• Home
  • »
  • News
  • »
  • state
  • »
  • Hubballi: ಹುಲಿ ತನ್ನ ಬಾಲದಿಂದ ಇಲ್ಲಿ ಕಸ ಗುಡಿಸುತ್ತಿತ್ತಂತೆ! ಬಂಡೆಗಲ್ಲಿನ ಮೇಲೆ ಹೆಜ್ಜೆಗುರುತು!

Hubballi: ಹುಲಿ ತನ್ನ ಬಾಲದಿಂದ ಇಲ್ಲಿ ಕಸ ಗುಡಿಸುತ್ತಿತ್ತಂತೆ! ಬಂಡೆಗಲ್ಲಿನ ಮೇಲೆ ಹೆಜ್ಜೆಗುರುತು!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇಲ್ಲಿಂದ ಕಾಣೋ ಸುತ್ತಲಿನ ವಿಹಂಗಮ ನೋಟ ಸವಿಯೋಕೆ ಎರಡು ಕಣ್ಣು ಸಾಲದು. ಕಾದಿಟ್ಟ ಅರಣ್ಯ ಪ್ರದೇಶದಲ್ಲಿರುವ ಈ ದೇವಾಲಯಕ್ಕೆ ಭಕ್ತರ ದಂಡು ಹರಿದು ಬರುತ್ತೆ. ಅಲ್ಲದೇ, ಶ್ರಾವಣದಲ್ಲಿ ವಿಶೇಷ ಸೇವೆ ಜರುಗುತ್ತದೆ.

  • News18 Kannada
  • Last Updated :
  • Hubli-Dharwad (Hubli), India
  • Share this:

    ಹುಬ್ಬಳ್ಳಿ: ಕಾಡು ಬೆಟ್ಟಗಳ ಮೇಲೊಂದು ದೇಗುಲ. ಹಾಗೇ ವಿಸ್ಮಯಕಾರಿ ಎನಿಸೋ ಬೃಹತ್ತಾದ ಬಂಡೆಗಳು. ಪ್ರಕೃತಿ ರಮಣೀಯ ತಾಣದ ನಡುವೆ ಭಕ್ತರ ಪಾಲಿಗಿದು ಒಂಥರಾ ಸೋಜಿಗ. ಹುಬ್ಬಳ್ಳಿ ತಾಲೂಕಿನ (Hubballi News) ಗಡಿಭಾಗದ ಕಲಘಟಗಿ ತಾಲೂಕಿಗೆ ಸೇರಿದ ಬೂದನಗುಡ್ಡವೇ ಹಾಗೆ ಎಂಥರವರನ್ನೂ ಸೆಳೆಯೋ ಸೂಜಿಗಲ್ಲಿನಂತ ತಾಣ. ಪ್ರಕೃತಿ ಮಡಿಲಲ್ಲಿ ಇರೋ ಚೆನ್ನಬಸವೇಶ್ವರ ದೇಗುಲಕ್ಕೆ (Chennabasaveshwara Temple) ನೂರಾರು ವರ್ಷಗಳ ಇತಿಹಾಸವಿದೆ. 500 ವರ್ಷಗಳ ಹಿಂದೆ ಇಲ್ಲಿಗೆ ಬೂದಿ ಸ್ವಾಮಿ (Boodi Swami) ಎಂಬ ಮುನಿಗಳು ಬಂದು ತಪಸ್ಸಾಚರಿಸಿ ದೇವರನ್ನು ಒಲಿಸಿಕೊಂಡರು ಎಂಬ ಪ್ರತೀತಿಯಿದೆ.


    ಶಿವನು ನಂದಿ ಸಮೇತನಾಗಿ ಭೂಲೋಕಕ್ಕೆ ಬಂದಿದ್ದ ಅನ್ನೋ ಐತಿಹ್ಯವಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿನ ಕಲ್ಲುಗಳಲ್ಲಿ ಎತ್ತಿನ ಹೆಜ್ಜೆ ಗುರುತುಗಳಿವೆ. ಅದರಲ್ಲೊಂದು ರೇಣುಕೆಯ ಪಾದ ಎಂದೇ ಭಕ್ತರು ನಂಬಿದ್ದಾರೆ. ಅದಕ್ಕೂ ಮೀರಿ ಸಿದ್ಧಪುರುಷರಾದ ಸಿದ್ಧಾರೂಢರು ಇಲ್ಲಿ ಬಂದು ನಂದಿಕೇಶ್ವರ ಸೇವೆ ಮಾಡಿದ್ದಾರೆ ಎಂಬ ಪ್ರತೀತಿಯೂ ಇದೆ.


    ಇದನ್ನೂ ಓದಿ: Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ


    ಹುಲಿ ಇಲ್ಲಿ ಕಸ ಗುಡಿಸುತ್ತಿತ್ತಂತೆ!
    ಇನ್ನು ಹುಲಿ ದೇವರು ಕೂಡ ಇಲ್ಲಿದ್ದು, ಅದರ ಪ್ರತೀಕವಾಗಿ ಬಂಡೆಗಲ್ಲಿನ ಮೇಲೆ ಹುಲಿಹೆಜ್ಜೆಗಳಿವೆ. ಆ ಹುಲಿ ಇಲ್ಲಿ ಆಗಮಿಸಿ ಬಾಲದಿಂದ ಕಸ ಗುಡಿಸುತ್ತಿತ್ತಂತೆ ಅಂತಾರೆ ಸ್ಥಳೀಯರು. ಇಲ್ಲಿಂದ ಕಾಣೋ ಸುತ್ತಲಿನ ವಿಹಂಗಮ ನೋಟ ಸವಿಯೋಕೆ ಎರಡು ಕಣ್ಣು ಸಾಲದು. ಕಾದಿಟ್ಟ ಅರಣ್ಯ ಪ್ರದೇಶದಲ್ಲಿರುವ ಈ ದೇವಾಲಯಕ್ಕೆ ಭಕ್ತರ ದಂಡು ಹರಿದು ಬರುತ್ತೆ. ಅಲ್ಲದೇ, ಶ್ರಾವಣದಲ್ಲಿ ವಿಶೇಷ ಸೇವೆ ಜರುಗುತ್ತದೆ.


    ಇದನ್ನೂ ಓದಿ: Jobs In Hubballi: ಹುಬ್ಬಳ್ಳಿಯಿಂದಲೇ ದೇಶ ರಕ್ಷಿಸೋಕೆ ಚಾನ್ಸ್! ಉತ್ತರ ಕರ್ನಾಟಕ ಜನರಿಗೆ ಸುವರ್ಣಾವಕಾಶ


    ಒಟ್ಟಿನಲ್ಲಿ ಬೆಟ್ಟದ ಮೇಲಿರುವ ಶ್ರೀಚೆನ್ನಬಸವೇಶ್ವರ ದೇಗುಲ ಸೌಹಾರ್ದತೆಗೂ ಹೆಸರುವಾಸಿ. ಎಲ್ಲ ಜಾತಿ, ಧರ್ಮದವರೂ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಹೀಗೆ ಈ ಕ್ಷೇತ್ರವು ಭಕ್ತರ ಪಾಲಿಕೆ ಕಾರಣಿಕ ಕ್ಷೇತ್ರವೂ ಆಗಿದೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: