ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ ತವರು ಧಾರವಾಡ ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಚುನಾವಣಾ (Hubli Dharwad Corporation Elections) ಅಖಾಡ ರಂಗೇರಿಸಿದೆ. ಶತಾಯ ಗತಾಯ ಪಾಲಿಕೆಯಲ್ಲಿ ಕಮಲ ಅರಳಿಸಲೇಬೇಕೆಂಬ ಹಠದಲ್ಲಿರೋ ಬಿಜೆಪಿ, ಬೇರೆ ಪಕ್ಷದ ಅಭ್ಯರ್ಥಿಗಳನ್ನು ಹಿಂದೆ ಸರಿಸಲು ಬೆದರಿಕೆ, ಹಣದ ಆಮಿಷದ ವಾಮ ಮಾರ್ಗ ಹಿಡಿದಿದೆ ಎನ್ನೋ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆಮ್ ಆದ್ಮಿ ಪಕ್ಷ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಬೆದರಿಕೆ (AAP candidates threatened by BJP) ಹಾಕಿಸಲಾಗುತ್ತಿದೆ ಎನ್ನೋ ಆರೋಪ ಕೇಳಿಬಂದಿದೆ. ಆಪ್ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಿ ನಾಮಪತ್ರ ಹಿಂಪಡೆಯುವಂತೆ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ. ಧಮ್ಕಿ ಜೊತೆಗೆ ಹಣ ನೀಡುತ್ತೇವೆ ನಾಮಪತ್ರ ಹಿಂಪಡೆಯಿರಿ ಎಂದು ಮಾಜಿ ಕಾರ್ಪೊರೇಟರ್ ರಾಜಣ್ಣ ಕೊರವಿ ಬೆಂಬಲಿಗರಿಂದ ಬೆದರಿಕೆ ಬಂದಿದೆ ಎಂದು ಆರೋಪಿಸಲಾಗಿದೆ.
ಬಿಜೆಪಿಯ 36 ನೆಯ ವಾರ್ಡ್ನ ಅಭ್ಯರ್ಥಿ ರಾಜಣ್ಣ ಕೊರವಿ, 38 ನೆಯ ವಾರ್ಡ್ನ ತಿಪ್ಪಣ್ಣ ಮಜ್ಜಗಿ ಅವರ ಬೆಂಬಲಿಗರಿಂದ ಬೆದರಿಕೆ ಬಂದಿದೆ. ಎಎಪಿ ಅಭ್ಯರ್ಥಿ ಮಲ್ಲಿಕಾರ್ಜುನ ಹಿರೇಮಠ, ಮಲ್ಲಯ್ಯ ತಡಸದ ಅವರಿಗೆ ಬಿಜೆಪಿ ಹಣದ ಆಮಿಷ ಒಡ್ಡಿದೆ ಎಂದು ಆರೋಪಿಸಿ ಎಎಪಿ ಅಭ್ಯರ್ಥಿಗಳು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿಯ ಬೆಂಬಲಿಗರು ತಮ್ಮ ಮನೆಗೆ ಬಂದು ಕಣದಿಂದ ಹಿಂದೆ ಸರಿಯುವಂತೆ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಜೊತೆ ಕುಟುಂಬದ ಸದಸ್ಯರಿಗೂ ಬೆದರಿಕೆಯೊಡ್ಡುತ್ತಿದ್ದಾರೆ. ಹಣದ ಆಮಿಷವನ್ನೂ ಒಡ್ಡಿ ಕಣದಿಂದ ಹಿಂದೆ ಸರಿಯುವಂತೆ ಒತ್ತಡ ತರುತ್ತಿದ್ದಾರೆ. ಏನೇ ಬೆದರಿಕೆ ಬಂದರೂ ಅಖಾಡದಿಂದ ಹಿಂದೆ ಸರಿಯೋಲ್ಲ. ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಸಮಗ್ರ ಅಭಿವೃದ್ಧಿ ಸಂಕಲ್ಪದೊಂದಿಗೆ ಚುನಾವಣೆಗೆ ಧುಮುಕಿದ್ದೇವೆ. ಜನತೆಯ ಮುಂದೆ ಹೋಗ್ತೇವೆ. ತಮಗೆ ಬೆದರಿಕೆ ಹಾಕುವ ವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋದಾಗಿ ಆಮ್ ಆದ್ಮಿ ಪಕ್ಷದ 36ನೇ ವಾರ್ಡ್ ಅಭ್ಯರ್ಥಿ ಮಲ್ಲಿಕಾರ್ಜುನ ಹಿರೇಮಠ ಹಾಗೂ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಶ್ ನರಗುಂದ ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Petrol Diesel Prices- ಹಾಸನದಲ್ಲಿ 94ಕ್ಕಿಂತ ಕೆಳಗಿಳಿದ ಡೀಸೆಲ್ ಬೆಲೆ; ಇಲ್ಲಿದೆ ಜಿಲ್ಲಾವಾರು ಪೆಟ್ರೋಲ್ ದರ ಪಟ್ಟಿ
ಐಪಿಎಲ್ ಆಟಗಾರನಿಂದ ಪ್ರಚಾರ...
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಗೆಲ್ಲಲು ಎಲ್ಲಾ ತಂತ್ರಗಳನ್ನ ಹೆಣೆಯುತ್ತಿದೆ. ಅಲ್ಲಿನ ಅಭ್ಯರ್ಥಿಯೊಬ್ಬರು ಪಾಲಿಕೆ ಚುನಾವಣೆ ಪ್ರಚಾರಕ್ಕೆ ಐಪಿಎಲ್ ಕ್ರಿಕೆಟರ್ ನನ್ನೇ ಕರೆತರೋ ಮೂಲಕ ಗಮನ ಸೆಳೆದಿದ್ದಾರೆ. ವಾರ್ಡ್ 47 ರಲ್ಲಿ ಬಿಜೆಪಿ ಅಭ್ಯರ್ಥಿ ರೂಪ ಶೆಟ್ಟಿ ಯಿಂದ ಬಿರುಸಿನ ಪ್ರಚಾರ ನಡೆದಿದೆ. ರೂಪ ಪರ ಐಪಿಎಲ್ ಕ್ರಿಕೆಟ್ ಆಟಗಾರ ಶಾದಬ್ ಜಕಾತಿ ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಅಭ್ಯರ್ಥಿಯನ್ನ ಗೆಲ್ಲುಸುವಂತೆ ಕ್ರಿಕೆಟ್ ಆಟಗಾರ ಜನತೆಗೆ ಮನವಿ ಮಾಡಿದ್ದಾರೆ. ಗೋವಾದಿಂದ ಹುಬ್ಬಳ್ಳಿಗೆ ಆಗಮಿಸಿರೋ ಶಾದಬ್, ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಮಾಡ್ತಿದ್ದಾರೆ. ಸ್ಪಿನ್ನರ್ ಆಗಿರುವ ಗೋವಾದ ಶಾದಬ್ ಬಷೀರ್ ಜಕಾತಿ ಐಪಿಎಲ್ನಲ್ಲಿ ಆರ್ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಮೊದಲಾದ ತಂಡಗಳ ಪರ ಆಡಿದ್ಧಾರೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ