• Home
 • »
 • News
 • »
 • state
 • »
 • Hubballi News: ಉತ್ತರ ಕರ್ನಾಟಕ್ಕೆ ಉತ್ತರ ಭಾರತ ಇನ್ನಷ್ಟು ಹತ್ತಿರ!

Hubballi News: ಉತ್ತರ ಕರ್ನಾಟಕ್ಕೆ ಉತ್ತರ ಭಾರತ ಇನ್ನಷ್ಟು ಹತ್ತಿರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿರಡಿ ಸಾಯಿಬಾಬಾ ಯಾತ್ರಾರ್ಥಿಗಳಿಗೂ ಸಹ ಹುಬ್ಬಳ್ಳಿ-ನಿಜಾಮುದ್ದೀನ್ ರೈಲಿನಿಂದ ಪ್ರಯೋಜನವಾಗಲಿದೆ.

 • Share this:

  ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಹುಬ್ಬಳ್ಳಿ- ನಿಜಾಮುದ್ದೀನ್ ರೈಲಿಗೆ (Hubballi Nizamuddin Express) ಮತ್ತೆ ಚಾಲನೆ ನೀಡಲಾಗಿದೆ. ಈ ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ಸಂಖ್ಯೆ 20657/ 20658ಯು ಸೂಪರ್ ಫಾಸ್ಟ್ ರೈಲಾಗಿದೆ. ಸದ್ಯ ವಾರಕ್ಕೆ ಒಂದು ಬಾರಿ ಈ ರೈಲು ಸೇವೆ ಒದಗಿಸಲಿದೆ. ಹುಬ್ಬಳ್ಳಿಯಿಂದ (Hubballi News) ಪ್ರತಿ ಶುಕ್ರವಾರ ರಾತ್ರಿ 11.50 ಗಂಟೆಗೆ ಈ ರೈಲು ಹೊರಡಲಿದ್ದು ರವಿವಾರ ಬೆಳಗ್ಗೆ 10.40ಕ್ಕೆ ರಾಷ್ಟ ರಾಜಧಾನಿ ದೆಹಲಿಯ ರೈಲು ನಿಲ್ದಾಣವನ್ನು ತಲುಪಲಿದೆ. ಈ ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ಬೆಳಗಾವಿ, ಪುಣೆ, ಅಹಮದ್ ನಗರ, ಇಟಾರ್ಸಿ, ಭೋಪಾಲ್, ಆಗ್ರಾ ನಗರಗಳನ್ನು ಹಾದುಹೋಗಲಿದ್ದು, ಉತ್ತರ ಕರ್ನಾಟಕದ ಜನರಿಗೆ ಉತ್ತರ ಭಾರತವನ್ನು ಸಂಪರ್ಕಿಸಲು ನೆರವಾಗಲಿದೆ. ಅಲ್ಲದೇ ಶಿರಡಿ ಸಾಯಿಬಾಬಾ ಯಾತ್ರಾರ್ಥಿಗಳಿಗೂ ಸಹ ಹುಬ್ಬಳ್ಳಿ-ನಿಜಾಮುದ್ದೀನ್ ರೈಲಿನಿಂದ ಪ್ರಯೋಜನವಾಗಲಿದೆ.


  ಹುಬ್ಬಳ್ಳಿ- ನಿಜಾಮುದ್ದೀನ್ ರೈಲಿಗೆ ಮತ್ತೆ ಚಾಲನೆ ನೀಡಲಾಗಿದೆ. ಈ ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ಸಂಖ್ಯೆ 20657/ 20658ಯು ಸೂಪರ್ ಫಾಸ್ಟ್ ರೈಲಾಗಿದೆ. ಸದ್ಯ ವಾರಕ್ಕೆ ಒಂದು ಬಾರಿ ಈ ರೈಲು ಸೇವೆ ಒದಗಿಸಲಿದೆ.


                                                                            ರೈಲಿನ ವೇಳಾಪಟ್ಟಿ ಹೀಗಿದೆ


  ಎಲ್ಲೆಲ್ಲಿ ನಿಲ್ಲಲಿದೆ ಈ ರೈಲು?
  ಹುಬ್ಬಳ್ಳಿಯಿಂದ ಪ್ರತಿ ಶುಕ್ರವಾರ ರಾತ್ರಿ 11.50 ಗಂಟೆಗೆ ಈ ರೈಲು ಹೊರಡಲಿದ್ದು ರವಿವಾರ ಬೆಳಗ್ಗೆ 10.40ಕ್ಕೆ ರಾಷ್ಟ ರಾಜಧಾನಿ ದೆಹಲಿಯ ರೈಲು ನಿಲ್ದಾಣವನ್ನು ತಲುಪಲಿದೆ. ಈ ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ಬೆಳಗಾವಿ, ಪುಣೆ, ಅಹಮದ್ ನಗರ, ಇಟಾರ್ಸಿ, ಭೋಪಾಲ್, ಆಗ್ರಾ ನಗರಗಳನ್ನು ಹಾದುಹೋಗಲಿದೆ.


  ಉತ್ತರ ಕರ್ನಾಟಕದ ಜನರಿಗೆ ಉತ್ತರ ಭಾರತವನ್ನು ಸಂಪರ್ಕಿಸಲು ನೆರವು
  ಉತ್ತರ ಕರ್ನಾಟಕದ ಜನರಿಗೆ ಉತ್ತರ ಭಾರತವನ್ನು ಸಂಪರ್ಕಿಸಲು ನೆರವಾಗಲಿದೆ.  ಅಲ್ಲದೇ ಶಿರಡಿ ಸಾಯಿಬಾಬಾ ಯಾತ್ರಾರ್ಥಿಗಳಿಗೂ ಸಹ ಹುಬ್ಬಳ್ಳಿ-ನಿಜಾಮುದ್ದೀನ್ ರೈಲಿನಿಂದ ಪ್ರಯೋಜನವಾಗಲಿದೆ.


  ಹುಬ್ಬಳ್ಳಿಯಿಂದ ಶಬರಿಮಲೆಗೂ ರೈಲು
  ಅಲ್ಲದೇ ಹುಬ್ಬಳ್ಳಿಯಿಂದ ವಾರಣಾಸಿಗೆ ವಾರಕ್ಕೆ ಎರಡು ಬಾರಿ ರೈಲು ಓಡಿಸಲು ತೀರ್ಮಾನಿಸಲಾಗಿದೆ. ಜೊತೆಗೆ ವಂದೇ ಭಾರತ್ ಟ್ರೈನ್ ಆದಷ್ಟು ಬೇಗ ಹುಬ್ಬಳ್ಳಿ- ಧಾರವಾಡಕ್ಕೆ ಬರಲಿದ ಎಂಬ ಭರವಸೆ ನೀಡಲಾಗಿದೆ.  ಶಬರಿಮಲೆ ದರ್ಶನಕ್ಕೆ ಹುಬ್ಬಳ್ಳಿಯಿಂದ ಆದಷ್ಟು ಶೀಘ್ರ ವಿಶೇಷ ರೈಲು ಸೇವೆ ಪ್ರಾರಂಭಿಸಲಿದ್ದೇವೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನೀ ವೈಷ್ಣವ್ ಭರವಸೆ ನೀಡಿದ್ದಾರೆ.


  ಧಾರವಾಡದಿಂದ ಬೆಂಗಳೂರಿನವರೆಗೂ ವಂದೇ ಭಾರತ್ ರೈಲ್ವೆ
  ಧಾರವಾಡದಿಂದ ಬೆಂಗಳೂರಿನವರೆಗೂ ವಂದೇ ಭಾರತ್ ರೈಲ್ವೆ ಚಾಲನೆಗೆ ಅವಕಾಶ  ಕೊಡಲು  ಮನವಿ ಮಾಡಲಾಗಿದೆ.  ನಿಜಾಮುದ್ದೀನ್ ರೈಲಿನ ಹೆಸರನ್ನು ಸವಾಯಿ ಗಂಧರ್ವ ರೈಲು ಘೋಷಣೆ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಹ ಕೇಂದ್ರ ರೈಲ್ವೇ ಸಚಿವ ಅಶ್ವಿನೀ ವೈಷ್ಣವ್ ಭರವಸೆ ನೀಡಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: