HOME » NEWS » State » HUBLI HUBLI FAMILY INFECT CORONA AFTER TWO DOSES OF VACCINE SAKLB KVD

ಎರಡು ಡೋಸ್ ಲಸಿಕೆ ಪಡೆದ ನಂತರವೂ ವಕ್ಕರಿಸಿದ ಕೊರೊನಾ : ಪರಿಸ್ಥಿತಿ ತೆರೆದಿಟ್ಟ ಕುಟುಂಬ

ವ್ಯಾಕ್ಸಿನ್ ಹಾಕಿಸಿಕೊಂಡ ನಂತರವೂ ಕೊರೋನಾ ಕಾಣಿಸಿಕೊಂಡ ಅನುಮಾನ ಕಾಡಿತು. ಸೋಂಕಿನ ಲಕ್ಷಣ ಕಾಣಿಸಿಕೊಂಡ ಕೂಡಲೇ ಕಿಮ್ಸ್ ವೈದ್ಯರಿಗೆ ಮಾಹಿತಿ ನೀಡಿದೆ. ಕೋವಿಡ್ ಸೋಂಕು ದೃಢವಾಗುತ್ತಿದ್ದಂತೆಯೇ ಹೋಮ್ ಐಸೋಲೇಷನ್ ಆದೆ. ಕುಟುಂಬದ ಇತರೆ ಸದಸ್ಯರಿಗೂ ಟೆಸ್ಟ್ ಮಾಡಿಸಿದಾಗ ಸೋಂಕು ಧೃಡಪಟ್ಟಿತ್ತು.

news18-kannada
Updated:June 22, 2021, 10:18 PM IST
ಎರಡು ಡೋಸ್ ಲಸಿಕೆ ಪಡೆದ ನಂತರವೂ ವಕ್ಕರಿಸಿದ ಕೊರೊನಾ : ಪರಿಸ್ಥಿತಿ ತೆರೆದಿಟ್ಟ ಕುಟುಂಬ
ರಾಮನಗೌಡ ಕುಟುಂಬ
  • Share this:
ಹುಬ್ಬಳ್ಳಿ: ಕೊರೋನಾ ಎರಡನೇ ಅಲೆ ಬಂದ ನಂತರ ಜನ ಭೀತಿಗೊಂಡಿದ್ದಾರೆ. ಅದರಲ್ಲಿಯೂ ಕೋವಿಶೀಲ್ಡ್ ಅಥವಾ ಕೋ ವ್ಯಾಕ್ಸಿನ್ ಪಡೆದ ನಂತರವೂ ಕೆಲವೊಬ್ಬರಲ್ಲಿ ಕೊರೋನಾ ಲಕ್ಷಣ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಎರಡನೆಯ ಡೋಸ್ ಹಾಕಿಸಿಕೊಂಡ ನಂತರವೂ ಕೊರೋನಾ ಲಕ್ಷಣ ಕಾಣಿಸಿಕೊಂಡು, ಇಡೀ ಕುಟುಂಬವನ್ನು ವ್ಯಾಪಿಸಿದರೂ ಧೃತಿಗೆಡದೆ ಹೆಮ್ಮಾರಿಯನ್ನು ದೂರ ಓಡಿಸಿದೆ ಇಲ್ಲೊಂದು ಕುಟುಂಬ. ವ್ಯಾಕ್ಸಿನ್ ಹಾಕಿಸಿಕೊಂಡಲ್ಲಿ ಕೊರೋನಾದ ದುಷ್ಪರಿಣಾಮದ ತೀವ್ರತೆ ಕಡಿಮೆಯಾಗಲಿದೆ ಎಂಬುದನ್ನು ಕುಟಂಬ ಸಾಬೀತು ಮಾಡಿದೆ.

ಎರಡನೆಯ ಡೋಸ್ ಪಡೆದ ನಂತರವೂ ಕೋವಿಡ್ ಸೋಂಕು ದೃಢಪಟ್ಟು ತೀವ್ರ ಸಂಕಷ್ಟಕ್ಕೆ ಗುರಿಯಾದ್ರೂ ಕುಟುಂಬವೊಂದು ಕೊರೋನಾವನ್ನು ಗೆದ್ದು ಬಂದಿದೆ. ಕೋವಿಡ್ ಬಂದಿದೆಯೆಂದು ಎದೆಗುಂದದೆ ಸಕಾಲಕ್ಕೆ ಚಿಕಿತ್ಸೆ ಪಡೆದ ಕುಟುಂಬ ಕೋವಿಡ್ ಗೆದ್ದು ಗೆಲುವಿನ ನಗೆ ಬೀರಿದೆ. ಮಾರಕ ಕೋವಿಡ್ ಸೋಂಕಿನಿಂದ ಒಂದೇ ಕುಟುಂಬದ ಐವರು ಗುಣಮುಖರಾಗಿದ್ದಾರೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಕುಟುಂಬ ಕೋವಿಡ್ ಗಂಡಾಂತರದಿಂದ ಪಾರಾಗಿದೆ.

ಕೋವಿಡ್ ಎರಡನೆಯ ಡೋಸ್ ಪಡೆದಿದ್ದ ರಾಮನಗೌಡ ರಲ್ಲಿ ಮೊದಲು ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ನಂತರ ಕುಟುಂಬದ ಇತರೆ ಸದಸ್ಯರಿಗೂ ಕೋವಿಡ್ ವ್ಯಾಪಿಸಿದೆ. ರಾಮನಗೌಡರ ಪತ್ನಿ, ಮಕ್ಕಳು ಮತ್ತು ಓರ್ವ ಸಂಬಂಧಿಗೆ ಸೋಂಕು ದೃಢಪಟ್ಟಿತ್ತು. ಹುಬ್ಬಳ್ಳಿಯ ಕಾಳಿದಾಸ ನಗರದಲ್ಲಿ ರಾಮನಗೌಡರ ಮನೆಯಿದ್ದು, ಎಲ್ಲರೂ ಹೋಮ್ ಐಸೋಲೇಷನ್ ಆಗೋ ಮೂಲಕ ಕೊರೋನಾವನ್ನು ಗೆದ್ದಿದ್ದಾರೆ.

ಕೋವಿಡೋ ಸೋಂಕು ಬಂದಿದೆ ಎಂದು ಎದೆಗುಂದದೆ ಕುಟುಂಬದ ಎಲ್ಲ ಸದಸ್ಯರು ಧೈರ್ಯದಿಂದ ಎದುರಿಸಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿ ಇದ್ದು, ಕಿಮ್ಸ್ ವೈದ್ಯರ ಸಲಹೆಯ ಪ್ರಕಾರ ಕಾಲ ಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪ್ರತ್ಯೇಕ ಕೋಣೆಗಳಲ್ಲಿ ಉಳಿದುಕೊಂಡು ಕುಟುಂಬದ ಸದಸ್ಯರು ಗುಣಮುಖರಾಗಿದ್ದಾರೆ. ಏಕ ಕಾಲಕ್ಕೆ ಕುಟುಂಬದ ಐವರೂ ಸದಸ್ಯರು ಗುಣಮುಖರಾಗಿದ್ದಾರೆ.

ಇದನ್ನೂ ಓದಿ: Rohini Sindhuri: ಅಕ್ರಮವಾಗಿ ಈಜುಕೊಳ ನಿರ್ಮಿಸಿದ್ದಾರೆಂದು ವರದಿ: ರೋಹಿಣಿ ಸಿಂಧೂರಿಗೆ ಸಂಕಷ್ಟ!

ಎರಡನೆಯ ವ್ಯಾಕ್ಸಿನ್ ಹಾಕಿಸಿಕೊಂಡ ನಂತರವೂ ಕೊರೋನಾ ಕಾಣಿಸಿಕೊಂಡ ಅನುಮಾನ ಕಾಡಿತು. ಸೋಂಕಿನ ಲಕ್ಷಣ ಕಾಣಿಸಿಕೊಂಡ ಕೂಡಲೇ ಕಿಮ್ಸ್ ವೈದ್ಯರಿಗೆ ಮಾಹಿತಿ ನೀಡಿದೆ. ಕೋವಿಡ್ ಸೋಂಕು ದೃಢವಾಗುತ್ತಿದ್ದಂತೆಯೇ ಹೋಮ್ ಐಸೋಲೇಷನ್ ಆದೆ. ಕುಟುಂಬದ ಇತರೆ ಸದಸ್ಯರಿಗೂ ಟೆಸ್ಟ್ ಮಾಡಿಸಿದಾಗ ಸೋಂಕು ಧೃಡಪಟ್ಟಿತ್ತು. ಅವರೂ ಹೋಮ್ ಐಸೋಲೇಷನ್ ನಲ್ಲಿದ್ದುಕೊಂಡೇ ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆದೆ. ಇಡೀ ಕುಟುಂಬಕ್ಕೆ ಸೋಂಕು ತಗುಲಿದೆ ಎಂದು ನಾವ್ಯಾರೂ ಎದೆಗುಂದಲಿಲ್ಲ. ವೈದ್ಯರ ಮಾರ್ಗದರ್ಶನದಂತೆ ಔಷಧ ಸೇವನೆ ಮಾಡಿದೆ. ಪ್ರತಿ ನಿತ್ಯವೂ ಮನೆಯ ಎಲ್ಲ ಕೋಣೆಗಳ ಸ್ಯಾನಿಟೈಜ್ ಮಾಡುತ್ತಿದ್ದೆವು. ಬಿಸಿ ಬಿಸಿ ಆಹಾರ ಸೇವನೆ, ವ್ಯಾಯಾಮ, ವಿಶ್ರಾಂತಿ ಎಲ್ಲವುಗಳ ಪಾಲನೆ ಮಾಡಲಾಯಿತು. ಹೋಮ್ ಐಸೋಲೇಷನ್ ನಲ್ಲಿದ್ದುಕೊಂಡೇ ಎಲ್ಲರೂ ಗುಣಮುಖರಾದೆವು.

ಕೊರೋನಾ ಬಂತೆಂದು ಯಾರೂ ಧೈರ್ಯಗುಂದಬಾರದು. ತಾವಾಗಿಯೇ ಚಿಕಿತ್ಸೆ ಪಡೆದುಕೊಳ್ಳೋ ಬದಲು, ವೈದ್ಯರ ಮಾರ್ಗದರ್ಶನ ಪಡೆಯಬೇಕು. ಕೋವಿಡ್ ವ್ಯಾಕ್ಸಿನ್ ಪಡೆದಿದ್ದರಿಂದ ದುಷ್ಪರಿಣಾಮದ ತೀವ್ರತೆ ಕಡಿಮೆಯಾಯಿತು. ಪ್ರಾಣಾಪಾಯದಿಂದ ಪಾರಾಗುವಂತಾಯಿತು. ಇಡೀ ಕುಟುಂಬ ಕೊರೋನಾದಿಂದ ಬಚಾವಾಗಿದ್ದೇವೆ ಎಂದು ಕೊರೋನಾ ದಿಂದ ಗುಣಮುಖರಾದ ಎಚ್.ರಾಮನಗೌಡರ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡಿದ್ದರಿಂದಲೇ ಎದುರಾಗಬಹುದಾದ ದೊಡ್ಡ ಅಪಾಯದಿಂದ ಪಾರಾದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Published by: Kavya V
First published: June 22, 2021, 10:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories