ಲಾಕ್ ಡೌನ್ ಭೀತಿ: ವಾಣಿಜ್ಯ ನಗರಿಯಲ್ಲಿ ಸಾಮಾಜಿಕ ಅಂತರ ಮರೆತ ಜನರಿಂದ ಖರೀದಿ ಭರಾಟೆ

ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಜನ ಮಾತ್ರ ವಸ್ತುಗಳೇ ಸಿಗುವುದಿಲ್ಲ  ಎನ್ನುವ ರೀತಿಯಲ್ಲಿ ಹಿಂದೆ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ

ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಜನ ಮಾತ್ರ ವಸ್ತುಗಳೇ ಸಿಗುವುದಿಲ್ಲ  ಎನ್ನುವ ರೀತಿಯಲ್ಲಿ ಹಿಂದೆ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ

ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಜನ ಮಾತ್ರ ವಸ್ತುಗಳೇ ಸಿಗುವುದಿಲ್ಲ  ಎನ್ನುವ ರೀತಿಯಲ್ಲಿ ಹಿಂದೆ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ

  • Share this:
ಹುಬ್ಬಳ್ಳಿ(ಏ. 27):  ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರ ಇಂದು ರಾತ್ರಿಯಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದೆ. 15ದಿನಗಳ ಕಾಲ ಲಾಕ್ಡೌನ್​ ಜಾರಿಯಾಗುವ ಹಿನ್ನಲೆ ವಾಣಿಜ್ಯ ನಗರಿಯಲ್ಲಿ ಜನರು ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.  ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಜನ ಮಾತ್ರ ವಸ್ತುಗಳೇ ಸಿಗುವುದಿಲ್ಲ  ಎನ್ನುವ ರೀತಿಯಲ್ಲಿ ಹಿಂದೆ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದರು.  ನಗರದಲ್ಲಿ ಎಲ್ಲಿ ನೋಡಿದರೂ ಜನಜಂಗುಳಿ ವಾತಾವರಣ ನಿರ್ಮಾಣವಾಗಿದೆ. ಹುಬ್ಬಳ್ಳಿಯ ದುರ್ಗದ ಬೈಲು ಪ್ರದೇಶ ಜನರಿಂದ ತುಂಬಿ ತುಳುಕ್ತಿದೆ. ಹಣ್ಣು, ತರಕಾರಿ, ಕಿರಾಣಿ ಸಾಮಾನು, ಹೂವು ಇತ್ಯಾದಿಗಳ ಮಾರಾಟ ಜೋರಾಗಿದ್ದು, ಜನ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ನಾಳೆಯೂ ಖರೀದಿಗೆ ಅವಕಾಶವಿದ್ದರೂ ಜನ ಮಾತ್ರ ಇಂದೇ ಖರೀದಿಗೆ ಮುಗಿಬಿದ್ದಿದ್ದಾರೆ. ಸಾಮಾಜಿಕ ಅಂತರ ಇಲ್ಲದೆ ಜನ ಖರೀದಿಯಲ್ಲಿ ತೊಡಗಿಕೊಂಡಿರುವ ದೃಶ್ಯಗಳ ಸಾಮಾನ್ಯವಾಗಿವೆ.

ನಾಳೆಯಿಂದ ವಾಹನ ಸಂಚಾರಕ್ಕೆ ಕಡಿವಾಣ ಹಾಕಲಾಗುತ್ತದೆ. ಅಂಗಡಿ ತೆರೆದಿದ್ದರೂ ಖರೀದಿ ಮಾಡುವುದಕ್ಕೆ ಬರೋದು ಕಷ್ಟ. ಹೀಗಾಗಿ ಇಂದೇ ಖರೀದಿಗೆ ಬಂದಿರೋದಾಗಿ ಕೆಲ ಜನ ಅಭಿಪ್ರಾಯಪಟ್ಟಿದ್ದಾರೆ. ಸಂಪೂರ್ಣ ಲಾಕ್ ಡೌನ್ ಆಗುತ್ತೆ ಅನ್ನೋ ಭೀತಿಯಲ್ಲಿ ಜನ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಹುಬ್ಬಳ್ಳಿ ಜೊತೆ ಸುತ್ತಲಿನ ಊರುಗಳ ಜನರೂ ಬಂದಿರೋದ್ರಿಂದ ಮಾರುಕಟ್ಟೆಯಲ್ಲಿ ಮತ್ತಷ್ಟು ರಷ್ ಹೆಚ್ಚಳವಾಗಿದೆ.

ಜನರಿಂದ ತುಂಬಿ ತುಳುಕುತ್ತಿರುವ ಬಸ್​ಗಳು

ಇಂದು ರಾತ್ರಿಯಿಂದ ಲಾಕ್ ಡೌನ್ ಜಾರಿಯಾಗುತ್ತಿರೋ ಹಿನ್ನೆಲೆಯಲ್ಲಿ ನಗರದಲ್ಲಿರುವ ವಲಸಿಗರು ತಮ್ಮ ಊರುಗಳತ್ತ ಹೊರಡಲು ಮುಂದಾಗಿದ್ದಾರೆ. ಇನ್ನು ಬೇರೆ ಊರುಗಳಲ್ಲಿರುವ ಜಿಲ್ಲಾವಸಿಗಳು ಕೂಡ ತಮ್ಮ ತಮ್ಮ ಊರುಗಳತ್ತ ಹೆಜ್ಜೆಹಾಕಿದ್ದಾರೆ. ಈ ಹಿನ್ನಲೆ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣಗಳ ಎಲ್ಲಿ ನೋಡಿದರೆ ಅಲ್ಲಿ ಜನಸಾಗರ ಕಂಡು ಬಂದಿದೆ.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿರುವ ಹಲವು ಜನ, ಉತ್ತರ ಕರ್ನಾಟಕದ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ದುಡಿಮೆಗೇ ಎಂದು ಗುಳೇ ಹೋದ ಜನ ತಮ್ಮ ತಮ್ಮ ಗೂಡುಗಳನ್ನು ಸೇರುವತ್ತ ಪಯಣ ಆರಂಭಿಸಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣದಲ್ಲಿ ನಿತ್ಯಕ್ಕಿಂತ ಹೆಚ್ಚಿನ ರಷ್ ನಿರ್ಮಾಣವಾಗಿದೆ. ಬಸ್ ಗಳ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಕಂಡು ಬಂದಿದೆ. ಇಂದು ರಾತ್ರಿಯಿಂದ 14 ದಿನಗಳ ಕಾಲ ಲಾಕ್ ಡೌನ್ ಘೋಷಿಸಿರೋ ರಾಜ್ಯ ಸರ್ಕಾರ, ಬಸ್ ಇತ್ಯಾದಿ ಸಂಪೂರ್ಣ ಸ್ಥಗಿತಗೊಳಿಸಲು ತೀರ್ಮಾನಿಸಿದೆ.

ಕೊರೋನಾ ನಡುವೆಯೆ ಹನುಮ ಜಯಂತಿ ಆಚರಣೆ..

ಇಂದು ರಾಜ್ಯಾದ್ಯಂತ ಹನುಮ ಜಯಂತಿ ಸಂಭ್ರಮ ಮನೆಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಬಹುತೇಕ ಕಡೆ ಹನುಮ ಮಂದಿರಗಳು ಮುಚ್ಚಲ್ಪಟ್ಟಿವೆ. ಇದರ ನಡುವೆಯೇ ಹುಬ್ಬಳ್ಳಿಯಲ್ಲಿ ಹನುಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಹುಬ್ಬಳ್ಳಿಯ ಮರಾಠ ಗಲ್ಲಿಯ ಶಿವಾಜಿ ಚೌಕ್ ಬಳಿ ಹನುಮ ಜಯಂತಿ ಆಚರಣೆ ಮಾಡಲಾಯಿತು. ಹನುಮನಿಗೆ ತೊಟ್ಟಿಲು ಸೇವೆ ಮಾಡಿದ ಮಹಿಳೆಯರು, ಲಾಲಿ ಹಾಡುಗಳನ್ನು ಹಾಡಿದರು. ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥಸಿದ್ಧಿಗೆ ಪ್ರಾರ್ಥಿಸಿ, ಶುಭವಾಗಲಿ ಎಂದು ಹಾರೈಸಿದರು.

(ವರದಿ -  ಶಿವರಾಮ ಅಸುಂಡಿ)
Published by:Seema R
First published: