ಹುಬ್ಬಳ್ಳಿ: ಹುಬ್ಬಳ್ಳಿ ಪೊಲೀಸರು ಆಗಾಗ ತಮ್ಮ ಕಾರ್ಯವೈಖರಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಣ್ಣು, ಕಿಡ್ನಿ, ಲಿವರ್ ಅಂಗಾಂಗಗಳನ್ನು ಸಾಗಿಸಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವ ಮೂಲಕ ಹುಬ್ಬಳ್ಳಿ ಪೊಲೀಸರು ಹೀರೋಗಳಾಗಿದ್ದಾರೆ. ಪೊಲೀಸರ ಸಹಕಾರದೊಂದಿಗೆ ಕೇವಲ 10 ನಿಮಿಷದಲ್ಲಿ 16 ಕಿಲೋ ಮೀಟರ್ ದೂರ ವೈದ್ಯರು ಅಂಗಾಂಗಗಳನ್ನು ಸಾಗಿಸಿದ್ದಾರೆ.
ಧಾರವಾಡದ ಎಸ್ ಡಿಎಂ ಆಸ್ಪತ್ರೆಯಲ್ಲಿ ಬ್ರೆನ್ ಡೆಡ್ ಆದ ವ್ಯಕ್ತಿಯು ತನ್ನ ಅಂಗಾಂಗ ದಾನ ಮಾಡುವ ಮೂಲಕ ಸಾವಲ್ಲೂ ಸಾರ್ಥಕಥೆ ಮೆರೆದಿದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದ ಬ್ರೆನ್ ಡೆಡ್ ಆದ ವ್ಯಕ್ತಿಯು ತನ್ನು ಕಣ್ಣು, ಕಿಡ್ನಿ, ಲಿವರ್ ದಾನ ಮಾಡಿದ್ದರು. ಅದೇ ಲಿವರ್ ಅನ್ನು ಇಂದು ಸಂಜೆ ಹುಬ್ಬಳ್ಳಿ - ಧಾರವಾಡ ಪೊಲೀಸರ ಸಹಾಕಾರದೊಂದಿಗೆ ಜಿರೋ ಟ್ರಾಫಿಕ್ ಮೂಲಕ, ಕೇವಲ ಹತ್ತು ನಿಮಿಷದಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವೈದ್ಯರು ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡ ಹುಬ್ಬಳ್ಳಿಯ ಅವಳಿ ನಗರ ರಸ್ತೆ ಮೂಲಕ ನವನಗರ, ಹುಬ್ಬಳ್ಳಿಯ ಹೊಸೂರು ವೃತದಿಂದ, ಗೋಕುಲ್ ರಸ್ತೆ ಮಾರ್ಗವಾಗಿ ಸಾಗಿದ, ಹುಬ್ಬಳ್ಳಿ ಧಾರವಾಡ ಪೊಲೀಸರು ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಿದ್ದಾರೆ. ಧಾರವಾಡ ಎಸ್ಡಿಎಂ ಆಸ್ಪತ್ರೆಯ ವೈದ್ಯರ ಮನವಿ ಮೇರೆಗೆ ಅಂಗಾಂಗ ಬೇಗನೆ ಸಾಗಿಸುವ ಉದೇಶದಿಂದ 16 ಕಿಲೋಮೀಟರ್ ರಸ್ತೆಯಲ್ಲಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆ ಮೂಲಕ ಪೊಲೀಸರು ಅಂಗಾಂಗ ಸಾಗಿಸುವುದಕ್ಕೆ ನೆರವಾಗಿದ್ದಾರೆ.
ಇನ್ನು ವಿಮಾನ ನಿಲ್ದಾಣ ತಲುಪುತ್ತಿದಂತೆ ಲಿವರ್ ಇರುವ ಬಾಕ್ಸ್ ಅನ್ನು ತೆಗೆದುಕೊಂಡ ವೈದ್ಯರು ವಿಮಾನದ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ಪಡೆಯುತ್ತಿದ್ದು, ಲಿವರ್ ಅವಶ್ಯಕತೆ ಮಾಹಿತಿ ಮೇರೆಗೆ ಎಸ್ ಡಿಎಮ್ ಆಸ್ಪತ್ರೆಯ ವೈದ್ಯರು ಬೆಂಗಳೂರಿಗೆ ವಿಮಾನ ಮೂಲಕ ಲಿವರ್ ತೆಗೆದುಕೊಂಡು ತೆರಳಿದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಅಗತ್ಯ ಪೊಲೀಸ್ ಬೆಂಗಾವಲು ಸೇವೆಯನ್ನು ಒದಗಿಸಲಾಯಿತು. ಗ್ರೀನ್ ಕಾರಿಡಾರ್ (ಜೀರೋ ಟ್ರಾಫಿಕ್) ಗೆ ಸಹಕರಿಸಿದ ನಾಗರಿಕರಿಗೆ ಹಾಗೂ ಅಂಗಾಂಗ ಕಸಿ ದಾನ ಮಾಡಿದ ಕುಟುಂಬದವರಿಗೆ ಪೊಲೀಸ್ ಇಲಾಖೆ ಧನ್ಯವಾದ ತಿಳಿಸಿದೆ. ಇದೇ ವೇಳೆ ಪೊಲೀಸರ ಕಾರ್ಯಕ್ಷಮತೆ ಬಗ್ಗೆಯೂ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾದಕ ವಸ್ತುಗಳನ್ನು ನಾಶ ಪಡಿಸಿದ ಪೊಲೀಸರು
ನ್ಯಾಯಾಲಯದ ಆದೇಶದ ಮೇರೆಗೆ 2020-21ರಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ, ಜಪ್ತಿ ಮಾಡಿದ್ದ ಗಾಂಜಾ ಹಾಗೂ ಮಾದಕ ವಸ್ತುಗಳನ್ನ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ ಪೊಲೀಸ್ ಅಧಿಕಾರಿಗಳು ಇಂದು ತಾರಿಹಾಳದ ಹೊರವಲಯದಲ್ಲಿ ನಾಶಪಡಿಸಿದರು.
ಇದನ್ನು ಓದಿ: ಕಾಂಗ್ರೆಸ್ ಬಣ ಜಗಳ; ರಾಜ್ಯ ಉಸ್ತುವಾರಿ ಸುರ್ಜೆವಾಲಾ ಸಭೆಯಿಂದ 15 ನಿಮಿಷದಲ್ಲೇ ಎಕ್ಸಿಟ್ ಆಗಿದ್ದು ಏಕೆ?
ಹುಬ್ಬಳ್ಳಿ- ಧಾರವಾಡ ಕಮೀಷನರೇಟಿನ್ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ, ಪ್ರಕರಣದಲ್ಲಿ 2 ಕ್ವಿಂಟಾಲ್ 34 ಕೆಜಿ 750 ಗ್ರಾಂ ಗಾಂಜಾ ಮತ್ತು ಮಾದಕ ವಸ್ತುಗಳನ್ನ ದಾಳಿ ಮಾಡಿ, ವಶಕ್ಕೆ ಪಡೆಯಲಾಗಿತ್ತು. ಇಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆಯ ಅಂಗವಾಗಿ, ಡಿಸಿಪಿ ಕೆ.ರಾಮರಾಜನ್ ಹಾಗೂ ಡಿಸಿಪಿ ಆರ್.ಬಿ. ಬಸರಗಿ ಸಮ್ಮುಖದಲ್ಲಿ ಮಾದಕ ವಸ್ತುಗಳನ್ನು ನಾಶಪಡಿಸುವ ಮೂಲಕ ಯುವಕರಿಗೆ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಲಾಯಿತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ವರದಿ - ಶಿವರಾಮ ಅಸುಂಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ