Hubballi Crime News: ಬನ್ರೋ ಹೋಗೋಣ ಅಂದ್ರು: ಹೋದ ಮೂವರು ಗೆಳೆಯರು ಜೈಲು ಪಾಲಾದ್ರು!

ಹುಬ್ಬಳ್ಳಿ ಕೊಲೆ ಪ್ರಕರಣ

ಹುಬ್ಬಳ್ಳಿ ಕೊಲೆ ಪ್ರಕರಣ

ಯುವ ಸಮೂಹದಲ್ಲಿ ಗೆಳೆತನಕ್ಕಿರೋಷ್ಟ ಬೆಲೆ ಯಾವುದಕ್ಕೂ ಇರಲ್ಲ. ಹೀಗೆ ಗೆಳೆತನಕ್ಕೆ ಬೆಲೆಕೊಟ್ಟು ಮೂವರು ಜೈಲುಪಾಲಾಗಿದ್ದಾರೆ. ಯುವತಿಯನ್ನು ಪ್ರೀತಿಸಿದನೆಂಬ ಕಾರಣಕ್ಕೆ ಯುವಕನನ್ನು ಕೊಲೆ ಮಾಡಿ, ಈಗ ಕಂಬಿ ಎಣಿಸುತ್ತಿದ್ದಾರೆ.

  • Share this:

ಹುಬ್ಬಳ್ಳಿ - 'ಏ ದೋಸ್ತೀ.. ಹಮ್ ನಹೀ ಚೋಡೆಂಗೇ...' ಎಂಬ ಹಾಡೊಂದು (Songs) ಗೆಳೆತನದ (Friendship) ಮಹತ್ವವನ್ನು ಹೇಳುತ್ತೆ. ಯುವಕರು (Youth) ಗೆಳೆತನಕ್ಕೆ ಕೊಡುವಷ್ಟು ಮಹತ್ವವನ್ನು (Importance) ಮತ್ಯಾವುದಕ್ಕೂ ಕೊಡಲ್ಲ. ಅದು ಹೊಡೆದಾಟಕ್ಕೂ ಸೈ... ಬಡಿದಾಟಕ್ಕೂ ಸೈ ಅನ್ನವವರೂ ಇದ್ದಾರೆ. ಇಲ್ಲಿ ಮೂವರು ಗೆಳೆಯರು (Three Friends) ತನ್ನ ಫ್ರೆಂಡ್ ಕರೆದಿದ್ದಾನೆಂದು ಬ್ಲೈಂಡ್ ಆಗಿ ಅವನನ್ನು ಫಾಲೋ ಮಾಡಿ, ಇದೀಗ ಕೊಲೆ (Murder) ಆರೋಪದ ಮೇಲೆ ಜೈಲು (Jail) ಪಾಲಾಗಿದ್ದಾರೆ. ಯುವತಿಯನ್ನು ಪ್ರೀತಿಸಿದ (Love) ಕಾರಣಕ್ಕೆ ಯುವಕನನ್ನು (Youth Murder Case) ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು (Hubballi Navanagara Police Station) ಮೂವರು ಆರೋಪಿಗಳನ್ನು (Three Accused) ಬಂಧಿಸಿದ್ದಾರೆ.


ಬಂಧಿತ ಆರೋಪಿಗಳನ್ನು ಕೃಷ್ಣ ರೆಡ್ಡಿ, ರಾಘು ಬನ್ಸ್ ಹಾಗೂ ಸುಮುಧರ ಪೂಜಾರಿ ಎಂದು ಗುರುತಿಸಲಾಗಿದೆ. ಮುಖ್ಯ ಆರೋಪಿ ರಾಘವೇಂದ್ರ ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾನೆ. ರಾಘವೇಂದ್ರ ನೀಡಿದ ಮಾಹಿತಿ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.


ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬರ್ಬರವಾಗಿ ಕೊಲೆ


ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ಯಿಯಲ್ಲಿ ಮೇ 19 ರಂದು ಹಾಡಹಗಲೇ ಯುವಕನ ಬರ್ಬರ ಹತ್ಯೆಗೈದ ಪ್ರಕರಣ ನಡೆದಿತ್ತು. ಹುಬ್ಬಳ್ಳಿಯ ನೇಕಾರ ನಗರದ ವಿನಯ್ ಎಂಬುವನನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು. ತ್ರಿಕೋನ ಪ್ರೇಮಕಥೆಗೆ ಯುವಕನ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿತ್ತು. ಪ್ರೀತಿ ವಿಷಯಕ್ಕೆ ವಿನಯ್ ನನ್ನು ಟಾರ್ಗೆಟ್ ಮಾಡಿದ್ದ ಗುಂಪು, ನವನಗರ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬರ್ಬರವಾಗಿ ಕೊಲೆ ಮಾಡಿದ್ದರು.


ಇದನ್ನೂ ಓದಿ:  Murder: ಮಂಡ್ಯದಲ್ಲಿ ಕೊಲೆ, ಹಾಸನದಲ್ಲಿ ಸಿಕ್ಕಿತು ಡೆಡ್ ಬಾಡಿ; ಭೂಮಿಯೊಳಗೆ ಹುಗಿದಿತ್ತು ಸಾವಿನ ರಹಸ್ಯ!


ರಾಘವೇಂದ್ರ ಎಂಬಾತನ ಮೇಲೆ ಕೊಲೆ ಆಪಾದನೆ ಕೇಳಿ ಬಂದಿತ್ತು. ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಜಾಲ ಬೀಸುತ್ತಿದ್ದಂತೆಯೇ ರಾಘವೇಂದ್ರ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದ. ಕೊಲೆ ಆರೋಪಿ ರಾಘುಗೆ ಮೂವರು ಸಹಕರಿಸಿದ್ದರು. ಘಟನೆ ನಡೆದ ಬಳಿಕ ಮೃತ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಮೂವರು ಪ್ರಯತ್ನಿಸಿದ್ದರು.


ಯುವಕರು ಜೈಲುಪಾಲು


ಪರಿಚಯಸ್ಥರ ಕಾರ್ ತೆಗೆದುಕೊಂಡು ಹೋಗಿದ್ದ ಮೂವರು ಯುವಕರು, ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದರು. ಸ್ನೇಹಿತ ಕರೆದನು ಎಂದು ಹೋದ ಮೂವರು ಯುವಕರು ಇದೀಗ ಜೈಲು ಪಾಲಾಗಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಮತ್ತೊಂದು ಆನ್ ಲೈನ್ ದೋಖಾ...!


ಆನ್ ಲೈನ್ ವಂಚನೆ ಕುರಿತು ಏನೆಲ್ಲಾ ಜಾಗೃತಿ ಮೂಡಿಸಿದರೂ ಜನ ಮಾತ್ರ ಪದೇ ಪದೇ ವಂಚನೆಗೆ ಒಳಗಾಗುತ್ತಲೇ ಇದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಂದು ಆನ್ ಲೈನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಒಟಿಪಿ ಪಡೆದು ವ್ಯಕ್ತಿಯೊಬ್ಬರಿಗೆ ಸಾವಿರಾರು ರೂಪಾಯಿ ವಂಚನೆ ಮಾಡಲಾಗಿದೆ. ವಂಚನೆಗೆ ಒಳಗಾದ ವ್ಯಕ್ತಿಯನ್ನು ಹುಬ್ಬಳ್ಳಿಯ ಮಯೂರ ನಗರದ ನಿವಾಸಿ ಶಿವಪುತ್ರ ಪುರತಗೇರಿ ಎಂದು ಗುರುತಿಸಲಾಗಿದೆ. ಬ್ಯಾಂಕ್ ಖಾತೆಯ ಕೆವೈಸಿ ಅಪ್‌ಡೇಟ್ ಮಾಡಿಕೊಡುವುದಾಗಿ ವಂಚನೆ ಮಾಡಲಾಗಿದೆ.


ಇದನ್ನೂ ಓದಿ: Crime News: ರಾಜ್ಯದ ಪಾಲಿಗಿಂದು 'ಸಾವಿನ ಸಂಡೇ'! ವಿವಿಧ ಪ್ರಕರಣಗಳಲ್ಲಿ ಐದಕ್ಕೂ ಹೆಚ್ಚು ಮಂದಿ ದುರ್ಮರಣ


ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವ್ಯಕ್ತಿಯೋರ್ವ ವಂಚನೆ ಮಾಡಿದ್ದಾನೆ. ಒಟಿಪಿ ಪಡೆದು 99 ಸಾವಿರ ರೂಪಾಯಿ ವರ್ಗಾಯಿಸಿಕೊಳ್ಳಲಾಗಿದೆ. ಕೆವೈಸಿ ಅಪ್‌ಡೇಟ್ ಮಾಡದಿದ್ದರೆ ಬ್ಯಾಂಕ್ ಖಾತೆ ಸ್ಥಗಿತಗೊಳ್ಳುತ್ತದೆ ಎಂಬ ಸಂದೇಶ ನಂಬಿ ವ್ಯಕ್ತಿ ಮೋಸ ಹೋಗಿದ್ದಾನೆ.


99 ಸಾವಿರ ರೂಪಾಯಿ ವರ್ಗಾವಣೆ


ಶಿವಪುತ್ರ ಅವರ ಮೊಬೈಲ್‌ ಗೆ ಸಂದೇಶವೊಂದು ಬಂದಿತ್ತು. ಅದರಲ್ಲಿರುವ ನಂಬರ್‌ ಗೆ ಕರೆ ಮಾಡಿದಾಗ, ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡ ವಂಚಕ, ಬ್ಯಾಂಕ್ ಮಾಹಿತಿ ಹಾಗೂ ಮೊಬೈಲ್‌ ಗೆ ಬಂದ ಒಟಿಪಿ ಪಡೆದುಕೊಂಡಿದ್ದಾನೆ ಕ್ಷಣಾರ್ಧದಲ್ಲಿ ಹಣ 99 ಸಾವಿರ ರೂಪಾಯಿ ವರ್ಗಾಯಿಸಿಕೊಂಡಿದ್ದಾನೆ. ಈ ಕುರಿತು ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

top videos
    First published: