Airport ಮಾತ್ರವಲ್ಲ, ಹುಬ್ಬಳ್ಳಿ ರೈಲು ನಿಲ್ದಾಣದಲ್ಲೂ ಉಗಾಂಡಾ ಮಹಿಳೆಯಿಂದ Drug Smuggling

ಮಕ್ಕಳ ಆಹಾರದ ಬಾಕ್ಸ್‌ಗಳಲ್ಲಿ 1.50 ಕೋಟಿ ರೂಪಾಯಿ ಮೌಲ್ಯದ ಮೆಥಾಂಫೆಟಮೈನ್ ಎಂಬ ಡ್ರಗ್ಸ್​ ಸಾಗಿಸುತ್ತಿರುವುದು ಪತ್ತೆಯಾಗಿದೆ. ಶಂಕಿತ ಆರೋಪಿಯು ದೆಹಲಿಯಿಂದ ಕರ್ನಾಟಕದ ಡೀಲರ್‌ಗಳಿಗೆ ವಿತರಿಸಲು ಎರಡು ಬಾಕ್ಸ್‌ಗಳಲ್ಲಿ 995 ಗ್ರಾಂ ಡ್ರಗ್ಸ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದಳು ಎಂಬ ಮಾಹಿತಿ ಹೊರ ಬಂದಿದೆ.  

ಆಹಾರದ ಬಾಕ್ಸ್​ನಲ್ಲಿ ಡ್ರಗ್ಸ್​

ಆಹಾರದ ಬಾಕ್ಸ್​ನಲ್ಲಿ ಡ್ರಗ್ಸ್​

  • Share this:
ಹುಬ್ಬಳ್ಳಿ: ಇಷ್ಟು ದಿನ ವಿಮಾನಗಳ ಮೂಲಕ ಡ್ರಗ್ಸ್​ ಸಾಗಾಟಕ್ಕೆ (Drug Smuggling) ಯತ್ನಿಸಿ ಏರ್​ಪೋರ್ಟ್​ನಲ್ಲಿ ವಿದೇಶಿ ಮಹಿಳೆಯರು ಸಿಕ್ಕಿ ಬೀಳುತ್ತಿದ್ದ ಸುದ್ದಿಯನ್ನು ಕೇಳುತ್ತಿದ್ದೆವು. ಈಗ ಈ ಡ್ರಗ್ಸ್​ ಜಾಲ ರೈಲ್ವೆ ಮಾರ್ಗವನ್ನು ಬಳಸಿಕೊಳ್ಳುತ್ತಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB- Narcotics Control Bureau)ಯ ಬೆಂಗಳೂರು ವಲಯ ಘಟಕದ ಪೊಲೀಸರು ರೈಲಿನಲ್ಲಿ ಡ್ರಗ್ಸ್ ಕಳ್ಳಸಾಗಣೆ ಯತ್ನವನ್ನು ಭೇದಿಸಿದ್ದಾರೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ (Hubali railway station) 29 ವರ್ಷದ ಉಗಾಂಡಾ ಮಹಿಳೆಯನ್ನು (Ugandan woman ) ಪರಿಶೀಲಿಸಿದಾಗ ಡ್ರಗ್ಸ್​ ಸಾಗಾಟ ಬಯಲಾಗಿದೆ. ಮಕ್ಕಳ ಆಹಾರದ ಬಾಕ್ಸ್‌ಗಳಲ್ಲಿ 1.50 ಕೋಟಿ ರೂಪಾಯಿ ಮೌಲ್ಯದ ಮೆಥಾಂಫೆಟಮೈನ್ ಎಂಬ ಡ್ರಗ್ಸ್​ ಸಾಗಿಸುತ್ತಿರುವುದು ಪತ್ತೆಯಾಗಿದೆ. ಶಂಕಿತ ಆರೋಪಿಯು ದೆಹಲಿಯಿಂದ ಕರ್ನಾಟಕದ ಡೀಲರ್‌ಗಳಿಗೆ ವಿತರಿಸಲು ಎರಡು ಬಾಕ್ಸ್‌ಗಳಲ್ಲಿ 995 ಗ್ರಾಂ ಡ್ರಗ್ಸ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದಳು ಎಂಬ ಮಾಹಿತಿ ಹೊರ ಬಂದಿದೆ.  

ಪಾರ್ಟಿ ಡ್ರಗ್ಸ್ ಕಳ್ಳಸಾಗಣೆ

ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಿಗೆ ರೈಲಿನ ಮೂಲಕ ದೊಡ್ಡ ಪ್ರಮಾಣದ ಪಾರ್ಟಿ ಡ್ರಗ್ಸ್ ಕಳ್ಳಸಾಗಾಣೆಯಾಗುತ್ತಿದೆ ಎಂದು ಮಾದಕ ದ್ರವ್ಯ ನಿಗ್ರಹ ಸಂಸ್ಥೆಗೆ ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡಾಗ ಮಾದಕ ದ್ರವ್ಯ ದಂಧೆ ಬಯಲಾಗಿದೆ ಎಂದು ಬೆಂಗಳೂರು ಎನ್‌ಸಿಬಿಯ ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಎನ್‌ಸಿಬಿ ತಂಡ ಹುಬ್ಬಳ್ಳಿಗೆ ಧಾವಿಸಿ, ರೈಲು ನಿಲ್ದಾಣದಲ್ಲಿ ಪರಿಶೀಲನೆ ನಡೆಸಿತು ದೆಹಲಿಯಿಂದ ಬಂದ ರೈಲನ್ನು ಹತ್ತಿದರು ಮತ್ತು ಪ್ರಯಾಣಿಕರನ್ನು ಪರಿಶೀಲಿಸಿದರು. ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಆಫ್ರಿಕನ್ ಮಹಿಳೆ ಪತ್ತೆಯಾದಳು.

ಇದನ್ನೂ ಓದಿ: Bengaluru Airport: ಗುಪ್ತಾಂಗದೊಳಗೆ ಬರೋಬ್ಬರಿ ಅರ್ಧ ಕೆಜಿ ಚಿನ್ನ ಬಚ್ಚಿಟ್ಟಿಕೊಂಡು ಶಾಕ್ ಕೊಟ್ಟ ಮಹಿಳೆ!

1.50 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್

ತಂಡವು ತಕ್ಷಣವೇ ಮಹಿಳೆಯನ್ನು ತಡೆಹಿಡಿದು ಮಗುವಿನ ಆಹಾರದ ಎರಡು ಬಾಕ್ಸ್‌ಗಳನ್ನು ಚೆಕ್​ ಮಾಡಿದಾಗ ಬಿಳಿ ಹರಳಿನಂತಹ ವಸ್ತು ಸಿಕ್ಕಿತು. ಅವುಗಳನ್ನು ಕತ್ತರಿಸಿ ಅದನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸಿದಾಗ, ಅವು ಪಾರ್ಟಿ ಡ್ರಗ್ಸ್ ಅಂದರೆ ಫೇಮಸ್​​ ಮಾದಕ ಉತ್ತೇಜಕ ಮೆಥಾಂಫೆಟಮೈನ್ ಎಂದು ಖಚಿತಪಡಿಸಿತು. ಕ್ರಿಸ್ಟಲ್ ಮೆಥ್ ಎಂದು ಔಷಧ ವಲಯಗಳಲ್ಲಿ ಪರೆಯಲಾಗುತ್ತೆ. ಒಟ್ಟು 995 ಗ್ರಾಂ ಮೆಥ್ ಅನ್ನು ಎರಡು ಬಾಕ್ಸ್‌ಗಳಾಗಿ ಇಡಲಾಗಿತ್ತು. ಅದನ್ನು ಪತ್ತೆಹಚ್ಚುವುದನ್ನು ತಪ್ಪಿಸಲು ಕಪ್ಪು ಪ್ಲಾಸ್ಟಿಕ್‌ನಿಂದ ಬಿಗಿಯಾಗಿ ಪ್ಯಾಕ್ ಮಾಡಲಾಗಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 1.50 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಇದಾಗಿದೆ. ದೆಹಲಿಯಿಂದ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಕಳ್ಳಸಾಗಣೆ ಮಾಡಿ ಡೀಲರ್‌ಗಳಿಗೆ ವಿತರಿಸಲು ಮಾರಾಟ ಮಾಡಲಾಗುತ್ತಿತ್ತು.

ಉಗಾಂಡಾ ಮಹಿಳೆಗೆ ನ್ಯಾಯಾಂಗ ಬಂಧನ

ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಉಗಾಂಡಾದ ಯುವತಿ ದೊಡ್ಡ ಡ್ರಗ್ ಸಿಂಡಿಕೇಟ್‌ನ ಭಾಗವಾಗಿದ್ದಾಳೆ ಎಂದು ಶಂಕಿಸಲಾಗಿದೆ. ಈಕೆ ಭಾರತಕ್ಕೆ ಹೇಗೆ ಬಂದರು ಎಂಬುದು ಈಗ ಎನ್‌ಸಿಬಿ ತಂಡದಿಂದ ತನಿಖೆಗೆ ಒಳಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಆಕೆಯನ್ನು ಡ್ರಗ್ಸ್​ ವಿತರಿಸುವ ಉದ್ದೇಶದಿಂದ ಕಳ್ಳಸಾಗಣೆಗಾಗಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿನಲ್ಲಿಡಲಾಗಿದೆ. ಕರ್ನಾಟಕದಲ್ಲಿ ಆಕೆಯ ಲಿಂಕ್‌ಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ರೈಲ್ವೇ ನಿಲ್ದಾಣಗಳಲ್ಲಿ ತಪಾಸಣೆ ತುಂಬಾ ಕ್ಷೀಣವಾಗಿರುವ ಕಾರಣ ತನಿಖಾ ಸಂಸ್ಥೆಗಳ ಪತ್ತೆಯನ್ನು ತಪ್ಪಿಸಲು ಅವಳು ರೈಲಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದಳು.

ಇದನ್ನೂ ಓದಿ: Bengaluru Airportನಲ್ಲಿ ಪ್ರಯಾಣಿಕನ ಹೈಡ್ರಾಮಾ: ದುಬಾರಿ ವಾಚ್ ತಂದಿಡ್ತು ದೊಡ್ಡ ಪೀಕಲಾಟ..!

ಇತ್ತೀಚೆಗೆ ಬೆಂಗಳೂರು ಏರ್​ಪೋರ್ಟ್​ನಲ್ಲಿ ವಿದೇಶಿ ಮಹಿಳೆ ತನ್ನ ಗುದನಾಳದೊಳಗೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ತುಂಬಿದ ಮೂರು ಕ್ಯಾಪ್ಸುಲ್​​ಗಳನ್ನು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಳು.
Published by:Kavya V
First published: