ಹುಬ್ಬಳ್ಳಿ (ಮಾ.25) : ಸ್ಪೀಕರ್ ಕಾಗೇರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy) ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ವಿಧಾನಸಭಾ ಅಧ್ಯಕ್ಷರು (Speaker) ಹೇಳಿದ ಮಾತಿಗೆ ಕಾಂಗ್ರೆಸ್ ನವರ ರೋಷ ಎಲ್ಲಿಗೆ ಹೋಗಿತ್ತು. ಈಗ ವೀರಾವೇಶದಿಂದ ಮಾತನಾಡ್ತಿದ್ದ ಸಿದ್ಧರಾಮಯ್ಯ ಎಲ್ಲಿ ಹೋಗಿದ್ದರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಓರ್ವ ಪೀಠಾಧ್ಯಕ್ಷ ಮುಂದೊಂದು ದಿನ ಎಲ್ಲರೂ RSS ಸೇರಬೇಕಾಗುತ್ತೆ ಅಂತಾರೆ. ಆ ಜಾಗದ ಗೌರವ ಏನು ಅಂತ ತಿಳಿಯದೇ ಮಾತಾಡಿದ್ರಲ್ಲ. ದೇಶದ ಭಾವೈಕತೆ, ಸಾಮರಸ್ಯ ಹಾಳು ಮಾಡೋ ಕೆಲಸ ಶುರುವಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ವಿರುದ್ದ ಹೆಚ್ ಡಿ ಕೆ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ನಡೀತಿರೋ ಬೆಳವಣಿಗೆಗಳನ್ನು ನೋಡಿ ಜನರು ಎಚ್ಚೆತ್ತುಕೊಳ್ಳಬೇಕಿದೆ. ಸ್ಪೀಕರ್ ಆರ್ ಎಸ್ ಎಸ್ ಬಗ್ಗೆ ಮಾತನಾಡಿದಾಗ ಸಿದ್ದರಾಮಯ್ಯ ಅವರ ವೀರಾವೇಶ ಎಲ್ಲಿ ಹೋಗಿತ್ತು. ಸದನದಲ್ಲಿ ಕಾಂಗ್ರೆಸ್ ನವರು ಏನು ಮಾಡ್ತಿದ್ದರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
‘ಹೊರಟ್ಟಿ ಬಿಜೆಪಿ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ’
ಸಭಾಪತಿ ಹೊರಟ್ಟಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಸಿದ ಎಚ್.ಡಿ.ಕೆ., ಹೊರಟ್ಟಿ ಅವರು ಸದ್ಯಕ್ಕೆ ಸಭಾಪತಿ ಗಳಾಗಿದ್ದಾರೆ. ಅವರನ್ನು ಪಕ್ಷಕ್ಕೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ. ಬಿಜೆಪಿ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ. ಜೆಡಿಎಸ್ ನ ಶಿಸ್ತಿನ ಸಿಪಾಯಿ ಅಂತ ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಅದರ ಬಗ್ಗೆ ನಾನೇನೂ ಮಾತನಾಡಲ್ಲ ಎಂದು ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಹೇಳಿದ್ರು.
ಸಿದ್ದರಾಮಯ್ಯ ವಿರುದ್ಧ HDK ಕಿಡಿ
ಹಿಜಾಬ್ ವಿಚಾರದಲ್ಲಿ ಮಠಾಧೀಶರನ್ನು ಎಳೆದು ತರೋ ಅವಶ್ಯಕತೆ ಇರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮಠಾಧೀಶರು ತಲೆ ಮೇಲೆ ವಸ್ತ್ರ ಹಾಕಿಕೊಳ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಸಿದ್ಧರಾಮಯ್ಯ ಕನ್ನಡ ಪಂಡಿತರು ಅಲ್ಲವೇ ಎಂದು ವ್ಯಂಗ್ಯವಾಡಿದ HDK ಹಿಜಾಬ್ ಕುರಿತಾಗಿ ಸದನದಲ್ಲಿ ಸಿದ್ದರಾಮಯ್ಯ ಎಷ್ಟರಮಟ್ಟಿಗೆ ಚರ್ಚೆ ಮಾಡಿದರು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Siddaramaiah: ಮುಂದಿನ ಚುನಾವಣೆಯೇ ನನ್ನ ಕೊನೇ ಸ್ಪರ್ಧೆ, ನಿವೃತ್ತಿ ಬಗ್ಗೆ ಸಿದ್ದರಾಮಯ್ಯ ಮಾತು;
ಸಾಮರಸ್ಯ ಹಾಳು ಮಾಡ್ಬೇಡಿ
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿನ ಸಾಮರಸ್ಯತೆ ಹಾಳುಮಾಡಲು ಯಾರು ಹೋಗಬಾರದು. ಅವರ ಹೇಳಿಕೆಗೆ ನಾನು ಮಹತ್ವ ನೀಡಲ್ಲ. ಸರ್ಕಾರಕ್ಕೆ ಬಹಳ ಸಲಹೆ ನೀಡಿದ್ದೇನೆ. ಸದನದಲ್ಲಿ ಹಿಜಾಬ್ ವಿಚಾರವಾಗಿ ಅವರು ಮಾತನಾಡಲಿಲ್ಲ. ಅವರು ಕನ್ನಡ ಪಂಡಿತರು, ಹಿಜಾಬ್ ವಿಚಾರದಲ್ಲಿ ಸ್ವಾಮೀಜಿಗಳ ವಿಚಾರ ಎಳೆದು ತರೋ ಅವಶ್ಯಕತೆ ಇರಲಿಲ್ಲ. ಅವರ ಹೇಳಿಕೆಯನ್ನ ರಾಜಕೀಯವಾಗಿ ದುರ್ಬಳಿಕೆ ಮಾಡೋ ಅವಶ್ಯಕತೆ ಇಲ್ಲ ಎಂದರು.
ಅಧಿಕಾರಕ್ಕಾಗಿ ರಕ್ತದೋಕುಳಿ ಆಗ್ಬೇಕಾ?
ಶಾಂತಿ ಕದಡಿಸಲು ಬಿಡಬೇಡಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸರ್ಕಾರ ಆರೂವರೆ ಕೋಟಿ ಜನರದ್ದು. ಅವರನ್ನ ಕಾಪಾಡಬೇಕು. ಮುಸ್ಲಿಂರಿಗೆ ಹಿಂದೂ ದೇವಸ್ಥಾನಗಳಲ್ಲಿ ವ್ಯಾಪಾರ ಬ್ಯಾನ್ ಮಾಡೋ ವಿಚಾರ ಸರಿಯಲ್ಲ. ಈ ರೀತಿ ವಾತಾವರಣ ನಿರ್ಮಾಣದಿಂದ ಏನನ್ನ ಸಾಧನೆ ಮಾಡ್ತೀರಿ. ಅಧಿಕಾರಕ್ಕಾಗಿ ರಕ್ತದೊಕುಳಿ ಆಡ್ಬೇಕಾ ಸಾಮರಸ್ಯ ಕೆಡಿಸಿ ಬದುಕುದಾದ್ರು ಎಷ್ಟು ದಿನ..? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:Bengaluru: ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ತಮ್ಮ ಅಸಮಧಾನದಿಂದ ಬಂದ್ ಆಚರಣೆ ಮಾಡಿದ್ದಾರೆ. ಕೋಟ್೯ ತೀರ್ಪಿನ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಹೆಸರಿನಲ್ಲಿ ನಾಲ್ಕು ದಿನ ಅಧಿಕಾರ ಪಡೆಯಬಹುದು. ಇದು ಯಾರಿಗೂ ಶ್ರೇಯ ತರೋದಿಲ್ಲ. ಜನರ ರಕ್ತದ ಮೇಲೆ ನೀವು ಅಧಿಕಾರ ಮಾಡಬೇಕಾ. ದಿನನಿತ್ಯದ ಬಳಕೆ ವಸ್ತುಗಳು ಗಗನೇಕ್ಕುರುತ್ತಿವೆ ಆ ಬಗ್ಗೆ ಗಮನ ಕೊಡಿ ಎಂದು ಬಿಜೆಪಿ ವಿರುದ್ದ ಹೆಚ್.ಡಿ.ಕೆ. ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ