Karnataka CM: ಅರವಿಂದ ಬೆಲ್ಲದ್ ಮುಂದಿನ ಸಿಎಂ ಪೋಸ್ಟ್ ವೈರಲ್: ಫೇಸ್ ವ್ಯಾಲ್ಯೂ ಇಲ್ಲ ಎಂದ ಶೆಟ್ಟರ್ !

ರಾಜ್ಯದ ಮುಂದಿನ ಸಿಎಂ ಅರವಿಂದ ಬೆಲ್ಲದ್ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೇಸ್ಬುಕ್ ನಲ್ಲಿ ಬಂದಿರೋದಕ್ಕೆಲ್ಲಾ ಫೇಸ್ ವ್ಯಾಲ್ಯೂ ಇಲ್ಲ ಎಂದ ಶೆಟ್ಟರ್ ಮಾತಿನ ಮರ್ಮವೇನು?

ಅರವಿಂದ್​ ಬೆಲ್ಲದ್​​, ಸಿಎಂ ಯಡಿಯೂರಪ್ಪ

ಅರವಿಂದ್​ ಬೆಲ್ಲದ್​​, ಸಿಎಂ ಯಡಿಯೂರಪ್ಪ

  • Share this:
ಹುಬ್ಬಳ್ಳಿ:  ರಾಜ್ಯದ ನಾಯಕತ್ವ ಬದಲಾವಣೆ ವಿಷಯ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಒಂದು ಕಡೆ ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ದೆಹಲಿಯಲ್ಲಿ ಬೀಡು ಬಿಟ್ಟಿರುವಾಗಲೇ ಅವರೇ ಮುಂದಿನ ಸಿಎಂ ಎಂಬ ಪೋಸ್ಟ್ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡಲಾಗಿದೆ. ಇದಕ್ಕೆ ಫೇಸ್ ವ್ಯಾಲ್ಯೂ ಇಲ್ಲ ಎನ್ನೋ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಲ್ಲದ್ ಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ರಾಜ್ಯದ ಮುಂದಿನ ಸಿಎಂ ಅರವಿಂದ ಬೆಲ್ಲದ್.... ಹೀಗೆಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹರಿದಾಡ್ತಿದೆ. ಹುಬ್ಬಳ್ಳಿ- ಧಾರವಾಡ ಮಂದಿ ಎನ್ನೋ ಪೇಜ್ ನಲ್ಲಿ ಪ್ರಚಾರ ಮಾಡಲಾಗ್ತಿದೆ. ಉತ್ತರ ಕರ್ನಾಟಕ ವೀರಶೈವ ಲಿಂಗಾಯತ ಮುಂದಿನ ಸಿಎಂ ಅಂತ ಪೋಸ್ಟ್ ಮಾಡಲಾಗಿದೆ. ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಪೋಟೋ ಹಾಕಿ ಪೋಸ್ಟ್ ಹಾಕಲಾಗಿದೆ. ಫೇಸ್ ಬುಕ್ ಪೋಸ್ಟ್ ಭಾರಿ ವೈರಲ್ ಆಗಿದೆ. ಅರವಿಂದ ಬೆಲ್ಲದ್ ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಸದ್ಯ ಬೆಲ್ಲದ್ ಮತ್ತೊಮ್ಮೆ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿರುವಾಗ್ಲೇ ಪೋಸ್ಟ್ ಹರಿದಾಡ್ತಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಫೇಸ್ ವ್ಯಾಲ್ಯೂ ಇಲ್ಲ ಎಂದ ಶೆಟ್ಟರ್: ಅರವಿಂದ ಬೆಲ್ಲದ್ ರಾಜ್ಯದ ಮುಂದಿನ ಸಿಎಂ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋವಾಗ್ಲೇ, ಫೇಸ್ ಬುಕ್ ಗೆ ಫೇಸ್ ವ್ಯಾಲ್ಯೂ ಇಲ್ಲ ಎನ್ನೋ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರೋಕ್ಷವಾಗಿ ಬೆಲ್ಲದ್ ಗೆ ಟಾಂಗ್ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲ ತಾಣದಲ್ಲಿ ಅರವಿದ ಬೆಲ್ಲದ ಮುಂದಿನ ಸಿಎಂ ಎಂಬ ಸುದ್ದಿ ವಿಚಾರಕ್ಕೆ ಪ್ರತಿಕ್ರಿಯಲು ನಿರಾಕರಿಸಿದ್ದಾರೆ. ಫೇಸ್ ಬುಕ್ ಗೆ ಫೇಸ್ ವ್ಯಾಲ್ಯು ಇಲ್ಲದಂತಾಗಿದೆ. ಫೇಸ್ ಬುಕ್ ನಲ್ಲಿ ಬರೆಯುವಂಥವರಿಗೆ ನಮ್ಮ ರಿಯಾಕ್ಷನ್ ತಗೋಬೇಡಿ ಎಂದರು.

ನಾಯಕತ್ವ ಬದಲಾವಣೆ ಚರ್ಚೆಯಿಂದ ಆಡಳಿತಕ್ಕೆ ತೊಂದ್ರೆಯಾಗ್ತಿದೆ. ಪದೇ ಪದೇ ನಡೀತಿರೊ ಚರ್ಚೆಯಿಂದ ನಮ್ಮ ನಮ್ಮ ಇಲಾಖೆಯಲ್ಲಿ ಕೆಲಸ ಮಾಡಲು ತೊಂದ್ರೆ ಆಗ್ತಿದೆ. ಈ ಚರ್ಚೆ ನಡೆಯುತ್ತಿರೋದು ಅಪ್ರಸ್ತುತ. ನಾಯಕತ್ವ ಬದಲಾವಣೆ ಚರ್ಚೆ ಎಲ್ಲಿಂದ ಹುಟ್ಟಿಕೊಂಡಿದೆಯೊ ನನಗೆ ಗೊತ್ತಿಲ್ಲ. ನಾಯಕತ್ವ ಬದಲಾವಣೆ ಚರ್ಚೆ ಎಲ್ಲಿಯು ಆಗಿಲ್ಲ, ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆ ಆಗಿಲ್ಲ. ನಾಯಕತ್ವ ಬದಲಾವಣೆ ಆಗಲ್ಲ ಎಂದರು.

ಮುಂದಿನ‌ ಎರಡು ವರ್ಷ ಯಡಿಯೂರಪ್ಪನವರು ಸಿಎಂ ಇರ್ತಾರೆ. ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಸದ್ಯಕ್ಕೆ ಚುನಾವಣೆ ಬಂದಿಲ್ಲ, ಅವತ್ತಿನ ರಾಜಕೀಯ ಪರಿಸ್ಥಿತಿ ನೋಡಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ವಿಜಯೇಂದ್ರ ಸ್ವಾಮಿಜಿಗಳ ಭೇಟಿ ಮಾಡಿದ ವಿಚಾರಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಶೆಟ್ಟರ್ ತಿಳಿಸಿದ್ದಾರೆ.
Published by:Soumya KN
First published: