಿಯೇ ಟೈರ್ ಬರಸ್ಟ್ ಆಗಿರೋದ್ರಿಂದ ಅನಾಹುತ ತಪ್ಪಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ವಿಮಾನದಿಂದ ಇಳಿದಿದ್ದಾರೆ.

ಇದನ್ನೂ ಓದಿ: Paytm ಮೂಲಕವೂ ಇನ್ಮುಂದೆ ವ್ಯಾಕ್ಸಿನೇಷನ್​​ಗೆ ನೊಂದಣಿ ಮಾಡಬಹುದು.. ಹೇಗೆ ಎಂದು ತಿಳಿಯಿರಿ

ಟೈರ್ ಬರಸ್ಟ್ ನಿಂದಾಗಿ ರಾತ್ರಿಯ ಬೆಂಗಳೂರು ಫ್ಲೈಟ್ ರದ್ದು ಮಾಡಲಾಗಿತ್ತು. ಇದೇ ಫ್ಲೈಟ್ ಬೆಂಗಳೂರಿಗೆ ಹೋಗಬೇಕಿತ್ತು. ಟೈರ್ ಬರಸ್ಟ್ ಆದ ವಿಮಾನವನ್ನು ಮಧ್ಯ ರಾತ್ರಿ 2.30 ರ ವೇಳೆಯಲ್ಲಿ ರನ್ ವೇ ಯಿಂದ ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಸದ್ಯಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ಯಥಾರೀತಿ ಪುನರಾರಂಭಗೊಂಡಿದೆ. ಬೆಂಗಳೂರು ಮತ್ತು ಗೋವಾ ಕಡೆ ಫ್ಲೈಟ್ ಗಳು ಹೋಗಿವೆ. ಇಂಡಿಗೋ ಫ್ಲೈಟ್ ನ ಮುಂದಿನ ಟೈರ್ ಬರಸ್ಟ್ ಆಗಿದೆ. ಇಂಡಿಗೋ ವಿಮಾನ ದುರಸ್ತಿ ಕಾರ್ಯ ಮುಂದುವರಿದಿದೆ ಎಂದು ಪ್ರಮೋದ್ ಠಾಕ್ರೆ ತಿಳಿಸಿದ್ದಾರೆ.

ಇದೇ ಇಂಡಿಗೋ ವಿಮಾನದ ಮೂಲಕ 18 ಜನ ಪ್ರಯಾಣಿಕರು ಬೆಂಗಳೂರಿಗೆ ಹೋಗಬೇಕಿತ್ತು. ಫೈಟ್ ರದ್ದಾಗಿದ್ದರಿಂದ ಪ್ರಯಾಣ ಕ್ಯಾನ್ಸಲ್ ಮಾಡಿ, ಪ್ರಯಾಣಿಕರು ವಾಪಸ್ ಹೋಗಿದ್ದಾರೆ. ಪೈಲಟ್ ನ ಮುನ್ನೆಚ್ಚರಿಕೆಯಿಂದಾಗಿ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಈ ಕುರಿತು ತನಿಖೆ ನಡೆಸೋ ಸಾಧ್ಯತೆಗಳಿವೆ. ಈ ಹಿಂದೆ 2015 ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಅವಘಡ ಸಂಭವಿಸಿತ್ತು. ಬೆಂಗಳೂರಿನಿಂದ ಬಂದಿದ್ದ ಸ್ಪೈಸ್ ಜೆಟ್ ವಿಮಾನ ರನ್ ವೇ ಬಿಟ್ಟು ಕೆಳಗೆ ಇಳಿದು ಅವಘಡವಾಗಿತ್ತು. ಆರು ವರ್ಷಗಳ ನಂತರ ಮಳೆಗಾಲದಲ್ಲಿ ಮತ್ತೊಮ್ಮೆ ಅವಘಡ ಸಂಭವಿಸಿದೆ.
Published by:Kavya V
First published: