NDA ಮಾದರಿ ಪೊಲೀಸರ ತರಬೇತಿಗೆ ಕೇಂದ್ರ ಸ್ಥಾಪನೆ; ಸಿಎಂ ಬಸವರಾಜ ಬೊಮ್ಮಾಯಿ

ರಾಷ್ಟ್ರೀಯ ರಕ್ಷಣಾ ಅಕಾಡೆಮಿ(N D A) ತರಬೇತಿ ಕೇಂದ್ರದ ಮಾದರಿಯಲ್ಲಿ  ರಾಜ್ಯದ ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳ ತರಬೇತಿಗಾಗಿ ಪ್ರತ್ಯೇಕ ಕೇಂದ್ರ ಸ್ಥಾಪಿಸಲಾಗುವುದು

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
ಹುಬ್ಬಳ್ಳಿ(ಸೆ. 27): ಅವಳಿ ನಗರದಲ್ಲಿ ಪೊಲೀಸ್ ಠಾಣೆಗಳನ್ನುಮತ್ತಷ್ಟು ಬಿಗಿ ಮಾಡುವ  ಅವಶ್ಯಕತೆ ಇದೆ ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( (CM Basavaraja Bommai) )ಪೊಲೀಸ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಪೊಲೀಸ್ ಕಮೀಷನರ್ (Police Commissioner) ಗಳು ಹಾಗೂ ಹಿರಿಯ ಅಧಿಕಾರಿಗಳು (senior police Officer) ಫೀಲ್ಡ್ ಗೆ ಇಳಿಯಬೇಕು. ಕಚೇರಿಯಲ್ಲಿ ಕುಳಿತು ಆಡಳಿತ ಕೆಲಸ ಮಾಡುವುದಷ್ಟೇ ಪೊಲೀಸರ ಕರ್ತವ್ಯವಲ್ಲ.

ಫೀಲ್ಡ್​ಗೆ ಇಳಿಯುವಂತೆ ಅಧಿಕಾರಿಗಳಿಗೆ ಸೂಚನೆ

ಕೆಳ ಹಂತದ ಕಾರ್ಯವೈಖರಿ ತಿಳಿಯುವುದಕ್ಕೆ ಹಿರಿಯ ಅಧಿಕಾರಿ ಠಾಣೆಗಳಿಗೆ ಹೋಗಿ ಕುಳಿತುಕೊಳ್ಳಬೇಕು. ಕಛೇರಿಯಲ್ಲಿ ಕುಳಿತು ಕೆಲಸ ಮಾಡೋದನ್ನು ಬಿಡಿ. ಫೀಲ್ಡ್ ಗೆ ಇಳಿದು ಕಮೀಷನರ್, ಡಿಸಿಪಿಗಳು ಕೆಲಸ ಮಾಡಬೇಕು. ಹುಬ್ಬಳ್ಳಿಯ ಧಾರವಾಡ ಇತ್ತೀಚೆಗೆ ಕ್ರೈಂ ಹೆಚ್ಚಾಗುತ್ತಿದೆ. ಐದಾರು ಠಾಣೆಗಳ ಕಾರ್ಯವೈಖರಿ ಬದಲಾಗಬೇಕಿದೆ. ಹುಬ್ಬಳ್ಳಿ ಧಾರವಾಡ ಹೆಸರಿಗೆ ಮಸಿ ಬಳಿಯೋ ಕೆಲಸ ಕೆಲ‌ ಕಿಡಿಗೇಡಿಗಳಿಂದ ನಡೀತಿದೆ. ಅಂಥವರನ್ನು ನಿಯಂತ್ರಿಸೋದು ದೊಡ್ಡ ಕಷ್ಟವಲ್ಲ ಎಂದು ಸಿಎಂ ಹಿರಿಯ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಹುಬ್ಬಳಿಯ ಇಂಚಿಂಚೂ ಗೊತ್ತು

ನನಗೆ ಹುಬ್ಬಳ್ಳಿಯ ಪ್ರತಿ ಗಲ್ಲಿ ಗಲ್ಲಿಯೂ ಗೊತ್ತು. ಎಲ್ಲರೂ ಸೇರಿ‌ ಒಳ್ಳೆಯ ಕೆಲಸ ಮಾಡೋಣ. 60 ತಿಂಗಳಲ್ಲಿ 59 ತಿಂಗಳು ಅಭಿವೃದ್ಧಿ ಮಾಡೋಣ. ಒಂದು ತಿಂಗಳು ಮಾತ್ರ ರಾಜಕಾರಣ ಮಾಡೋಣ. ಗೋಡಾ ಹೈ- ಮೈದಾನ ಬೀ ಹೈ ಎಂದು ಹಿಂದಿ ಡೈಲಾಗ್ ಹೊಡೆದು ಅಭಿವೃದ್ದಿಗೆ ಮಹತ್ವ ನೀಡೋಣ ಎಂದರು.

ಇದನ್ನು ಓದಿ: ಸೋಂಕು ಕಡಿಮೆಯಾದರೂ ತಗ್ಗದ ಆತಂಕ; ಹಾಸನದಲ್ಲಿ ಶಾಲೆಗೆ ಬರಲು ಮಕ್ಕಳು ಹಿಂದೇಟು

ತನಿಖೆ ವೇಗ ಹೆಚ್ಚಿಸಿ

ಪೊಲೀಸ್ ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ರಾಜ್ಯದ ಕಲಬುರ್ಗಿ,ಹುಬ್ಬಳ್ಳಿ-ಧಾರವಾಡ ,ಮೈಸೂರು ಹಾಗೂ ಇತರ ಪ್ರಮುಖ ನಗರಗಳಲ್ಲಿ ಒಟ್ಟು ಆರು ವಿಧಿವಿಜ್ಞಾನ (ಎಫ್ ಎಸ್ ಎಲ್)  ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.ಈ ಕುರಿತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗಿದೆ. ಆಫೀಸರ್ ಆನ್ ಕ್ರೈಮ್ ಸೀನ್ ಅಧಿಕಾರಿಗಳನ್ನು ನೇಮಿಸಿಕೊಂಡು ಅವರಿಗೆ ಉನ್ನತ ಮಟ್ಟದ ಎಫ್ ಎಸ್ ಎಲ್ ತರಬೇತಿ ನೀಡಿ ಅಪರಾಧ ಕೃತ್ಯಗಳ ಸಾಕ್ಷ್ಯಾಧಾರ ನಾಶಕ್ಕೆ ಅವಕಾಶವಿಲ್ಲದೇ ಮಹಜರು ನಡೆಸಿ, ಪ್ರಯೋಗಾಲಯಕ್ಕೆ ಕಳುಹಿಸುವ ಕ್ರಮಗಳ ಸ್ಪಷ್ಟ ತಿಳುವಳಿಕೆ ನೀಡಲಾಗುವುದು.

ಇದನ್ನು ಓದಿ: ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ವಿಸ್ತರಣೆ; ಅ. 11ರವರೆಗೆ ಜಾರಿ

ಎನ್​ಡಿಎ ರೀತಿ ಪೊಲೀಸ್​ ಅಧಿಕಾರಿಗಳಿಗೆ ತರಬೇತಿ

ಪುಣೆಯ ಕಡಕ್‌ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(N D A) ತರಬೇತಿ ಕೇಂದ್ರದ ಮಾದರಿಯಲ್ಲಿ  ರಾಜ್ಯದ ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳ ತರಬೇತಿಗಾಗಿ ಪ್ರತ್ಯೇಕ ಕೇಂದ್ರ ಸ್ಥಾಪಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

16 ಸಾವಿರ ನೇಮಕಾತಿ
16 ಸಾವಿರ ಪೊಲೀಸ್ ಪೇದೆ ಹಾಗೂ ಸಬ್ ಇನ್ಸ್‌ಪೆಕ್ಟರುಗಳ ನೇಮಕಾತಿ ಮಾಡಲಾಗುತ್ತಿದೆ. ಮಧ್ಯಮ ಹಂತದ ಅಧಿಕಾರಿಗಳಿಗೆ ವಿಶೇಷ ತರಬೇತಿ ಅವಶ್ಯಕತೆ ಇದೆ.  ಮುಂದಿನ ಐದು ವರ್ಷದಲ್ಲಿ 500 ಪೊಲೀಸ್ ಠಾಣೆ ನಿರ್ಮಿಸುವ ಗುರಿ ಇದೆ. 10 ಸಾವಿರ  ಪೊಲೀಸ್ ವಸತಿ ಗೃಹ  ನಿರ್ಮಿಸಲಾಗುವುದು. ಶ್ವಾನಗಳ ತರಬೇತಿಗೆ ಡಾಗ್ ಕ್ಯಾನಲ್  ಕೇಂದ್ರಗಳನ್ನು ಸ್ಥಾಪಿಸಲಾಗುವುದು. ನೆರೆಯ ದೇಶಗಳಲ್ಲಿ  ಆಂತಕವಾದಿಗಳು ದೇಶದ ಆಡಳಿತ ನಡೆಸುವ ಮಟ್ಟಕ್ಕೆ ಹೋಗುತ್ತಿದ್ದಾರೆ. ನಮ್ಮ ದೇಶದ ಭದ್ರತೆಗೆ ಪ್ರತಿಯೊಬ್ಬರೂ ದೇಶಪ್ರೇಮ ಹಾಗೂ ಜಾಗೃತಿಯಿಂದ ತಮ್ಮ ಜವಾಬ್ದಾರಿ ನಿರ್ವಹಿಸಬೇಕು.  ಪೊಲೀಸರು ದಕ್ಷವಾಗಿ ಕರ್ತವ್ಯ ನಿರ್ವಹಿಸಿದರೆ ಶಾಂತಿ ನೆಲೆಸುತ್ತದೆ ಎಂದು ಕರೆ ನೀಡಿದರು.
Published by:Seema R
First published: