ಹುಬ್ಬಳ್ಳಿ: ಒಂದಕ್ಕಿಂತ ಒಂದು ರಣಭಯಂಕರ ಟಗರುಗಳು. ಗುಮ್ಮುತ್ತಾ ಡಿಚ್ಚಿ ಹೊಡೆಯೋಕೆ ರೆಡಿ (Ram Fighting) ಆದಂತಿವೆ ಈ ಪಂಟರ್ಗಳು. ಎಲ್ಲವೂ ಒಂದೇ ಮೈದಾನದಲ್ಲಿ ಹೀಗೆ ಖಡಕ್ ಲುಕ್ ಕೊಡ್ತಿದ್ರೆ ಎಂತವನಿಗೂ ಮೈ ಜುಮ್ ಎನ್ನಬೇಕು. ಟಗರು ಬಂತು ಟಗರು ಅಂತಾ ವ್ಯಾಪಾರಿಗಳು ವ್ಯಾಪಾರ (Ram Market Hubballi) ಶುರು ಮಾಡಿದ್ರೆ, ಗ್ರಾಹಕರು ಮುಗಿ ಬೀಳ್ತಾರೆ.
ಯೆಸ್, ಹೀಗೆ ಗುರಾಯಿಸ್ತಾ ಗುಮ್ಮಿಕ್ಕೋ ಈ ಟಗರುಗಳ ರಾಶಿ ಕಂಡು ಬಂದಿದ್ದು ಹುಬ್ಬಳಿ ಧಾರವಾಡದ ನಡುವೆ ಇರುವ ಭೈರಿದೇವರ ಕೊಪ್ಪದ ಎಪಿಎಂಸಿ ಮಾರ್ಕೆಟ್ನಲ್ಲಿ. ಇದೆಲ್ಲವೂ ಇಲ್ಲಿನ ಪಕ್ಕಾ ಲೋಕಲ್ ಟಗರುಗಳಾಗಿದ್ದು, ಗ್ರಾಹಕರು ಮುಗಿಬಿದ್ದು ಕೊಂಡೊಯ್ದರು. ಇನ್ನು ವ್ಯಾಪಾರ ವಹಿವಾಟು ಸಖತ್ ಆಗಿ ನಡೆಯಿತು. ಗ್ರಾಹಕರು, ವ್ಯಾಪಾರರ ನಡುವಿನ ಚರ್ಚೆಯೂ ಜೋರಾಗಿಯೇ ಇತ್ತು.
ಇದನ್ನೂ ಓದಿ: Viral Photo: ಈ ಅಭ್ಯರ್ಥಿ ನಿಮಗೆ ಮುಖ ತೋರಿಸದೇ ಪ್ರಚಾರ ಮಾಡ್ತಾರೆ!
ಭರ್ಜರಿ ರೇಟು
ಕಿವಿ, ಹಲ್ಲು, ಸಾಮರ್ಥ್ಯ ಹೀಗೆ ಹಲವು ಮಾನದಂಡಗಳು ಟಗರಿನ ವ್ಯಾಪಾರದಲ್ಲಿ ಪಾತ್ರ ವಹಿಸುತ್ತವೆ. ಬಯಲುಸೀಮೆಯಲ್ಲಿ ಟಗರು ಕಾಳಗ ಜಾಸ್ತಿ ನಡೆಯೋದ್ರಿಂದ, ಆಸಕ್ತರು ಟಗರುಗಳನ್ನ ಖರೀದಿಸಿಕೊಂಡರು. ಇನ್ನು ಬಾಡೂಟ, ಮಾರಿ ಹಬ್ಬಕ್ಕೆ ಈ ಟಗರು ಬಲಿಯನ್ನು ಜಾಸ್ತಿ ಜನ ಇಷ್ಟಪಡೋದ್ರಿಂದ ಒಂದೊಂದು ಟಗರುಗಳು ಹತ್ತು ಸಾವಿರದಿಂದ ಲಕ್ಷದವರೆಗೆ ತೂಗುತ್ತವೆ.
ಎರಡು ಸಾವಿರ ಟಗರು ಉಡೀಸ್!
ಹುಬ್ಬಳ್ಳಿ-ಧಾರವಾಡದ ಸುತ್ತ ಅಷ್ಟೂ ಹಳ್ಳಿಗಳಿಂದ ಪ್ರಾಣಿಗಳು ಇಲ್ಲಿ ಮಾರಾಟವಾಗುತ್ತವೆ. ಸಣ್ಣ ಕಿವಿಯ ಟಗರನ್ನು ಸಾಕಿದರೆ, ದೊಡ್ಡ ಕಿವಿಯ ಟಗರುಗಳನ್ನು ಬೇಟೆ, ಬಲಿ ಇತ್ಯಾದಿಗೆ ಉಪಯೋಗಿಸುತ್ತಾರೆ.
ಇದನ್ನೂ ಓದಿ: Vande Bharat Express Train: ಕರ್ನಾಟಕದ ಈ ಮೂರು ನಗರಗಳ ನಡುವೆ 2ನೇ ವಂದೇ ಭಾರತ್
ವಾರಾಂತ್ಯದ ಈ ಮಾರ್ಕೆಟ್ ನಲ್ಲಿ ಒಂದೇ ದಿನದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಟಗರುಗಳು ಮಾರಾಟವಾಗುತ್ತವೆ. ಲಕ್ಷಾಂತರ ರೂಪಾಯಿಯ ವಹಿವಾಟು ಆಗುತ್ತದೆ. ಒಟ್ಟಿನಲ್ಲಿ ಟಗರು ತನ್ನ ಮಾಲೀಕನಿಗೆ ಉತ್ತಮ ಆದಾಯ ತಂದುಕೊಡುವ ಪ್ರಾಣಿಯೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ