Independence day: ಎದೆಗೆ ಇರಿಸಿಕೊಂಡರೆ ರಾಷ್ಟ್ರ ಧ್ವಜ, ನೆಲಕ್ಕೆ ಹಾಕಿದರೆ ಸಸಿ; ಇದು ಸೀಡ್ ಪೇಪರ್ ಧ್ವಜದ ವೈಶಿಷ್ಟ್ಯ!

ಈ ಫ್ಲ್ಯಾಗ್ ಬಳಕೆಯ ನಂತರ ಮಣ್ಣಿನ ಮೇಲೆ ಹಾಕಿ ನೀರೆರೆದರೆ ಸಾಕು. ನಾಲ್ಕೈದು ದಿನಗಳಲ್ಲಿಯೇ ಧ್ವಜ ಮೊಳಕೆಯಾಗುತ್ತೆ, ಗಿಡದ ಸ್ವರೂಪ ಪಡೆದು ಗೃಹೋಪಯೋಗಿಯೂ ಆಗುತ್ತೆ. ಧಾರವಾಡದ ದಂಪತಿಗಳಿಂದ ರೂಪುಗೊಂಡಿದೆ ಪರಿಸಹ ಸ್ನೇಹಿ ಫ್ಲ್ಯಾಗ್.

ಪರಿಸರಸ್ನೇಹ ಧ್ವಜ ತಯಾರಿಸಿರುವ ದಂಪತಿ.

ಪರಿಸರಸ್ನೇಹ ಧ್ವಜ ತಯಾರಿಸಿರುವ ದಂಪತಿ.

  • Share this:
ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಬಂತೆಂದರೆ ಭಾರತೀಯರ ಕೈಯಲ್ಲಿ ತ್ರಿವರ್ಣ ಧ್ವಜ ತೇಲಾಡುತ್ತಿರುತ್ತದೆ. ಧ್ವಜ ಹಿಡಿದು ರಾಷ್ಟ್ರಪ್ರೇಮ ಮೆರೆಯುತ್ತಾರಾದರೂ, ಅದರಿಂದ ಕೆಲವೊಮ್ಮೆ ಪರಿಸರ ಹಾನಿಯಾಗುವ ಸಾಧ್ಯತೆಗಳೂ ಇವೆ. ಈ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ವಿಶಿಷ್ಟ ರಾಷ್ಟ್ರ ಧ್ವಜ ತಯಾರಿಸಲಾಗಿದೆ. ಈ ಧ್ವಜವನ್ನು ಎದೆಗೆ ಇಟ್ಟುಕೊಂಡಲ್ಲಿ ರಾಷ್ಟ್ರ ಪ್ರೇಮ ಉಕ್ಕಿ ಬರುತ್ತೆ, ಮಣ್ಣಿಗೆ ಹಾಕಿ ನೀರು ಹಾಕಿದರೆ ಮೊಳಕೆ ಬರುತ್ತೆ. ಧಾರವಾಡದ ದಂಪತಿಗಳು ರೂಪಿಸಿರುವ ಡಿಫರೆಂಟ್ ಧ್ವಜಕ್ಕೆ ಜನತೆ ಫಿದಾ ಆಗಿದ್ದಾರೆ.

ಪ್ಲಾಸ್ಟಿಕ್ ಧ್ವಜಗಳಿಂದ ಆಗೋ ತೀವ್ರ ಪರಿಸರ ಹಾನಿ ತಡೆಗಟ್ಟೋ ಪ್ರಯತ್ನವಾಗಿ ರೂಪಿಸಿರೋ, ಸೀಡ್ ಪೇಪರ್ ರಾಷ್ಟ್ರಧ್ವಜ ಎಲ್ಲರ ಗಮನ ಸೆಲೆಯುತ್ತಿದೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಬಂತೆಂದ್ರೆ ಎಲ್ಲರ ಕೈಯಲ್ಲೂ ರಾಷ್ಟ್ರಧ್ವಜ ಇರುತ್ತೆ. ರಾಷ್ಟ್ರದ ಧ್ವಜ ಹಿಡಿದು ಉತ್ಸವದಲ್ಲಿ ಭಾಗಿಯಾಗೋ ಸಂಭ್ರಮ ಎಲ್ಲರದ್ದಾಗಿರುತ್ತೆ. ನಂತರ ಎಲ್ಲೆಂದರಲ್ಲಿ ಎಸೆಯೋದ್ರಿಂದ ರಾಷ್ಟ್ರಧ್ವಜಕ್ಕೂ ಅಪಮಾನ ಆಗುತ್ತೆ, ಪ್ಲಾಸ್ಟಿಕ್ ಧ್ವಜದಿಂದ ಪರಿಸರದ ಮೇಲೂ ಪ್ರತೀಕೂಲ ಪರಿಣಾಮ ಬೀರುತ್ತದೆ.
ಸ್ವಾತಂತ್ರ್ಯೋತ್ಸವದ ನೆಪದಲ್ಲಿ ಪರಿಸರ ಹಾಳಾಗೋದನ್ನು ತಪ್ಪಿಸಲು ಹೊಸದೊಂದು ಧ್ವಜ ಅಸ್ತಿತ್ವಕ್ಕೆ ಬಂದಿದೆ. ಅದೇ ಪರಿಸರ ಸ್ನೇಹಿ ಸೀಡ್ ಪೇಪರ್ ಫ್ಲ್ಯಾಗ್. ಈ ಫ್ಲ್ಯಾಗ್ ಬಳಕೆಯ ನಂತರ ಮಣ್ಣಿನ ಮೇಲೆ ಹಾಕಿ ನೀರೆರೆದರೆ ಸಾಕು. ನಾಲ್ಕೈದು ದಿನಗಳಲ್ಲಿಯೇ ಧ್ವಜ ಮೊಳಕೆಯಾಗುತ್ತೆ, ಗಿಡದ ಸ್ವರೂಪ ಪಡೆದು ಗೃಹೋಪಯೋಗಿಯೂ ಆಗುತ್ತೆ. ಧಾರವಾಡದ ದಂಪತಿಗಳಿಂದ ರೂಪುಗೊಂಡಿದೆ ಪರಿಸಹ ಸ್ನೇಹಿ ಫ್ಲ್ಯಾಗ್.

ಧಾರವಾಡ ಹಾಗೂ ಹುಬ್ಬಳ್ಳಿ ಅವಳಿ ನಗರಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಧಾರವಾಡದ ಕೆ.ಸಿ.ಪಾರ್ಕ್ ನ ಅಕ್ಷತಾ ಹಾಗೂ ರಾಹುಲ್ ಪ್ರಯತ್ನದ ಫಲವಾಗಿ ರದ್ದಿ ಪೇಪರ್ ಮತ್ತು ಹಳೆ ಬಟ್ಟೆ ರಾಷ್ಟ್ರ ಧ್ವಜದ ರೂಪ ಪಡೆದುಕೊಂಡಿದೆ. ಧ್ವಜದಲ್ಲಿ ತುಳಸಿ, ಜಾಸ್ಮೀನ್, ಟೊಮೆಟೋ ಬೀಜ ಇಟ್ಟು ಧ್ವಜ ತಯಾರಿಕೆ ಮಾಡಲಾಗಿದೆ. ಧ್ವಜವನ್ನು ಡ್ರೆಸ್ ಮೇಲೆ ಇಟ್ಟುಕೊಂಡು ಪಿನ್ ಹಾಕಿಕೊಂಡರೆ ದೇಶಪ್ರೇಮದ ಹೆಮ್ಮೆ, ಅದನ್ನು ಮಣ್ಣಿಗೆ ಹಾಕಿ, ನೀರು ಹಾಕಿದರೆ ಪರಿಸರ ಕಾಪಾಡಿದ ಹೆಮ್ಮೆ ನಮ್ಮದಾಗುತ್ತೆ. ಡ್ರೆಸ್ ಮೇಲೆ ಹಾಗೂ ಕೈಗೆ ಬ್ಯಾಂಡ್ ರೂಪದಲ್ಲಿಯೂ ಕಟ್ಟಿಕೊಳ್ಳೋ ಧ್ವಜ ತಯಾರಿಕೆ ಮಾಡಲಾಗಿದೆ.

10 ಸಾವಿರ ಧ್ವಜ, ಒಂದು ಸಾವಿರ ಕೈ ಪಟ್ಟಿ ಸಿದ್ಧಪಡಿಸಿರೋ ದಂಪತಿಗಳು

ಹುಬ್ಬಳ್ಳಿಯ ಶ್ರೇಯಾ ನಗರದ ಸಿರಿ ಪರಂಪರಾ ಸ್ಟೋರ್ ಹಾಗೂ ಧಾರವಾಡದ ನಾರಾಯಣ ನಗರದ ಆರ್ಗ್ಯಾನಿಕ್ ಅಂಗಡಿಗಳಲ್ಲಿಈ ಧ್ವಜ ಲಭ್ಯವಾಗುತ್ತಿವೆ. ಅವಳಿ ನಗರದ ಪರಿಸರ ಸ್ನೇಹಿ ಶಾಪ್ ಗಳಲ್ಲಿಯೂ ಧ್ವಜಗಳ ಮಾರಾಟ ಮಾಡಲಾಗುತ್ತಿದೆ. ಪರಿಸರ ಸಂರಕ್ಷಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಧ್ವಜ ತಯಾರಿಕೆ ಮಾಡಲಾಗಿದೆ. ಸೀಡ್ ಪೇಪರ್ ಧ್ವಜಗಳಿಗೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ಲಾಸ್ಟಿಕ್ ಧ್ವಜ ಬಳಸಿ ಎಲ್ಲೆಂದರಲ್ಲಿ ಎಸೆದು ಅಪಮಾನ ಮಾಡಬಾರದು. ಜೊತೆಗೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ತೀವ್ರತರದ ಹಾನಿಯಾಗಲಿದೆ. ಇದರ ಬದಲಿಗೆ ಸೀಡ್ ಪೇಪರ್ ಫ್ಲ್ಯಾಗ್ ಬಳಸಿದಲ್ಲಿ ದೇಶಪ್ರೇಮ ಮತ್ತು ಪರಿಸರ ಪ್ರೇಮ ಎರಡನ್ನು ತೋರಿಸಿದಂತಾಗುತ್ತದೆ. ಮಣ್ಣಿಗೆ ಹಾಕಿದರೆ ಮೊಳಕೆಯಾಗಿ, ಗಿಡದ ಸ್ವರೂಪ ಪಡೆದು, ಬೇರೆ ರೂಪದಲ್ಲಿಯೂ ಉಪಯೋಗವಾಗುತ್ತದೆ. ಸೀಡ್ ಪೇಪರ್ ಫ್ಲ್ಯಾಗ್ ನಿಂದ ತುಳಸಿ, ಹೂವು, ಟೊಮೆಟೋ, ತರಕಾರಿಗಳನ್ನೂ ಪಡೀಬಹುದು ಎಂದು ವಿಶಿಷ್ಟ ಫ್ಲ್ಯಾಗ್ ತಯಾರಿಸಿರೋ ಅಕ್ಷತಾ ಹಾಗೂ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ಪರಿಸರ ಸ್ನೇಹಿ ಸ್ವಾತಂತ್ರ್ಯೋತ್ಸವ ಆಚರಿಸುವಂತೆ ದಂಪತಿಗಳು ಕರೆ ನೀಡಿದ್ದಾರೆ. ದಂಪತಿಗಳ ಹೊಸ ಪ್ರಯತ್ನಕ್ಕೆ ಅವಳಿ ನಗರದ ಜನತೆಯಿಂದಲೂ ಮೆಚ್ಚುಗೆಯೂ ವ್ಯಕ್ತವಾಗಿದೆ.

ವರದಿ - ಶಿವರಾಮ ಅಸುಂಡಿ
Published by:HR Ramesh
First published: