• Home
 • »
 • News
 • »
 • state
 • »
 • Hubballi News: ಹುಬ್ಬಳ್ಳಿ ಜನರಿಗೆ ಹಬ್ಬಕ್ಕೆ ಕೊಂಚ ಕಹಿಸುದ್ದಿ

Hubballi News: ಹುಬ್ಬಳ್ಳಿ ಜನರಿಗೆ ಹಬ್ಬಕ್ಕೆ ಕೊಂಚ ಕಹಿಸುದ್ದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಕ್ಟೋಬರ್ 21 ರಿಂದ ಶುರುವಾಗಿರುವ ಈ ಬೆಲೆ ಏರಿಕೆ  ಅಕ್ಟೋಬರ್ 31ರವರೆಗೆ ಜಾರಿಯಲ್ಲಿರಲಿದೆ. 

 • News18 Kannada
 • Last Updated :
 • Hubli-Dharwad (Hubli), India
 • Share this:

  ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರ ಅನುಕೂಲಕ್ಕಾಗಿ ದೀಪಾವಳಿ ಹಬ್ಬಕ್ಕೆ ಭಾರತೀಯ ರೈಲ್ವೆ (Indian Railways) ಹಲವು ವಿಶೇಷ ರೈಲುಗಳನ್ನು ಘೋಷಿಸಿದೆ.  ಆದರೆ ಇದರ ಜೊತೆಯೇ ಕೊಂಚ ಬೇಸರ ಮೂಡಿಸುವ ಸುದ್ದಿಯನ್ನು ಸಹ ಪ್ರಕಟಿಸಿದೆ. ಪ್ರಮುಖ ರೈಲು ನಿಲ್ದಾಣವಾದ ಹುಬ್ಬಳ್ಳಿಯ (Hubballi News) ರೈಲು ನಿಲ್ದಾಣ ಪ್ಲಾಟ್‌ ಫಾರ್ಮ್ ಟಿಕೆಟ್ (Hubballi Railway Platform Ticket Price) ದರಗಳನ್ನು ಭಾರತೀಯ ರೈಲ್ವೇಯು ಏರಿಕೆ ಮಾಡಿದೆ.  ಆದರೆ ಈ ಬೆಲೆ ಏರಿಕೆ ಕೆಲವೇ ದಿನಗಳು ಮಾತ್ರ ಜಾರಿಯಲ್ಲಿರಲಿದೆ. ಅಕ್ಟೋಬರ್ 21 ರಿಂದ ಶುರುವಾಗಿರುವ ಈ ಬೆಲೆ ಏರಿಕೆ  ಅಕ್ಟೋಬರ್ 31ರವರೆಗೆ ಜಾರಿಯಲ್ಲಿರಲಿದೆ.  ಹುಬ್ಬಳ್ಳಿಯ ಪ್ಲಾಟ್​ಫಾರ್ಮ್ ಟಿಕೆಟ್ ದರವನ್ನು 10 ರೂ.ದಿಂದ 20 ರೂ.ಗಳಿಗೆ ಏರಿಕೆ ಮಾಡಲಾಗಿದೆ.


  ಹುಬ್ಬಳ್ಳಿ ರೈಲು ನಿಲ್ದಾಣ ಒಂದೇ ಅಲ್ಲದೇ  ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಹೊಸಪೇಟೆ ಮತ್ತು ವಿಜಯಪುರ ರೈಲು ನಿಲ್ದಾಣಗಳಲ್ಲಿಯೂ ಈ ಬೆಲೆ ಏರಿಕೆ ಜಾರಿಯಲ್ಲಿರಲಿದೆ.


  ಹುಬ್ಬಳ್ಳಿ- ನಿಜಾಮುದ್ದೀನ್ ರೈಲಿಗೆ ಮತ್ತೆ ಚಾಲನೆ
  ಹುಬ್ಬಳ್ಳಿ- ನಿಜಾಮುದ್ದೀನ್ ರೈಲಿಗೆ (Hubballi Nizamuddin Express) ಮತ್ತೆ ಚಾಲನೆ ನೀಡಲಾಗಿದೆ. ಈ ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ಸಂಖ್ಯೆ 20657/ 20658ಯು ಸೂಪರ್ ಫಾಸ್ಟ್ ರೈಲಾಗಿದೆ. ಸದ್ಯ ವಾರಕ್ಕೆ ಒಂದು ಬಾರಿ ಈ ರೈಲು ಸೇವೆ ಒದಗಿಸಲಿದೆ. ಹುಬ್ಬಳ್ಳಿಯಿಂದ  ಪ್ರತಿ ಶುಕ್ರವಾರ ರಾತ್ರಿ 11.50 ಗಂಟೆಗೆ ಈ ರೈಲು ಹೊರಡಲಿದ್ದು ರವಿವಾರ ಬೆಳಗ್ಗೆ 10.40ಕ್ಕೆ ರಾಷ್ಟ ರಾಜಧಾನಿ ದೆಹಲಿಯ ರೈಲು ನಿಲ್ದಾಣವನ್ನು ತಲುಪಲಿದೆ. ಈ ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ಬೆಳಗಾವಿ, ಪುಣೆ, ಅಹಮದ್ ನಗರ, ಇಟಾರ್ಸಿ, ಭೋಪಾಲ್, ಆಗ್ರಾ ನಗರಗಳನ್ನು ಹಾದುಹೋಗಲಿದ್ದು, ಉತ್ತರ ಕರ್ನಾಟಕದ ಜನರಿಗೆ ಉತ್ತರ ಭಾರತವನ್ನು ಸಂಪರ್ಕಿಸಲು ನೆರವಾಗಲಿದೆ. ಅಲ್ಲದೇ ಶಿರಡಿ ಸಾಯಿಬಾಬಾ ಯಾತ್ರಾರ್ಥಿಗಳಿಗೂ ಸಹ ಹುಬ್ಬಳ್ಳಿ-ನಿಜಾಮುದ್ದೀನ್ ರೈಲಿನಿಂದ ಪ್ರಯೋಜನವಾಗಲಿದೆ.


  ಇದನ್ನೂ ಓದಿ: Hubballi News: ವಿಮಾನಕ್ಕಿಂತ ಬಸ್ ಟಿಕೆಟ್ ದರವೇ ಹೆಚ್ಚು! ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟವರಿಗೆ ಶಾಕ್


  ಹುಬ್ಬಳ್ಳಿ- ನಿಜಾಮುದ್ದೀನ್ ರೈಲಿಗೆ ಮತ್ತೆ ಚಾಲನೆ ನೀಡಲಾಗಿದೆ. ಈ ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ಸಂಖ್ಯೆ 20657/ 20658ಯು ಸೂಪರ್ ಫಾಸ್ಟ್ ರೈಲಾಗಿದೆ. ಸದ್ಯ ವಾರಕ್ಕೆ ಒಂದು ಬಾರಿ ಈ ರೈಲು ಸೇವೆ ಒದಗಿಸಲಿದೆ.


  ಎಲ್ಲೆಲ್ಲಿ ನಿಲ್ಲಲಿದೆ ಈ ರೈಲು?
  ಹುಬ್ಬಳ್ಳಿಯಿಂದ ಪ್ರತಿ ಶುಕ್ರವಾರ ರಾತ್ರಿ 11.50 ಗಂಟೆಗೆ ಈ ರೈಲು ಹೊರಡಲಿದ್ದು ರವಿವಾರ ಬೆಳಗ್ಗೆ 10.40ಕ್ಕೆ ರಾಷ್ಟ ರಾಜಧಾನಿ ದೆಹಲಿಯ ರೈಲು ನಿಲ್ದಾಣವನ್ನು ತಲುಪಲಿದೆ. ಈ ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ಬೆಳಗಾವಿ, ಪುಣೆ, ಅಹಮದ್ ನಗರ, ಇಟಾರ್ಸಿ, ಭೋಪಾಲ್, ಆಗ್ರಾ ನಗರಗಳನ್ನು ಹಾದುಹೋಗಲಿದೆ.


  ಉತ್ತರ ಕರ್ನಾಟಕದ ಜನರಿಗೆ ಉತ್ತರ ಭಾರತವನ್ನು ಸಂಪರ್ಕಿಸಲು ನೆರವು
  ಉತ್ತರ ಕರ್ನಾಟಕದ ಜನರಿಗೆ ಉತ್ತರ ಭಾರತವನ್ನು ಸಂಪರ್ಕಿಸಲು ನೆರವಾಗಲಿದೆ. ಅಲ್ಲದೇ ಶಿರಡಿ ಸಾಯಿಬಾಬಾ ಯಾತ್ರಾರ್ಥಿಗಳಿಗೂ ಸಹ ಹುಬ್ಬಳ್ಳಿ-ನಿಜಾಮುದ್ದೀನ್ ರೈಲಿನಿಂದ ಪ್ರಯೋಜನವಾಗಲಿದೆ.


  ಹುಬ್ಬಳ್ಳಿಯಿಂದ ಶಬರಿಮಲೆಗೂ ರೈಲು
  ಅಲ್ಲದೇ ಹುಬ್ಬಳ್ಳಿಯಿಂದ ವಾರಣಾಸಿಗೆ ವಾರಕ್ಕೆ ಎರಡು ಬಾರಿ ರೈಲು ಓಡಿಸಲು ತೀರ್ಮಾನಿಸಲಾಗಿದೆ. ಜೊತೆಗೆ ವಂದೇ ಭಾರತ್ ಟ್ರೈನ್ ಆದಷ್ಟು ಬೇಗ ಹುಬ್ಬಳ್ಳಿ- ಧಾರವಾಡಕ್ಕೆ ಬರಲಿದ ಎಂಬ ಭರವಸೆ ನೀಡಲಾಗಿದೆ. ಶಬರಿಮಲೆ ದರ್ಶನಕ್ಕೆ ಹುಬ್ಬಳ್ಳಿಯಿಂದ ಆದಷ್ಟು ಶೀಘ್ರ ವಿಶೇಷ ರೈಲು ಸೇವೆ ಪ್ರಾರಂಭಿಸಲಿದ್ದೇವೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನೀ ವೈಷ್ಣವ್ ಭರವಸೆ ನೀಡಿದ್ದಾರೆ.


  ಇದನ್ನೂ ಓದಿ: Hubballi News: ದೀಪಾವಳಿ ಹಬ್ಬಕ್ಕೆ KSRTC ಭಾರೀ ಕೊಡುಗೆ!


  ಧಾರವಾಡದಿಂದ ಬೆಂಗಳೂರಿನವರೆಗೂ ವಂದೇ ಭಾರತ್ ರೈಲ್ವೆ
  ಧಾರವಾಡದಿಂದ ಬೆಂಗಳೂರಿನವರೆಗೂ ವಂದೇ ಭಾರತ್ ರೈಲ್ವೆ ಚಾಲನೆಗೆ ಅವಕಾಶ ಕೊಡಲು ಮನವಿ ಮಾಡಲಾಗಿದೆ. ನಿಜಾಮುದ್ದೀನ್ ರೈಲಿನ ಹೆಸರನ್ನು ಸವಾಯಿ ಗಂಧರ್ವ ರೈಲು ಘೋಷಣೆ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಹ ಕೇಂದ್ರ ರೈಲ್ವೇ ಸಚಿವ ಅಶ್ವಿನೀ ವೈಷ್ಣವ್ ಭರವಸೆ ನೀಡಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: