• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಗ್ರಾ.ಪಂ ಸದಸ್ಯನ ಅವಿರತ ಪ್ರಯತ್ನದಿಂದ ಗ್ರಾಮಾಭಿವೃದ್ಧಿ - ಅಲ್ಲಾಪುರಕ್ಕೆ ದಿಢೀರ್ ಭೇಟಿ ನಿಡಿದ ಸಿ.ಇ.ಒ

ಗ್ರಾ.ಪಂ ಸದಸ್ಯನ ಅವಿರತ ಪ್ರಯತ್ನದಿಂದ ಗ್ರಾಮಾಭಿವೃದ್ಧಿ - ಅಲ್ಲಾಪುರಕ್ಕೆ ದಿಢೀರ್ ಭೇಟಿ ನಿಡಿದ ಸಿ.ಇ.ಒ

ಅಲ್ಲಾಪುರ ಗ್ರಾಮಕ್ಕೆ CEO ಭೇಟಿ

ಅಲ್ಲಾಪುರ ಗ್ರಾಮಕ್ಕೆ CEO ಭೇಟಿ

ಓರ್ವ ಜನಪ್ರತಿನಿಧಿ ಮನಸ್ಸು ಮಾಡಿದರೆ ಏನೆಲ್ಲಾ ಅಭಿವೃದ್ಧಿ ಮಾಡಬಹುದೆಂದು ಗ್ರಾ.ಪಂ. ಸದಸ್ಯ ಸಾಧಿಸಿ ತೋರಿಸಿದ ಗ್ರಾಮಕ್ಕೆ ಜಿ.ಪಂ. ಸಿ.ಇ.ಒ ದಿಢೀರ್ ಭೇಟಿ ನೀಡಿ ಮತ್ತಷ್ಟು ಅನುದಾನ ನೀಡೋ ಭರವಸೆ ನೀಡಿದ್ದಾರೆ.

  • Share this:

ಹುಬ್ಬಳ್ಳಿ : ಓರ್ವ ಜನಪ್ರತಿನಿಧಿ ಮನಸ್ಸು ಮಾಡಿದರೆ ಏನೆಲ್ಲಾ ಅಭಿವೃದ್ಧಿ ಮಾಡಬಹುದೆಂದು ಗ್ರಾ.ಪಂ. ಸದಸ್ಯ ಸಾಧಿಸಿ ತೋರಿಸಿದ ಗ್ರಾಮಕ್ಕೆ ಜಿ.ಪಂ. ಸಿ.ಇ.ಒ ದಿಢೀರ್ ಭೇಟಿ ನೀಡಿ ಮತ್ತಷ್ಟು ಅನುದಾನ ನೀಡೋ ಭರವಸೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ (Gram Panchayat Member) ಮಾಡಿರೋ ಅಭಿವೃದ್ಧಿ ಕೆಲಸ ನೋಡೋಕೆಂದು ಸ್ವತಃ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೇಟಿ ನೀಡಿದ ಘಟನೆ ಧಾರವಾಡ ಜಿಲ್ಲೆಯಲ್ಲಿ (Dharwad District) ನಡೆದಿದೆ. ಕೊರೋನಾ ಮುಕ್ತ ಗ್ರಾಮ (Corona Free Village), 24*7 ನಿರಂತರ ನೀರು ಪೂರೈಕೆ (Water Supply), ಮೂಲಭೂತ ಸೌಕರ್ಯ (Infrastructure) ಕಲ್ಪಿಸುವಲ್ಲಿ ಮುಂಚೂಣಿಯಲ್ಲಿದೆ ಎಂಬ ಹಗ್ಗಳಿಗೆ ಪಾತ್ರವಾಗಿದ್ದ ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮಕ್ಕೆ (Allapur village) ಸಿ.ಇ.ಒ ಬಿ.ಸುಶೀಲ (CEOB.Sushila) ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. ಅಲ್ಲಾಪುರ ಗ್ರಾಮದಲ್ಲಿ ಒಂದು ಸುತ್ತು ಹಾಕಿದ ಸುಶೀಲ, ಗ್ರಾಮದಲ್ಲಿ ಮಾಡಲಾಗಿರೋ ರಸ್ತೆ, ಸ್ಮಾರ್ಟ್ ಅಂಗನವಾಡಿ (Smart Anganavadi) ಇತ್ಯಾದಿಗಳ ವೀಕ್ಷಣೆ ಮಾಡಿದರು.


ಅಂಗನವಾಡಿಯಲ್ಲಿ ಮಕ್ಕಳ ಆಟ ಪಾಠಕ್ಕೆ ವ್ಯವಸ್ಥೆ ಮಾಡಿರೋ ಸಲಕರಣೆಗಳನ್ನು ಪರಿಶೀಲಿಸಿದರು. ಗ್ರಾಮದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸ್ತಿರೋ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಶ್ರಮ


ಗ್ರಾಮದಲ್ಲಿ ಜಾನುವಾರುಗಳಿಗೆ ಸ್ಥಾಪಿಸಿರೋ ಕುಡಿಯುವ ನೀರು ತೊಟ್ಟಿ, ಶುದ್ಧ ಕುಡಿಯುವ ನೀರಿನ ಘಟಕ, ಒಳಚರಂಡಿ ಕಾಮಗಾರಿ, ಅಂಗನವಾಡಿ ಶಾಲೆ ರಸ್ತೆ ಅಭಿವೃದ್ಧಿ ಕಾರ್ಯಗಳು, ಜಲ ಜೀವನ್ ಮಿಷನ್ ಪೈಪ್ ಲೈನ್ ಕಾಮಗಾರಿ ಇತ್ಯಾದಿಗಳ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿದರು.


ಇದನ್ನೂ ಓದಿ:  Karnataka Politics- ಬಿಜೆಪಿ ಬಹುಮತಕ್ಕೆ ಒಂದೇ ಸ್ಥಾನ ಕಡಿಮೆ; ಲಖನ್ ಬೆಂಬಲ ಕೊಟ್ರೂ ಆಯ್ತು


ಗ್ರಾಮಾಭಿವೃದ್ಧಿಗೆ ಅನುದಾನ ನೀಡುವ ಭರವಸೆ


ಗ್ರಾಮದ ಕೆರೆ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿಯಿಂದ ಹಣಕಾಸಿನ ನೆರವು ನೀಡ್ತೇನೆ. ಗಾಮದ ಕುಡಿಯವ ನೀರಿನ  ಕೆರೆ ಸಮಗ್ರ ಅಭಿವೃದ್ಧಿ ಯೋಜನೆ ಅಡಿಯಲ್ಲಿ  ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಗ್ರಾಮದ ಇತರೆ ಅಭಿವೃದ್ಧಿ ಕಾರ್ಯಗಳಿಗೂ ಜಿಲ್ಲಾ ಪಾಚಾಯಿತಿಯಿಂದ ಅನುದಾನ ನೀಡೋದಾಗಿ ಭರವಸೆ ನೀಡಿದರು.


ಶಾಲೆಯಲ್ಲಿ ಮಕ್ಕಳೊಂದಿಗೆ ಸಂವಾದ 


ಊರಲ್ಲಿ ಸುತ್ತುವ ವೇಳೆ ರಸ್ತೆಯ ಪಕ್ಕದಲ್ಲಿ ಕುಳಿತವರಿಗೆ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಕುರಿತು ಮಾಹಿತಿ ಪಡೆದರು. ಹಾಕಿಸಿಕೊಳ್ಳದೇ ಇರೋರಿಗೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದರು. ನಂತರ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆದರು. ಗಣಿತ ಲೆಕ್ಕ, ಮಗ್ಗಿ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಂದ ಹೇಳಿಸಿದ ಸಿ.ಇ.ಒ, ಭವಿಷ್ಯದಲ್ಲಿ ಏನಾಗ್ತೀರಿ ಎಂದು ಪ್ರಶ್ನಿಸಿದರು.


ಕೆಲವರು ಮಾಸ್ತರ್, ಡಾಕ್ಟರ್ ಆಗ್ತೇನೆ ಅಂತ ವಿದ್ಯಾರ್ಥಿಗಳು ಖುಷಿಯಿಂದ ಹೇಳಿದರು.  ಚೆನ್ನಾಗಿ ಓದುವಂತೆ ವಿದ್ಯಾರ್ಥಿಗಳಿಗೆ ಸಿ.ಇ.ಒ ಕರೆ ನೀಡಿದರು.


ಇದನ್ನೂ ಓದಿ:  ಮಂಗಳೂರು ಆಟೋ ಚಾಲಕನ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​


 ಈ ನ್ಯೂಸ್ 18 ಕನ್ನದ ವರದಿ


ಅಲ್ಲಾಪುರ ಗ್ರಾಮಾಭಿವೃದ್ಧಿ ಕಂಡು ಅಚ್ಚರಿ ವ್ಯಕ್ತಪಡಿಸಿದ ಸಿ.ಇ.ಒ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನ ಪ್ರಯತ್ನದಿಂದ ಇಷ್ಟೆಲ್ಲಾ ಆಗಿರೋದಕ್ಕೆ ಹುಬ್ಬೇರಿಸಿದರು. ಗ್ರಾ.ಪಂ. ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಮಾಡಿದ ಕಾರ್ಯದ ಕುರಿತು ನ್ಯೂಸ್ 18 ಕನ್ನಡದಲ್ಲಿ ವರದಿಯೂ ಪ್ರಸಾರಗೊಂಡಿತ್ತು.


ಅಧಿಕಾರಿ ಭೇಟಿಯಿಂದ ಗ್ರಾಮಸ್ಥರು ಫುಲ್ ಖುಷ್ 


ಇದೀಗ ಸ್ವತಃ ಸಿ.ಇ.ಒ ಭೇಟಿ ನೀಡಿ ಗ್ರಾಮಾಭಿವೃದ್ಧಿ ವೀಕ್ಷಿಸಿದ್ದಾರೆ. ಇದರಿಂದಾಗಿ ಗ್ರಾಮಕ್ಕೆ ಮತ್ತಷ್ಟು ಅನುದಾನ ಬರೋ ನಿರೀಕ್ಷೆ ಮೂಡಿದೆ. ಸಿ.ಇ.ಒ ದಿಢೀರ್ ಭೆಟಿ ನೀಡಿ, ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡೋದಾಗಿ ಹೇಳಿದ್ದಕ್ಕೆ ಗ್ರಾಮಸ್ಥರು ಖುಷ್ ಆಗಿದ್ದಾರೆ.


ವರದಿ - ಶಿವರಾಮ ಅಸುಂಡಿ

top videos
    First published: