Hubli: ಫ್ಯಾಕ್ಟರಿ ಸ್ಫೋಟಕ್ಕೆ ಕಾರಣವಾಯಿತೇ ಅಪಾಯಕಾರಿ ರಾಸಾಯನಿಕ? ಮಾಲೀಕ ಇನ್ನೂ ನಾಪತ್ತೆ!

ಹುಬ್ಬಳ್ಳಿ ತಾರಿಹಾಳ ಕಾರ್ಖಾನೆ ಬ್ಲಾಸ್ಟ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸ್ಪಾರ್ಕರ್ ಕ್ಯಾಂಡಲ್ ಬಳಕೆಗೆ ಅಪಾಯಕಾರಿ ರಸಾಯನಿಕ ಬಳಕೆ ಮಾಡ್ತಿದ್ದರೆಂಬ ಶಂಕೆ ವ್ಯಕ್ತವಾಗಿದೆ. ಕಾರ್ಖಾನೆ ಮಾಲೀಕ ಮತ್ತು ಪಾರ್ಟನರ್ ಗಳು ತಲೆಮರೆಸಿಕೊಂಡು ತಿರುಗುತ್ತಿದ್ದು, ಬಂಧನಕ್ಕೆ ಜಾಲ ಬೀಸಲಾಗಿದೆ.

ಘಟನಾ ಸ್ಥಳ

ಘಟನಾ ಸ್ಥಳ

  • Share this:
ಹುಬ್ಬಳ್ಳಿ: ತಾರಿಹಾಳ ಕಾರ್ಖಾನೆ ಬ್ಲಾಸ್ಟ್ ಪ್ರಕರಣದ (Factory Blast  Case) ತನಿಖೆ (Investigation) ಮುಂದುವರೆದಿದೆ. ಸ್ಫೋಟಕ್ಕೆ ಕಾರಣವಾದ ಅಂಶಗಳಿಂದ ಹಿಡಿದು ಎಲ್ಲ ಮಗ್ಗಲುಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಸ್ಪಾರ್ಕರ್ ಕ್ಯಾಂಡಲ್ ತಯಾರಿಕೆಗೆ ಅಪಾಯಕಾರಿ ಕೆಮಿಕಲ್ಸ್ ಬಳಸುತ್ತಿದ್ದರೆಂಬ ಶಂಕೆ ವ್ಯಕ್ತವಾಗಿದೆ. ಕಾರ್ಖಾನೆಯ ಮ್ಯಾನೇಜರ್ ಮಂಜುನಾಥನನ್ನು ಬಂಧಿಸಲಾಗಿದೆ ಆದರೂ, ಕಾರ್ಖಾನೆಯ ಮಾಲೀಕ ಮತ್ತು ಅವನ ಪಾರ್ಟನರ್ ಗಳು ತಲೆಮರೆಸಿಕೊಂಡು ತಿರುಗುತ್ತಿದ್ದಾರೆ. ಹುಬ್ಬಳ್ಳಿಯ ತಾರಿಹಾಳ ಸ್ಪಾರ್ಕಲ್ ಕ್ಯಾಂಡಲ್ ತಯಾರಿಕೆಗೆ ಸ್ಫೋಟಕ ವಸ್ತು ಬಳಕೆ ಮಾಡ್ತಿದ್ದರೆಂಬ ಮಾಹಿತಿ ಸಿಕ್ಕಿದೆ. ಯುದ್ಧ ಹಾಗೂ ಗಣಿಗಾರಿಕೆಗೆ ಬಳಸುವ ಸ್ಫೋಟಕ ವಸ್ತು ಬಳಕೆ ಮಾಡ್ತಿದ್ದರೆಂಬ ಶಂಕೆ ವ್ಯಕ್ತವಾಗಿದೆ. ಕಾರ್ಖಾನೆಯಲ್ಲಿ ಅರೆಬರೆ ಸುಟ್ಟು ಕರಕಲಾಗಿರೋ ರಸಾಯನಿಕ ಮಾದರಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರಸಾಯನಿಕ ಮಾದರಿ ಅಧಿಕಾರಿಗಳು ರವಾನಿಸಿದ್ದಾರೆ. ಕಾರ್ಖಾನೆ ಆವರಣದಲ್ಲಿ ಕೆಲ ಅಪಾಯಕಾರಿ ರಸಾಯನಿಕ ಪದಾರ್ಥ ಪತ್ತೆಯಾಗಿದೆ ಅನ್ನೋ ಮಾಹಿತಿ ಇದೆ.

ಅಪಾಯಕಾರಿ ರಾಸಾಯನಿಕ ಬಳಕೆ ಶಂಕೆ

ಬ್ಯೂಟೋನಾಲ್ ಹಾಗೂ ನೈಟ್ರೋ ಸೆಲಿಲೋಸ್ ರಸಾಯನಿಕ ಪದಾರ್ಥ ಬಳಸಿರೋ ಶಂಕೆ ವ್ಯಕ್ತವಾಗಿದೆ. ಗನ್ ಪೌಡರ್, ಬಾಂಬ್, ರಾಕೆಟ್, ಗಣಿಗಾರಿಕೆ, ಯುದ್ಧದಲ್ಲಿ ಸ್ಫೋಟಕ ವಸ್ತು ತಯಾರಿಸಲು ಈ ವಸ್ತುಗಳ ಬಳಕೆಗೆ ಅವಕಾಶವಿದೆ. ಅವುಗಳ ಬಳಕೆಗೆ ಕೆಲ ಮಾನದಂಡಗಳಿವೆ. ನಿರ್ಧಿಷ್ಟ ಪ್ರಮಾಣ, ಸಂಗ್ರಹ ಸ್ಥಳ, ಬಳಕೆಯ ಉದ್ದೇಶ, ಕಾರ್ಮಿಕರ ಸುರಕ್ಷತೆ ಪರಿಶೀಲಿಸಿ ಅನುಮತಿ ನೀಡಲಾಗುತ್ತದೆ. ಆದರೆ ಸ್ಪಾರ್ಕಲ್ ಕ್ಯಾಂಡಲ್ ಕಾರ್ಖಾನೆಯಲ್ಲಿ ಇದ್ಯಾವುದನ್ನೂ ಲೆಕ್ಕಿಸಿಲ್ಲ. ಯಾವುದೇ ಅನುಮತಿ ಪಡೆಯದೇ ಅಪಾಯಕಾರಿ ರಸಾಯನಿಕ ಬಳಕೆ ಆರೋಪ ಕೇಳಿ ಬಂದಿದೆ. ಕಾರ್ಖಾನೆಗೆ ಅಗತ್ಯವಿರೋ ಮುಂಬೈ, ಕೋಲ್ಕತಾ, ದೆಹಲಿ ಹಾಗೂ ಚೆನ್ನೈಗಳಿಂದ ಆಮದು ಮಾಡಿಕೊಳ್ಳುತ್ತಿದ್ದರೆಂಬ ಮಾಹಿತಿ ಇದೆ. ರಸಾಯನಿಕ ಸಾಗಿಸೋ ವಾಹನಗಳು ರಾತ್ರಿ ವೇಳೆಯೇ ಬರುತ್ತಿದ್ದವೆಂಬ ಮಾಹಿತಿ ಸಿಕ್ಕಿದೆ. ಈ ಕುರಿತು ಪೊಲೀಸ್ ಇಲಾಖೆ, ಜಿಲ್ಲಾಡಳಿತ ತನಿಖೆಯನ್ನು ಚುರುಕುಗೊಳಿಸಿದೆ.

ಇದನ್ನೂ ಓದಿ: Graveyards: ಇಲ್ಲಿ ಜನಕ್ಕೆ ಸತ್ತರೂ ನೆಮ್ಮದಿ ಇಲ್ವಂತೆ, ರಾಜ್ಯದ 4370 ಹಳ್ಳಿಗಳಲ್ಲಿ ಸ್ಮಶಾನಗಳೇ ಇಲ್ಲ!

ಮ್ಯಾನೇಜರ್ ಬಂಧನ, ಮಾಲೀಕ ನಾಪತ್ತೆ 
ಹುಬ್ಬಳ್ಳಿಯ ತಾರಿಹಾಳ ಕಾರ್ಖಾನೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಮ್ಯಾನೇಜರ್ ಮಂಜುನಾಥನನ್ನು ಬಂಧಿಸಲಾಗಿದೆ. ಕಾರ್ಖಾನೆ ಮಾಲೀಕ ಸೇರಿ ಮುವ್ವರು ಪಾರ್ಟನರ್ ಗಳು ನಾಪತ್ತೆಯಾಗಿದ್ದಾರೆ. ಸ್ಪಾರ್ಕಲ್ ಕಾರ್ಖಾನೆಗೆ ಕಚ್ಚಾ ಸಾಮಾಗ್ರಿ ಪೂರೈಸಿದವರ ವಿಚಾರಣೆ ನಡೆಸಲಾಗುತ್ತಿದೆ. ಹುಬ್ಬಳ್ಳಿಯ ತಾರೀಹಾಳ ಕೈಗಾರಿಕಾ ಪ್ರದೇಶದಲ್ಲಿನ ಸ್ಪಾರ್ಕಲ್ ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಅಗ್ನಿ ದುರಂತ ಸಂಭವಿಸಿ ಮೂವರು ಮೃತಪಟ್ಟು, 5 ಜನ ಗಾಯಗೊಂಡಿದ್ದರು. ಘಟನೆ ನಡೆದು ನಾಲ್ಕು ದಿನಗಳಾದ್ರೂ ಫ್ಯಾಕ್ಟರಿ ಮಾಲೀಕ ಪತ್ತೆಯಾಗಿಲ್ಲ.

ತಲೆಮರೆಸಿಕೊಂಡಿರುವ ಆರೋಪಿಗಳು 

ಘಟನೆ ನಡೆದು ಕೆಲ ಹೊತ್ತಿಗೆ ಮಾಲೀಕನ ನಂಬರ್ ಪತ್ತೆ ಮಾಡಿ ಪೊಲೀಸರು ಕರೆ ಮಾಡಿದ್ದರು. ತಾನು ಮುಂಬೈನಲ್ಲಿದ್ದು, ನಾಳೆ ಬರುವುದಾಗಿ ತಿಳಿಸಿದ್ದ ಕಾರ್ಖಾನೆ ಮಾಲೀಕ ಅಬ್ದುಲ್ ಶೇಕ್ ಇದುವರೆಗೂ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಅಡ್ಡಾಡುತ್ತಿದ್ದಾನೆ. ಇಬ್ಬರು ಪಾರ್ಟನರ್ ಗಳು ಸಹ ತಲೆಮರೆಸಿಕೊಂಡಿದ್ದಾರೆ. ಕಾರ್ಖಾನೆಯ ಪಾರ್ಟನರ್ ಗಳಾದ ತಬಸುಮ್ ಹಾಗೂ ಆರೀಫ್ ಸಹ ನಾಪತ್ತೆಯಾಗಿದ್ದಾರೆ. ಅಬ್ದುಲ್ ಶೇಕ್ ಮುಂಬೈ ಮೂಲದ ಏಜೆನ್ಸಿ ತೆಗೆದುಕೊಂಡು ಈ ಘಟಕ ಇಲ್ಲಿ ಶುರು ಮಾಡಿದ್ದ ಎಂಬ ಮಾಹಿತಿ ಸಿಕ್ಕಿದೆ. ಸ್ಪಾರ್ಕಲ್ಸ್ ಕಾರ್ಖಾನೆಗೆ ಕಚ್ಚಾ ಸಾಮಾಗ್ರಿ ಪೂರೈಸಿದವರ ವಿಚಾರಣೆಯನ್ನೂ ತೀವ್ರಗೊಳಿಸಲಾಗುದೆ. ಗಾಯಾಳುಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
Published by:Kavya V
First published: