Hubli: ಮಕ್ಕಳ Loveಗೆ ಪೋಷಕರೇ ವಿಲನ್; ರಕ್ಷಣೆ ಕೊಡುವಂತೆ ಪೊಲೀಸರ ಮೊರೆ

ಇಬ್ಬರ ಜಾತಿ ಬೇರೆ ಆದ ಹಿನ್ನಲೆ ಪೋಷಕರಿಗೆ ತಿಳಿಸದೇ ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಅದರಂತೆ ಕಳೆದ ಸೆಪ್ಟೆಂಬರ್ ನಲ್ಲಿ ಲಕ್ಷ್ಮೀಶ್ವರದ ರೆಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರೂ ಮದುವೆಯಾಗಿದ್ದರು.

ಪ್ರೀತಿಸಿ ಮದುವೆಯಾದ ಜೋಡಿ

ಪ್ರೀತಿಸಿ ಮದುವೆಯಾದ ಜೋಡಿ

  • Share this:
ಹುಬ್ಬಳ್ಳಿ (ಜ. 21): ಪ್ರೀತಿಸಿ ಓಡಿ ಹೋದ ಜೋಡಿಗೆ ಪೋಷಕರೇ ವಿಲನ್ (Villain) ಗಳಾಗಿ ಮಾರ್ಪಟ್ಟ ಘಟನೆ ಹುಬ್ಬಳ್ಳಿ (Hubli) ತಾಲೂಕಿನಲ್ಲಿ ನಡೆದಿದೆ. ಪೋಷಕರು ಮಕ್ಕಳಿಗೆ ಬೆದರಿಸಿದ   ಹಿನ್ನೆಲೆಯಲ್ಲಿ ತಮಗೆ ರಕ್ಷಣೆ ಕೊಡಿ ಎಂದು ಪ್ರೇಮಿಗಳು ಇದೀಗ  ಪೊಲೀಸರ ಮೊರೆ ಹೋಗಿದೆ. ಪೋಷಕರಿಗೆ ಗೊತ್ತಿಲ್ಲದೆ ಈ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಹೊಸ ಸಮಸ್ಯೆ ಎದುರಾಗಿದೆ.  ನೂಲ್ವಿ ಗ್ರಾಮದ ಯುವಕನೊಂದಿಗೆ, ಕುಬಿಹಾಳ ಗ್ರಾಮದ ಯುವತಿ ಪರಸ್ಪರ ಪ್ರೀತಿಸಿದ್ದಾರೆ. ಆದರೆ,  ಇಬ್ಬರದ್ದು ಬೇರೆ ಬೇರೆ ಜಾತಿಯಾಗಿರೋದೆ ಮದುವೆಗೆ ತೊಡಕಾಗಿ ಪರಿಣಮಿಸಿದೆ. 

ಏನಿದು ಘಟನೆ
ಕುಂದಗೋಳ ತಾಲೂಕಿನ ಕುಬಿಹಾಳದ ಶಾಂತವ್ವ ಪೂಜಾರಿ ಹಾಗೂ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಮಂಜುನಾಥ್ ಜಿಡ್ಡಿ ನಡುವೆ ಎರಡು ವರ್ಷಗಳ ಹಿಂದೆ ಪ್ರೇಮಾಂಕುರವಾಗಿತ್ತು. ನೂಲ್ವಿ ಗ್ರಾಮದಲ್ಲಿ ಶಾಂತವ್ವ ಪದವಿ ಮಾಡುವಾಗ ಅದೇ ಗ್ರಾಮದ ಮಂಜುನಾಥನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು. ಈ ವೇಳೆ ಇಬ್ಬರು ಒಟ್ಟಾಗಿ ಜೀವನ ಕಳೆಯುವ ನಿರ್ಧಾರ ಮಾಡಿದ್ದಾರೆ. ಇಬ್ಬರ ಜಾತಿ ಬೇರೆ ಆದ ಹಿನ್ನಲೆ ಪೋಷಕರಿಗೆ ತಿಳಿಸದೇ ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಅದರಂತೆ ಕಳೆದ ಸೆಪ್ಟೆಂಬರ್ ನಲ್ಲಿ ಲಕ್ಷ್ಮೀಶ್ವರದ ರೆಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರೂ ಮದುವೆಯಾಗಿದ್ದರು.

ಮದುವೆ ಆದರೂ  ವರ್ಷವಾದ್ರೂ ಮನೆಯಲ್ಲಿ ತಿಳಿಸದೇ ಇದ್ದ ಜೋಡಿಗಳು

ಮದುವೆ ಆದರೂ ಈ ವಿಚಾರ ಯಾರಿಗೂ  ತಿಳಿಸದೇ ಅವರವರ ಮನೆಯಲ್ಲಿ ಜೋಡಿ ಪ್ರತ್ಯೇಕವಾಗಿತ್ತು. ಆದರೆ, ಕಳೆದ ಒಂಬತ್ತು ದಿನಗಳ ಹಿಂದೆ ಮದುವೆ ವಿಚಾರ ತಿಳಿದು ಯುವತಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನ ಹಿಂದೆಯೇ ಶಾಂತವ್ವ ತನ್ನ ಪತಿಯೊಂದಿಗೆ ತಲೆಮರೆಸಿಕೊಂಡಿದ್ದಳು. ಇದೀಗ ತಮಗೆ ರಕ್ಷಣೆ ನೀಡುವಂತೆ ನವ ಜೋಡಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಮೊರೆ ಹೋಗಿದ್ದಾರೆ.

ಯುವಕನ ಪೋಷಕರಿಂದ ಮದುವೆಗೆ ಈಗಾಗಲೇ ಹಸಿರು ನಿಶಾನೆ ಸಿಕ್ಕಿದೆ. ಆದ್ರೆ ಕೆಳ ಜಾತಿಯ ಯುವಕ ಎನ್ನುವ ಕಾರಣಕ್ಕೆ ಯುವತಿಯ ಪೋಷಕರು ಹಿಂದೇಟು ಹಾಕಿದಾರೆ. ಅಲ್ಲದೇ ಯುವಕನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಭಯ ಕೂಡ ಹಾಕಿದ್ದಾರೆ.

ಇದನ್ನು ಓದಿ: CM Basavaraja Bommai ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ: ಪ್ರಹ್ಲಾದ್ ಜೋಶಿ

ಪೊಲೀಸರ ಮೊರೆ ಹೋದ ಜೋಡಿ

ಹೀಗಾಗಿ ತನಗೆ ಮತ್ತು ತನ್ನ ಪತಿಗೆ ನಮ್ಮ ಪೋಷಕರಿಂದ ಜೀವ ಭಯ ಇದೆ.. ಕೊಲೆ ಮಾಡಲು  ನಮ್ಮ ಕುಟುಂಬದವರು ಸಂಚು ನಡೆಸಿದ್ದಾರೆ. ನಮ್ಮಿಬ್ಬರಿಗೆ ಜೀವಕ್ಕೆ ರಕ್ಷಣೆ ಕೊಡುವಂತೆ ಯುವತಿ ಮನವಿ ಮಾಡಿದ್ದಾಳೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ಮದುವೆ ಮಾಡಿಕೊಳ್ಳದೇ ಇದರೆ ಸಾಯೋದಾಗಿ ಯುವತಿ ಹೇಳಿದ್ದಳು. ಅನಿವಾರ್ಯವಾಗಿ ನಾನು ಮದುವೆಯಾದೆ. ನಮ್ಮಿಬ್ಬರ ಪ್ರೀತಿಯನ್ನು ನಮ್ಮ ಪೋಷಕರೂ ಒಪ್ಪಿಕೊಂಡಿದ್ದಾರೆ. ಸುಖವಾಗಿ ಸಂಸಾರ ಮಾಡ್ತೇವೆ. ಅದಕ್ಕೆ ಅವಕಾಶ ಮಾಡಿಕೊಡುವಂತೆ ಯುವಕ ಗೋಗರಿಯುತ್ತಿದ್ದಾನೆ. ಆಸ್ತಿ ವಿಚಾರದಲ್ಲೂ ಯಾವುದೇ ರೀತಿಯಲ್ಲೂ ಪಾಲು ಪಡೆಯೋದಿಲ್ಲ ಅಂತ ಯುವತಿ ಪೋಷಕರು ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ.

ಇದನ್ನು ಓದಿ: ನಮ್ಮ ಮದುವೆಗೆ ಬರಲೇಬೇಡಿ ಅಂತ ಆಮಂತ್ರಣ ಪತ್ರಿಕೆ ಮುದ್ರಿಸಿದ ಚಾಮರಾಜನಗರದ ಜೋಡಿ

ಒಂದು ಅವಕಾಶ ನೀಡಿ ಎಂದು ಬೇಡುತ್ತಿರುವ ಯುವಕ
ಯುವಕನಿಗೆ ಕೇವಲ ಒಂದು ಎಕರೆ ಜಮೀನಿದೆ. ಮೆಡಿಕಲ್ ಶಾಪ್ ನಲ್ಲಿ ಯುವಕ ಮಂಜುನಾಥ ಕೆಲಸ ಮಾಡ್ತಿದಾನೆ. ಆದರೂ ಕಷ್ಟಪಟ್ಟು ಕೆಲಸ ಮಾಡಿ ಸಂಸಾರ ಮುನ್ನಡೆಸ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳ್ತಿದಾನೆ. ಈಗಾಗಲೇ ಕುಂದಗೋಳದಲ್ಲಿ ಯುವತಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಯುವ ಪ್ರೇಮಿಗಳಿಗೆ ಮನೆಯವರೇ ವಿಲನ್ ಗಳಾಗಿ ಮಾರ್ಪಟ್ಟಿದ್ದಾರೆ. ಇದೀಗ ನವ ಜೋಡಿ ಹುಬ್ಬಳ್ಳಿ ಪೊಲೀಸರ ಮೊರೆ ಹೋಗಿದೆ.
Published by:Seema R
First published: