• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi: ನಕಲಿ ಸಹಿ ಬಳಸಿ 35 ಲಕ್ಷ ಹಣ ದುರ್ಬಳಕೆ, ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ವಿರುದ್ಧ FIR

Hubballi: ನಕಲಿ ಸಹಿ ಬಳಸಿ 35 ಲಕ್ಷ ಹಣ ದುರ್ಬಳಕೆ, ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ವಿರುದ್ಧ FIR

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ ಬ್ಯಾಂಕ್ ಮ್ಯಾನೇಜರ್ ಸಂಧ್ಯಾ ನಕಲಿ ಸಹಿ ಮಾಡಿಸಿ, ಸಾಲ ಮಂಜೂರು ಮಾಡಿದ್ದರು, ಆರೋಪಿಗಳ ಜೊತೆ ಸೇರಿ ಹಣ ದುರ್ಬಳಕೆ ಮಾಡಿದ್ದಾರೆ.

  • Share this:

ಹುಬ್ಬಳ್ಳಿ (ಮಾ.5): ಬ್ಯಾಂಕ್​ ಮ್ಯಾನೇಜರ್​ಗಳೇ (Bank Manager) ಹಣ ದುರ್ಬಳಕ ಮಾಡಿದ್ರೆ ಜನರ ಕಥೆ ಏನು. ಹೌದು ಹುಬ್ಬಳ್ಳಿಯ (Hubballi) ಬ್ಯಾಂಕ್​ ಮ್ಯಾನೇಜರ್​ ಒಬ್ಬರು ಈ ರೀತಿ ಮಾಡಿದ್ದಾರೆ.ನಕಲಿ ಸಹಿ ಬಳಸಿ 35 ಲಕ್ಷ ರೂಪಾಯಿ ದುರ್ಬಳಕೆ (Misuse) ಆರೋಪ ಕೇಳಿ ಬಂದಿದ್ದು, ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ವಿರುದ್ಧ FIR ದಾಖಲು ಮಾಡಲಾಗಿದೆ. ನಕಲಿ ಸಹಿ (Duplicate Signature) ಬಳಸಿ 7 ಜನರಿಗೆ ತಲಾ 5 ಲಕ್ಷ ರೂಪಾಯಿಯಂತೆ ಸಾಲ ವಿತರಿಸಲಾಗಿತ್ತು. ಬ್ಯಾಂಕ್ ಮ್ಯಾನೇಜರ್ ಸಂಧ್ಯಾ ಟಿ.ಸಿ ಅವರು ಆರೋಪಿಗಳ ಜತೆ ಸೇರಿ ಸಾಲ ನೀಡಿದ್ದರು. ಒಟ್ಟು 8 ಜನರ ವಿರುದ್ಧ FIR ದಾಖಲಿಸಿಕೊಳ್ಳಲಾಗಿದೆ.


ಬ್ಯಾಂಕ್​ ಮ್ಯಾನೇಜರ್​ ದೋಖಾ


ಹುಬ್ಬಳ್ಳಿ ಬ್ಯಾಂಕ್ ಮ್ಯಾನೇಜರ್ ಸಂಧ್ಯಾ ನಕಲಿ ಸಹಿ ಮಾಡಿಸಿ, ಸಾಲ ಮಂಜೂರು ಮಾಡಿದ್ದರು. ಬ್ಯಾಂಕ್ ಸಾಲ ಮರುಪಾವತಿ ಆಗದ ಹಿನ್ನೆಲೆ, ಪ್ರಕರಣ ಬೆಳಕಿಗೆ ಬಂದಿತ್ತು.  ಮ್ಯಾನೇಜರ್​ ಮಾಡಿರೋ ಹಣ ದುರ್ಬಳಕೆ ವಿಚಾರ ತಿಳಿದ ಅದೇ ಬ್ಯಾಂಕ್ ಉದ್ಯೋಗಿಯೊಬ್ಬರು  ಕೇಶ್ವಾಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗದ್ದು, ಸಾಲ ಮರುಪಾವತಿ ಕುರಿತು ವಿಚಾರಣೆ ನಡೆಸಿದ ವೇಳೆ ಮ್ಯಾನೇಜರ್ ಮಾಡಿರೋ ಮೋಸ ಬಯಲಾಗಿದೆ.


Pratap Simha: ಮೋದಿಗೆ ಗಟ್ಸ್ ಇರೋದ್ದಕ್ಕೆ ರಿಸ್ಕ್ ತಗೊಂಡು ಜನರನ್ನ ರಕ್ಷಿಸುತ್ತಿದ್ದಾರೆ, ಟೀಕೆಗೆ 'ಸಿಂಹ' ತಿರುಗೇಟುಇದನ್ನೂ ಓದಿ: 


Hubballi: ಗೆಳೆತನದ ಹೆಸರಲ್ಲಿ ಮೋಸ: ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋದ ಮಹಿಳೆ


ಹುಬ್ಬಳ್ಳಿಯಲ್ಲಿ ಗೆಳೆತನದ  ಹೆಸರಲ್ಲಿ  ಮಹಿಳೆಯಿಂದಲೇ ಮಹಿಳೆಗೆ ಈ ಮೋಸ ನಡೆದಿದೆ. ಗಂಗಮ್ಮ ಸಂಶಿ ಎಂಬಾಕೆ ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿ ವಾಸ ಮಾಡುತ್ತಿರುವ ಇವರು ವಿದ್ಯಾನಗರದ ಅಕ್ಷಯ ಕಾಲೋನಿಯ ಶೋಭಾ ಅವರಿಂದ  ನವಲಗುಂದ ಅವರಿಂದ ವಂಚನೆಗೆ ಒಳಗಾಗಿದ್ದಾರೆ.  ಕಳೆದ 2018 ರಿಂದಲೂ ಶೋಭಾ ಅವರನ್ನು ನಂಬಿ ಹಲವು ವ್ಯವಹಾರ ನಡೆಸಿಕೊಂಡು ಬಂದಿದ್ದ ಶೋಭಾ ಅವರಿಗೆ ಗೆಳೆತನದ ಮರಳು ಮಾತುಗಳ ಜೊತೆಗೆ ವ್ಯವಹಾರದ ಲಾಭ ತೋರಿಸಿ 40 ಲಕ್ಷ ಮೋಸ ಮಾಡಿದ್ದಾರೆ.


ಸಾಲ ಕೊಡಿಸುವುದಾಗಿ ನಂಬಿಸಿದ್ದ ಮಹಿಳೆ
ಖಾಸಗಿ ಬ್ಯಾಂಕ್ ವೊಂದರಿಂದ ಈಕೆಯ ಮನೆಯ ಮೇಲೆ ಸಾಲ ಕೊಡಿಸುವುದಾಗಿ ಶೋಭಾ ಬ್ಯಾಂಕಿಗೆ ಅರ್ಜಿ ಹಾಕಿಸಿದ್ದಾರೆ. ಆದರೆ ಗಂಗಮ್ಮ ಅವರಿಗೆ ಆ ಬ್ಯಾಂಕಿನಿಂದ ಯಾವುದೇ ಸಾಲ ಮಂಜೂರಾಗದ ಹಿನ್ನೆಲೆಯಲ್ಲಿ ಶೋಭಾ ತನ್ನ ಮನೆಯ ಮೇಲೆ ಸಾಲ ಕೊಡಿಸುವುದಾಗಿ ನಂಬಿಸಿದ್ದಾಳೆ. ಇದಕ್ಕೂ ಮುನ್ನ ಗಂಗಮ್ಮ ಅವರ ಮನೆಯನ್ನು ಸಾಲದ ಭದ್ರತೆಯ ನೆಪದಲ್ಲಿ ಗಂಗಮ್ಮ ಅವರಿಂದ ಮನೆಯ ಮಾರಾಟದ  ಸಂಪೂರ್ಣ ಕರಾರು ಪತ್ರ ಬರೆಯಿಸಿಕೊಂಡಿದ್ದಾರೆ. ಆದರೆ ಕರಾರು ಪತ್ರ ಬರೆಯಿಸಿಕೊಂಡ ನಂತರ ಒಂದು ಬಿಡಿಗಾಸು ನೀಡದ ಶೋಭಾ, ಇದೀಗ 40 ಲಕ್ಷ ರೂಪಾಯಿ ಸಾಲ ತಿರುಗಿಸುವಂತೆ ಪೀಡಿಸುತ್ತಿದ್ದಾಳೆ ಎಂದು ಗಂಗಮ್ಮ ಆರೋಪಿಸಿದ್ದಾಳೆ.


ಇದನ್ನೂ ಓದಿ: Red Corn: ರೋಗಬಾಧೆಯೇ ಇಲ್ಲದ ಕೆಂಪು ಜೋಳ ಎಲ್ಲಿ ಸಿಗುತ್ತೆ? 20 ವರ್ಷಗಳಿಂದ ಬೆಳೆಯುತ್ತಿದ್ದಾರೆ ಈ ರೈತ!


ಲಕ್ಷ ಲಕ್ಷ ಪಡೆದು ಮೋಸ 
ಕಳೆದ ಹಲವು ವರ್ಷಗಳಿಂದ ಚಿರಪರಿಚಿತಳಾಗಿರುವ ಶೋಭಾ ಇವರೊಂದಿಗೆ ಗಂಗಮ್ಮ ಹಲವಾರು ವ್ಯವಹಾರ ನಡೆಸಿದ್ದಾಳೆ. ಸಾಲದೆಂಬಂತೆ ತನ್ನ ಸ್ನೇಹಿತೆಯರಿಗೂ ಶೋಭಾಳನ್ನು ಪರಿಚಯ ಮಾಡಿಕೊಂಡಿದ್ದಾಳೆ. ಅದಾದ ನಂತರ ಶೋಭಾ ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ಅವರಿಂದ ಲಕ್ಷ ಲಕ್ಷ ರೂಪಾಯಿ ಪಡೆದು, ನಂತರ ಹಿಂದುರಿಗಿಸದೇ ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಶೋಭಾ ಮಾಡುತ್ತಿರುವ ವಂಚನೆ ವಿರುದ್ಧ ಗಂಗಮ್ಮ ಸೇರಿ ಇತರೆ ಮಹಿಳೆಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

top videos
    First published: