ಹೆಂಡತಿ ದೂರವಾಗಿದ್ದ ಕೋಪಕ್ಕೆ ಯೋಧನಿಂದ ಮೂವರ ಹತ್ಯೆ.. ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್!

9 ವರ್ಷದ ಬಾಲಕಿ ಸೇರಿದಂತೆ ಮೂವರನ್ನು ಕೊಲೆ ಮಾಡಿದ್ದ ಯೋಧನಿಗೆ ಹುಬ್ಬಳ್ಳಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸೋ ಜೊತೆಗೆ 2.20 ಲಕ್ಷ ರೂ. ದಂಡ ವಿಧಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪಿಸ್ತೂಲ್ ನಿಂದ ಮೂವರನ್ನು ಹತ್ಯೆಗೈಲಾಗಿತ್ತು.

ಅಪರಾಧಿ ಶಂಕ್ರಪ್ಪ ತಿಪ್ಪಣ್ಣ ಕೊರವರ

ಅಪರಾಧಿ ಶಂಕ್ರಪ್ಪ ತಿಪ್ಪಣ್ಣ ಕೊರವರ

  • Share this:
ಹುಬ್ಬಳ್ಳಿ:  11 ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆ (Triple Murders) ಪ್ರಕರಣದ ಅಪರಾಧಿಗೆ ಹುಬ್ಬಳ್ಳಿ ನ್ಯಾಯಾಲಯ (Court) ಶಿಕ್ಷೆ ಪ್ರಕಟಿಸಿದೆ. ಮೂವರನ್ನು ಗುಂಡು ಹಾರಿಸಿ ಕೊಲೆಗೈದಿದ್ದ ಅಪರಾಧಿ ( Guilty)  CRPF ಯೋಧ ಶಂಕ್ರಪ್ಪ ತಿಪ್ಪಣ್ಣ ಕೊರವರ @ ಭಜಂತ್ರಿಗೆ ಜೀವಾವಧಿ ಶಿಕ್ಷೆ, ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2.20 ಲಕ್ಷ ರೂಪಾಯಿ ದಂಡ ವಿಧಿಸಿ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಪ್ರಕರಣ ಇಡೀ ಧಾರವಾಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು. CRPF ಯೋಧನೇ ಫೈರಿಂಗ್ ಮಾಡಿ ಕೊಲೆ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. 2010 ರಲ್ಲಿ ನಡೆದಿದ್ದ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಕೊಲೆಗೆ ಕಾರಣವಾಗಿದ್ದ ಅಪರಾಧಿಗೆ ನ್ಯಾಯಾಲಯ ಕೊನೆಗೂ ಶಿಕ್ಷೆ ನೀಡಿದೆ.

ಹೆಂಡತಿ ದೂರವಾಗಿದ್ದಕ್ಕೆ ಕೋಪ 

ಬೆಟದೂರು ಗ್ರಾಮದವನೇ ಆಗಿದ್ದ 2010 ರಲ್ಲಿ ಸಿ.ಆರ್.ಪಿ.ಎಫ್. ಯೋಧ  ಶಂಕ್ರಪ್ಪ ತಿಪ್ಪಣ್ಣ ಕೊರವರ ಅದೇ ಗ್ರಾಮದ ಯುವತಿಯನ್ನು ಮದುವೆಯಾಗಿದ್ದ. ಮದುವೆಯ ನಂತರ ಯೋಧ ಹಾಗೂ ಪತ್ನಿಯ ನಡುವೆ ವಾಗ್ವಾದ ಉಂಟಾಗಿ ಹೆಂಡತಿ ತವರು ಮನೆ ಸೇರಿದ್ದಳು. ಹಲವು ದಿನಗಳ ನಂತರವೂ ಪತ್ನಿ ಗಂಡನ ಮನೆಗೆ ಬಂದಿರಲಿಲ್ಲ. ಪತ್ನಿ ಜಗಳ ಮಾಡಿ ತವರು ಸೇರಲು ಸಂಬಂಧಿಕರಾದ ಯಲ್ಲಪ್ಪ ಭಜಂತ್ರಿ ಕಾರಣ ಎಂದು ಭಾವಿಸಿದ್ದ ಯೋಧ ಒಳಗೊಳಗೆ ಕುದಿಯುತ್ತಿದ್ದ.

ಇದನ್ನೂ ಓದಿ: ಹೆಂಡತಿ ಬಾಣಂತನಕ್ಕೆ ಹೋದಾಗ ನಾದಿನಿ ಮೇಲೆ ಕಣ್ಣು; ಫೋಟೋ ತೋರಿಸಿ ಹುಡ್ಗಿನ ಬಳಸಿಕೊಳ್ಳುತ್ತಿದ್ದ ಪಾಪಿ!

9 ವರ್ಷ ಬಾಲಕಿಗೂ ಗುಂಡಿಗೆ ಬಲಿಯಾಗಿದ್ದಳು..! 

ಅಲ್ಲದೆ ತಾಯಿಯ ಆಸ್ತಿಯೂ ತನ್ನ ಹೆಸರಿಗೆ ಬರುವಂತೆ ಮಾಡಲು ಸಂಬಂಧಿಗಳು ಸಹಕರಿಸಲಿಲ್ಲ ಎಂಬ ದ್ವೇಷದಿಂದ ಸಂಬಂಧಿಕರ ವಿರುದ್ಧ ಕೆಂಡಕಾರುತ್ತಿದ್ದ. ಅದೇ ಸಿಟ್ಟಿನಿಂದ ಶಂಕಪ್ಪ, ತನ್ನ ಬಳಿ ಅಕ್ರವಾಗಿ ಇಟ್ಟುಕೊಂಡಿದ್ದ ಪಿಸ್ತೂಲ್ ನಿಂದ ಸಂಬಂಧಿಕರ ಮೇಲೆ ಗುಂಡು ಹಾರಿಸಿದ್ದ. ಘಟನೆಯಲ್ಲಿ ಯಲ್ಲಪ್ಪ ಭಜಂತ್ರಿ (38), ಸೋಮಪ್ಪ ಭಜಂತ್ರಿ (11) ಹಾಗೂ ಐಶ್ವರ್ಯ ಭಜಂತ್ರಿ (9) ಸಾವನ್ನಪ್ಪಿದ್ದರು. ಅಲ್ಲದೆ ಯಲ್ಲಪ್ಪನ ಮತ್ತೋರ್ವ ಪುತ್ರ ಮದನಕುಮಾರ ಎಂಬಾತ ತೀವ್ರವಾಗಿ ಗಾಯಗೊಂಡಿದ್ದ. ಅದೃಷ್ಟವಶಾತ್ ಯಲ್ಲಪ್ಪನ ಹೆಂಡತಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು.

10 ವರ್ಷ ಕಠಿಣ ಶಿಕ್ಷೆ, 2.20 ಲಕ್ಷ ರೂ. ದಂಡ

ಈ ಪ್ರಕರಣ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ ನಂತರ, ಸುದೀರ್ಘ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವಂದ್ರಪ್ಪ ಎನ್. ಬಿರಾದಾರ ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ, ಕೊಲೆ ಯತ್ನಕ್ಕೆ ಏಳು ವರ್ಷ ಜೈಲು ಶಿಕ್ಷೆ, ಶಸ್ತ್ರಾಸ್ತ್ರ ಕಾಯ್ದೆ ಕಲಂ 25(1) ರ ಅಡಿ ಕಠಿಣ ಕಾರಾಗೃಹ ಶಿಕ್ಷೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪಕ್ಕೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ಇದರ ಜೊತೆಗೆ 2.20 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಲಾಗಿದೆ. ಪ್ರಕರಣದ ಕುಮ್ಮಕ್ಕು ನೀಡಿದ್ದ ಆರೋಪ ಹೊತ್ತಿದ್ದ ಇಬ್ಬರು ಆರೋಪದಿಂದ ಖುಲಾಸೆಗೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್​​ಮೆಂಟ್​​ ನಿವಾಸಿಗಳೇ ಹುಷಾರ್.. ಸೆಕ್ಯೂರಿಟಿ ಗಾರ್ಡ್​​ನಿಂದಲೇ ಕಂಟಕ ಎದುರಾಗಬಹುದು!

ಇನ್ನು ಇಂದು ಹಾಸನದಲ್ಲಿ ಮಗಳ ತಿಂಗಳ ತಿಥಿ ಮಾಡಲು ಬಂದಿದ್ದ ತಂದೆ ಅಳಿಯನ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ದುರಂತ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ. ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಮೃತ ವ್ಯಕ್ತಿ. ಈತನ ಮಗಳು ಹೇಮಾಶ್ರೀ ಅಕ್ಟೋಬರ್ 30 ರಂದು ಸಾವನ್ನಪ್ಪಿದ್ದಳು. ನಿನ್ನೆ ತಿಂಗಳ ತಿಥಿ ಕಾರ್ಯ ಮಾಡಲು ತಂದೆ ನಾಗರಾಜ್​ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮಕ್ಕೆ ಬಂದಿದ್ದರು. ಈ ಸಮಯದಲ್ಲಿ ಅಳಿಯ ಪ್ರವೀಣ್ ಹಾಗೂ ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿಕೊಂಡು ಎಲ್ಲೋ ತಲೆ ಮರೆಸಿಕೊಂಡಿದ್ದರು. ಇತ್ತ ತಂದೆ ನಾಗರಾಜ್​ ಬೆಳಿಗ್ಗೆಯಿಂದ ಕಾದು ಕಾದು, ನಂತರ ಮೊಬೈಲ್​​ನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Published by:Kavya V
First published: