ಸುರಿವ ಮಳೆಯಲ್ಲಿಯೇ ಪೊಲೀಸರ ಕರ್ತವ್ಯ ಪ್ರಜ್ಞೆ; ಅಂಗಾಂಗ ಸಾಗಾಟಕ್ಕೆ ಗ್ರೀನ್ ಕಾರಿಡಾರ್

ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥ ಆಸ್ಪತ್ರೆಯವರಿಂದ ಮನವಿ ಬಂದ ಹಿನ್ನೆಲೆಯಲ್ಲಿ ಅಂಗಾಂಗ ಕಸಿ ಪ್ರಾಧಿಕಾರದ ನಿಯಮಂದಂತೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು

ಪೊಲೀಸರ ಕರ್ತವ್ಯ

ಪೊಲೀಸರ ಕರ್ತವ್ಯ

  • Share this:
ಹುಬ್ಬಳ್ಳಿ(ಜು. 18): ಸುಡುಬ ಬಿಸಿಲು ಮಳೆಯಲ್ಲಿ ಹಗಲಿರುಳು ಕೆಲಸ ಮಾಡುವ ಪೊಲೀಸರು ಇಂದು ಹುಬ್ಬಳ್ಳಿ - ಧಾರವಾಡ ಸುರಿವ ಮಳೆಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.  . ಕಿಡ್ನಿ ಅಂಗಾಂಗ ಸಾಗಾಟಕ್ಕೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿ, ಸುರಿಯುವ ಮಳೆಯಲ್ಲಿಯೇ ಕಾರ್ಯ ನಿರ್ವಹಿಸಿ  ತಮ್ಮ ಕರ್ತವ್ಯ ಪ್ರಜ್ಞೆ ಮೂಲಕ ಗಮನ ಸೆಳೆದಿದ್ದಾರೆ

ಸುರಿಯುತ್ತಿರೋ ಮಳೆಯಲ್ಲಿಯೇ ಮೂತ್ರಪಿಂಡ ಸಾಗಾಟಕ್ಕೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡುವ ಮೂಲಕ ಹುಬ್ಬಳ್ಳಿ-ಧಾರವಾಡ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. 12 ಕಿಲೋಮೀಟರ್ ಅಂತರವನ್ನು ಕೇವಲ 7 ನಿಮಿಷಗಳಲ್ಲಿ ಕ್ರಮಿಸಲು ಪೊಲೀಸರು ವ್ಯವಸ್ಥೆ ಮಾಡಿ ಗಮನ ಸೆಳೆದಿದ್ದಾರೆ. ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಿಂದ ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ಮೂತ್ರಪಿಂಡ ಸಾಗಾಟ ಮಾಡಲಾಯಿತು. ಮೂತ್ರಪಿಂಡ ಅಂಗಾಂಗ ಕಸಿ ಹಿನ್ನೆಲೆಯಲ್ಲಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥ ಆಸ್ಪತ್ರೆಯವರಿಂದ ಮನವಿ ಬಂದ ಹಿನ್ನೆಲೆಯಲ್ಲಿ ಅಂಗಾಂಗ ಕಸಿ ಪ್ರಾಧಿಕಾರದ ನಿಯಮಂದಂತೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು. 12 ಕಿಲೋಮೀಟರ್ ಅಂತರವನ್ನು ಕೇವಲ ಏಳು ನಿಮಿಷಗಳಲ್ಲಿ ತಲುಪಲು ವ್ಯವಸ್ಥೆ ಮಾಡಿ ಜೀವವೊಂದನ್ನು ಉಳಿಸಲು ಪೊಲೀಸರು ನೆರವಾಗಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಅಂಗಾಂಗ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಗೆ ಪೊಲೀಸ್ ಬೆಂಗಾವಲು ಸೇವೆ ಕಲ್ಪಿಸಲಾಗಿತ್ತು.

ಸುರಿಯುತ್ತಿದ್ದ ಮಳೆಯಲ್ಲಿಯೇ ಪೊಲೀಸರು ಗ್ರೀನ್ ಕಾರಿಡಾರ್ ಕರ್ತವ್ಯ ನಿರ್ವಹಣೆ ಮಾಡಿದರು. ಧಾರವಾಡದ ಎಸ್.ಡಿ.ಎಂ. ಕಾಲೇಜಿನಿಂದ ಹುಬ್ಬಳ್ಳಿಯ ತತ್ವಾದರ್ಶ ಆಸ್ಪತ್ರೆಯವರೆಗೂ 10 ಕಿಲೋಮೀಟರ್ ಅಂತರದ ಉದ್ದಕ್ಕೂ ಮಳೆಯಲ್ಲಿಯೇ ನಿಂತ ಪೊಲೀಸರು, ಅಂಗಾಗ ಹೊತ್ತು ಬಂದ ಆ್ಯಂಬುಲೆನ್ಸ್ ಗೆ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಟ್ರಾಫಿಕ್ ಸಬ್ ಡಿವಿಜನ್ ಎಸಿಪಿ M.S ಹೊಸಮನಿ, ಉತ್ತರ ಟ್ರಾಫಿಕ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಶ್ರೀಕಾಂತ್ ತೋಟಗಿ, ಧಾರವಾಡ ಟ್ರಾಫಿಕ್ ಪೊಲೀಸ್ ಇನ್ಸಪೆಕ್ಟರ್ M.S.ನಾಯ್ಕರ ಮತ್ತು ಇತರೆ ಸಿಬ್ಬಂದಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದು ಒಂದು ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದನ್ನು ಓದಿ: ಈ ಸಚಿವೆ ಜೊತೆ ಸೆಲ್ಫಿ ಪಡೆಯಬೇಕು ಎಂದ್ರೆ 100 ರೂ ಪಾವತಿಸುವುದು ಕಡ್ಡಾಯ; ಯಾರಿವರು?

ಹುಬ್ಬಳ್ಳಿ – ಧಾರವಾಡ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದೆ. ಜೀರೋ ಟ್ರಾಫಿಕ್ ಗೆ ನಾಗರೀಕರೂ ಸಹಕಾರ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿಯೊಬ್ಬರ ಕಿಡ್ನಿಯನ್ನು ಕುಟಂಬ ದಾನ ಮಾಡಿತ್ತು. ಅದನ್ನು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಕಸಿ ಮಾಡಲಾಗಿದೆ. ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿಯ ಕಾರ್ಯಕ್ಕೆ ಕಿಡ್ನಿ ಕಸಿಗೆ ಗುರಿಯಾದ ವ್ಯಕ್ತಿಯ ಕುಟುಂಬದ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

ಕಳೆದ ತಿಂಗಳೂ ಸಹ ಎಸ್.ಡಿ.ಎಂ. ಕಾಲೇಜಿನಿಂದ ಬೆಂಗಳೂರಿಗೆ ಅಂಗಾಂಗ ಸಾಗಿಸಲು ವಿಮಾನ ನಿಲ್ದಾಣದವರೆಗೆ ಪೊಲೀಸರು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದ ಪ್ರಶಂಸೆಗೆ ಪಾತ್ರವಾಗಿದ್ದರು. 16 ಕಿಲೋಮೀಟರ್ ಅಂತರವನ್ನು ಕೇವಲ 10 ನಿಮಿಷಗಳಲ್ಲಿ ತಲುಪುವಂತೆ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು. ಅಂದೂ ಸಹ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಕಿಡ್ನಿ ಸಾಗಿಸಲು ಪೊಲೀಸರು ಸಹಕರಿಸಿ ಜೀವವೊಂದನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: