Hubballi Riots: ಹುಬ್ಬಳ್ಳಿ ಗಲಭೆ ಪ್ರಕರಣ; ಕಸ್ಟಡಿಯಲ್ಲಿದ್ದ ಆರೋಪಿಯಿಂದ ಆತ್ಮಹತ್ಯೆ ಯತ್ನ

ಹುಬ್ಬಳ್ಳಿ ಗಲಭೆಯ ಪ್ರಮುಖ ಆರೋಪಿ ಮಹ್ಮದ್ ಆರೀಫ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪೊಲೀಸ್ ಠಾಣೆಯಲ್ಲಿಯೇ ಈ ಘಟನೆ ನಡೆದಿದ್ದು, ಚರ್ಚೆಗೆ ಗ್ರಾಸವಾಗಿದೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ನಾಟಕ ಮಾಡಿದ್ದಾನೆ ಅನ್ನೋ ಮಾತು ಕೇಳಿ ಬಂದಿದೆ.

ಆರೋಪಿ

ಆರೋಪಿ

  • Share this:
ಹುಬ್ಬಳ್ಳಿ (ಏ.30) : ಹುಬ್ಬಳ್ಳಿ ಗಲಭೆ (Hubballi Riots) ಪ್ರಕರಣದ ಆರೋಪಿಯೋರ್ವ ಪೊಲೀಸ್ (Police Station) ಠಾಣೆಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ (Custody) ಆರೋಪಿ (Accused) ಓರ್ವನಿಂದ ಆತ್ಮಹತ್ಯೆಗೆ ಯತ್ನ ನಡೆದಿದೆ. ಮಹಮ್ಮದ್ ಆರಿಫ್ ನಾಗರಾಳ ನಿಂದ ಆತ್ಮಹತ್ಯೆಗೆ (Suicide) ಯತ್ನಿಸಿದ ಆರೋಪಿಯಾಗಿದ್ದಾನೆ. ಹಳೆ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಟರ್ಪಂಟೈಲ್ ಕುಡಿದು ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆಗೆ ಯತ್ನ

ಕಾಲಿಗೆ ಗಾಯವಾಗಿದ್ದು ಹಂಚಿಕೊಳ್ಳೋಕೆ ಟರ್ ಪೆಂಟೈಲ್ ಕೊಡುವಂತೆ ಆರೋಪಿ ಪೊಲೀಸರಿಗೆ ಮನವಿ ಮಾಡಿದ್ದ ಎನ್ನಲಾಗಿದೆ. ಗಾಯಕ್ಕೆ ಹಚ್ಚಿ ಕೊಳ್ಳುತ್ತಾನೆ ಅಂತ ಟರ್ಪಂಟೈಲ್ ಕೊಟ್ಟಿದ್ದ ಪೊಲೀಸರನ್ನೇ ಯಾಮಾರಿಸಿದ ಆರೀಫ್, ಟರ್ಪಂಟೈಲ್ ನ್ನೇ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೇ ಸೆಲ್ ನಲ್ಲಿದ್ದ ಮತ್ತೋರ್ವ ಆರೋಪಿ ನಜೀರ್ ಅಹ್ಮದ್ ಹೊನ್ನಾಳ, ಅದನ್ನು ತಡೆದಿದ್ದಾನೆ.

ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

ಒಂದು ಗುಟುಕು ಟರ್ಪಂಟೈಲ್ ಗಂಟಲೊಳಗೆ ಹೋಗಿದೆ ಎನ್ನಲಾಗಿದ್ದು, ಪೊಲೀಸರು ತಕ್ಷಣ ಆರಿಫ್ ನನ್ನು ಕಿಮ್ಸ್ ಗೆ ದಾಖಲಿಸಿದ್ದಾರೆ. ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಮಹಮ್ಮದ್ ಆರಿಫ್ ಮತ್ತು ನಜೀರ್ ಅಹ್ಮದ್ ಹೊನ್ನಾಳ ರನ್ನು ಕಸ್ಟಡಿಗೆ ತೆಗೆದುಕೊಂಡಿದ್ದ ಪೊಲೀಸರು ವಿಚಾರಣೆ ಮುಂದುವರಿಸಿದ್ದರು. ಪೊಲೀಸರು ಈತನನ್ನು ವಿಚಾರಣೆಗಾಗಿ ಅವರ ಸುಪರ್ದಿಗೆ ಪಡೆದ ಹಿನ್ನಲೆಯಲ್ಲಿ ಕುಟುಂಬಸ್ಥರಿಗೆ ಆದ ಅವಮಾನದಿಂದ ಮನನೊಂದು ಈತ ಆತ್ಮಹತ್ಯೆಗೆ ಮುಂದಾಗಿದ್ದನು ಎನ್ನಲಾಗಿದೆ.

ಇದನ್ನು ಓದಿ: PSI Recruitment Scam: 54 ಸಾವಿರ ಅಭ್ಯರ್ಥಿಗಳಿಗೆ ಪಿಎಸ್ಐ ಮರು ಪರೀಕ್ಷೆ: ಅಕ್ರಮ ನಡೆದಿರೋದನ್ನ ಒಪ್ಪಿಕೊಂಡ ಸರ್ಕಾರ

ತಾಕತ್ತಿದ್ರೆ ಜಮೀರ್ ರಾಜೀನಾಮೆ ಪಡೀರಿ ಎಂದ ಜೋಶಿ

ತಾಕತ್ತಿದ್ದರೆ ಜಮೀರ್ ಅಹ್ಮದ್ ರಾಜೀನಾಮೆ ಪಡೆಯಿರಿ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಜಮೀರ್ ಅಹ್ಮದ್ ಫುಡ್ ಕಿಟ್ ಮತ್ತು ಸಹಾಯಧನ ವಿತರಣೆ ವಿಚಾರಕ್ಕೆ ಕಿಡಿಕಾರಿದರು. ತಾಕತ್ತಿದ್ರೆ ಜಮೀರ್ ಅಹ್ಮದ್ ರನ್ನು ಪಕ್ಷದಿಂದ ಉಚ್ಚಾಟಿಸಲಿ. ಜಮೀರ್ ಅಹ್ಮದ್ ಮತ್ತು ಕಾಂಗ್ರೆಸ್ ಪಕ್ಷ ಸಮಾಜ ದ್ರೋಹಿಗಳಿಗೆ ಹಾಗೂ ದೇಶದ್ರೋಹಿಗಳಿಗೆ ಬೆಂಬಲ ಕೊಡುತ್ತಾರೆ. ಪೊಲೀಸರನ್ನು ಕೊಂದುಹಾಕಬೇಕೆಂದು ಹಲ್ಲೆ ಮಾಡಿದವರ ಬಗ್ಗೆ ಮತ್ತು ದೇವಸ್ಥಾನಗಳ ಮೇಲೆ ಆಕ್ರಮಣ ಮಾಡಿದವರ ಬಗ್ಗೆ ಶಾಸಕರ ಧೋರಣೆ ಏನೆಂಬುದು ಇದರಿಂದ ಅರ್ಥವಾಗತ್ತೆ ಎಂದು ತಿಳಿಸಿದರು.

ಡಿ. ಕೆ. ಶಿವಕುಮಾರ್ ರಾಹುಲ್ ಗಾಂಧಿಯ ಪಟ್ಟ ಶಿಷ್ಯ

ಈ ಹಿಂದೆ ಕಾಂಗ್ರೆಸ್ ಪಕ್ಷದ ಶಾಸಕರ ಮನೆಯ ಮೇಲೆಯೇ ದಾಳಿಯಾಗಿತ್ತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಸರಣದ ಸಂದರ್ಭದಲ್ಲಿ ಇವರು ಹೇಗೆ ವರ್ತಿಸಿದರು ಅನ್ನೋದು ಜಗತ್ತಿಗೇ ಗೊತ್ತಿದೆ. ಜಮೀರ್ ಅಹ್ಮದ್ ನನ್ನು ಏನಾದ್ರೂ ಕೇಳೋಕೆ ಅವರು ಯೋಗ್ಯರಲ್ಲ. ಜಮೀರ್ ಅಹ್ಮದ್ ರನ್ನು ನಾನು ಏನೂ ಕೋಳೊಲ್ಲ. ಆದ್ರೆ ಕಾಂಗ್ರೆಸ್ ನಾಯಕರನ್ನು ಕೇಳುತ್ತೇನೆ, ರಾಹುಲ್ ಗಾಂಧಿ ದೇಶಕ್ಕೆ ಬುದ್ಧಿ ಹೇಳುತ್ತಾರೆ. ಡಿ. ಕೆ. ಶಿವಕುಮಾರ್ ರಾಹುಲ್ ಗಾಂಧಿಯ ಪಟ್ಟ ಶಿಷ್ಯ. ಫುಡ್ ಕಿಟ್ ಮತ್ತು ಸಹಾಯ ಧನ ಹಂಚೋದನ್ನು  ಡಿಕೆಶಿ ಗಮನಕ್ಕೆ ತಂದಿದ್ದಾರಾ..? ಈ ರೀತಿ ದುಸ್ಸಾಹಸಕ್ಕೆ ಕೈಹಾಕಿದ ಜಮೀರ್ ರನ್ನು ಸಸ್ಪೆಂಡ್ ಮಾಡ್ತೀರಾ..? ಜಮೀರ್ ಅಹ್ಮದ್ ಈಗ್ಲೂ ಗುಟ್ಟಾಗಿ ಅವರಿಗೆ ಸಹಾಯ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಪೊಲೀಸರು ಮತ್ತು ಸರ್ಕಾರ ಇದನ್ನು ಗಮನಿಸಬೇಕು.

ಇದನ್ನೂ ಓದಿ: PSI Recruitment Scam: ತನಿಖಾ ವರದಿಗೂ ಮುನ್ನವೇ ಪರೀಕ್ಷೆ ರದ್ದು ಮಾಡಿದ್ದು ತಪ್ಪು; ಡಿ.ಕೆ ಶಿವಕುಮಾರ್​

ತಾಕತ್ತಿದ್ರೆ ಜಮೀರ್ ಅಹ್ಮದ್ ವಿರುದ್ಧ ಕ್ರಮ

ಈ ರೀತಿ ಯಾರಾದ್ರೂ ಆರೋಪಿಗಳಿಗೆ ಮತ್ತು ಅವರ ಕುಟುಂಬದವರಿಗೆ ಸಹಾಯ ಮಾಡೋದು ತಪ್ಪಾಗುತ್ತೆ, ಇದ್ರಲ್ಲಿ ಎಲ್ಲರದ್ದೂ ಪಾತ್ರವಿದೆ, ಇಂಥವರಿಗೆ ಬೆಂಬಲ ಕೊಡೋದು ಹೀನ ಕೃತ್ಯ. ಕಾಂಗ್ರೆಸ್ ನಾಯಕರಿಗೆ ಏನಾದ್ರೂ ನೈತಿಕತೆ ಇದ್ರೆ, ತಾಕತ್ತಿದ್ರೆ ಜಮೀರ್ ಅಹ್ಮದ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು. ಅಂಜುಮನ್ ಸಂಸ್ಥೆಯಿಂದ ಆರೋಪಿಗಳಿಗೆ ಜಾಮೀನು ಕೊಡಿಸ್ತಿರೊ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ಅಂಜುಮನ್ ಸಂಸ್ಥೆ ಇರೋದೆ ಇಂಥದ್ದಕ್ಕೆ ಅನ್ನೋವಂತಾಗಿದೆ.

ಈ ರೀತಿ ಮಾಡೋದ್ರಿಂದ ಅಂಜುಮನ್ ಸಂಸ್ಥೆ ಗೆ ಇರೋ ಕ್ರೆಡಿಬಿಲಿಟಿ ಯು ಹಾಳಾಗುತ್ತೆ. ಅವರವರ ಮನೆಯವರು ಜಾಮೀನುಕೊಟ್ಟು ಕರೆತರುತ್ತಾರೆ. ಜಾಮೀನು ಕೊಡುವುದು ನಿಮ್ಮ ಕೆಲಸವಲ್ಲ, ಆಸ್ಪತ್ರೆ, ಕಾಲೇಜು ನಡಸ್ತೀವಿ ಅನ್ನುವವರು ಇಂಥ ಕೆಲಸಕ್ಕೆ ಕೈಹಾಕಬಾರದು. ಇಲ್ಲದಿದ್ದಲ್ಲಿ ಈ ರೀತಿಯ ಹೀನ ಕೃತ್ಯಗಳಿಗೆ, ಕಾನೂನು ವಿರೋಧಿ ಕೃತ್ಯಗಳಿಗೆ ಬೆಂಬಲಿಸುವವರು ಅನ್ನೋ ಅರ್ಥದಲ್ಲಿ ತಿಳಿದುಕೊಳ್ಳಬೇಕಾಗುತ್ತೆ ಎಂದರು.
Published by:Pavana HS
First published: