• Home
 • »
 • News
 • »
 • state
 • »
 • Hubballi News: ದೀಪಾವಳಿ ಹಬ್ಬಕ್ಕೆ KSRTC ಭಾರೀ ಕೊಡುಗೆ!

Hubballi News: ದೀಪಾವಳಿ ಹಬ್ಬಕ್ಕೆ KSRTC ಭಾರೀ ಕೊಡುಗೆ!

ಹೆಚ್ಚುವರಿಯಾಗಿ ಇಷ್ಟೆಲ್ಲ ಬಸ್!

ಹೆಚ್ಚುವರಿಯಾಗಿ ಇಷ್ಟೆಲ್ಲ ಬಸ್!

ರಾಜ್ಯದ ವಿವಿಧ ಪ್ರದೇಶಗಳಿಗೆ ಹಾಗೂ ಸ್ವಂತ ಊರುಗಳಿಗೆ ಹಬ್ಬಕ್ಕಾಗಿ ತೆರಳುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಬಸ್‌ ಸೇವೆ ಒದಗಿಸಿಕೊಡಲಾಗಿದೆ.

 • Share this:

  ಹುಬ್ವಳ್ಳಿ: ಬೆಳಕಿನ ಹಬ್ಬ ದೀಪಾವಳಿ ಸ್ವಾಗತಿಸಲು ನಾಡು ಸಿದ್ಧವಾಗಿದೆ. ಸರಕಾರಿ ಬಸ್, ರೈಲು ಓಡಾಟಗಳ ಸಂಖ್ಯೆ ಹೆಚ್ಚಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬೇಕಾಗಿ ಬಸ್ ಗಳ ಸಂಖ್ಯೆ ಹೆಚ್ಚಿಸಲಾಗಿದೆ‌. ಹೆಚ್ಚುವರಿ ಬಸ್​ಗಳ ಓಡಾಟ ಹೆಚ್ಚಿಸಲಾಗಿರುವುದರಿಂದ ಉತ್ತರ ಕರ್ನಾಟಕ (North Karnataka) ಭಾಗದ ಮಂದಿ ಸುಲಭವಾಗಿ ತವರಿಗೆ ತಲುಪಬಹುದಾಗಿದೆ. ದೀಪಾವಳಿ ಹಬ್ಬದ (Deepavali 2022) ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಓಡಾಟ ನಡೆಸಲಾಗುವ ಹೆಚ್ಚುವರಿ ಬಸ್ ಗಳ (KSRTC Deepavali Extra Bus) ವಿವರ ಇಲ್ಲಿದೆ ನೋಡಿ..


  ಈ ದಿನಾಂಕದಂದು ಹೆಚ್ಚುವರಿ ಬಸ್
  ಅಕ್ಟೋಬರ್ 24ರಿಂದ ಆರಂಭವಾಗಲಿರುವ ದೀಪಾವಳಿ ಹಬ್ಬವು ಆಗಸ್ಟ್ 26ರ ವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಅಕ್ಟೋಬರ್ 22 ನಾಲ್ಕನೇ ಶನಿವಾರವಾಗಿದ್ದು, ಮರುದಿನ ಭಾನುವಾರ ಆಗಿರುತ್ತದೆ. ಹೀಗೆ ನಿರಂತರ ರಜೆ ಇರುವುದರಿಂದ ಅಕ್ಟೋಬರ್ 21 ಹಾಗೂ 22 ನೇ ತಾರೀಕಿಗೆ ಹೆಚ್ಚುವರಿ ಬಸ್ ಓಡಾಟ ನಡೆಸಲು ನಿರ್ಧರಿಸಲಾಗಿದೆ.


  ಎಲ್ಲೆಲ್ಲ ಓಡಾಟ?
  ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 21 ಹಾಗೂ 22 ರಂದು ಬೆಂಗಳೂರು, ಮಂಗಳೂರು, ಹೈದರಾಬಾದ್, ಪಣಜಿ, ಪುಣೆ, ಮುಂಬಯಿ ಮತ್ತು ರಾಜ್ಯದ ಹಾಗೂ ಅಂತರರಾಜ್ಯಗಳ ಇನ್ನಿತರ ಪ್ರಮುಖ ನಗರಗಳಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ಹಾಗೂ ಸ್ವಂತ ಊರುಗಳಿಗೆ ಹಬ್ಬಕ್ಕಾಗಿ ತೆರಳುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಬಸ್‌ ಸೇವೆ ಒದಗಿಸಿಕೊಡಲಾಗಿದೆ.


  ಹೆಚ್ಚುವರಿ ಬಸ್ ಗಳು ಎಷ್ಟು?
  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ, ಹಾವೇರಿ ಮತ್ತು ಬಾಗಲಕೋಟೆ ವಿಭಾಗಗಳ ಪ್ರಮುಖ ಬಸ್ ನಿಲ್ದಾಣಗಳಿಂದ ಒಟ್ಟು 500 ಕ್ಕಿಂತ ಅಧಿಕ ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.


  ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


  ಬೇಡಿಕೆ ಹೆಚ್ಚಿದ್ರೆ, ಬಸ್ ಸಂಖ್ಯೆಯೂ ಏರಿಕೆ
  ಹಬ್ಬ ಮುಗಿದ ನಂತರ ತಮ್ಮ ಕರ್ತವ್ಯದ ಸ್ಥಳಗಳಿಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ‌. ಹೀಗಾಗಿ ಬೆಂಗಳೂರು, ಮಂಗಳೂರು, ಹೈದರಾಬಾದ್, ಪಣಜಿ, ಪೂಣೆ, ಮುಂಬಯಿ ಸೇರಿ ಇತರ ನಗರಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಅಕ್ಟೋಬರ್ 26 ರಿಂದ 30ರ ವರೆಗೆ ಹೆಚ್ಚುವರಿ ಬಸ್ ಓಡಾಟ ನಡೆಸಲು ಸಾರಿಗೆ ಇಲಾಖೆಯು ನಿರ್ಧರಿಸಿದೆ. ಈ ಅವಧಿಯಲ್ಲಿ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸಂಖ್ಯೆ ಹೆಚ್ಚಿಸಲು ಇಲಾಖೆಯು ಮುಂದಾಗಿದೆ.


  ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


  ಬುಕ್ಕಿಂಗ್ ಹೀಗೆ ಮಾಡಿಕೊಳ್ಳಿ
  ಸಾರ್ವಜನಿಕರು ಸಂಸ್ಥೆಯ ಮುಂಗಡ ಟಿಕೆಟ್ ಬುಕ್ಕಿಂಗ್ ಗಾಗಿ KSRTC ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಬುಕ್ ಮಾಡಬಹುದಾಗಿದೆ. ಮುಂಗಡ ಟಿಕೆಟ್ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ  ಅಥವಾ KSRTC Mobile App ನಲ್ಲಿ ಮುಂಗಡವಾಗಿ ವೇಗದೂತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಟಿಕೆಟ್ ಗಳನ್ನು ಬುಕ್ಕಿಂಗ್ ಮಾಡಬಹುದಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: