Hubballi Bone Treatment: ಎಲ್ಲರ ಮೂಳೆಗೂ ಇಲ್ಲಿದೆ ಮದ್ದು! ಹಣ ಪಾವತಿಸಬೇಕಂತಾನೂ ಇಲ್ಲ!

ಎಳೆಗೂಸಿಂದ ಹಿಡ್ದು ಹಳೇ ಮುದ್ಕನ ತನಕ ಎಲ್ಲರ ಎಲುಬನ್ನ ಸರಿ ಮಾಡಿ ತಿದ್ದಿ ಕೊಡೋದೆ ಇವರ ಕಾಯಕ! ನಿಮಗೂ ಎಲುಬು ನೋವಿದ್ರೆ ಈಗಲೇ ಈ ವಿಡಿಯೋ ನೋಡಿ

ಎಲುಬು ನೋವು ನಿಮಗೂ ಇದೆಯೇ?

"ಎಲುಬು ನೋವು ನಿಮಗೂ ಇದೆಯೇ?"

 • Share this:
  ಸ್ನೇಹಿತರೇ ಒಮ್ಮೊಮ್ಮೆ ನಮ್ಮ ಆರೋಗ್ಯ ಯಾವ ರೀತಿ ತೊಂದ್ರೆ ಕೊಡುತ್ತೆ ಅಂದ್ರೆ ಅದು ಯಾವುದೇ ಮೆಡಿಸಿನ್ ಗೂ ಒಗ್ಗಲ್ಲ, ಮತ್ತೆ ಸುಖಾ ಸುಮ್ನೆ ಖರ್ಚೂ ಕೂಡ ಆಗ್ತಿರುತ್ತೆ. ಈಗಿನ ಎಲ್ಲಾ ಖಾಯಿಲೆಗಳ ಹಣೆ ಬರಹನೇ ಹೀಗಲ್ವಾ? ಆಗೆಲ್ಲ ನಮ್ಮಜ್ಜಿ ಕಷಾಯ ಮಾಡ್ಕೊಟ್ಟು ನಾವ್ಗಳು ಕುಡಿದು ಜಿಗಿದು ನಿಂತಾಗ ಇದ್ದಿದ್ ಇಮ್ಯೂನಿಟಿ ಈಗ ಹತ್ತು ಡೋಲೋ ತಗೊಂಡ್ರೂ ಸಿಗೋಲ್ಲ. ಈಗ ಅಂತದ್ದೇ ಒಂದು ಕಥೆನ ಹೇಳ್ತೀವಿ ಬನ್ನಿ! ಹುಬ್ಬಳಿ (Hubballi) ಗೊತ್ತಲ್ವಾ? ಹುಬ್ಬಳ್ಳಿಯ ಪುಣೆ-ಬೆಂಗಳೂರು (Pune-Bengaluru Road) ರೋಡ್ ಫ್ಲೈ ಓವರ್ ನ ಕೆಳಗೆ ಒಂದು ಪುಟ್ಟ ಊರಿದೆ ಊರ ಹೆಸರು "ರಾಮನಕೊಪ್ಪ" (Ramanakoppa) ಅಂತ.

  ಈ ಊರಿನ ವಿಶೇಷತೆ ಏನು ಅಂತ ಕೇಳ್ತೀರ? ಇಲ್ಲಿ ನಿಮ್ಮ ಎಲುಬು-ಕೀಲು ಹಾಗೂ ನರ ಸಂಬಂಧಿ ಎಲ್ಲಾ ಖಾಯಿಲೆಗೂ ಔಷಧಿ ಸಿಗುತ್ತೆ ಪ್ಲಸ್ ಅದಕ್ಕೆ ಸರಿಯಾದ ಚಿಕಿತ್ಸೆ ಕೂಡ! ಆಡಾಡ್ತಾ ಬಿದ್ರೋ, ಅಡ್ವೆಂಚರ್ ಮಾಡೋಕ್ಹೋಗಿ ಬಿದ್ರೋ, ಅಡುಗೆ ಮನೇಲ್ ಬಿದ್ರೋ ಅಥವಾ ಅಟ್ಟ ಏರೋಕ್ ಹೋಗಿ ಬಿದ್ರೋ ಅದೆಲ್ಲ ಏನೇ ಇದ್ರೂ ನಿಮ್ಮ ಮಾತನ್ನ ಚೂರು ಕೇಳದ 206 ಎಲುಬುಗಳು ಇವರ ಕೈಗಳ ಮಾತನ್ನ ಚೆನ್ನಾಗಿ ಕೇಳ್ತಾವೆ.

  ಇವರ ಸಂಪರ್ಕ ಸಂಖ್ಯೆ: 9663220351

  ಎಳೆಗೂಸಿಂದ ಹಿಡ್ದು ಹಳೇ ಮುದ್ಕನ ತನಕ ತನಕ ಚಿಕಿತ್ಸೆ
  ಇವರ ಹೆಸರು ಸಿದ್ದಪ್ಪ ಅಂತ ಕಾಡಸಿದ್ದೇಶ್ವರ ಮಠದಲ್ಲಿ ಅವರ ಅಪ್ಪನವರು ಕಲಿತ ಈ ಎಲುಬು ಜೋಡಣೆ ವಿಜ್ಞಾನ ಇವರಿಗೆ ರಕ್ತದಲ್ಲಿಯೇ ಬಂದಿದೆ ಜೊತೆಗೆ ಮಗ ಶಿವಾಜಿಗೂ ಕೂಡ, ಇಲ್ಲಿ ದಿನ ಐವತ್ತಕ್ಕೂ ಹೆಚ್ಚು ಜನ ಚಿಕಿತ್ಸೆಗಾಗಿ ಬರ್ತಾರೆ, ಎಳೆಗೂಸಿಂದ ಹಿಡ್ದು ಹಳೇ ಮುದ್ಕನ ತನಕ ಎಲ್ಲರ ಎಲುಬನ್ನ ಸರಿ ಮಾಡಿ ತಿದ್ದಿ ಕೊಡೋದೆ ಇವರ ಕಾಯಕ! ಇವರು ಈ ಕೆಲಸ ಶುರು ಮಾಡಿ ಅರ್ಧ ಶತಮಾನನೇ ಕಳೀತು ಇನ್ನು ಇವರ ಮಗ ವಿದ್ಯಾಭ್ಯಾಸ ಮುಗ್ಸಿ ಇವರದೇ ಕಸುಬನ್ನ ಮುಂದುವರೆಸಿದಾರೆ.

  ಇದನ್ನೂ ಓದಿ: Tibetan Camp: ಉತ್ತರ ಕನ್ನಡದ ಮಿನಿ ಟಿಬೆಟ್! ಒಳಗೆ ಏನೇನಿದೆ? ವೀಡಿಯೋ ನೋಡಿ

  ನಿಮ್ಮ ಪ್ರೈಮ್ ಸಬ್ಸ್ಕ್ರಿಪ್ಷನ್ ಗಿಂತ ಕಮ್ಮಿ
  ಇದಕ್ಕೆಲ್ಲ ಖರ್ಚು ಎಷ್ಟು ಅಂತೀರಾ ನಿಮ್ಮ ಪ್ರೈಮ್ ಸಬ್ಸ್ಕ್ರಿಪ್ಷನ್ ಗಿಂತ ಕಮ್ಮಿ ಕೇವಲ 200 ರೂಪಾಯಿಯಲ್ಲಿ ಚಿಕಿತ್ಸೆ ನೀಡಿ ಉಳಿದ ಹಾಗೆ ಮುರಿದ ಎಲುಬು ಗಟ್ಟಿ ಆಗೋಕೆ ಆಯುರ್ವೇದಿಕ್ ಮೂಲಿಕೆಗಳಿಂದ ಕೂಡಿದ ಹಸಿರು ಬಣ್ಣದ ಪುಡಿಯೊಂದನ್ನ ಕೊಡ್ತಾರೆ ಅದನ್ನ ಕುರಿ ಹಾಲಲ್ಲಿ ತಗೋಳೋದು ಕಡ್ಡಾಯ! ಕೈ ಮುರಿದವರ ಕೈಯಲ್ಲಿ ಕಾಸಿಲ್ಲ ಅಂದ್ರೂ ಪರ್ವಾಗಿಲ್ಲ, ಈ ವ್ಯಕ್ತಿ ಸಿದ್ದಪ್ಪ ಅವರಿಗೂ ಚಿಕಿತ್ಸೆ ಕೊಡ್ತಾರೆ.

  Ramanakoppa
  ರಾಮನಕೊಪ್ಪಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಈ ಚಿಕಿತ್ಸಾಲಯಕ್ಕೆ ಗಾಯತ್ರಿ ಎಲುಬು ಜೋಡಣೆ ಕೇಂದ್ರ ಅಂತ ಹೆಸರು ಪಕ್ಕದ್ಥಲ್ಲೇ ಕಾಡಸಿದ್ದೇಶ್ವರ ಎಲುಬು ಜೋಡಣೆ ಕೇಂದ್ರನೂ ಇದೆ.

  ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

  ಬರೋದು ಹೇಗೆ ಅಂತ ಕೇಳಿದ್ರೆ ಬೆಂಗಳೂರಿಂದ ಸೀದಾ ಹುಬ್ಳಿ ಗೆ ಬರೋ ದಾರಿಲಿ ಫ್ಲೈಓವರ್ ಇದೆಯಲ್ವಾ ಅಲ್ಲೇ ಇಳಿದುಕೊಂಡು ನಡೆದುಕೊಂಡು ಹೋಗಬಹುದು, ಈ ಕಡೆ ಮಂಗ್ಳೂರಿಂದ ಬರ್ತೀರ ಅಂದ್ರೆ ಗಾಯತ್ರಿ ತಪೋಭೂಮಿಯಿಂದ ಒಳಗಡೆ ರಾಮನಕೊಪ್ಪಕ್ಕೆ ದಾರಿಯಿದೆ ಹಾಗೂ ಹೋಗಬಹುದು.

  ಇಂತ ಕಾಯಕ ಮಾಡೋರಿಗೆ ನಮದೊಂದು ನಮನ!

  ವರದಿ: ಎ.ಬಿ.ನಿಖಿಲ್
  Published by:guruganesh bhat
  First published: