Hubballi Riots: ಎಐಎಂಐಎಂ ಕಾರ್ಪೊರೇಟರ್ ನಜೀರ್ ಬಂಧನ - ವಸೀಂ ಪಠಾಣ್ ಗೆ ಮುಂದುವರಿದ ಡ್ರಿಲ್

ನಜೀರ್ ಅಹ್ಮದ್ ಜೊತೆ ಪ್ರಕಣದ ಮತ್ತೊಬ್ಬ ಮಾಸ್ಟರ್ ಮೈಂಡ್ ಎಐಎಂಐಎಂ ಮುಖಂಡ ಮಹಮ್ಮದ್ ಆರೀಫನನ್ನೂ ಕೂಡಾ ಪೊಲೀಸರು ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋದರು. ಇಬ್ಬರಿಗೂ ಕಿಮ್ಸ್ ನಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಯಿತು.

ಕಾರ್ಪೋರೇಟರ್ ನಜೀರ್ ಮತ್ತು ವಸೀಂ

ಕಾರ್ಪೋರೇಟರ್ ನಜೀರ್ ಮತ್ತು ವಸೀಂ

  • Share this:
ಹುಬ್ಬಳ್ಳಿ - ಹುಬ್ಬಳ್ಳಿ ಗಲಭೆ  (Hubballi Riots)ತನಿಖೆ ತೀವ್ರಗೊಂಡಿದ್ದು, ಗಲಭೆಗೆ ಸಂಬಂಧಿಸಿ ಬಂಧನಗಳು ಮುಂದುವರೆದಿವೆ. ಕೊನೆಗೂ ಎಐಎಂಐಎಂ ಕಾರ್ಪೊರೇಟರ್ (AIMIM corporator) ನಜೀರ್ ಅಹ್ಮದ್ ಹೊನ್ಯಾಳ (Nazeer Ahmad Honyala) ಅರೆಸ್ಟ್ (Arrest) ಆಗಿದ್ದಾನೆ. ಮನೆಯಲ್ಲಿದ್ದ ನಜೀರ್ ಅಹ್ಮದ್ ಹೊನ್ಯಾಳನನ್ನು ವಶಕ್ಕೆ ಪಡೆದ ಪೊಲೀಸರು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ (Hale Hubballi Police Station) ವಿಚಾರಣೆ ನಡೆಸಿದರು. ಮೊಬೈಲ್ ಸಂದೇಶ (Mobile Message) ಇತ್ಯಾದಿಗಳನ್ನು ಪರಿಶೀಲಿಸಿದ ಪೊಲೀಸರು, ನಜೀರ್ ನನ್ನು ಬಂಧಿಸಿ ಆರೋಗ್ಯ ತಪಾಸಣೆಗೆ  ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ (KIMS Hospital) ಕರೆದೊಯ್ದರು.

ಶನಿವಾರ ಮಧ್ಯಾಹ್ನ ವಶಕ್ಕೆ ಪಡೆದಿದ್ದ ಖಾಕಿ ಪಡೆ, ತೀವ್ರ ವಿಚಾರಣೆ ನಡೆಸಿತ್ತು. ವಿಚಾರಣೆಯಲ್ಲಿ ನಜೀರ್ ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಆತನನ್ನ ಬಂಧಿಸಿದ ಪೊಲೀಸರು, ಆರೋಗ್ಯ ತಪಾಸಣೆಗೆ ಕರೆದೊಯ್ದರು. ಆರೋಗ್ಯ ತಪಾಸಣೆ ಹೊಗುವಾಗ, ನಜೀರ್ ಅಹ್ಮದ್ ಹೊನ್ಯಾಳ್ ತಮ್ಮ ಆಪ್ತರ ಬಳಿ ವಾಚ್ ಹಾಗೂ ಪರ್ಸ್ ಕೊಟ್ಟು ಹೋದರು.

ನಜೀರ್ ಅಹ್ಮದ್ ಜೊತೆ ಪ್ರಕಣದ ಮತ್ತೊಬ್ಬ ಮಾಸ್ಟರ್ ಮೈಂಡ್ ಎಐಎಂಐಎಂ ಮುಖಂಡ ಮಹಮ್ಮದ್ ಆರೀಫನನ್ನೂ ಕೂಡಾ ಪೊಲೀಸರು ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋದರು. ಇಬ್ಬರಿಗೂ ಕಿಮ್ಸ್ ನಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಯಿತು.

ಮತ್ತೊಂದೆಡೆ ಆರೋಪಿ ವಸೀಂ ಪಠಾಣ್ ಹಾಗೂ ತುಫೇಲ್ ಮುಲ್ಲಾ, ತೌಫಿಕ್ ಇರಕಲ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಿಮ್ಸ್ ನಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಮತ್ತೆ ಹಳೆ ಹುಬ್ಬಳ್ಳಿ ಠಾಣೆಗೆ ಕರೆತಂದು ವಿಚಾರಣೆ ಮುಂದುವರಿಸಲಾಯಿತು. ವಸೀಂ ಪಠಾಣ್ ಮತ್ತಿತರರನ್ನು ಐದು ದಿನಗಳ ಕಾಲ ಕಷ್ಟಡಿಗೆ ಪಡೆದಿರೋ ಪೊಲೀಸರು, ವಿಚಾರಣೆ ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ:  Chikkamagaluru: ಕಾಫಿ ಎಸ್ಟೇಟ್​ನಲ್ಲಿ ಹೆಜ್ಜೇನು ದಾಳಿ; ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಬೋಜೇಗೌಡ ನಿಧನ

ಮಾಸ್ಟರ್ ಮೈಂಡ್ ನಾನಲ್ಲ ಎನ್ನುತ್ತಿರೋ ವಸೀಂ...!

ಹುಬ್ಬಳ್ಳಿಯ ಗಲಭೆ‌ ಪ್ರಕರಣದ ಮಾಸ್ಟರ್ ಮೈಂಡ್ ಗಳನ್ನ ಖಾಕಿ ಪಡೆ ಕಳೆದ ರಾತ್ರಿಯಿಂದಲೇ ತೀವ್ರ ವಿಚಾರಣೆ ನಡೆಸುತ್ತಿದೆ. ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಮೂವರ ವಿಚಾರಣೆ ಮುಂದುವರಿಸಲಾಗಿದೆ.

ವಸೀಂ ಪಠಾಣ್ ಹಾಗೂ ತುಫೇಲ್ ಮುಲ್ಲಾ, ತೌಫಿಕ್ ಇರಕಲ್ ರ ವಿಚಾರಣೆ ತೀವ್ರಗೊಳಿಸಲಾಗಿದೆ. ಐದು ದಿನಗಳ ಕಾಲ ವಾಸೀಂ ಪಠಾಣ್ ಹಾಗೂ ತೌಫೀಕ್, ತುಫೇಲ್ ನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮುಂದುವರಿಸಲಾಗಿದೆ.

ವಸೀಂ ಪಠಾಣ್ ಹಳೇ ಹುಬ್ಬಳ್ಳಿಯ ಗಲಭೆಯ ಮಾಸ್ಟರ್ ಮೈಂಡ್ ಎಂದೇ ಬಿಂಬಿತಗೊಂಡಿದ್ದಾನೆ. ಆದರೆ ವಿಚಾರಣೆ ವೇಳೆ ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ವಾಟ್ಸಪ್ ಗ್ರೂಫ್ ರಚಿಸಿದ್ದು ನಿಜ, ಜನರನ್ನ ಸೇರಿಸಿದ್ದು ಸತ್ಯ. ಆದ್ರೆ ಕಲ್ಲೂ ತೂರಾಟ ಮಾಡಿಸಿದ್ದು ನಾನಲ್ಲ ಎಂದು ಪೊಲೀಸ್ ವಿಚಾರಣೆ ವೇಳೆ ವಸೀಂ ಪಠಾಣ್‌ ಬಾಯ್ಬಿಟ್ಟಿದ್ದಾನೆ.

ಈ ಪ್ರಕರಣದಲ್ಲಿ ನನ್ನನ್ನ ಬಲಿ ತೆಗೆದುಕೊಂಡಿದ್ದಾರೆ. ನನ್ನನ್ನ ಬೇಕು ಅಂತಲೇ ಈ ಗಲಭೆ ಪ್ರಕರಣದಲ್ಲಿ ಸಿಕ್ಕಿಸುವ ಕೆಲಸ‌ ಮಾಡಿದ್ದಾರೆ. ನನಗೆ ಈ ಹಂತಕ್ಕೆ ತಂದವರಿಗೆ ನಾನು ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಪೊಲೀಸರ ಮುಂದೆ ಪಠಾಣ್ ಅಲವತ್ತುಕೊಂಡಿದ್ದಾನೆ.

ವಿಚಾರಣೆ ವೇಳೆ ಕಣ್ಣೀರು ಹಾಕಿರೋ ತುಫೇಲ್ ಮುಲ್ಲಾ

ವಸೀಂ ಕಥೆ ಈ ರೀತಿ ಆದ್ರೆ ತುಫೆಲ್ ಕತೆನೇ ಬೇರೆಯಾಗಿದೆ. ವಾಸೀಂ ಜೊತೆಗೆ ತುಫೆಲ್ ಐದು‌ ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಪೊಲೀಸ್ ವಿಚಾರಣೆ ವೇಳೆ ತುಫೇಲ್ ಕಣ್ಣಿರು ಹಾಕಿದ್ದಾನೆ. ಅಲ್ಲದೇ ನನಗೆ ಈ ಪರಿಸ್ಥಿತಿ ಬರಲು ವಸೀಂ ಪಠಾಣ್ ಕಾರಣ ಎಂದು ತುಫೇಲ್ ದೂರಿದ್ದಾನೆ.

ಇದನ್ನೂ ಓದಿ:  Azan: ಬೆಂಗಳೂರಿನ 300 ಮಸೀದಿಗಳಿಗೆ ನೋಟಿಸ್

ನೀನು ಗಲಭೆ ಆದ ದಿನವೇ ಪೊಲೀಸರ ಮುಂದೆ ಸರೆಂಡರ್‌ ಆಗಬೇಕಿತ್ತು. ನೀನು ಬಂದು ಸರೆಂಡರ್‌ ಆಗಿದ್ದರೆ  ನಾವು ಈಗ ಪೊಲೀಸ್ ಠಾಣೆ ಬರುವ ಮಾತೆ ಇರಲಿಲ್ಲ. ನಾವು ಈಗ ಪೊಲೀಸ್ ಕಸ್ಟಡಿಯಲ್ಲಿ ಇರುತ್ತಿರಲಿಲ್ಲ. ನಿನ್ನಿಂದ ನನಗೆ ಸ್ಥಿತಿ ಬಂದಿದೆ ಎಂದು ತುಫೇಲ್ ಕಣ್ಣೀರು ಹಾಕಿದ್ದಾನೆ ಎನ್ನಲಾಗಿದೆ.
Published by:Mahmadrafik K
First published: