Curfew ಉಲ್ಲಂಘಿಸೋ ಭಂಡತನಕ್ಕೆಲ್ಲಾ Vote ಬೀಳಲ್ಲ: ಕಾಂಗ್ರೆಸ್ಸಿಗರ ಪಾದಯಾತ್ರೆ ಬಗ್ಗೆ ಶೆಟ್ಟರ್ ಲೇವಡಿ

ಕರ್ಫ್ಯೂ ವೇಳೆಯಲ್ಲಿ ಕಾಂಗ್ರೆಸ್ ಭಂಡತನ ಪ್ರದರ್ಶನ ಮಾಡುತ್ತಿದೆ ಎಂದು ಶೆಟ್ಟರ್ ಕಿಡಿಕಾರಿದ್ದಾರೆ. ಮೇಕೆದಾಟು ಯೋಜನೆಗೆ ತೋರಿಸುತ್ತಿರುವ ಕಾಳಜಿ, ಮಹದಾಯಿಗೆ ಏಕಿಲ್ಲ ಎಂದು ಪ್ರಶ್ನಿಸಿದರು.

ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್

  • Share this:
ಹುಬ್ಬಳ್ಳಿ: ಮೇಕೆದಾಟು (Mekedatu) ಯೋಜನೆಗೆಗಾಗಿ ಕಾಂಗ್ರೆಸ್ (Congress) ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Ex CM Jagadish Shettar )ಹಾಗೂ ಸಚಿವ ಶಂಕರಪಾಟೀಲ ಮುನೇನಕೊಪ್ಪ ಕಿಡಿಕಾರಿದ್ದಾರೆ. ಕರ್ಫ್ಯೂ ವೇಳೆಯಲ್ಲಿ ಕಾಂಗ್ರೆಸ್ ಭಂಡತನ ಪ್ರದರ್ಶನ ಮಾಡುತ್ತಿದೆ ಎಂದು ಶೆಟ್ಟರ್ ಲೇವಡಿ ಮಾಡಿದ್ದಾರೆ. ಕ್ಷುಲ್ಲಕ ರಾಜಕಾರಣ ಕೈ ಬಿಡುವಂತೆ ಮುನೇನಕೊಪ್ಪ ಆಗ್ರಹಿಸಿದ್ದಾರೆ. ಪಾದಯಾತ್ರೆ ಹೆಸರಲ್ಲಿ ಕಾಂಗ್ರೆಸ್ ಭಂಡತನದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷದಿಂದ ಭಂಡ ರಾಜಕಾರಣ ನಡೆದಿದೆ. ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿ ಇಟ್ಟುಕೊಂಡು ಪಾದಯಾತ್ರೆ ಕೈಗೊಳ್ಳಲಾಗಿದೆ. ಅಂತಾರಾಜ್ಯ ಜಲ ವಿವಾದಗಳನ್ನು ಸೂಕ್ಷ್ಮವಾಗಿ ಬಗೆಹರಿಸಬೇಕಾಗುತ್ತದೆ. ಹೋರಾಟದ ಮೂಲಕ ಇದನ್ನು ಪರಿಹರಿಸೋಕೆ ಆಗಲ್ಲ. ವಿಧಾನಸಭೆ ಚುನಾವಣೆ ಇನ್ನೂ ಒಂದೂವರೆ ವರ್ಷವಿದೆ. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಈಗಿನಿಂದಲೇ ರಾಜಕಾರಣ ಆರಂಭಿಸಿದೆ.

ಅಧಿಕಾರದಲ್ಲಿದ್ದಾಗ ಸುಮ್ಮನಿದ್ದರು..

ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಯನ್ನು ಚುನಾವಣಾ ಅಸ್ತ್ರವಾಗಿ ಬಳಸುತ್ತಿದೆ. ಪಾದಯಾತ್ರೆ ಮಾಡುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳ್ಳುವಂತೆ ಕಾಂಗ್ರೆಸ್ ಮಾಡ್ತಿದೆ. ನೀರಾವರಿ ಇರಲಿ ಯಾವುದೇ ಯೋಜನೆ ಇರಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದರ ಬಗ್ಗೆ ಚಕಾರ ಎತ್ತಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ಇದಕ್ಕೊಂದು ಪರಿಹಾರ ಕೊಡುವ ಪ್ರಯತ್ನ ನಡೆದಿದೆ. ಇಷ್ಟು ವರ್ಷ ಸುಮ್ಮನೆ ಕುಳಿತು ಈಗ ಏಕೆ ಕಾಂಗ್ರೆಸ್ ನವರು ಹೋರಾಟ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ ಶೆಟ್ಟರ್, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಮೇಕೆದಾಟು ಯೋಜನೆ ಆರಂಭಿಸಬಹುದಿತ್ತಲ್ಲವೇ ಎಂದಿದ್ದಾರೆ.

ಇದನ್ನೂ ಓದಿ: ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar

ಇದು ನಾಚಿಕೆಗೇಡಿನ ವಿಷಯ

ಅಧಿವೇಶನದ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್ ನವರು ಗಂಭೀರ ಚರ್ಚೆ ಮಾಡೋ ಪ್ರಯತ್ನ ಮಾಡಲಿಲ್ಲ. ಅಸೆಂಬ್ಲಿಯಲ್ಲಿ ಇದನ್ನು ಚರ್ಚಿಸುವುದಿಲ್ಲ. ಚುನಾವಣೆ ಮತಬ್ಯಾಂಕ್ ರಾಜಕಾರಣಕ್ಕಾಗಿ ಈ ಪಾದಯಾತ್ರೆ ಮಾಡ್ತಿದಾರೆ. ಕೋವಿಡ್ ನಿಯಮಗಳಿದ್ದರೂ ಅದನ್ನು ಉಲ್ಲಂಘಿಸಿ ಹೋಗ್ತಿದಾರೆ ಎಂದರೆ ನಾಚಿಕೆಗೇಡಿನ ವಿಷಯ. ಇಡೀ ದೇಶದಲ್ಲಿ ಕೋವಿಡ್ ಮೂರನೇ ಅಲೆ ಏಳುತ್ತಿದೆ. ಕರ್ಫ್ಯೂ ವಿಧಿಸಿದ ಸಂದರ್ಭದಲ್ಲಿಯೂ ಇವರು ಪಾದಯಾತ್ರೆ ಮಾಡುತ್ತಿದ್ದಾರೆ.

ಕಾಂಗ್ರೆಸ್​​ನಿಂದ ಕೇವಲ ವೋಟ್​ ಪಾಲಿಟಿಕ್ಸ್​ 

ಇವರಿಗೆ ರಾಜಕೀಯ ಹಿತಾಸಕ್ತಿಯೇ ಮುಖ್ಯ ಹೊರತು ರಾಜ್ಯದ ಹಿತಾಸಕ್ತಿ ಅಲ್ಲ. ಕಾಂಗ್ರೆಸ್ ನವರು ಇಲ್ಲಿಯವರೆಗೂ ಬರೀ ರಾಜಕಾರಣ ಮಾಡಿಕೊಂಡೇ ಬಂದಿದ್ದಾರೆ. ದೇಶ ಮತ್ತು ರಾಜ್ಯವನ್ನು ಲೂಟಿ ಮಾಡಿಕೊಂಡು ಬಂದಿದ್ದಾರೆ. ಮೇಕೆ ದಾಟು ಪಾದಯಾತ್ರೆ ಕೇವಲ ರಾಜಕೀಯ ಪ್ರಹಸನವಾಗಿದೆ. ಕಾನೂನು ಉಲ್ಲಂಘಿಸಿದರೆ ನಮಗೆ ಹೆಚ್ಚು ಮತ ಸಿಗುತ್ತೆ ಅಂತ ಕಾಂಗ್ರೆಸ್ ನವರು ಅಂದುಕೊಂಡಿದ್ದಾರೆ. ಆದರೆ ಇದಕ್ಕೆ ಜನತೆಯೇ ತಕ್ಕ ಪಾಠ ಕಲಿಸ್ತಾರೆ ಎಂದು ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ಕೈಬಿಡಿ ಎಂದ ಮುನೇನಕೊಪ್ಪ 

ಕೇವಲ ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಪಕ್ಷ ಮೇಕದಾಟು ಪಾದಯಾತ್ರೆ ಕೈಗೊಂಡಿದ್ದು, ಇಂತಹ ಕ್ಷುಲ್ಲಕ ರಾಜಕಾರಣ ಕೈ ಬಿಡುವಂತೆ ಜವಳಿ, ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನದ್ದು ಮುಂದಿನ ಚುನಾವಣೆಗೆ ಮಾತ್ರ ಪಾದಯಾತ್ರೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಚುನಾವಣೆಗೋಸ್ಕರ ಮಾತ್ರ ಪಾದಯಾತ್ರೆ ಮಾಡ್ತಿದಾರೆ.

ಇದನ್ನೂ ಓದಿ: Congress Padayatre: ಮೇಕೆದಾಟು ಪಾದಯಾತ್ರೆ ಅರ್ಧದಲ್ಲೇ ಸುಸ್ತಾದ ಸಿದ್ದರಾಮಯ್ಯ.. 4 ಕಿ.ಮೀ ನಡೆದು ಕಾರಿನಲ್ಲಿ ವಾಪಸ್​!

ಮಹದಾಯಿ ಸಮಯದಲ್ಲೂ ಕಾಂಗ್ರೆಸ್ ನಿಂದ ಇದೇ ಧೋರಣೆ ವ್ಯಕ್ತವಾಗುತ್ತಿದೆ. ಗೋವಾ ಚುನಾವಣೆ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒಂದು ಹನಿ ನೀರು ಕರ್ನಾಟಕಕ್ಕೆ ಬಿಡುವುದಿಲ್ಲ ಅಂತ ಹೇಳಿದ್ರು. ಮಹದಾಯಿ ಬಗ್ಗೆ ಕಾಂಗ್ರೆಸ್ ಗೆ ಸ್ಪಷ್ಟ ನಿಲುವಿಲ್ಲ. ಅದೇ ಜಿಲ್ಲೆಯಲ್ಲಿ ಅವರು ಏನೆಲ್ಲ ಕೆಲ್ಸ ಮಾಡಿದ್ದಾರೆ ಅಂತ ಗೊತ್ತಿಲ್ಲ. ಅಂತಿಮ ಸ್ವರೂಪಕ್ಕೆ ನಾವು ಕಳಸಾ ಬಂಡೂರಿ ಹೋರಾಟ ತಂದಿದ್ದೇವೆ. ಮಹಾದಾಯಿಗಾಗಿ ಯಡಿಯೂರಪ್ಪ ಸಿಎಂ ಇದ್ದಾಗ ಹಣವನ್ನೂ ಮೀಸಲಿಟ್ಟಿದ್ದಾರೆ. ಮುಂದಿನ ದಿನದಲ್ಲಿ ಮಹದಾಯಿಗೆ ಅಂತಿಮ ಸ್ವರೂಪ ತರಲಿದ್ದೇವೆ ಎಂದು ತಿಳಿಸಿದರು.
Published by:Kavya V
First published: