ಹುಬ್ಬಳ್ಳಿಯಲ್ಲೊಂದು ಅಪರೂಪದ ಮ್ಯೂಸಿಯಂ: ರೈಲೆ ಇಲಾಖೆಯ ಭವ್ಯ ಪರಂಪರೆ ಅನಾವರಣ

ಹುಬ್ಬಳ್ಳಿಯ ಗದಗ್ ರಸ್ತೆಯಲ್ಲಿ ಅಪರೂಪದ ರೈಲ್ವೆ ಮ್ಯೂಸಿಯಂ ಸ್ಥಾಪಿಸಲಾಗಿದೆ. ರೈಲ್ವೆ ಇಲಾಖೆಯ ಭವ್ಯ ಪರಂಪರೆಯನ್ನು ಅನಾವರಣಗೊಳಿಸೋ ರೈಲ್ವೆ ಮ್ಯೂಸಿಯಂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಹುಬ್ಬಳ್ಳಿ ರೈಲ್ವೇ ಮ್ಯೂಸಿಯಂ

ಹುಬ್ಬಳ್ಳಿ ರೈಲ್ವೇ ಮ್ಯೂಸಿಯಂ

  • Share this:
ಹುಬ್ಬಳ್ಳಿ (Hubballi)ಯಲ್ಲೊಂದು ಅಪರೂಪದ ರೈಲ್ವೆ  ಮ್ಯೂಸಿಯಂ (Railway Museum) ಅಸ್ತಿತ್ವಕ್ಕೆ ಬಂದಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಗದಗ್ ರಸ್ತೆಯಲ್ಲಿ ಸ್ಥಾಪಿಸಲಾಗಿರೋ ರೈಲ್ವೆ ಮ್ಯೂಸಿಯಂ, ಉತ್ತರ ಕರ್ನಾಟಕದ (North Karnataka) ಏಕೈಕ ರೈಲ್ವೆ ಮ್ಯೂಸಿಯಂ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ರೈಲ್ವೆ ಇಲಾಖೆಯ (Railway Department) ಭವ್ಯ ಪರಂಪರೆಯನ್ನು ಬಿಂಬಿಸುತ್ತಿದೆ. ರೈಲ್ವೆ ಇಲಾಖೆ ಆರಂಭವಾದಾಗಿನಿಂದ ಹಂತ ಹಂತವಾಗಿ ಅಳವಡಿಸಲಾಗಿರೋ ತಂತ್ರಜ್ಞಾನದ ಪರಿಚಯ ಮಾಡಿಕೊಡುತ್ತಿದೆ. ನ್ಯಾರೋ ಗೇಜ್, ಮೀಟರ್ ಗೇಜ್ ಹಾಗೂ ಬ್ರಾಡ್ ಗೇಜ್ ಗಳ (Railway Track Gauge) ರೈಲುಗಳ ಪರಿಚಯ. ವಿವಿಧ ಹಂತಗಳಲ್ಲಿದ್ದ ರೈಲು ಹಳಿಗಳ ಮಾದರಿ (Railway Track) ಅಳವಡಿಕೆ, ಹಳೆಯ ಕಾಲದ ಕೋಚ್ (Railway Coach) ಗಳ ಪ್ರದರ್ಶನ ಮಾಡಲಾಗುತ್ತಿದೆ. ಹಿಂದಿನ ಕಾಲದ ಟಿಕೇಟ್ ಮುದ್ರಣ ಯಂತ್ರ, ರೈಲಿನಲ್ಲಿ ಹಣ ಒಯ್ಯುತ್ತಿದ್ದ ತಿಜೋರಿ ಪೆಟ್ಟಿಗೆ ಇತ್ಯಾದಿಗಳ ಪ್ರದರ್ಶನಕ್ಕಿಡಲಾಗಿದೆ.

ಗ್ಯಾಲಕ್ಸಿ ರೋಲಿಂಗ್ ಸ್ಟಾಕ್, ಮಲ್ಲಪ್ರಭಾ - ಘಟಪ್ರಭಾ ಕಾಟೇಜ್, ಥಿಯೇಟರ್ ಕೋಚ್, ಕ್ಯಾಂಟೀನ್ ಕೋಚ್ ಇತ್ಯಾದಿಗಳು ಇತರೆ ಆಕರ್ಷಣೆಗಳಾಗಿವೆ. ಥಿಯೇಟರ್ ಕೋಚ್ ನಲ್ಲಿ ರೈಲ್ವೆ ಇತಿಹಾಸಕ್ಕೆ ಸಂಬಂಧಿಸಿದ ಸಿನೆಮಾ ತೋರಿಸಲಾಗುತ್ತದೆ. ಕೋಚ್ ಕ್ಯಾಂಟೀನ್ ನಲ್ಲಿ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದ್ದು, ಪ್ರವಾಸಿಗರು ಬಂದು ಕುಳಿತು ಸ್ನ್ಯಾಕ್ಸ್ ಇತ್ಯಾದಿ ಸವಿಯಬಹುದಾಗಿದೆ.

ಮಕ್ಕಳಿಗಾಗಿ ಟಾಯ್ ಟ್ರೈನ್ ವ್ಯವಸ್ಥೆ

ಟಾಯ್ ಟ್ರೈನ್ ಸಂಚಾರ ಮ್ಯೂಸಿಯಂ ನ ಕೇಂದ್ರಬಿಂದುವಾಗಿದೆ. ಮಕ್ಕಳು, ಕುಟುಂಬದ ಇತರೆ ಸದಸ್ಯರೊಂದಿಗೆ ಆಗಮಿಸಿ, ಟಾಯ್ ಟ್ರೈನ್ ನಲ್ಲಿ ಕುಳಿತು ಜನ ಎಂಜಾಯ್ ಮಾಡ್ತಿದ್ದಾರೆ. ಮ್ಯೂಸಿಯಂ ನಲ್ಲಿ ಉಗಿ ಬಂಡಿ, ಡೀಸೆಲ್ ರೈಲು, ವಿವಿಧ ರೀತಿಯ ಬೋಗಿಗಳು, ಹಳೆಯ ಕಾಲದ ಸಿಗ್ನಲ್ ವ್ಯಸ್ಥೆ, ವಿದ್ಯುತ್ ಉಪಕರಣ, ಲೆವೆಲ್ ಫ್ರೇಮ್, ಯಾಂತ್ರಿಕ ಸಂಕೇತ ಎಲ್ಲವೂ ಇಲ್ಲಿವೆ

 ಪುಸ್ತಕಗಳು, ಛಾಯಾಚಿತ್ರಗಳ ಪ್ರದರ್ಶನ

ರೈಲ್ವೆ ಇತಿಹಾಸ ಬಿಂಬಿಸೋ ಪುಸ್ತಕಗಳು, ಛಾಯಾಚಿತ್ರಗಳ ಪ್ರದರ್ಶನವಿದೆ. 114 ವರ್ಷಗಳ ಹಿಂದಿನ ಕಾಟೇಜ್ ಗಳು ಮ್ಯೂಸಿಯಂ ನ ಪ್ರಮುಖ ಆಕರ್ಷಣೆಯಾಗಿದೆ. ಒಂದು ಶತಮಾನಕ್ಕೂ ಹಳೆಯದಾದ ವಸ್ತುಗಳ ಪ್ರದರ್ಶನಕ್ಕಿಡಲಾಗಿದೆ. ರೈಲ್ವೆ ಇಲಾಖೆಯಲ್ಲಿ ಬಳಕೆಗೊಳ್ಳುತ್ತಿದ್ದ ಪ್ರತಿಯೊಂದು ವಸ್ತುಗಳ ಪ್ರದರ್ಶನವಾಗುತ್ತಿದ್ದು, ತಂತ್ರಜ್ಞಾನ (Railway Technology) ಬಳಕೆಯ ಪರಿಚಯವನ್ನೂ ಕೂಡ ಮಾಡಲಾಗಿದೆ.

ಅಪರೂಪ ವಸ್ತುಗಳ ಸಂಗ್ರಹ

ರೈಲ್ವೆ ಸಂಪರ್ಕ ಸಾಧನ, ಸಿಗ್ನಲ್ ಎಕ್ಯುಪ್ ಮೆಂಟ್, ಕಮರ್ಷಿಯಲ್ ಎಕ್ಯುಪ್ ಮೆಂಟ್ ಗಳು, ಸ್ಟೇಷನ್ ಮ್ಯಾನೇಜರ್ ಬಳಸೋ ವಸ್ತುಗಳು ಇಟ್ಟಿದ್ದೇವೆ. ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಹುಡುಕಾಡಿ ಅಪರೂಪದ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿದ್ದೇವೆ.

ರೈಲ್ವೆ ವ್ಯವಸ್ತೆ ಹೇಗೆ ನಿರ್ವಹಣೆಯಾಗುತ್ತದೆ ಅನ್ನೋದರ ಒಂದು ಝಲಕ್ ಇಲ್ಲಿ ಸಿಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಆಕರ್ಷಣೀಯವಾಗಸೋ ಪ್ರಯತ್ನಗಳು ಮುಂದುವರಿದಿವೆ ಎನ್ನುತ್ತಾರೆ ನೈಋತ್ಯ ರೈಲ್ವೆ ಇಲಾಖೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ.

ಗಮನ ಸೆಳೆಯುತ್ತಿ ರುವ ರಾತ್ರಿ ರೈಟಿಂಗ್ ವ್ಯವಸ್ಥೆ

ರಾತ್ರಿಯಾದ ಕೂಡಲೇ ರೈಟಿಂಗ್ ವ್ಯವಸ್ಥೆ ಗಮನ ಸೆಳೆಯುತ್ತದೆ. ಒಟ್ಟಾರೆ ಹುಬ್ಬಳ್ಳಿಯ ರೈಲ್ವೆ ಮ್ಯೂಸಿಯಂ ರಾಜ್ಯದ ಇತರೆ ಭಾಗದ ಜನರನ್ನೂ ಕೈಬೀಸಿ ಕರೆಯುತ್ತಿದೆ. ದಿನ ಕಳೆದಂತೆ ರೈಲ್ವೆ ಮ್ಯೂಸಿಯಂ ಪ್ರವಾಸಿ ತಾಣವಾಗಿ ಮಾರ್ಪಡುತ್ತಿದೆ. ಮ್ಯೂಸಿಯಂ ಬಗ್ಗೆ ಜನತೆಯ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಟಾಯ್ ಟ್ರೈನ್ ಮನರಂಜಕವಾಗಿದೆ, ಮಕ್ಕಳಿಗೆ ಖುಷಿ ಕೊಡುತ್ತೆ. ಇಡಿ ಮ್ಯೂಸಿಯಂ ಸುತ್ತಿದಾಗ ರೈಲ್ವೆ ಇಲಾಖೆಯ ಇತಿಹಾಸದಲ್ಲಿ ಒಂದು ಸುತ್ತು ಸುತ್ತಿದಂತಾಗುತ್ತದೆ ಎಂದು ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ - ಶಿವರಾಮ ಅಸುಂಡಿ
Published by:Mahmadrafik K
First published: