• Home
  • »
  • News
  • »
  • state
  • »
  • Hubballi Riots: ಆಡಿಯೋ ಶೇರ್ ಮಾಡಿ, ಅಡಗಿ ಕುಳಿತವರೂ ಈಗ ಅಂದರ್! ಮತ್ತಷ್ಟು ಆರೋಪಿಗಳಿಗೆ ಶುರುವಾಗಿದೆ ನಡುಕ

Hubballi Riots: ಆಡಿಯೋ ಶೇರ್ ಮಾಡಿ, ಅಡಗಿ ಕುಳಿತವರೂ ಈಗ ಅಂದರ್! ಮತ್ತಷ್ಟು ಆರೋಪಿಗಳಿಗೆ ಶುರುವಾಗಿದೆ ನಡುಕ

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ

ಸೈಬರ್ ಕ್ರೈಂ ಹಾಗೂ ಐಟಿ ತಂತ್ರಜ್ಞರ ಸಹಾಯದಿಂದ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರ ತಂಡ ರಚನೆ ಮಾಡಿದ್ದು, ಹತ್ತಕ್ಕೂ ಅಧಿಕ ವಾಟ್ಸಾಪ್ ಗ್ರೂಪ್‌ ಅಡ್ಮಿನ್‌ಗಳು, ಆಡಿಯೋ ಹಾಗೂ ಸಂದೇಶ ರವಾನಿಸಿದವರನ್ನು ಪತ್ತೆ ಮಾಡಿದ್ದಾರೆ. ಹಲವರನ್ನು ಬಂಧಿಸಿದ್ದು, ಇನ್ನೂ ಹಲವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮುಂದೆ ಓದಿ ...
  • Share this:

ಹುಬ್ಬಳ್ಳಿ: ಹಳೆ ಹುಬ್ಬಳ್ಳಿ (Old Hubballi) ಗಲಭೆ (Riots) ಪ್ರಕರಣದ (Case) ಬೆನ್ನು ಹತ್ತಿರೋ ಪೊಲೀಸರು (Police), ವಿವಿಧ ಮಗ್ಗಲುಗಳಲ್ಲಿ ತನಿಖೆ (Enquiry) ನಡೆಸುತ್ತಿದ್ದಾರೆ. ಆಡಿಯೋ ಶೇರ್ (Audia Share) ಮಾಡಿ ಅಡಗಿಕೊಂಡಿದ್ದವರನ್ನೂ ಕಂಬಿ ಎಣಿಸುವಂತೆ ಮಾಡಿದ್ದಾರೆ. ನಾವು ಬಚಾವ್ ಆಗಿಬಿಟ್ಟವೆ ಎಂದುಕೊಂಡವರಿಗೂ ಹುಬ್ಬಳ್ಳಿ ಪೊಲೀಸರು ಭೀತಿ ಹುಟ್ಟಿಸಿದ್ದಾರೆ. ಸಾಮಾಜಿಕ ಜಾಲತಾಣಗಳ (Social Media) ಮೂಲಕ ಗಲಭೆಗೆ ಪ್ರಚೋದನೆ ನೀಡಿದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ವಿವಿಧ ವಾಟ್ಸ್ ಆ್ಯಪ್ ಗ್ರೂಪ್‌ಗಳ (WhatsApp Group) ಮೂಲಕ ಕೆಲವರು ಪ್ರಚೋದನಾತ್ಮಕ ಅಡಿಯೋ, ಸಂದೇಶಗಳನ್ನು ರವಾನಿಸಿದ್ದ ಆರೋಪ ಹೊತ್ತಿದ್ದವರು. ಇಂತವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ, ತಪ್ಪು ಮಾಡಿದವರನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.


ವಾಟ್ಸಾಪ್ ಗ್ರೂಪ್‌ಗಳಲ್ಲಿ ಗಲಭೆಗೆ ಕುಮ್ಮಕ್ಕು


ಅವಹೇಳನಾಕಾರಿ ಸ್ಟೇಟಸ್ ಇಟ್ಟಿದ್ದ ಅಭಿಷೇಕ ಹಿರೇಮಠನ ವಿರುದ್ಧ ಕೆಲವರು ಕಿಡಿ ಕಾರಿದ್ದರು. ಠಾಣೆ ಬಳಿ ಅವನನ್ನು ಕರೆತಂದಿದ್ದಾರೆ, ಆತನನ್ನು ಮುಗಿಸಿ ಬಿಡೋಣ ಬನ್ನಿ ಎಂಬ ಸಂದೇಶವನ್ನು ಕೆಲ ಕಿಡಿಗೇಡಿಗಳು ರವಾನಿಸಿದ್ದರು. ಅವಹೇಳನಕಾರಿ ಪೋಸ್ಟ್ ಹಾಕಿದ್ದ ಅಭಿಷೇಕನ ವಿರುದ್ಧ ಕಿಡಿಗೇಡಿಗಳು ಸಂದೇಶಗಳಲ್ಲಿ ಆಕ್ರೋಶ ಹೊರಹಾಕಿದ್ದರು. ಪೊಲೀಸ್ ಠಾಣೆ ಎದುರು ಜನ ಸೇರಿಸಲು ಆರೋಪಿಗಳು ವಾಟ್ಸ್‌ಆ್ಯಪ್ ಗ್ರುಪ್‌ಗಳನ್ನು ಬಳಸಿಕೊಂಡಿದ್ದರು.


ಗಲಭೆ ಸಂದೇಶ ಕಳಿಸಿದವರಿಗೆ ಟೆನ್ಶನ್


ಸೈಬರ್ ಕ್ರೈಂ ಹಾಗೂ ಐಟಿ ತಂತ್ರಜ್ಞರ ಸಹಾಯದಿಂದ ಇಂಥವರ ಪತ್ತೆಗಾಗಿ ಪೊಲೀಸರ ತಂಡ ರಚನೆ ಮಾಡಿದ್ದು, ಹತ್ತಕ್ಕೂ ಅಧಿಕ ವಾಟ್ಸ್ ಆ್ಯಪ್ ಗ್ರೂಪ್‌ ಅಡ್ಮಿನ್‌ಗಳು, ಆಡಿಯೋ ಹಾಗೂ ಸಂದೇಶ ರವಾನಿಸಿದವರನ್ನು ಪತ್ತೆ ಮಾಡಿದ್ದಾರೆ. ಹಲವರನ್ನು ಬಂಧಿಸಿದ್ದು, ಇನ್ನೂ ಹಲವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


ಪೊಲೀಸ್ ಠಾಣಿ ಎದುರು ಜಮಾಯಿಸಿದ್ದ ಸಾವಿರಾರು ಜನ ಅಭಿಷೇಕನನ್ನು ನಮಗೆ ಒಪ್ಪಿಸಿ ಎಂದು ಆಗ್ರಹಿಸಿ, ನಂತರ ದಾಂಧಲೆ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ವೀಡಿಯೋ ದೃಶ್ಯಗಳಲ್ಲಿ ಕಂಡವರ ಜೊತೆಗೆ, ಸಾಮಾಜಿಕ ಜಾಲ ತಾಣದಲ್ಲಿ ಸಂದೇಶಗಳನ್ನು ರವಾನಿಸಿ ಗಲಭೆಗೆ ಪ್ರಚೋದರೆ ನೀಡಿದವರ ಹೆಡೆಮುರಿಗೆ ಕಟ್ಟುವಲ್ಲಿ ಪೊಲೀಸರು ನಿರತರಾಗಿದ್ದಾರೆ.


ಇದನ್ನೂ ಓದಿ: Acid Attack Case: 6 ದಿನ ಕಳೆದ್ರೂ ಸಿಗ್ತಿಲ್ಲ ಆ್ಯಸಿಡ್ ನಾಗ; ಆರೋಪಿ ಪತ್ತೆಗೆ ಪೊಲೀಸರಿಂದ ಹಳೆ ಸ್ಟೈಲ್​ನಲ್ಲಿ ಹೊಸ ಪ್ಲಾನ್


ಯಾರನ್ನೂ ಬಿಡೋ ಪ್ರಶ್ನೆಯೇ ಇಲ್ಲ


ಪ್ರಚೋದನೆ ಕೊಟ್ಟವರು, ಭಾಗಿಯಾದವರನ್ನು ಬಿಡೋ ಪ್ರಶ್ನೆಯೇ ಇಲ್ಲ. ಗೂಂಡಾ ಕಾಯ್ದೆ ಸೇರಿ ವಿವಿಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ತಿದ್ದೇವೆ ಎಂದು ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ಲಾಭೂ ರಾಮ್ ಎಚ್ಚರಿಕೆ ಕೊಟ್ಟಿದ್ದಾರೆ. ಮೊಬೈಲ್ ಬಳಕೆಯಿಂದಲೇ ಎಲ್ಲವನ್ನೂ ಕಂಟ್ರೋಲ್‌ ಮಾಡ್ತಿನಿ ಎಂದುಕೊಂಡಿದ್ದವರಿಗೆ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಿದೆ.


ಪೊಲೀಸ್ ಕಸ್ಟಡಿಯಲ್ಲಿದ್ದವರು ಮತ್ತೆ ನ್ಯಾಯಾಂಗ ವಶಕ್ಕೆ


ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮತ್ತೆ  ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ವಿಚಾರಣೆಗಾಗಿ ಪೊಲೀಸರು ಮೂವರು ಆರೋಪಿಗಳನ್ನು ಐದು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಎ.ಐ.ಎಂ.ಐ.ಎಂ. ಕಾರ್ಪೊರೇಟರ್ ನಜೀರ್ ಅಹ್ಮದ್ ಹೊನ್ನಾಳ, ಮಹ್ಮದ್ ಆರೀಫ್ ನಾಗರಾಳ ಹಾಗೂ ಮಹ್ಮದ್ ಅಜರ್ ನನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದರು. ಈ ವೇಳೆ ಮಹ್ಮದ್ ಆರೀಫ್ ಟರ್ಪಂಟೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಕಿಮ್ಸ್ ಆಸ್ಪತ್ರೆಗೆ ಆತನನ್ನು ದಾಖಲು ಮಾಡಲಾಗಿತ್ತು.


ಇದನ್ನೂ ಓದಿ: Mother Murder: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಂದ ಕ್ರೂರಿ ಮಗ


ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಮಹ್ಮದ್ ಆರೀಫ್, ನಜೀರ್ ಹೊನ್ನಾಳ ಸೇರಿ ಮುವ್ವರು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ವೀಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದರು. ರಂಜಾನ್ ಹಬ್ಬದ ನಂತರ ಗಲಭೆಗೆ ಸಂಬಂಧಿಸಿ ಮತ್ತಷ್ಟು ಆರೋಪಿಗಳನ್ನು ಬಂಧಿಸೋ ಸಾಧ್ಯತೆಗಳಿವೆ.

Published by:Annappa Achari
First published: