• Home
  • »
  • News
  • »
  • state
  • »
  • BY Vijayendra ನಮ್ಮ ಮನೆಗೆ ಬರೋದು ತಪ್ಪಾ..? Jagadish Shettar ಸಿಡಿಮಿಡಿ

BY Vijayendra ನಮ್ಮ ಮನೆಗೆ ಬರೋದು ತಪ್ಪಾ..? Jagadish Shettar ಸಿಡಿಮಿಡಿ

ಜಗದೀಶ್ ಶೆಟ್ಟರ್​, ವಿಜಯೇಂದ್ರ

ಜಗದೀಶ್ ಶೆಟ್ಟರ್​, ವಿಜಯೇಂದ್ರ

ನಮ್ಮನ್ನು ಬೇರೆ ಪಾರ್ಟಿಯವರು ಭೇಟಿಯಾದ್ರೆ ವಿಶೇಷ ಎನ್ನಬಹುದು. ವಿಶೇಷ ಇದ್ರೆ ನಾನೇ ನಿಮಗೆ ಹೇಳ್ತಿದ್ದೆ. ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇದನ್ನು ರಾಜಕೀಕರಣ ಮಾಡೋದು ಸರಿಯಲ್ಲ ಎಂದರು.

  • Share this:

ಹುಬ್ಬಳ್ಳಿ : ಬಿ.ವೈ.ವಿಜಯೇಂದ್ರ (BY Vijayendra) ನಮ್ಮ ಮನೆಗೆ ಬರೋದರಲ್ಲಿ ತಪ್ಪೇನಿದೆ. ಒಂದೇ ಪಕ್ಷದವರು ಒಂದು ಕಡೆ ಕೂತು ಮಾತಾಡೋದು ತಪ್ಪಾ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Former CM Jagadish Shettar) ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ(Hubballi)ಯಲ್ಲಿ ಮಾತನಾಡಿದ ಅವರು, ಬಿಜೆಪಿ (BJP) ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ತಮ್ಮ ನಿವಾಸಕ್ಕೆ ಭೇಟಿ ನೀಡಿರೋದರಲ್ಲಿ ವಿಶೇಷ ಅರ್ಥವೇನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಒಂದೇ ಪಾರ್ಟಿಯವರು ಭೇಟಿಯಾಗೋದು ಸಹಜ. ಅವರು ಯಾವುದೋ ಕೆಲಸಕ್ಕೆ ಹುಬ್ಬಳ್ಳಿಗೆ ಬಂದಿದ್ರು. ಹಾಗೇ ನಮ್ಮ ಮನೆಗೆ ಬಂದು ಭೇಟಿಯಾಗಿದ್ದಾರೆ ಎಂದು ತಿಳಿಸಿದರು.


ನಮ್ಮನ್ನು ಬೇರೆ ಪಾರ್ಟಿಯವರು ಭೇಟಿಯಾದ್ರೆ ವಿಶೇಷ ಎನ್ನಬಹುದು. ವಿಶೇಷ ಇದ್ರೆ ನಾನೇ ನಿಮಗೆ ಹೇಳ್ತಿದ್ದೆ. ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇದನ್ನು ರಾಜಕೀಕರಣ ಮಾಡೋದು ಸರಿಯಲ್ಲ ಎಂದರು. ಕಳೆದ ರವಿವಾರದಂದು ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ್ದ ಬಿ.ವೈ.ವಿಜಯೇಂದ್ರ, ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದರು. ನಂತರ ಶೆಟ್ಟರ್ ಪುತ್ರನ ಜೊತೆಗೆ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗೋಕೆ ವಿಜಯೇಂದ್ರ ತೆರಳಿದ್ದರು. ಶೆಟ್ಟರ್ ಹಾಗೂ ವಿಜಯೇಂದ್ರ ಭೇಟಿ ರಾಜಕೀಯ ಕುತೂಹಲ ಕೆರಳಿಸಿತ್ತು.


ಭಗವದ್ಗೀತೆ ಕಲಿಯೋದು ಒಳ್ಳೆಯದು...!


ಗುಜರಾತ್ ನಲ್ಲಿ ಭಗವದ್ಗೀತೆ ಕಲಿಕೆಗೆ ಆದೇಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಯಾವ ರೀತಿ ಆದೇಶ ಮಾಡಿದ್ದರೋ ನನಗೆ ಗೊತ್ತಿಲ್ಲ. ಆದ್ರೆ ಭಗವದ್ಗೀತೆ ಕಲಿಯೋದು ಒಳ್ಳೆಯದು. ಹಿಜಾಬ್ ಬಗ್ಗೆ ಈಗಾಗಲೇ ನ್ಯಾಯಲಯ ಆದೇಶ ನೀಡಿದೆ. ಅದನ್ನು ಪಾಲಿಸೋದು ನಮ್ಮ ಕರ್ತವ್ಯವಾಗಬೇಕು. ಇಲ್ಲಾಂದ್ರೆ ಅರಜಾಕತೆ ಉಂಟಾಗುತ್ತೆ. ಕಾನೂನು ಸುವ್ಯವಸ್ಥೆ ಹಾಳಾಗುತ್ತೆ


ಇದನ್ನೂ ಓದಿ:  Teachers Recruitment: 15 ಸಾವಿರ ಶಿಕ್ಷಕರ ನೇಮಕಾತಿಗೆ ಗ್ರೀನ್ ಸಿಗ್ನಲ್, ಸೋಮವಾರವೇ ರಾಜ್ಯ ಸರ್ಕಾರದಿಂದ ನೋಟಿಫಿಕೇಷನ್


ಜಗ್ಗಲಗಿ ಹಬ್ಬದ ವೈಭವ ಮರುಕಳಿಸಲಿದೆ.


ಹೋಳಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪಾರಂಪರಿಕ ಜಗ್ಗಲಗಿ ಹಬ್ಬಕ್ಕೆ ಸಿದ್ಧತೆ ನಡೆಸಿಲಾಗಿದೆ. ಪ್ರತಿಷ್ಠಿತ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಟೀಸರ್ ಮತ್ತು ಲಾಂಛನ ಬಿಡುಗಡೆಗೊಳಿಸಲಾಯಿತು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ನಡಕಟ್ಟಿನ ಬಿಡುಗಡೆ ಮಾಡಿದರು. ಹೋಳಿ ಹಬ್ಬ ಹಾಗೂ ರಂಗಪಂಚಮಿ ಪ್ರಯುಕ್ತವಾಗಿ ಹಲವು ವರ್ಷಗಳಿಂದ ಜಗ್ಗಲಗಿ ಹಬ್ಬ ಆಚರಿಸಲಾಗುತ್ತಿದೆ.


ಇದರ ಪ್ರಯುಕ್ತವಾಗಿ ಇಂದು ಲಾಂಛನ ಹಾಗೂ ಟೀಸರ್ ಬಿಡುಗಡೆ ಮಾಡಲಾಯಿತು. ಮಾರ್ಚ್ 20 ರಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಿಂದ ಜಗ್ಗಲಗಿ ಹಬ್ಬದ ಮೆರವಣಿಗೆ ಆರಂಭಗೊಳ್ಳುತ್ತದೆ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.


ಕಳೆದ ಬಾರಿ ಕೋವಿಡ್ ಕಾರಣದಿಂದ ಜಗ್ಗಲಗಿ ಹಬ್ಬ ರದ್ದಾಗಿತ್ತು. 2020 ರಲ್ಲಿಯೂ ಕೋವಿಡ್ ಕಾರಣದಿಂದ ಜಗ್ಗಲಗಿ ಹಬ್ಬ ಕಳೆಗುಂದಿತ್ತು.  ಈ ವರ್ಷ ಅದ್ಧೂರಿಯಾಗಿ ಜಗ್ಗಲಗಿ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಜಗ್ಗಲಗಿ ಹಬ್ಬದ ವೈಭವ ಮರುಕಳಿಸಲಿದೆ ಎಂದು ಲಾಂಛನ ಬಿಡುಗಡೆಯ ನಂತರ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮತ್ತಿತರರು ಉಪಸ್ಥಿತರಿದ್ದರು. .


ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕಾಗಿ ಈ ಸದಾರಮೆ ನಾಟಕವೇ? DK Shivakumarಗೆ ಬಿಜೆಪಿ ಪ್ರಶ್ನೆ


ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ನೀಡಿರುವ ಹೇಳಿಕೆಗೆ ಬಿಜೆಪಿ (BJP) ಖಾರವಾಗಿ ಪ್ರತಿಕ್ರಿಯಿಸಿದೆ. ಬಾಳೆಹೊನ್ನೂರಿನಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ನಾವು ಮತಾಂತರ ನಿಷೇಧ ಕಾಯ್ದೆಯನ್ನು (Conversion Prohibition Act) ವಿರೋಧಿಸುತ್ತವೆ. ಅವರು ಏನ್ ಬೇಕಾದ್ರೂ ಮಾಡಿಕೊಳ್ಳಲಿ. ನಾವು ಅಧಿಕಾರಕ್ಕೆ ಬಂದ ಮೇಲೆ ಎಲ್ಲವೂ ರಿವರ್ಸ್ ಆಗಲಿದೆ ಎಂದು ಹೇಳಿದ್ದರು.


ಈ ಹೇಳಿಕೆ ಕೆಂಡವಾಗಿರುವ ಕಮಲ ಪಾಳಯ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರುವ ಬಿಜೆಪಿ(Karnataka BJP), #ಹಿಂದೂವಿರೋಧಿಕಾಂಗ್ರೆಸ್ ಎಂಬ ಹ್ಯಾಶ್ ಟ್ಯಾಗ್ ಬಳಕೆ ಮಾಡಿದೆ.


ಇದನ್ನೂ ಓದಿ:  ಶಿಕ್ಷಣ & ಉದ್ಯೋಗಕ್ಕೆ ಧರ್ಮವಿಲ್ಲ, ಮಕ್ಕಳೇ ಶಾಲೆಗೆ ಬನ್ನಿ: ಕೇಂದ್ರ ಸಚಿವ Shobha Karandlaje ಕರೆ


ಮಾನ್ಯ ಡಿಕೆ ಶಿವಕುಮಾರ್ ಅವರೇ, ಮತಾಂತರ ನಿಯಂತ್ರಣ ಕಾಯ್ದೆ ರಿವರ್ಸ್‌ ಮಾಡುತ್ತೇವೆ ಎಂದಿದ್ದೀರಿ. ಅಂದರೆ ನೀವು ಹಿಂದೂಗಳನ್ನು ಮತಾಂತರ ಮಾಡಲೆಂದೇ ಒಂದು ಕಾನೂನು ರೂಪಿಸುತ್ತೀರಾ? ಮತಾಂತರ ನಿಯಂತ್ರಣ ಕಾಯ್ದೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆಕ್ರೋಶ ಭರಿತರಾಗಿದ್ದಾರೆ. ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕಾಗಿ ಈ ಸದಾರಮೆ ನಾಟಕವೇ ಎಂದು ಪ್ರಶ್ನೆ ಮಾಡಿದೆ.

Published by:Mahmadrafik K
First published: