DK Shivakumar: "ಯತ್ನಾಳ್ ಏನು ಮೆಂಟಲ್ಲಾ? ಅವರನ್ನು ಮೊದಲು ವಿಚಾರಣೆ ಮಾಡಿ" - ಸರ್ಕಾರಕ್ಕೆ ಡಿಕೆಶಿ ಆಗ್ರಹ

ಸಿಎಂ ಸ್ಥಾನಕ್ಕೆ 2500 ಕೋಟಿ ರೂಪಾಯಿ ಆರೋಪ ಮಾಡಿರೋ ಯತ್ನಾಳ್ ಮೆಂಟಲ್ಲಾ ಅಂತ ಪ್ರಶ್ನಿಸಿರೋ ಡಿಕೆಶಿ, ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸುವಂತೆ ಆಗ್ರಹಿಸಿದ್ದಾರೆ. ರಾಜ್ಯಾದ್ಯಂತ ಹೋರಾಟ ಮಾಡೋ ಎಚ್ಚರಿಕೆ ನೀಡಿದ್ದಾರೆ.

ಯತ್ನಾಳ್ ವಿರುದ್ಧ ಡಿಕೆಶಿ ಆಕ್ರೋಶ

ಯತ್ನಾಳ್ ವಿರುದ್ಧ ಡಿಕೆಶಿ ಆಕ್ರೋಶ

  • Share this:
ವೋಹುಬ್ಬಳ್ಳಿ: ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಅವರೇನು ಮೆಂಟಲ್ಲಾ..? ಯತ್ನಾಳ್ ಗೇನು ಹುಚ್ಚು ಹಿಡಿದಿಲ್ಲವಲ್ಲ. ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿ ಎಂದು ಕೆಪಿಸಿಸಿ ಅಧ್ಯಕ್ಷ (KPCC President) ಡಿ.ಕೆ.ಶಿವಕುಮಾರ್ (DK Shivakumar) ಆಗ್ರಹಿಸಿದ್ದಾರೆ. ಹುಬ್ಬಳ್ಳಿಗೆ (Hubballi) ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಿಎಂ (CM) ಆಗಬೇಕೆಂದರೆ 2500 ಕೋಟಿ ರೂಪಾಯಿ ಕೊಡಬೇಕೆಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಿಡಿಕಾರಿದರು. ಇಡೀ ಭಾರತ ದೇಶವೇ ತಲ್ಲಣಗೊಳ್ಳುವ ಸುದ್ದಿ ನೀವು ಕೊಟ್ಟಿದ್ದೀರಿ. ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ, ಹಾಲಿ ಶಾಸಕ ರಾಜ್ಯದ ಜನರಿಗೆ ತಿಳಿಸಿದ್ದಾರೆ. ಆದರೆ ಯತ್ನಾಳ್ ಹೇಳಿಕೆಗೆ ಸಾರಿಸೋ ಕೆಲಸ ಮಾಡ್ತಿರೋ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ ಅಂತ ಡಿಕೆಶಿ ಆರೋಪಿಸಿದರು.

 “ಯತ್ನಾಳ್ ಏನು ಮೆಂಟಲ್ಲಾ?”

ಕಾಂಗ್ರೆಸ್ ನವರೇ ಮಾಡಿರಲಿ, ಯಾರೇ ಮಾಡಿರಲಿ ತನಿಖೆ ಆಗಲಿ. ನಳಿನ್ ಕುಮಾರ್ ಕಟೀಲ್ ಸಹ ಇದನ್ನ ಮುಚ್ಚೋಕೆ ಪ್ರಯತ್ನ ಮಾಡುತ್ತಿದ್ದಾರೆ. ಪಿ.ಎಸ್.ಐ. ಹಗರಣಕ್ಕೆ ಸಂಬಂಧಿಸಿ ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ ಮಾಡಿದ್ರೆ ಅವರಿಗೆ ನೋಟಿಸ್ ಕೊಟ್ಟಿದ್ದೀರಿ. ಯತ್ನಾಳ್ ಗೆ ಯಾಕೆ ಕೊಟ್ಟಿಲ್ಲ, ಅವ್ರೇನು ಮೆಂಟಲ್ಲಾ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

“ಯತ್ನಾಳ್‌ರನ್ನು ವಿಚಾರಣೆ ಮಾಡಿ”

ಒಬ್ಬರಿಗೆ ಒಂದು ನ್ಯಾಯ, ಮತ್ತೊಬ್ಬರಿಗೆ ಇನ್ನೊಂದು ನ್ಯಾಯವಾ. ಸಿಎಂ ಸ್ಥಾನಕ್ಕೆ 2500 ಕೋಟಿ ರೂಪಾಯಿ ಫಿಕ್ಸ್ ವಿಚಾರವನ್ನು ಯತ್ನಾಳ್ ಬಹಿರಂಗವಾಗಿ ಹೇಳಿದ್ದರೂ ತನಿಖಾಧಿಕಾರಿಗಳೇಕೆ ಸುಮ್ಮನಿದ್ದಾರೆ. ಸಿಎಂ ತಮ್ಮನ್ನೇ ರಕ್ಷಣೆ ಮಾಡುತ್ತಿದ್ದಾರೋ, ಪಾರ್ಟಿ ರಕ್ಷಣೆಗೆ ನಿಂತಿದ್ದಾರೋ. ಕೇಂದ್ರ ಸರ್ಕಾರದ ಏಜೆನ್ಸಿಯವರು ತನಿಖೆ ಮಾಡಬೇಕು. ಯತ್ನಾಳ್ ರನ್ನ ಕೂಡಲೇ ವಶಕ್ಕೆ ಪಡೆಯಬೇಕು, ಅವರನ್ನ ಸಾಕ್ಷಿಯಾಗಿಸಿಕೊಂಡು ತನಿಖೆ ಮಾಡಬೇಕು ಅಂತ ಆಗ್ರಹಿಸಿದ್ರು.

ಇದನ್ನೂ ಓದಿ: HD Kumaraswamy: ಪಿಎಸ್ಐ ಎಕ್ಸಾಂ ಹಗರಣದ ಮೂಲ ಕಿಂಗ್‌ ಪಿನ್ ಹೆಸರು ಹೇಳುತ್ತಾ ಸರ್ಕಾರ? ಮಾಜಿ ಸಿಎಂ ಎಚ್‌ಡಿಕೆ ಸವಾಲು

“ಸಿಎಂ ಅವರು ತನಿಖೆಗೆ ಆದೇಶಿಸಬೇಕು”

ಮಿಸ್ಟರ್ ಬಿಜೆಪಿ ಪ್ರೆಸಿಡೆಂಟ್, ಯಾಕೆ ಅಕ್ರಮವನ್ನ ಬಯಲಿಗೆಳೆಯುತ್ತಿಲ್ಲ. ಯಾವ ಮಂತ್ರಿ ಇದರಲ್ಲಿ ಭಾಗಿಯಾಗಿದ್ರು ಅದರ ತನಿಖೆ ಆಗಬೇಕು. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಆಗಲಿ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನ 40 ವರ್ಷದ ರಾಜಕಾರಣದಲ್ಲಿ ಈ ರೀತಿ ನೋಡಿರಲಿಲ್ಲ. ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ರೆಡಿ ಮಾಡಿಕೊಂಡು ಬನ್ನಿ ಅಂತ ತಿಳಿಸಿದ್ದಾರೆ. ಎಸಿಬಿ ಅಷ್ಟೇ ಅಲ್ಲ, ರಾಜ್ಯದ ಸಿಎಂ ರಿಗೆ ರಾಜಕೀಯ ಬದ್ಧತೆ ಇದ್ದರೆ ಪಕ್ಷದ ಗೌರವ ಉಳಿಸುಕೊಳ್ಳುವುದು ಬಿಟ್ಟು ತನಿಖೆಗೆ ಆದೇಶಿಸಲಿ ಅಂತ ಆಗ್ರಿಹಿಸಿದ್ರು.

ಕಾನೂನು ಹೋರಾಟಕ್ಕೆ ಕಾಂಗ್ರೆಸ್ ನಿರ್ಧಾರ

ಪ್ರತಿಯೊಂದು ನೇಮಕಾತಿಗೂ ಒಂದೊಂದು ರೇಟ್ ಫಿಕ್ಸ್ ಆಗಿದೆ. ಹೋಟೆಲ್ ನಲ್ಲಿ ತಿಂಡಿ ದರ‌ ನಿಗದಿ ಪಡಿಸಿದಂತೆ ಇವರು ಪಿಕ್ಸ್ ಮಾಡಿದ್ದಾರೆ. ಸಿಎಂ ಸ್ಥಾನಕ್ಕೆ 2500 ಕೋಟಿ ರೂಪಾಯಿ ಫಿಕ್ಸ್ ವಿಚಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ತಾಲ್ಲೂಕು ಮಟ್ಟದಿಂದಲೂ ಹೋರಾಟ ಆರಂಭಿಸುತ್ತೇವೆ. ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Priyank Kharge: ಸಿಐಡಿ ನೋಟಿಸ್‌ಗೆ ಉತ್ತರ ಕೊಟ್ಟ ಪ್ರಿಯಾಂಕ್ ಖರ್ಗೆ, 6 ಪುಟಗಳ ಸುದೀರ್ಘ ಪತ್ರದಲ್ಲಿ ಏನಿದೆ?

“ಫಲಾನುಭವಗಳ ಹಿಂದಿರುವವರು ಯಾರು?”

ಹಗರಣದಲ್ಲಿ ಕೇವಲ ಫಲಾನುಭವಿಗಳನ್ನು ಮಾತ್ರ ಹಿಡಿಯಲಾಗುತ್ತಿದೆ. ಅದರ ಹಿಂದಿರುವವರನ್ನು ಹಿಡಿತಾ ಇಲ್ಲ. ಗೃಹ ಸಚಿವ ಮತ್ತು ಅಶ್ವತ್ಥ್ ನಾರಾಯಣ ಫೋನ್ ಮಾಡದೆ ಇದ್ದಿದ್ದರೆ ಕೆಲ ಆರೋಪಿಗಳನ್ನು ಬಿಡ್ತಾ ಇದ್ದರೆ...? ಎಲ್ಲರಿಗೂ ನೋಟಿಸ್ ಕೊಟ್ಟು ಕರೆಸಲಾಗಿದೆ. ಆದರೆ ಅಶ್ವತ್ಥ್ ನಾರಾಯಣ್ ಅವರ ಕ್ಯಾಂಡಿಡೇಟನ್ನು ಮಾತ್ರ ಬಿಟ್ಟಿದ್ದಾರೆ. ಈ ವಿಚಾರದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬಹಳ ಸತ್ಯವನ್ನೆ ತಿಳಿಸಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಹೇಳ್ತಿದಾರೆ ಅಂದ ಮೇಲೆ ಕೂಡಲೇ ತನಿಖೆಗೆ ಆದೇಶಿಸಿ ಅಂತ ಡಿಕೆಶಿ ಆಗ್ರಹಿಸಿದ್ರು.
Published by:Annappa Achari
First published: