ಹುಬ್ಬಳ್ಳಿ: ಹೊಲದಲ್ಲಿ ಟ್ರ್ಯಾಕ್ಟರ್ಗಳು ಉಳುಮೆ ಮಾಡೋದನ್ನ ನೋಡಿರ್ತೀವೆ. ಆದರೆ ಇಲ್ಲಿ ಉಳುಮೆ ಮಾಡೋ ಟ್ರ್ಯಾಕ್ಟರ್ ಸಸಿಗಳಿಗೆ ನೀರು ಸಿಂಪಡಿಸುತ್ತೆ, ಎಡೆಕುಂಟೆ ಒಡೆದು ಹಾಕುತ್ತೆ. ಹೀಗೆ ಆಲ್ ಇನ್ ಒನ್ ವೀಲ್ ಆಗಿ ಈ ಟ್ರ್ಯಾಕ್ಟರ್ ಕಾರ್ಯನಿರ್ವಹಿಸುತ್ತೆ. ಅಂದಹಾಗೆ ಹೀಗೆ ಸಸಿಗಳಿಗೆ ನೀರುಣಿಸೋ ಈ ಟ್ರ್ಯಾಕ್ಟರ್ ಇದ್ಯಲ್ಲ, ಇದು ನಮ್ಮದೇ ಕರುನಾಡಿನ ಹುಡುಗನ ಸಾಧನೆ ಅಂದ್ರೆ ನೀವ್ ನಂಬ್ಲೇಬೇಕು.
ಯೆಸ್, ಇಂತಹ ಅಪರೂಪದ ಬಹುಪಯೋಗಿ ಟ್ರ್ಯಾಕ್ಟರ್ನಿಂದ ರೈತರ ಪ್ರಯಾಸದ ಕೆಲಸ ಸುಲಭವಾಗಿ ಮಾಡಬಹುದು. ಅದು ಬೇರೆ ಒಂದೇ ಟ್ರ್ಯಾಕ್ಟರ್ ಅಳವಿಡಿಸಿದ ಮೋಡಿಫಿಕೇಶನ್ ನಿಂದ. ಅಂದಹಾಗೆ ಇಂತಹ ಮಾಡಿಫಿಕೇಶನ್ ಟ್ರ್ಯಾಕ್ಟರ್ ಮಾಡಿದವರು ಹುಬ್ಬಳ್ಳಿಯ ರವಿಕುಮಾರ್.
ಎತ್ತಿನಬಂಡಿಯ ತಯಾರಕರಿವರು
ಇವರು ಪಾರಂಪರಿಕವಾಗಿ ಎತ್ತಿನ ಬಂಡಿಯ ಗಾಲಿಯ ತಯಾರಕರಾಗಿದ್ದವರು. ಅಲ್ಲಿಂದ ಈ ಟ್ರ್ಯಾಕ್ಟರ್ಗೂ ಎತ್ತಿನಗಾಡಿಯ ಕಬ್ಬಿಣದ ವೀಲ್ ಮಾಡಿಫೈ ಮಾಡಿ ಟ್ರ್ಯಾಕ್ಟರ್ ಅಳವಡಿಸಿ ತಮಗೆ ಬೇಕಾದಂತೆ ಅದನ್ನ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ನೋಡಿ ಅದ್ರ ಹಿಂದೊಂದು ಟ್ಯಾಂಕ್ ಕೂರಿಸಿ ಅಲ್ಲಿಂದಲೇ ಸ್ಪ್ರಿಂಕ್ಲರ್ಗಳಾಗಿಸಿ ಸಸಿಗಳಿಗೆ ನೀರುಣಿಸುತ್ತಾರೆ. ಇನ್ನೇನು ಎಡೆಕುಂಟೆ ತೆಗೀಬೇಕಾ? ಅದಕ್ಕೂ ರೆಡಿಯಾಗಿರುತ್ತೆ ಈ ಟ್ರ್ಯಾಕ್ಟರ್.
ಇದನ್ನೂ ಓದಿ: Dharwad News: ಆಂಜನೇಯನ ದೇಗುಲದಲ್ಲಿ ಎಕ್ಕೆ ಹೂವಿನ ಸ್ವಾಗತ, ಸುವಾಸನೆ ಇಲ್ದಿದ್ರೂ ಇದೆ ಸಖತ್ ಸಂಪಾದನೆ!
ಹೀಗೆ ಬಂತು ಐಡಿಯಾ!
ಹುಬ್ಬಳಿಯ ತಾರಿಹಾಳ್ ಇಂಡಸ್ಟ್ರೀಯಲ್ ಏರಿಯಾದಲ್ಲಿ ರವಿಕುಮಾರ್ ಅವರ ವಜ್ರೇಶ್ವರಿ ಇಂಜಿನಿಯರಿಂಗ್ ವರ್ಕ್ಸ್ ಎಂಬ ಫ್ಯಾಕ್ಟರಿ ಇದೆ. ಅಲ್ಲಿ ಒಬ್ಬರು ರೈತರು ತಮ್ಮ ಫಸಲಿಗೆ ದಪ್ಪ ಗಾಲಿಗಳ ಟ್ರ್ಯಾಕ್ಟರ್ನಿಂದ ಆಗುವ ಹಾನಿ ಬಗ್ಗೆ ಚರ್ಚಿಸಲು ಬರುತ್ತಾರೆ. ಆಗಲೇ ಎತ್ತಿನ ಗಾಡಿಯ ಗಾಲಿ ಬಳಸಿದ್ರೆ ಹೇಗೆ ಅಂದ್ಕೊಂಡವರೇ ಅದನ್ನ ಕಾರ್ಯ ರೂಪಕ್ಕೆ ತಂದಿದ್ದಾರೆ.
ಎಡೆಕುಂಟೆಗೂ ಪರಿಹಾರ!
4 ಇಂಚಿನ ಗಾಲಿಗಳೊಂದಿಗೆ ಟ್ರಕ್ ಲೋಡ್ ಸಾಮರ್ಥ್ಯವನ್ನು ಕಾಯ್ದುಕೊಳ್ಳುವ ಬಟನ್ ಗಳನ್ನು ಅಳವಡಿಸಿದ್ದಾರೆ. ಹೀಗಾಗಿ 4 ಟನ್ ನಷ್ಟು ತೂಕವನ್ನು ಇದು ತಡೆದುಕೊಳ್ಳುತ್ತದೆ. ಮತ್ತು ಇದಿಷ್ಟೇ ಅಲ್ಲದೇ ಒಂದೇ ದಿನದಲ್ಲಿ 25 ಎಕರೆಯಷ್ಟು ಎಡೆಕುಂಟೆಯನ್ನು ಹಾಗೂ 50 ಎಕರೆಯಷ್ಟು ವಿಶಾಲವಾದ ಹೊಲಕ್ಕೆ ಒಂದೇ ದಿನದಲ್ಲಿ ನೀರು ಸಿಂಪಡಣೆ ಮಾಡುತ್ತವೆ ಅನ್ನೋದು ವಿಶೇಷ.
ಇದನ್ನೂ ಓದಿ: Dharwad: ಧಾರವಾಡ ಪೇಡೆಯ ಟೇಸ್ಟ್ ಹಿಂದಿರೋದು ಈ ಎಮ್ಮೆ ಕಣ್ರೀ!
ರವಿಕುಮಾರ್ ಸಂಪರ್ಕಿಸಿ
ಸಣ್ಣ ಟ್ರ್ಯಾಕ್ಟರ್ನಿಂದ ಹಿಡಿದು ದೊಡ್ಡ ಟ್ರ್ಯಾಕ್ಟರ್ವರೆಗೆ ಎಲ್ಲದಕ್ಕೂ ಈ ಚಕ್ರ ಜೋಡಿಸಿಕೊಳ್ಳಬಹುದು. ಎಂತದೇ ಕಠಿಣ ಮಾರ್ಗದಲ್ಲೂ ಇವು ಸಂಚಾರ ನಡೆಸುತ್ತವೆ. ಇಬ್ಬರೇ ವರ್ಕರ್ಸ್ ಇದ್ದರೆ ಸಾಕು ಹತ್ತು ಆಳು ಮಾಡುವ ಕೆಲಸವನ್ನು ಒಂದೇ ದಿನದಲ್ಲಿ ಮಾಡಿ ಮುಗಿಸುತ್ತವೆ. ನೀವೂ ಸಹ ಈ ರೀತಿ ಮಾಡಿಫಿಕೇಶನ್ ಅನ್ನು ಒಪ್ಪಿಕೊಂಡು ಹೊಲ ಊಳಲು ತಯಾರಾಗಿದ್ದರೆ 63631 42955 ಈ ನಂಬರನ್ನು ಸಂಪರ್ಕಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ