Ganesh Chaturthi 2021: ದೇಶದಲ್ಲೇ ಪವರ್​ಫುಲ್ ಈ ಸಿಂಧೂರ ಗಣೇಶ; ಕೋವಿಡ್ ವೇಳೆಯಲ್ಲಿಯೂ ಛಬ್ಬಿ ಗಣಪನದ್ದೇ ಹವಾ!

ಮೂರು ದಿನಗಳ ಪ್ರತಿಷ್ಠಾಪನೆಗೊಳ್ಳಲಿರೋ ಈ ಸಿಂಧೂರ ಗಣಪನ ದರ್ಶನಕ್ಕಾಗಿ ಭಕ್ತರು ಹಾತೊರೆಯುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರ ಹೊರತಾಗಿಯೂ ಬೇರೆ ಬೇರೆ ಊರುಗಳ ಜನ ಬಂದು ದರ್ಶನ ಪಡೆದು, ಇಷ್ಟಾರ್ಥಸಿದ್ಧಿಗೆ  ಪ್ರಾರ್ಥಿಸುತ್ತಿದ್ದಾರೆ.

ಛಬ್ಬಿ ಗಣೇಶ.

ಛಬ್ಬಿ ಗಣೇಶ.

  • Share this:
ಹುಬ್ಬಳ್ಳಿ: ಈ ಸಿಂಧೂರ ಗಣೇಶ ಬಹಳ ಪವರ್ ಫುಲ್. ಉತ್ತರ ಕರ್ನಾಟಕದಲ್ಲಿಯೇ  ಈತನ ಮಹಿಮೆ ಅಪಾರ. ಏನೇ ಬೇಡಿಕೊಂಡರೂ ಎಲ್ಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ ಅನ್ನು ಪ್ರತೀತಿ. ಅಷ್ಟೊಂದು  ಫೇಮಸ್ ಈ ಗಣೇಶ. ಅಷ್ಟಕ್ಕೂ ಯಾವ ಗಣೇಶ, ಆತನ ಮಹಿಮೆ ಏನು ಅಂತಾ ತಿಳಿದುಕೊಳ್ಳುವ ಕುತೂಹಲವೇ. ಹಾಗಾದರೆ ಈ ಸ್ಟೋರಿ ನೋಡಿ. ಧಾರವಾಡ ಜಲ್ಲೆ ಹುಬ್ಬಳ್ಳಿ ತಾಲೂಕಿನ ಛಬ್ಬಿಯಲ್ಲೊಂದು ವಿಶಿಷ್ಟ ಗಣಪನಿದ್ದಾನೆ. ಪ್ರತಿ ಗಣೇಶೋತ್ಸವದ ಸಂದರ್ಭದಲ್ಲಿ ಆಗಮಿಸೋ ಈ ಗಣಪ ಮೂರು ದಿನಗಳ ಕಾಲ ಇರ್ತಾನೆ. ಇದು ದೇಶದ ಮೋಸ್ಟ್ ಪವರ್ ಫುಲ್ ಗಣಪಗಳಲ್ಲೊಂದು.

ಪ್ರತಿ ವರ್ಷವೂ ಈತನಿಗೆ ಒಂದೇ ವರ್ಣ, ಒಂದೇ ಸೈಜ್. ಸಾರ್ವಜನಿಕ ಗಣೇಶ ಮೂರ್ತಿಗಳನ್ನು ರಸ್ತೆ ಇತ್ಯಾದಿಗಳಲ್ಲಿ ಪ್ರತಿಷ್ಠಾಪನೆ ಮಾಡಿದರೆ, ಇದನ್ನು ಮಾತ್ರ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಎಲ್ಲ ಗಣಪ ಬಲಗೈಯಿಂದ ಆಶೀರ್ವಾದ ಮಾಡ್ತಿದ್ರೆ, ಈ ಗಣಪತಿ ಕೈಯಲ್ಲಿ ಮುರಿದ ದಂತವಿರುತ್ತೆ. ಮತ್ತೊಂದು ಕೈಯಲ್ಲಿ ಲಿಂಗವಿರುತ್ತದೆ. ಅಮಾವಾಸ್ಯೆಯ ನಂತರ ಚಂದ್ರ ಹುಟ್ಟಿದ ಮೇಲೇನೇ ಈತನ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಗಣೇಶನ ಮಹಿಮೆ ಉತ್ತರ ಕರ್ನಾಟಕದಲ್ಲಿ ಮನೆ ಮನೆಗೂ ಗೊತ್ತು. ಏನೇ ಬೇಡಿಕೊಂಡ್ರೂ ಇಷ್ಟರ್ಥ ಸಿದ್ಧಿಯಾಗುತ್ತೆ ಅನ್ನೋ ನಂಬಿಕೆಯಿದೆ. ಪ್ರತಿ ಗಣೇಶೋತ್ಸವ ಸಂದರ್ಭದಲ್ಲಿಯೂ ಮೂರು ದಿನಗಳ ಕಾಲ ಪ್ರತಿಷ್ಟಾಪನೆ ಮಾಡಲಾಗುತ್ತದೆ. 21 ಇಂಚಿನ ಸಿಂಧೂರ ಗಣಪ ಪ್ರತಿ ಬಾರಿಯೂ ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿಯೂ ಗಣೇಶ ಚತುರ್ಥಿಯ ದಿನದಂದು ಸಿಂಧೂರ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.

ಕುಲಕರ್ಣಿಯವರ ಮನೆಯಲ್ಲಿ ಪ್ರತಿಷ್ಠಾಪನೆಗೊಳ್ಳೋ ಕೆಂಪು ಗಣೇಶ ತನ್ನದೇ ಆದ ಮಹಿಮೆ ಹೊಂದಿದ್ದಾನೆ. 1827 ರಿಂದ ಗಣಪತಿ ಪ್ರತಿಷ್ಠಾಪನೆ ಸಂಪ್ರದಾಯ ಮುಂದುವರೆದುಕೊಂಡು ಬಂದಿದ್ದಾರೆ. ಈ ಬಾರಿ 195ನೇ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಇಂತಹ ಪವರ್ ಫುಲ್ ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಒಂದು ಹಿನ್ನೆಲೆಯಿದೆ. ಛಬ್ಬಿಯ ತಮ್ಮಪ್ಪ ಕುಲಕರ್ಣಿ ಎನ್ನೋರಿಗೆ ಸಂತಾನ ಭಾಗ್ಯವಿರಲಿಲ್ಲ. ಈ ವೇಳೆ ಗಣೇಶೋತ್ಸವ ಮಾಡುವಂತೆ ಶ್ರೀ ಕೃಷ್ಣೇಂದ್ರ ಸ್ವಾಮಿಗಳು ಸಲಹೆ ನೀಡಿದ್ದರು. ವರ ಸಿದ್ಧಿ ವಿನಾಯಕ ಗಣಪತಿ ಪ್ರತಿಷ್ಠಾಪನೆ ಮಾಡಿದ ಒಂದು ವರ್ಷದೊಳಗೆ ಕುಲಕರ್ಣಿ ಅವರಿಗೆ ಗಂಡು ಸಂತಾನ ಪ್ರಾಪ್ತಿಯಾಯಿತಂತೆ. ಹೀಗಾಗಿ ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಗಣೇಶೋತ್ಸವ ಮುಂದುವರಿದುಕೊಂಡು ಬರಲಾಗಿದೆ. ಸದ್ಯ ಆರನೇ ತಲೆಮಾರಿನಿಂದ ಗಣೇಶೋತ್ಸವ ಆಚರಣೆ ಮುಂದುವರಿದಿದೆ. ಹಿರಿಯರು ಹಾಕಿಕೊಂಡು ಬಂದ ಪರಂಪರೆಯಂತೆ ಈಗಲೂ ಗಣೇಶೋತ್ಸವ ನಡೆಸುತ್ತೇವೆ. ಈ ಆಚರಣೆಯಿಂದ ನಮ್ಮ ಮನೆತನಕ್ಕೆ ಎಲ್ಲದೂ ಒಳ್ಳೆಯದಾಗುತ್ತಾ ಬಂದಿದೆ. ಜೊತೆಗೆ ಲೋಕ ಕಲ್ಯಾಣವೂ ಆಗುತ್ತಿದೆ ಎನ್ನುತ್ತಾರೆ ಕುಲಕರ್ಣಿ ಮನೆತನದ ವಿನಾಯಕ ಕುಲಕರ್ಣಿ.

ಆರಂಭದಲ್ಲಿ ಕೇವಲ ಒಂದು ಸಿಂಧೂರ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆದರೆ ಕಾಲಾಂತರದಲ್ಲಿ ಅಣ್ಣ - ತಮ್ಮಂದಿರೋ ಪ್ರತ್ಯೇಕಗೊಳ್ಳುತ್ತಾ ಸಾಗಿದಂತೆ ಗಣೇಶ ಮೂರ್ತಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸದ್ಯ ಒಂಬತ್ತು ಮನೆಗಳಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದೆ. ಲೋಕ ಕಲ್ಯಾಣಕ್ಕಾಗಿ ಕುಲಕರ್ಣಿ ಕುಟುಂಬ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿದೆ.

ಸಿಂಧೂರ ಲೇಪಿತ ಗಣೇಶನ ದರ್ಶನಕ್ಕೆ ಉತ್ತರ ಕರ್ನಾಟಕದ ವಿವಿಧೆಡೆಯಿಂದ ಜನಸಾಗರ ಹರಿದುಬರುತ್ತೆ. ಕಿಲೋಮೀಟರ್ ಗಟ್ಟಲೆ ಸರತಿಯಲ್ಲಿ ನಿಂತು ಭಕ್ತರು ದರ್ಶನ ಪಡೆಯುತ್ತಾರೆ. ವರ ಸಿದ್ದಿ ವಿನಾಯಕ ಬೇಡಿದ ವರವನ್ನು ನೀಡುವ ಕರುಣಾಮಯಿ ಎಂಬ ಪ್ರತೀತಿ ಇದೆ. ಹರಕೆ ಹೊತ್ತು ಅಡಕಿ ಬೆಟ್ಟವನ್ನು ತೆಗೆದುಕೊಂಡು ಹೋದರೆ ಖಂಡಿತಾ ಇಷ್ಟಾರ್ಥ ಸಿದ್ಧಿಸುತ್ತದೆ. ಸತತ ಮೂರು ಬಾರಿ ದರ್ಶನ ಪಡೆದರೆ ಎಲ್ಲ ಬೇಡಿಕೆಗಳೂ ಈಡೇರುತ್ತೆ ಅನ್ನುತ್ತಾರೆ ಸಿಂಧೂರ ಗಣೇಶ ಮೂರ್ತಿ ತಯಾರಕ ವಿರೂಪಾಕ್ಷ ಬಡಿಗೇರ.

ಇದನ್ನು ಓದಿ: Explained: ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಯಾರ ಜತೆ ಮೈತ್ರಿ ಮಾಡಿಕೊಳ್ಳಲಿದೆ; ಕಾಂಗ್ರೆಸ್ ಲೆಕ್ಕಾಚಾರವೇನು?

ಕೋವಿಡ್ ಕರಿನೆರಳಿನಲ್ಲಿಯೂ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದೆ. ಮೂರು ದಿನಗಳ ಪ್ರತಿಷ್ಠಾಪನೆಗೊಳ್ಳಲಿರೋ ಈ ಸಿಂಧೂರ ಗಣಪನ ದರ್ಶನಕ್ಕಾಗಿ ಭಕ್ತರು ಹಾತೊರೆಯುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರ ಹೊರತಾಗಿಯೂ ಬೇರೆ ಬೇರೆ ಊರುಗಳ ಜನ ಬಂದು ದರ್ಶನ ಪಡೆದು, ಇಷ್ಟಾರ್ಥಸಿದ್ಧಿಗೆ  ಪ್ರಾರ್ಥಿಸುತ್ತಿದ್ದಾರೆ.

ವರದಿ - ಶಿವರಾಮ ಅಸುಂಡಿ
Published by:HR Ramesh
First published: