BS Yediyurappa ಪಾಪ.. ರಾಜಕೀಯ ಸಂಧ್ಯಾಕಾಲದಲ್ಲಿ ಯಡಿಯೂರಪ್ಪನ ಅಳುವ ಹಾಗೆ ಮಾಡಿಬಿಟ್ಟರು: Siddaramaiah

ಅಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರನ್ನೇ ರಾತ್ರೋ ರಾತ್ರಿ ಸಿಎಂ ಸ್ಥಾನದಿಂದ ಕಿತ್ತೊಗೆದರು. ಪಾಪ ರಾಜಕೀಯ ಸಂಧ್ಯಾ ಕಾಲದಲ್ಲಿ ಯಡಿಯೂರಪ್ಪರನ್ನು ಅಳೋ ಹಾಗೆ ಮಾಡಿಬಿಟ್ಟರೆಂದು ಸಿದ್ಧರಾಮಯ್ಯ ಮರುಕಪಟ್ಟಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಹುಬ್ಬಳ್ಳಿ:  ಪಾಪ ಯಡಿಯೂರಪ್ಪ (BS Yediyurappa) ದುಡ್ಡು ಖರ್ಚು ಮಾಡಿ ಬಿಜೆಪಿನ ಅಧಿಕಾರಕ್ಕೆ ತಂದ್ರೆ ಇವರು ರಾತೋರಾತ್ರಿ ಅವರನ್ನು ಕಿತ್ತೊಗೆದರು. ಪಾಪ.. ರಾಜಕೀಯ ಸಂಧ್ಯಾಕಾಲದಲ್ಲಿ ಯಡಿಯೂರಪ್ಪನ ಅಳುವ ಹಾಗೆ ಮಾಡಿಬಿಟ್ಟರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah)  ಮರುಕಪಟ್ಟಿದ್ದಾರೆ.  ಹಾವೇರಿ ಜಿಲ್ಲೆ ಹಾನಗಲ್ ಉಪ ಚುನಾವಣಾ (Hangal ByElection) ಪ್ರಚಾರದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರಬೇಕು ಅಂತ ಯಡಿಯೂರಪ್ಪ ಹಣ ಖರ್ಚು ಮಾಡಿ ಆಪರೇಷನ್ ಕಮಲ (Operation Lotus)ಮಾಡಿದರು. ಶಾಸಕರಿಗೆ ಹಣ ಕೊಟ್ಟು ಅಧಿಕಾರಕ್ಕೆ ಬಂದರು. ಆದರೆ ಇವ್ರು ರಾತ್ರೋ ರಾತ್ರಿ ಅವರನ್ನ ಮನೆಗೆ ಕಳಿಸಿದರು. ಯಡಿಯೂರಪ್ಪ ಕಣ್ಣೀರು ಹಾಕುತ್ತಾ ಗೋಳೋ ಅಂತ ಅಳುತ್ತಾ ರಾಜಿನಾಮೆ ಕೊಟ್ಟು ಹೋದರು. ಯಡಿಯೂರಪ್ಪ ಅವರಿಗೆ ಅಂಥ ಪರಿಸ್ಥಿತಿ ಬಂತು. ರಾಜಕೀಯ ಸಂಧ್ಯಾಕಾಲದಲ್ಲಿ ಯಡಿಯೂರಪ್ಪನ ಅಳೋ ಹಾಗೆ ಮಾಡಿಬಿಟ್ಟರು ಎಂದು ಮರುಕಪಟ್ಟ ಸಿದ್ದರಾಮಯ್ಯ,  ಬಿಜೆಪಿಯವರಿಗೆ ಏನಾದ್ರೂ ಮಾನ ಮರ್ಯಾದೆ ಇದೆಯೇನ್ರೀ ಎಂದು ಪ್ರಶ್ನಿಸಿದರು. ಹಾಗಂತ ಯಡಿಯೂರಪ್ಪ ಮಾಡಿದ್ದೆಲ್ಲವೂ ಸರಿ ಇತ್ತು ಅಂತ ಹೇಳಲ್ಲ. ಅವರ ಕಾಲದಲ್ಲಿಯೂ ಭಾರೀ ಅನಾಹುತಗಳಾಗುವ ಎಂದರು.

ಬಿಜೆಪಿ ಬಡವರ, ಯುವಕರ, ಮಹಿಳೆ, ಕಾರ್ಮಿಕರ, ಅಲ್ಪಸಂಖ್ಯಾತರ ಪರ ಇಲ್ಲ. ಬಿಜೆಪಿಯವರು ಎಂದೂ ಶಿವರಾಜ್ ಸಜ್ಜನ್ ಹೆಸರು ಹೇಳಿ ಮತ ಕೇಳುತ್ತಿಲ್ಲ. ದುರ್ಜನನ ಹೆಸರು ಹೇಳಿದ್ರೆ ಮತ ಹಾಕೊಲ್ಲ ಅಂತ ಗೊತ್ತು. ಹೀಗಾಗಿ ಪ್ರಧಾನಿ ಮೋದಿ, ಯಡಿಯೂರಪ್ಪ ಮೊದಲಾದವರ ಹೆಸರು ಹೇಳಿ ಮತ ಕೇಳ್ತಿದಾರೆ ಎಂದರು.ಕೊಲೆಗಡುಕ ಬಿಜೆಪಿ

ಲಖೀಂಪುರದಲ್ಲಿ ಹೋರಾಟನಿರತ ನಾಲ್ವರು ರೈತರು ಪ್ರಾಣ ಕಳೆದುಕೊಂಡರು. ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಕಾರು ಹಾಯಿಸಿದ್ದರಿಂದ ಅಮಾಯಕರು ಪ್ರಾಣ ಕಳೆದುಕೊಂಡರು. ಬಿಜೆಪಿ ಕೊಲೆಗಡುಕರ ಸರ್ಕಾರವಾಗಿದೆ. ಇಂತಹ ಕೊಲೆಗಡುಕರ ಸರ್ಕಾರ ಅಧಿಕಾರದಲ್ಲಿ ಮುಂದುವರೀಬೇಕಾ? ಎಂದು ಹೀರೂರು ಗ್ರಾಮದಲ್ಲಿ ಪ್ರಚಾರದ ವೇಳೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಕೊಲೆಗಡುಕ ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರದಲ್ಲಿ ಮುಂದುವರೀಬಾರದು. ಕಳೆದ ಎರಡೂವರೆ ವರ್ಷದಲ್ಲಿ ಒಂದೂ ಮನೆ ಮಂಜೂರು ಮಾಡಲಿಲ್ಲ. ಬಿಜೆಪಿ ಅಧಿಕಾರದಲ್ಲಿ ಮುಂದುವರಿಯೋಕೆ ನಾಲಾಯಕ್ಕು. ಸಿಎಂ ಬಸವರಾಜ ಬೊಮ್ಮಾಯಿ ಯಂತೂ ಬರೀ ಸುಳ್ಳು ಹೇಳ್ತಾರೆ. ಅದಕ್ಕೆ ನಾನು ಹೇಳಿದ್ದೇನೆ. ಒಂದೇ ವೇದಿಕೆಗೆ ಬಂದುಬಿಡು ಚರ್ಚೆ ಮಾಡೋಣಾ ಅಂತ. ಆದರೆ ಅದಕ್ಕೂ ಧೈರ್ಯ ಇಲ್ಲ, ಬಿಜೆಪಿಯವರಿಗೆ ಧಮ್ಮೇ ಇಲ್ಲ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: Siddaramaiah| ಮೋದಿ ಸರ್ಕಾರ ಅತ್ಯವಸರದಿಂದ 100 ಕೋಟಿ ಲಸಿಕೆ ಸಂಭ್ರಮಾಚರಣೆಗೆ ಮುಂದಾಗಿರುವುದು ಹಾಸ್ಯಾಸ್ಪದ; ಸಿದ್ದರಾಮಯ್ಯ

ಖಾಲಿ ಚೀಲ ನುಂಗಿದವರ ಡಬ್ಬ ಖಾಲಿ ಮಾಡಿ

ಸೂರ್ಯ ಹುಟ್ಟೋದು ಎಷ್ಟು ಸತ್ಯವೋ ಶ್ರೀನಿವಾಸ್ ಮಾನೆ ಗೆಲ್ಲೋದು ಅಷ್ಟೇ ಸತ್ಯ ಎಂದು  ಸಿದ್ದರಾಮಯ್ಯ  ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನರೇಗಲ್ ನಲ್ಲಿ ಪ್ರಚಾರ ಕೈಗೊಂಡ ಸಿದ್ದರಾಮಯ್ಯ, ಮಾನೆ ವಿರುದ್ಧ ಸ್ಪರ್ಧಿಸಿರೋ ವ್ಯಕ್ತಿ ಸಜ್ಜನ ಅಲ್ಲ ದುರ್ಜನ. ಸಂಗೂರು ಸಕ್ಕರೆ ಕಾರ್ಖಾನೆಯನ್ನು ನುಂಗಿ ನೀರು ಕುಡಿದಿದ್ದಾರೆ. ಖಾಲಿ ಚೀಲಗಳನ್ನೂ ಬಿಟ್ಟಿಲ್ಲ. ಅವರ ಮೇಲೆ ತನಿಖೆಯನ್ನೂ ಮಾಡಲಾಗ್ತಿದೆ. ಗೌರಾಪುರ ಬಳಿ ಗುಡ್ಡವನ್ನೇ ನುಂಗಿ ಹಾಕಿದ್ದಾರೆ.ನುಂಗಣ್ಣನವರಿಗೆ ಮತ ಹಾಕಬೇಡಿ. ಖಾಲಿ ಚೀಲ ನುಂಗಿದವರ ಡಬ್ಬ  ಖಾಲಿ ಮಾಡಬೇಕು.
ಬೊಮ್ಮಾಯಿ ಹಾನಗಲ್ ಗೆ ಸಿದ್ದರಾಮಯ್ಯ ಏನೂ ಮಾಡಿಲ್ಲ ಅಂತಾರೆ. ನಾನೇನು ಮಾಡಿದ್ದೇನೆ ಅಂತ ನರೇಗಲ್ ಗ್ರಾಮದ ಜನರೇ ಲೆಕ್ಕ ಕೊಟ್ಟಿದ್ದಾರೆ. ಈ ಊರಿನ ಕೆರೆ ಒಡ್ಡು ಒಡೆದದ್ದನ್ನು ಹಾಕಿಸೋಕೆ ಬೊಮ್ಮಾಯಿಗೆ ಸಾಧ್ಯವಾಗಿಲ್ಲ. ಒಂದೇ ವೇದಿಕೆಗೆ ಬನ್ನಿ. ನರೇಗಲ್ ಗೆ ಏನ್ ಮಾಡೀನಿ ಅಂತ ನಾನು ಹೇಳ್ತೀನಿ. ನೀವೇನ್ ಮಾಡೀನಿ ಅಂತ ನೀವು ಹೇಳಿ. ಸಿಎಂ ಬೊಮ್ಮಾಯಿ ಬರೀ ಸುಳ್ಳು ಹೇಳ್ತಾರೆ.

ಇದನ್ನೂ ಓದಿ: BS Yediyurappa: ನಮ್ಮ ತಾತ ತರಕಾರಿ ಮಾರುತ್ತಿದ್ದರು, ನಾನು ಮಂಡ್ಯದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದೆ; ಬಿಎಸ್ ಯಡಿಯೂರಪ್ಪ!

ಸುಳ್ಳು ಹೇಳೋರ ಮಾತು ನಂಬಿ ಮತ ಹಾಕ್ತೀರಾ..?

ನೀವು ಸಿಎಂ ಆಗಲಿಕ್ಕೆ ಲಾಯಕ್ಕಾ, ನಾಲಾಯಕ್ಕಾ ಅನ್ನೋದನ್ನ ಉಪ ಚುನಾವಣೆ ನಿರ್ಧರಿಸುತ್ತೆ. ಬರೀ ಸುಳ್ಳು ಹೇಳೋ ಸಿಎಂ. ಸುಳ್ಳು ಹೇಳೋರ ಮಾತು ನಂಬಿ ಮತ ಹಾಕ್ತೀರಾ..? ಬಿಜೆಪಿಯವರಿಗೆ ದಮ್ಮೇ ಇಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗ್ತಿದೆ. 5495 ಕೋಟಿ ರಾಜ್ಯ ಸರ್ಕಾರದ ಹೇಡಿತನದಿಂದ ಬರಲಿಲ್ಲ. ಜಿ.ಎಸ್.ಟಿ (GST) ಹಣಾನೂ ಬರಲಿಲ್ಲ. 39000 ಕೋಟಿ ಬರಬೇಕಾದ್ದು ಬರಲಿಲ್ಲ ಮಿಸ್ಟರ್ ಬೊಮ್ಮಾಯಿ. ನಿಮಗೆ ಕೇಳೋಕೆ ಧಮ್ ಇಲ್ಲ ಎಂದು ಬೊಮ್ಮಾಯಿ ವಿರುದ್ಧ  ಸಿದ್ದರಾಮಯ್ಯ ಹರಿಹಾಯ್ದರು.
Published by:Mahmadrafik K
First published: